logo
ಕನ್ನಡ ಸುದ್ದಿ  /  ಕ್ರಿಕೆಟ್  /  ಜಮ್ಮು-ಕಾಶ್ಮೀರ ಪ್ರವಾಸದ ಅನುಭವ ಹಂಚಿಕೊಂಡ ಸಚಿನ್ ತೆಂಡೂಲ್ಕರ್; ಮೇಕ್‌ ಇನ್‌ ಇಂಡಿಯಾ ಎಂದ್ರು ಪ್ರಧಾನಿ ನರೇಂದ್ರ ಮೋದಿ

ಜಮ್ಮು-ಕಾಶ್ಮೀರ ಪ್ರವಾಸದ ಅನುಭವ ಹಂಚಿಕೊಂಡ ಸಚಿನ್ ತೆಂಡೂಲ್ಕರ್; ಮೇಕ್‌ ಇನ್‌ ಇಂಡಿಯಾ ಎಂದ್ರು ಪ್ರಧಾನಿ ನರೇಂದ್ರ ಮೋದಿ

Jayaraj HT Kannada

Feb 28, 2024 04:40 PM IST

ಜಮ್ಮು-ಕಾಶ್ಮೀರ ಪ್ರವಾಸದ ಅನುಭವ ಹಂಚಿಕೊಂಡ ಸಚಿನ್ ತೆಂಡೂಲ್ಕರ್

    • Narendra Modi: ಕುಟುಂಬದೊಂದಿಗೆ ಜಮ್ಮು ಮತ್ತು ಕಾಶ್ಮೀರ ಪ್ರವಾಸ ಮಾಡಿದ ಸುಂದರ ಅನುಭವವನ್ನು ಸಚಿನ್ ತೆಂಡೂಲ್ಕರ್ ಅವರು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ ಯುವ ಜನತೆಗೆ ಸಂದೇಶ ನೀಡಿದ್ದಾರೆ.
ಜಮ್ಮು-ಕಾಶ್ಮೀರ ಪ್ರವಾಸದ ಅನುಭವ ಹಂಚಿಕೊಂಡ ಸಚಿನ್ ತೆಂಡೂಲ್ಕರ್
ಜಮ್ಮು-ಕಾಶ್ಮೀರ ಪ್ರವಾಸದ ಅನುಭವ ಹಂಚಿಕೊಂಡ ಸಚಿನ್ ತೆಂಡೂಲ್ಕರ್

ಭಾರತ ಮಾತೆಗೆ ಮುಕುಟಮಣಿಯಂತಿರುವ ಜಮ್ಮು ಮತ್ತು ಕಾಶ್ಮೀರದ ಸೌಂದರ್ಯಕ್ಕೆ ಮಾರುಹೋಗದವರಿಲ್ಲ. ಹಿಮರಾಶಿಯಲ್ಲಿ ಮಿಂದೇಳುವ ಉತ್ಸಾಹ ಇರುವವರು ಮಾತ್ರವಲ್ಲದೆ, ಸುಂದರ ಭಾರತದ ವೈವಿಧ್ಯಮಯ ಪ್ರವಾಸಿ ತಾಣಗಳನ್ನು ನೋಡಲು ಬಯಸುವವರು ಈ ಕೇಂದ್ರಾಡಳಿತ ಪ್ರದೇಶಕ್ಕೆ ಭೇಟಿ ನೀಡುತ್ತಾರೆ. ಈ ಸರದಿಯನ್ನು ಭಾರತದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪೂರ್ಣಗೊಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಪ್ರವಾಸ ಮಾಡಿ ಹಿಮರಾಶಿ ತುಂಬಿದ ಸುಂದರ ಸ್ಥಳಗಳ ಸೌಂದರ್ಯವನ್ನು ಕ್ರಿಕೆಟ್‌ ದೇವರು ಶ್ಲಾಘಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯಬೇಕಾದ ಆರಂಭಿಕರನ್ನು ಹೆಸರಿಸಿದ ಇರ್ಫಾನ್ ಪಠಾಣ್; ಯಶಸ್ವಿ ಜೈಸ್ವಾಲ್‌ ಬೇಡವಂತೆ!

ನಾನು ಒಮ್ಮೆ ಹೋದರೆ, ನೀವು ಮತ್ತೆ ನನ್ನ ನೋಡಲ್ಲ; ನಿವೃತ್ತಿ ಕುರಿತು ವಿರಾಟ್ ಕೊಹ್ಲಿ ಅಚ್ಚರಿ ಹೇಳಿಕೆ, ಫ್ಯಾನ್ಸ್​ಗೆ ಆತಂಕ

ಕ್ರಿಕೆಟ್​​​ನಲ್ಲಿ ಆಟಗಾರರು ಧರಿಸುವ ನೆಕ್ ಡಿವೈಸ್ ಅಥವಾ ಕ್ಯೂ-ಕಾಲರ್​ ಎಂದರೇನು; ಪ್ರಯೋಜನ ಮತ್ತು ಬೆಲೆ ಎಷ್ಟು?

ಜಿಟಿ ವಿರುದ್ಧ ಗೆದ್ದು ಪ್ಲೇಆಫ್​ಗೇರಲು ಎಸ್​ಆರ್​ಹೆಚ್ ಸಜ್ಜು; ಹವಾಮಾನ ವರದಿ, ಪ್ಲೇಯಿಂಗ್ XI, ಪಿಚ್ ರಿಪೋರ್ಟ್ ಇಲ್ಲಿದೆ

ಕೇಂದ್ರಾಡಳಿತ ಪ್ರದೇಶದ ಪ್ರವಾಸದಲ್ಲಿ ಹಲವು ಸ್ಥಳಗಳಿಗೆ ಭೇಟಿ ನೀಡಿರುವ ಸಚಿನ್‌, ಹಲವು ಜನರೊಂದಿಗೆ ಬೆರೆತಿದ್ದಾರೆ. ಈ ಎಲ್ಲಾ ನೆನಪುಗಳನ್ನು ವಿಡಿಯೋ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ, ಟ್ವಿಟರ್‌ ಮೂಲಕ ಸಚಿನ್‌ ಹಂಚಿಕೊಂಡಿರುವ ವಿಡಿಯೋಗೆ, ಭಾರತದ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ | Video: ಕೊಟ್ಟ ಮಾತು ಉಳಿಸಿದ ತೆಂಡೂಲ್ಕರ್;‌ ಕಾಶ್ಮೀರದ ವಿಶೇಷ ಚೇತನ ಕ್ರಿಕೆಟಿಗ ಅಮೀರ್ ಹುಸೇನ್ ಭೇಟಿಯಾದ ಸಚಿನ್‌

ಸಚಿನ್ ತೆಂಡೂಲ್ಕರ್ ತಮ್ಮ ಪತ್ನಿ ಅಂಜಲಿ ಮತ್ತು ಮಗಳು ಸಾರಾ ಅವರೊಂದಿಗೆ ಕಾಶ್ಮೀರ ಪ್ರವಾಸ ಮಾಡಿದ್ದಾರೆ. ಹಿಮದಿಂದ ಆವೃತವಾದ ಗುಲ್ಮಾರ್ಗ್ ಮತ್ತು ಕೇಂದ್ರಾಡಳಿತ ಪ್ರದೇಶದ ಹಲವಾರು ಸುಂದರ ಸ್ಥಳಗಳ ಫೋಟೋ ಹಾಗೂ ವೀಡಿಯೊಗಳನ್ನು ಸಚಿನ್ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

“ಜಮ್ಮು ಮತ್ತು ಕಾಶ್ಮೀರವು ನನ್ನ ನೆನಪಿನಂಗಳದಲ್ಲಿ ಒಂದು ಸುಂದರ ಅನುಭವವಾಗಿ ಸದಾಕಾಲ ಉಳಿಯುತ್ತದೆ. ಸುತ್ತಲೂ ಹಿಮವಿದ್ದರೂ ನನಗೆ ಮಾತ್ರ ಬೆಚ್ಚನೆಯ ಅನುಭವವಾಯ್ತು. ಇದಕ್ಕೆ ಇಲ್ಲಿನ ಜನರ ಅಸಾಧಾರಣ ಆತಿಥ್ಯವೇ ಕಾರಣ” ಎಂದು ಸಚಿನ್‌ ಬರೆದುಕೊಂಡಿದ್ದಾರೆ.

“ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ನಮ್ಮ ದೇಶದಲ್ಲಿ ನೋಡಲು ತುಂಬಾ ಸ್ಥಳಗಳಿವೆ ಎಂದು ಹೇಳಿದ್ದರು. ಈ ಪ್ರವಾಸದ ನಂತರ ಅದನ್ನು ಒಪ್ಪಿಕೊಳ್ಳದಿರಲು ಸಾಧ್ಯವಾಗಲಿಲ್ಲ,” ಎಂದು ತೆಂಡೂಲ್ಕರ್ ಹೇಳಿದ್ದಾರೆ.

ಪ್ರಧಾನಿ ಮೋದಿ ಪ್ರತಿಕ್ರಿಯೆ

ಸಚಿನ್‌ ಅವರ ಟ್ವೀಟ್‌ಗೆ ಪ್ರಧಾನಿ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ.‌ ಜಮ್ಮು ಮತ್ತು ಕಾಶ್ಮೀರ ಕುರಿತು ಪ್ರಧಾನಿ ಮತ್ತಷ್ಟು ಹೇಳಿದ್ದಾರೆ.

“ಇದು ನೋಡಲು ಅದ್ಭುತವಾಗಿದೆ. ಸಚಿನ್‌ ತೆಂಡೂಲ್ಕರ್‌ ಅವರ ಜಮ್ಮು ಮತ್ತು ಕಾಶ್ಮೀರ ಭೇಟಿಯು ನಮ್ಮ ಯುವಕರಿಗೆ ಎರಡು ಪ್ರಮುಖ ಅಂಶಗಳನ್ನು ತಿಳಿಸುತ್ತದೆ. ಮೊದಲನೆಯದು ಇನ್‌ಕ್ರೆಡಿಬಲ್‌ ಇಂಡಿಯಾದ ವಿವಿಧ ಭಾಗಗಳನ್ನು ಅನ್ವೇಷಿಸುವುದು, ಎರಡನೇಯದು ‘ಮೇಕ್ ಇನ್ ಇಂಡಿಯಾ’ದ ಮಹತ್ವ ತಿಳಿಸುತ್ತದೆ. ಒಟ್ಟಾರೆಯಾಗಿ ವಿಕಸಿತ ಮತ್ತು ಆತ್ಮನಿರ್ಭರ ಭಾರತವನ್ನು ನಿರ್ಮಿಸೋಣ!” ಎಂದು ಪ್ರಧಾನಿ ಹೇಳಿದ್ದಾರೆ.

ಇದನ್ನೂ ಓದಿ | Photo: ಮೂರನೇ ಮಗುವಿಗೆ ತಂದೆಯಾದ ಕೇನ್ ವಿಲಿಯಮ್ಸನ್; ರಾಜಕುಮಾರಿಯ ಮೊದಲ ಫೋಟೋ ಹಂಚಿಕೊಂಡ ಕಿವೀಸ್‌ ಆಟಗಾರ

ತೆಂಡೂಲ್ಕರ್ ಕಳೆದ ವಾರ ಗುಲ್ಮಾರ್ಗ್‌ಗೆ ಪ್ರಯಾಣಿಸಿದರು. ದಕ್ಷಿಣ ಕಾಶ್ಮೀರದ ಸಂಗಮ್ ಪ್ರದೇಶದಲ್ಲಿರುವ ಕ್ರಿಕೆಟ್ ಬ್ಯಾಟ್ ತಯಾರಕರನ್ನು ಭೇಟಿ ಮಾಡಿದ್ದರು. ಅಲ್ಲಿಂದ ಪಹಲ್‌ಘಾಮ್‌ಗೆ ತೆರಳಿ ಪೈನ್ ಮತ್ತು ಪೀಕ್ ಹೋಟೆಲ್‌ನಲ್ಲಿ ತಂಗಿದ್ದರು. ಅಮನ್ ಸೇತು ಬಳಿಯ ಕಮಾನ್ ಪೋಸ್ಟ್‌ನಲ್ಲಿ ಭಾರತೀಯ ವೀರ ಯೋಧರೊಂದಿಗೆ ಸಂವಾದ ನಡೆಸಿದ ಸಚಿನ್‌, ಉರಿಯ ರಸ್ತೆಯಲ್ಲಿ ಸೈನಿಕರು ಹಾಗೂ ಸ್ಥಳೀಯರೊಂದಿಗೆ ಕ್ರಿಕೆಟ್ ಆಡಿ ಖುಷಿಪಟ್ಟರು.‌

ಇದೇ ವೇಳೆ ಜಮ್ಮು ಮತ್ತು ಕಾಶ್ಮೀರ್ ವಿಶೇಷ ಚೇತನ ಕ್ರಿಕೆಟಿಗ ಅಮೀರ್ ಹುಸೇನ್ ಅವರನ್ನು ಕೂಡಾ ಸಚಿನ್ ತೆಂಡೂಲ್ಕರ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.‌ ಈ ವೇಳೆ ಭಾವುಕರಾದ ಹುಸೇನ್‌ ಅವರನ್ನು ಸಂತೈಸಿದ ಕ್ರಿಕೆಟ್‌ ದೇವರು, ತಮ್ಮ ಆಟೋಗ್ರಾಫ್‌ ಹಾಕಿದ ಬ್ಯಾಟ್‌ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಮೀರ್ ಹುಸೇನ್ ಮತ್ತು ಸಚಿನ್ ಕೆಲಕಾಲ ಮಾತುಕತೆ ನಡೆಸಿದ್ದಾರೆ.‌ ಈ ವೇಳೆ ತಮ್ಮ ಕ್ರಿಕೆಟ್‌ ಬದುಕಿನ ಬಗ್ಗೆ ಮಾತನಾಡುತ್ತಾ, ಸ್ಫೂರ್ತಿದಾಯಕ ಕಥೆ ಹೇಳಿದ ಹುಸೇನ್ ಭಾವುಕರಾಗಿದ್ದಾರೆ.

ಇದನ್ನೂ ಓದಿ | ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಅಗ್ರ 10ರತ್ತ ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್ ಭರ್ಜರಿ ಜಿಗಿತ

(This copy first appeared in Hindustan Times Kannada website. To read more like this please logon to kannada.hindustantimes.com)

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ