logo
ಕನ್ನಡ ಸುದ್ದಿ  /  ಕ್ರಿಕೆಟ್  /  ಸೆಲೆಕ್ಟರ್​ಗಳೇ ಈತನ ಮೇಲೆ ಕಣ್ಣಿಡಿ; ಟಿ20 ವಿಶ್ವಕಪ್​ಗೆ​ ರಾಜಸ್ಥಾನ ರಾಯಲ್ಸ್ ಆಟಗಾರ ಇರಲೇಬೇಕೆಂದ ಸುನಿಲ್ ಗವಾಸ್ಕರ್

ಸೆಲೆಕ್ಟರ್​ಗಳೇ ಈತನ ಮೇಲೆ ಕಣ್ಣಿಡಿ; ಟಿ20 ವಿಶ್ವಕಪ್​ಗೆ​ ರಾಜಸ್ಥಾನ ರಾಯಲ್ಸ್ ಆಟಗಾರ ಇರಲೇಬೇಕೆಂದ ಸುನಿಲ್ ಗವಾಸ್ಕರ್

Prasanna Kumar P N HT Kannada

Apr 11, 2024 03:42 PM IST

ರಿಯಾನ್ ಪರಾಗ್ ಟಿ20 ವಿಶ್ವಕಪ್ ತಂಡದಲ್ಲಿ ಆಡಬೇಕೆಂದ ಸುನಿಲ್ ಗವಾಸ್ಕರ್

    • ಗುಜರಾತ್ ಟೈಟಾನ್ಸ್ ವಿರುದ್ಧದ ಅಬ್ಬರಿಸಿದ ರಾಜಸ್ಥಾನ್ ರಾಯಲ್ಸ್ ತಂಡದ ಯುವ ಆಟಗಾರ ರಿಯಾನ್ ಪರಾಗ್ ಅವರನ್ನು ಟಿ20 ವಿಶ್ವಕಪ್ ಟೂರ್ನಿಗೆ ಪರಿಗಣಿಸಲು ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್, ಪರೋಕ್ಷವಾಗಿ ಬೆಂಬಲ ನೀಡಿದ್ದಾರೆ.
ರಿಯಾನ್ ಪರಾಗ್ ಟಿ20 ವಿಶ್ವಕಪ್ ತಂಡದಲ್ಲಿ ಆಡಬೇಕೆಂದ ಸುನಿಲ್ ಗವಾಸ್ಕರ್
ರಿಯಾನ್ ಪರಾಗ್ ಟಿ20 ವಿಶ್ವಕಪ್ ತಂಡದಲ್ಲಿ ಆಡಬೇಕೆಂದ ಸುನಿಲ್ ಗವಾಸ್ಕರ್

ಗುಜರಾತ್ ಟೈಟಾನ್ಸ್ ವಿರುದ್ಧ ಏಪ್ರಿಲ್ 10ರ ಬುಧವಾರ ನಡೆದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಭಾರತದ ಮಾಜಿ ನಾಯಕ ಮತ್ತು ಬ್ಯಾಟಿಂಗ್ ಲೆಜೆಂಡ್ ಸುನಿಲ್ ಗವಾಸ್ಕರ್ (Sunil Gavaskar) ಅವರು ರಾಜಸ್ಥಾನ್ ರಾಯಲ್ಸ್ ತಂಡದ ಯುವ ಆಟಗಾರ ರಿಯಾನ್ ಪರಾಗ್ (Riyan Parag) ಭಾರತ ತಂಡಕ್ಕೆ ಆಯ್ಕೆಯಾಗುವ ಬಗ್ಗೆ ಪರೋಕ್ಷ ಬೆಂಬಲ ನೀಡಿದ್ದಾರೆ. 2024ರ ಐಪಿಎಲ್​ನಲ್ಲಿ ತಮ್ಮ ಸ್ಥಿರತೆ ಕಾಪಾಡಿಕೊಳ್ಳಲು ಮತ್ತು ಪ್ರತಿಯೊಂದು ಅವಕಾಶವನ್ನು ಹೆಚ್ಚು ಬಳಸಿಕೊಳ್ಳುವಂತೆ ಗವಾಸ್ಕರ್, ಪರಾಗ್​ಗೆ ಸಲಹೆ ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಕದನದೊಳ್ ಕಿಂಗ್ ಕೊಹ್ಲಿ ಕೆಣಕಿ ಉಳಿದವರಿಲ್ಲ; ರವೀಂದ್ರ ಜಡೇಜಾಗೆ ಅಲ್ಲೇ ಡ್ರಾ, ಅಲ್ಲೇ ಬಹುಮಾನ, ವಿಡಿಯೋ

ಅಂದು ಟೀಕಿಸಿದವರಿಂದಲೇ ಇಂದು ಶಹಬ್ಬಾಷ್‌ಗಿರಿ; ಟ್ರೋಲ್‌ಗಳಿಗೆ ಕುಗ್ಗದೆ ಆರ್‌ಸಿಬಿ ಅದೃಷ್ಟವನ್ನೇ ಬದಲಿಸಿದ ಯಶ್ ದಯಾಳ್

RCB Hosa Adhyaya: ಸಿಎಸ್​ಕೆ ವಿರುದ್ಧ ಪರಾಕ್ರಮ ಮೆರೆದು ಪ್ಲೇಆಫ್ ಹೆಬ್ಬಾಗಿಲು ದಾಟಲು ಪ್ರಮುಖ 6 ಕಾರಣಗಳು

ಬೆಂಗಳೂರು ಬೀದಿಗಳಲ್ಲಿ ರಾತ್ರಿ 1.30ಕ್ಕೂ ವಿರಾಟ್‌ ಫ್ಯಾನ್ಸ್‌ ಹರ್ಷೋದ್ಘಾರ; ವಿಡಿಯೋ ಹಂಚಿಕೊಂಡು ನೀವೇ ಬೆಸ್ಟ್‌ ಎಂದ ಆರ್‌ಸಿಬಿ

ಜಿಟಿ ವಿರುದ್ಧ ಸಂಜು ಸ್ಯಾಮ್ಸನ್ ಅವರೊಂದಿಗೆ ಬ್ಯಾಟಿಂಗ್​ ಅದ್ಭುತ ಪ್ರದರ್ಶನ ನೀಡಿದ ಪರಾಗ್ ತಂಡವು 196 ರನ್​​ಗಳ ಸವಾಲಿನ ಮೊತ್ತ ದಾಖಲಿಸಲು ನೆರವಾದರು. ಬಲಗೈ ಬ್ಯಾಟ್ಸ್​​ಮನ್​ 48 ಎಸೆತಗಳಲ್ಲಿ 3 ಬೌಂಡರಿ, 6 ಸಿಕ್ಸರ್ ಸಹಿತ 76 ರನ್ ಗಳಿಸಿದ್ದಾರೆ. ಈ ಆವೃತ್ತಿಯಲ್ಲಿ ರಿಯಾನ್​ರ ಮೂರನೇ ಅರ್ಧಶತಕವಾಗಿದೆ. ಆರೆಂಜ್ ಕ್ಯಾಪ್​ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. 2019ರಲ್ಲಿ ಐಪಿಎಲ್​ಗೆ ಪದಾರ್ಪಣೆ ಮಾಡಿದಾಗಿನಿಂದ ಆರ್​ಆರ್ ಪರ ಆಡುತ್ತಿರುವ ರಿಯಾನ್, 2024ರ ಐಪಿಎಲ್​ನಲ್ಲಿ ಅದ್ಭುತ ಫಾರ್ಮ್​ಗೆ ಮರಳಿದ್ದಾರೆ.

5 ಪಂದ್ಯಗಳಲ್ಲೇ 3 ಅರ್ಧಶತಕ

ಕಳೆದ ಐದು ಆವೃತ್ತಿಗಳಲ್ಲಿ ಕೇವಲ 2 ಅರ್ಧಶತಕ ಸಿಡಿಸಿದ್ದ ಪರಾಗ್, ಆದರೀಗ 2024ರ ಐಪಿಎಲ್​ನಲ್ಲಿ ಆಡಿರುವ 5 ಪಂದ್ಯಗಳಲ್ಲೇ 3 ಅರ್ಧಶತಕ ಸಿಡಿಸುವಲ್ಲಿ ಯಶಸ್ಸು ಕಂಡಿದ್ದಾರೆ. ದೇಶೀಯ ಕ್ರಿಕೆಟ್​ನಲ್ಲಿ ಅಬ್ಬರಿಸಿದ್ದ ಅದೇ ಆವೇಗವನ್ನು ಕಾಯ್ದುಕೊಂಡ ರಿಯಾನ್ ಪರಾಗ್ ಐಪಿಎಲ್​ನಲ್ಲೂ ಆರ್ಭಟ ಮುಂದುವರೆಸಿದ್ದಾರೆ. ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಯ ನಂತರದ ಸ್ಥಾನದಲ್ಲಿರುವ ಪರಾಗ್​ ಬ್ಯಾಟಿಂಗ್​ ಅನ್ನು ಸುನಿಲ್ ಗವಾಸ್ಕರ್ ಅವರು ಶ್ಲಾಘಿಸಿದ್ದಾರೆ.

ಸಿಗುವ ಅವಕಾಶ ಸದ್ಭಳಕೆ ಮಾಡಿಕೊಳ್ಳುತ್ತಿದ್ದೀರಿ. ಸಂದರ್ಭಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡುತ್ತಿದ್ದೀರಿ. ಇದರ ಹಿಂದೆ ಕಠಿಣ ಪರಿಶ್ರಮವೂ ಅಡಗಿದೆ. ಪ್ರಸ್ತುತ ಐಪಿಎಲ್​ನಲ್ಲಿ ನಂಬಲಾಗದ ಕ್ರಿಕೆಟ್ ಆಡುತ್ತಿದ್ದಾರೆ ಎಂದು ಆರ್​ಆರ್​ ವಿರುದ್ಧದ ಜಿಟಿ ಗೆಲುವಿನ ನಂತರ ಸ್ಟಾರ್ ಸ್ಪೋರ್ಟ್ಸ್​​​​​ನಲ್ಲಿ ಭಾರತದ ಮಾಜಿ ನಾಯಕ ಹೇಳಿದ್ದಾರೆ. ಇದೇ ವೇಳೆ ರಿಯಾನ್ ಪರಾಗ್ ಟಿ20 ವಿಶ್ವಕಪ್​ಗೆ ಆಯ್ಕೆ ಕುರಿತು ಮಾತನಾಡಿದ್ದಾರೆ.

ನಿನ್ನ ಆಟ ನೀನು ಆಡು ಎಂದ ಗವಾಸ್ಕರ್

ಈ ಆವೃತ್ತಿಯಲ್ಲಿ ಈಗಾಗಲೇ ಅಗಾಧ ಯಶಸ್ಸು ಗಳಿಸಿದ ನಂತರ ಎಡಗೈ ಬ್ಯಾಟ್ಸ್​ಮನ್​ಗೆ ವಿಶೇಷ ಸಲಹೆ ನೀಡಿದ್ದಾರೆ. ಪ್ರಸ್ತುತ ಹೇಗೆ ಬ್ಯಾಟಿಂಗ್ ಮಾಡುತ್ತಿದ್ದಿರೋ ಹಾಗೆಯೇ ಬ್ಯಾಟಿಂಗ್ ಮುಂದುವರಿಸಿ ಎಂದು ಗವಾಸ್ಕರ್ ಹೇಳಿದ್ದಾರೆ. ಐಪಿಎಲ್​​ನಲ್ಲಿ ಮಾತ್ರವಲ್ಲ, ಈ ಆವೃತ್ತಿಯಾದ್ಯಂತ ಪರಾಗ್ ಅಪಾರ ಯಶಸ್ಸನ್ನು ಕಂಡಿದ್ದಾರೆ. ದೇಶೀಯ ಕ್ರಿಕೆಟ್​ನಲ್ಲೂ ಮಿಂಚಿದ್ದಾರೆ. ಈತನ ಮೇಲೆ ಸೆಲೆಕ್ಟರ್​ಗಳು ಕಣ್ಣಿಟ್ಟಿದ್ದಾರೆ ಎಂದು ಹೇಳಿದ್ದಾರೆ.

ಆಯ್ಕೆದಾರರು ಆತನ ಮೇಲೆ ಕಣ್ಣಿಟ್ಟಿದ್ದಾರೆ. ಹಾಗಾಗಿ, ದೇಶೀಯ ಕ್ರಿಕೆಟ್​ನಲ್ಲಿ ಮತ್ತು ಪ್ರಸ್ತುತ ಐಪಿಎಲ್​ನಲ್ಲಿ ಬ್ಯಾಟಿಂಗ್​ನಲ್ಲಿ ಹೇಗೆ ಪ್ರಭಾವ ಬೀರುತ್ತಿದ್ದಾರೋ ಅದೇ ರೀತಿ ಆಟವನ್ನು ಮುಂದುವರೆಸಿಬೇಕು. ಆತನ ಫೀಲ್ಡಿಂಗ್​ ಬಗ್ಗೆಯೂ  ಎಲ್ಲರಿಗೂ ಗೊತ್ತಿದೆ. ಅದೇ ರೀತಿ ಅಗ್ರೆಸ್ಸಿವ್​ ಆಗಿ ಫೀಲ್ಡಿಂಗ್ ಮುಂದುವರೆಸಬೇಕು. ಬೌಲಿಂಗ್​ನಲ್ಲೀ ಮ್ಯಾಜಿಕ್ ಮಾಡಲಿದ್ದಾರೆ. ಸೆಲೆಕ್ಟರ್​​ಗಳು ಈತನ ಮೇಲೆ ಕಣ್ಣಿಡಬೇಕು ಎಂದು ಹೇಳಿದ್ದಾರೆ.

ಜೈಪುರದ ಸವಾಯಿ ಮಾನ್ಸಿಂಗ್ ಕ್ರಿಕೆಟ್ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ಥಾನ್ ರಾಯಲ್ಸ್, ಸಂಜು ಸ್ಯಾಮ್ಸನ್ (68*) ಮತ್ತು ರಿಯಾನ್ ಪರಾಗ್ (76) ಅವರ ಅದ್ಭುತ ಪ್ರದರ್ಶನದಿಂದ  3 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿತು. ಆ ಬಳಿಕ 197 ರನ್​ಗಳ ಸವಾಲು ಬೆನ್ನಟ್ಟಿದ ಜಿಟಿ ಪರ ಶುಭ್ಮನ್ ಗಿಲ್ (72), ಕೊನೆಯಲ್ಲಿ ರಶೀದ್ ಖಾನ್ (24), ರಾಹುಲ್ ತೆವಾಟಿಯಾ (22) ಅಬ್ಬರಿಸಿ ಗೆಲುವು ತಂದುಕೊಟ್ಟರು.

IPL, 2024

Live

PBKS

214/5

20.0 Overs

VS

SRH

153/3

(12.0)

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ