logo
ಕನ್ನಡ ಸುದ್ದಿ  /  ಕ್ರಿಕೆಟ್  /  ಸರ್ಫರಾಜ್ ಪದಾರ್ಪಣೆ, ಕುಲ್ದೀಪ್ ಸುಂದರ್ ವಾಪಸ್; 2ನೇ ಟೆಸ್ಟ್​ಗೆ ಭಾರತ ತಂಡ ಕಟ್ಟಿದ ಹರ್ಭಜನ್ ಸಿಂಗ್

ಸರ್ಫರಾಜ್ ಪದಾರ್ಪಣೆ, ಕುಲ್ದೀಪ್ ಸುಂದರ್ ವಾಪಸ್; 2ನೇ ಟೆಸ್ಟ್​ಗೆ ಭಾರತ ತಂಡ ಕಟ್ಟಿದ ಹರ್ಭಜನ್ ಸಿಂಗ್

Prasanna Kumar P N HT Kannada

Feb 01, 2024 04:54 PM IST

ಇಂಗ್ಲೆಂಡ್​ ವಿರುದ್ಧದ 2 ನೇ ಟೆಸ್ಟ್​ಗೆ ಭಾರತ ತಂಡ ಕಟ್ಟಿದ ಹರ್ಭಜನ್ ಸಿಂಗ್

    • Harbhajan Singh : ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಪಂದ್ಯಕ್ಕೆ ಆಡುವ 11ರ ಬಳಗದಲ್ಲಿ ಸರ್ಫರಾಜ್ ಖಾನ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್ ಅವರನ್ನು ಆಡಿಸಬೇಕು ಎಂದು ನಾಯಕ ರೋಹಿತ್​ ಶರ್ಮಾ ಅವರಿಗೆ ಹರ್ಭಜನ್ ಸಿಂಗ್ ಅವರು ಸಲಹೆ ನೀಡಿದ್ದಾರೆ.
ಇಂಗ್ಲೆಂಡ್​ ವಿರುದ್ಧದ 2 ನೇ ಟೆಸ್ಟ್​ಗೆ ಭಾರತ ತಂಡ ಕಟ್ಟಿದ ಹರ್ಭಜನ್ ಸಿಂಗ್
ಇಂಗ್ಲೆಂಡ್​ ವಿರುದ್ಧದ 2 ನೇ ಟೆಸ್ಟ್​ಗೆ ಭಾರತ ತಂಡ ಕಟ್ಟಿದ ಹರ್ಭಜನ್ ಸಿಂಗ್

ಭಾರತ ಮತ್ತು ಇಂಗ್ಲೆಂಡ್ (India vs England) ನಡುವೆ ನಡೆಯುತ್ತಿರುವ 5 ಪಂದ್ಯಗಳ ಸರಣಿಯ ಎರಡನೇ ಟೆಸ್ಟ್ ವಿಶಾಖಪಟ್ಟಣದ ಡಾ ವೈಎಸ್ ರಾಜಶೇಖರ ರೆಡ್ಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಪಂದ್ಯವು ಶುಕ್ರವಾರ (ಫೆಬ್ರವರಿ 2) ಪ್ರಾರಂಭವಾಗಲಿದೆ. ಸರಣಿಯ ಆರಂಭಿಕ ಪಂದ್ಯದಲ್ಲಿ 28 ರನ್‌ಗಳಿಂದ ಸೋತ ನಂತರ, ಭಾರತವು ವೈಜಾಗ್‌ನಲ್ಲಿ ಗೆದ್ದು ಸರಣಿ ಸಮಬಲಗೊಳಿಸಲು ಲೆಕ್ಕಾಚಾರ ಹಾಕಿಕೊಂಡಿದೆ.

ಟ್ರೆಂಡಿಂಗ್​ ಸುದ್ದಿ

ಫಾಫ್ ಡು ಪ್ಲೆಸಿಸ್ ವಿವಾದಾತ್ಮಕ ರನೌಟ್, ವಿರಾಟ್ ಕೊಹ್ಲಿ ಅಚ್ಚರಿ; ಅಂಪೈರ್ಸ್ ವಿರುದ್ಧ ನೆಟ್ಟಿಗರ ಆಕ್ರೋಶ

IPL 2024: ನಿರ್ಣಾಯಕ ಪಂದ್ಯದಲ್ಲಿ ಕೊಹ್ಲಿ, ಫಾಫ್, ಪಾಟಿದಾರ್, ಗ್ರೀನ್ ಅಬ್ಬರ; ಸಿಎಸ್‌ಕೆಗೆ 219 ರನ್‌ಗಳ ಬೃಹತ್ ಗುರಿ ನೀಡಿದ ಆರ್‌ಸಿಬಿ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೂಪರ್‌ ಸಾಪರ್ಸ್‌ಗೆ ಕೆಲಸವಿಲ್ಲ; ಮಳೆ ಬಂದಾಗ ಪಿಚ್‌ಗೆ ಮಾತ್ರ ಟಾರ್ಪಲ್ ಹೊದಿಸುವ ಹಿಂದಿನ ಕಾರಣವಿದು

ನೋಡದೆಯೇ 98 ಮೀಟರ್​ ದೂರ ಸಿಕ್ಸರ್​ ಬಾರಿಸಿದ ವಿರಾಟ್ ಕೊಹ್ಲಿ; ಕಣ್ ಕಣ್ ಬಿಟ್ಟು ನೋಡಿದ ಎಂಎಸ್ ಧೋನಿ, VIDEO

ವಿಶಾಖಪಟ್ಟಣ ಪಿಚ್​​ನಲ್ಲಿ ಆಡಿದ ಟೆಸ್ಟ್ ಪಂದ್ಯಗಳಲ್ಲಿ ಭಾರತ ಶೇ 100ರಷ್ಟು ಗೆಲುವಿನ ದಾಖಲೆ ಹೊಂದಿದೆ. 2016ರ ನವೆಂಬರ್​ನಲ್ಲಿ ನಡೆದಿದ್ದ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು 246 ರನ್​ಗಳಿಂದ ಸೋಲಿಸಿದ್ದ ಭಾರತ, ಮತ್ತೊಮ್ಮೆ ಅಂತಹದ್ದೇ ಗೆಲುವಿನ ಸಾಧನೆ ಪುನರಾವರ್ತಿಸಲು, ಸರಣಿಯಲ್ಲಿ ಪುನರಾಗಮನಕ್ಕೆ ಸಜ್ಜುಗೊಂಡಿದೆ. ಆದರೆ ಆಡುವ 11ರ ಬಳಗ ಹೇಗಿರಲಿದೆ ಎಂಬುದೇ ಕುತೂಹಲ.

ಪರಿಹಾರ ನೀಡಿದ ಹರ್ಭಜನ್ ಸಿಂಗ್

2ನೇ ಟೆಸ್ಟ್‌ ಪಂದ್ಯಕ್ಕೆ ಭಾರತ ಆಡುವ 11ರ ಬಳಗದಲ್ಲಿ ಒಂದೆರಡು ಬದಲಾವಣೆ ಕಾಣುವ ಸಾಧ್ಯತೆ ಇದೆ. ಗಾಯದ ಸಮಸ್ಯೆಯಿಂದ ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ ಅವರು ವೈಜಾಗ್ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ. ಈ ಇಬ್ಬರ ಸ್ಥಾನದಲ್ಲಿ ಮೂವರು ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಹಾಗಾಗಿ ಪ್ಲೇಯಿಂಗ್​ XI​ ಗೊಂದಲಕ್ಕೆ ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಪರಿಹಾರ ನೀಡಿದ್ದಾರೆ.

ರವೀಂದ್ರ ಜಡೇಜಾ ಬದಲಿಗೆ ವಾಷಿಂಗ್ಟನ್ ಸುಂದರ್ ಜೊತೆಗೆ 26 ವರ್ಷದ ಮುಂಬೈ ಬ್ಯಾಟರ್ ಸರ್ಫರಾಜ್ ಖಾನ್ ಎರಡನೇ ಟೆಸ್ಟ್‌ನಲ್ಲಿ ಅವಕಾಶ ಪಡೆಯಬೇಕು. ಏಕೆಂದರೆ, ದೇಶೀಯ ಕ್ರಿಕೆಟ್‌ನಲ್ಲಿ ಮತ್ತು ಭಾರತ ಎ ಪರ ಇಂಗ್ಲೆಂಡ್ ಲಯನ್ಸ್​​ ವಿರುದ್ಧದ ಪಂದ್ಯಗಳಲ್ಲಿ ಸಾಕಷ್ಟು ರನ್ ಗಳಿಸಿದ್ದಾರೆ. ಅತ್ಯದ್ಭುತ ಪ್ರದರ್ಶನ ನೀಡಿದ್ದಾರೆ ಎಂದು ಹರ್ಭಜನ್, ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

ಕುಲ್ದೀಪ್​ಗೆ ಅವಕಾಶ ನೀಡಿ ಎಂದ ಭಜ್ಜಿ

ಸುಂದರ್​, ಸರ್ಫರಾಜ್ ಜೊತೆಗೆ ಚೈನಾಮೆನ್​ ಸ್ಪಿನ್ನರ್ ಕುಲ್ದೀಪ್​ ಯಾದವ್ ಅವರನ್ನೂ ಪ್ಲೇಯಿಂಗ್​ ಇಲೆವೆನ್​ನಲ್ಲಿ ಆಡಿಸುವಂತೆ ನಾಯಕ ರೋಹಿತ್​ ಶರ್ಮಾ ಅವರಿಗೆ ಸೂಚಿಸಿದ್ದಾರೆ. ಮೊಹಮ್ಮದ್ ಸಿರಾಜ್ ಅವರ ಬದಲಿಗೆ ಕುಲ್ದೀಪ್​ಗೆ ಅವಕಾಶ ನೀಡಿದರೆ, ಬೌಲಿಂಗ್ ವಿಭಾಗ ಇನ್ನಷ್ಟು ಅಪಾಯಕಾರಿ ಆಗಲಿದೆ. ತಂಡದ 11ನೇ ಆಟಗಾರ ಚೈನಾಮೆನ್ ಸ್ಪಿನ್ನರ್ ಆಗಿರಲಿ ಎಂದು ಸಲಹೆ ನೀಡಿದ್ದಾರೆ.

ಕುಲ್ದೀಪ್​ ಎರಡೂ ದಿಕ್ಕುಗಳಲ್ಲಿಯೂ ಚೆಂಡನ್ನು ತಿರುಗಿಸಬಲ್ಲರು. ಅವರು ಇತ್ತೀಚೆಗೆ ವಿಶ್ವಕಪ್​ ಟೂರ್ನಿಯಲ್ಲಿ ನೀಡಿದ ಪ್ರದರ್ಶನವನ್ನೇ ಗಮನಿಸಿ. ತಂಡಕ್ಕೆ ಹೆಚ್ಚುವರಿ ಸ್ಪಿನ್ನರ್​ ಆಡಿಸಲು ಬಯಸಿದರೆ ಮತ್ತು ವೈಜಾಗ್​ ಪಿಚ್​ ಟರ್ನಿಂಗ್​ ಟ್ರ್ಯಾಕ್ ಎಂದು ಭಾವಿಸಿದರೆ, ಕುಲ್ದೀಪ್​ಗೆ ಅವಕಾಶ ನೀಡಬೇಕು. ಹಾಗೆಯೇ ರಾಹುಲ್ ಮತ್ತು ಜಡ್ಡು ಸ್ಥಾನಕ್ಕೆ ಸುಂದರ್ ಮತ್ತು ಸರ್ಫರಾಜ್ ಆಡಿದರೆ ಉತ್ತಮ ಎಂದಿದ್ದಾರೆ.

ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್​ಗೆ ಹರ್ಭಜನ್ ಸಿಂಗ್ ಆರಿಸಿದ ಭಾರತದ ಆಟಗಾರರ XI: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್, ಸರ್ಫರಾಜ್ ಖಾನ್, ವಾಷಿಂಗ್ಟನ್ ಸುಂದರ್, ಕೆಎಸ್ ಭರತ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಕುಲ್ದೀಪ್​ ಯಾದವ್.

ಭಾರತ ತಂಡ

ರೋಹಿತ್​ ಶರ್ಮಾ, ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್, ಕೆಎಸ್ ಭರತ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ರಜತ್ ಪಾಟೀದಾರ್, ಸರ್ಫರಾಜ್ ಖಾನ್, ಮುಕೇಶ್ ಕುಮಾರ್, ಸೌರಭ್ ಕುಮಾರ್, ವಾಷಿಂಗ್ಟನ್ ಸುಂದರ್, ಧ್ರುವ್ ಜುರೆಲ್.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ