Food: ಪ್ರಪಂಚದ 100 ರುಚಿಕರ ತಿಂಡಿಗಳಲ್ಲಿ ಭಾರತದ 5 ಆಹಾರಗಳಿಗಿದೆ ಸ್ಥಾನ, ಯಾವುದೆಲ್ಲಾ ಲಿಸ್ಟ್‌ನಲ್ಲಿದೆ ನೋಡಿ
ರುಚಿ ರುಚಿಯಾದ ತಿಂಡಿ ಸಿಕ್ಕರೆ ಯಾರು ತಾನೇ ನಿರಾಕರಿಸುತ್ತಾರೆ. ತಮಗಿಷ್ಟವಾದ ತಿಂಡಿ ಸಿಕ್ಕರೆ ಎಲ್ಲರೂ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಪ್ರಪಂಚದಲ್ಲಿ ಎಷ್ಟೋ ವಿಧವಾದ ತಿಂಡಿಗಳಿವೆ. ಪ್ರಪಂಚದ 100 ರುಚಿಕರ ತಿಂಡಿಗಳಲ್ಲಿ ಭಾರತದ 5 ಆಹಾರಗಳು ಸ್ಥಾನ ಪಡೆದಿದೆ ಎಂದರೆ ಅದು ನಿಜಕ್ಕೂ ಹೆಮ್ಮೆಯ ವಿಚಾರ
(1 / 6)
ಖ್ಯಾತ ಜಾಗತಿಕ ಪಾಕಶಾಲೆ ಮತ್ತು ಟ್ರಾವೈಲ್ ಗೈಡ್ ಆದ ಟೇಸ್ಟ್ ಅಟ್ಲಾಸ್, ಸ್ಥಳೀಯ ಪಾಕ ಪದ್ಧತಿಯನ್ನು ಸವಿಯಲು ವಿಶ್ವಾದ್ಯಂತ ಟಾಪ್ 100 ನಗರಗಳ ಖ್ಯಾತ ಆಹಾರವನ್ನು ಇತ್ತೀಚೆಗೆ ಅನಾವರಣಗೊಳಿಸಿದೆ. ಅದರಲ್ಲಿ ಭಾರತದ 5 ಫುಡ್‌ಗಳೂ ಸೇರಿವೆ. ಮುಂಬೈ, ಹೈದರಾಬಾದ್, ನವ ದೆಹಲಿ, ಚೆನ್ನೈ, ಲಕ್ನೋ ಕ್ರಮವಾಗಿ 35, 39, 56, 65 ಹಾಗೂ 92ನೇ ಸ್ಥಾನದಲ್ಲಿದೆ. (Unsplash)
(2 / 6)
ಲಕ್ನೋ: ಭಾರತದ ಉತ್ತರ ಪ್ರದೇಶದ ರಾಜಧಾನಿ ಲಕ್ನೋ ತನ್ನ ಶ್ರೀಮಂತ ಪಾಕ ಪರಂಪರೆಗೆ ಹೆಸರಾಗಿದೆ. ಇದನ್ನು ಅವಧಿ ಪಾಕಪದ್ಧತಿ ಎಂದು ಕರೆಯಲಾಗುತ್ತದೆ. ಈ ಪಾಕಪದ್ಧತಿಯು ಅದರ ವಿಸ್ತಾರವಾದ ತಯಾರಿಕೆಯ ವಿಧಾನಗಳು ಮತ್ತು ಶ್ರೀಮಂತ ಸುವಾಸನೆಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಕಬಾಬ್, ಬಿರಿಯಾನಿ, ಕುರ್ಮಾಗಳಂತ ಆಹಾರ ಬಹಳ ಖ್ಯಾತಿ ಪಡೆದಿದೆ.(File Photo)
(3 / 6)
ಭಾರತದ ರಾಜಧಾನಿ ನವದೆಹಲಿ ಕೂಡಾ ತನ್ನದೇ ಪಾಕ ಪದ್ಧತಿಗೆ ಹೆಸರುವಾಸಿಯಾಗಿದೆ. ನಗರವು ರಸ್ತೆಬದಿ ತಿಂಡಿಗಳಿಗಾಗಿ ಹೆಸರುವಾಸಿಯಾಗಿದೆ. ಅವುಗಳನ್ನು ಗೋಲ್‌ಗಪ್ಪಾ, ಆಲೂ ಟಿಕ್ಕಿ, ಪಾಪ್ಡಿ ಚಾಟ್‌ಗಳು ಬಹಳ ಫೇಮಸ್ ಆಗಿವೆ. ಭೋಜಪ್ರಿಯರ ಮೋಸ್ಟ್ ಫೇವರೆಟ್ ಆಗಿದೆ. (Instagram/@sinfullyspicy)
(4 / 6)
ದಕ್ಷಿಣ ಭಾರತದಲ್ಲಿ ಚೆನ್ನೈನ ತಿಂಡಿಗಳು ಕೂಡಾ ವಿಶ್ವದ ಖ್ಯಾತ ಆಹಾರಗಳ ಲಿಸ್ಟ್‌ನಲ್ಲಿ ಸೇರಿದೆ. ಅದರಲ್ಲಿ ಬಜ್ಜಿ, ಬೋಂಡಾ , ಫಿಶ್ ಕರ್ರಿ, ಪ್ರಾನ್ ಮಸಾಲಾದಂಥ ಸೀ ಫುಡ್‌ಗಳಿವೆ ಹೆಸರುವಾಸಿಯಾಗಿದೆ. (File Photo)
(5 / 6)
ಮುಂಬೈ ಕೂಡಾ ರಸ್ತೆಬದಿ ತಿಂಡಿಗಳಿಗೆ ಹೆಸರಾಗಿದೆ. ಅದರಲ್ಲಿ ವಡಾ ಪಾವ್ ಬಹಳ ಫೇಮಸ್. ಅದನ್ನು ಹೊರತುಪಡಿಸಿ ಪೊಟ್ಯಾಟೋ ಫ್ರಿಟ್ಟರ್, ಪಾವ್ ಬಾಜಿ ಕೂಡಾ ಬಹಳ ಹೆಸರಾಗಿದೆ.(File Photo)
(6 / 6)
ಮುತ್ತಿನ ನಗರಿ, ನಿಜಾಮರ ನಗರ ಎಂದು ಹೆಸರಾಗಿರುವ ಹೈದರಾಬಾದ್ ಫುಡ್ ಎಂದರೆ ನೆನಪಾಗುವುದು ಹೈದರಾಬಾದ್ ಬಿರಿಯಾನಿ. ಮೃದುವಾದ ಮಾಂಸದೊಂದಿಗೆ, ತುಪ್ಪ, ಹುರಿದ ಈರುಳ್ಳಿ, ಬಾಸುಮತಿ ಅಕ್ಕಿಯಿಂದ ತಯಾರಿಸುವ ಹೈದರಾಬಾದ್ ಬಿರ್ಯಾನಿ ಇಡೀ ದೇಶದಲ್ಲೇ ಫೇಮಸ್, ಈಗ ಇದರ ಖ್ಯಾತಿ ವಿದೇಶಕ್ಕೂ ಹರಡಿದೆ. ಇದರೊಂದಿಗೆ ರಂಜಾನ್ ಸಮಯದಲ್ಲಿ ತಯಾರಿಸುವ ಹಲೀಮ್ ಕೂಡಾ ಹೆಸರಾಂತ ಆಹಾರವಾಗಿದೆ. (File Photo)
ಇತರ ಗ್ಯಾಲರಿಗಳು