ಅವರನ್ನು ವಿರಾಟ್ ಕೊಹ್ಲಿ ನೋಡಿಕೊಳ್ತಾರೆ ಎಂದಿದ್ದ ಅಗರ್ಕರ್ಗೆ ತಿರುಗೇಟು ನೀಡಿದ ಶಾದಾಬ್ ಖಾನ್
Aug 27, 2023 12:21 PM IST
ಅವರನ್ನು ವಿರಾಟ್ ಕೊಹ್ಲಿ ನೋಡಿಕೊಳ್ತಾರೆ ಎಂದಿದ್ದ ಅಗರ್ಕರ್ಗೆ ಶಾದಾಬ್ ತಿರುಗೇಟು.
- Shadab Khan: ಪಾಕಿಸ್ತಾನದ ಬೌಲರ್ಗಳಿಗೆ ಸಂಬಂಧಿಸಿ ಹೇಳಿಕೆ ನೀಡಿದ್ದ ಅಜಿತ್ ಅಗರ್ಕರ್ ಅವರಿಗೆ ಆಲ್ರೌಂಡರ್ ಶಾದಾಬ್ ಖಾನ್ ತಿರುಗೇಟು ನೀಡಿದ್ದಾರೆ. ಹೇಳಿಕೆಯಿಂದ ಎಲ್ಲವೂ ಆಗದು ಎಂದು ಉತ್ತರ ನೀಡಿದ್ದಾರೆ.
ಏಷ್ಯಾಕಪ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ಕೇಳಿದ್ದ ಪ್ರಶ್ನೆಗೆ ವಿರಾಟ್ ಕೊಹ್ಲಿ ಹೆಸರನ್ನು ಉಲ್ಲೇಖಿಸಿ ನಗುತ್ತಾ ಉತ್ತರಿಸಿದ್ದ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಹೇಳಿಕೆಗೆ ಇದೀಗ ಪಾಕಿಸ್ತಾನದ ಆಲ್ರೌಂಡರ್ ಶಾದಾಬ್ ಖಾನ್ ತಿರುಗೇಟು ನೀಡಿದ್ದಾರೆ.
ಟೂರ್ನಿಗೆ ಪ್ರಕಟಿಸಿದ ನಂತರ ಪತ್ರಕರ್ತರೊಬ್ಬರು, ಪಾಕಿಸ್ತಾನದ ಶಾಹೀನ್ ಶಾ ಅಫ್ರಿದಿ ಮತ್ತು ನಸೀಮ್ ಶಾ ಅವರಂತಹ ಬೌಲಿಂಗ್ ಎದುರಿಸಲು ಸಿದ್ಧತೆ ಹೇಗಿದೆ ಎಂದು ಪ್ರಶ್ನೆ ಕೇಳಿದ್ದರು. ಅದಕ್ಕೆ ಉತ್ತರಿಸಿದ ಅಗರ್ಕರ್, ಅವರೆಲ್ಲರನ್ನೂ ವಿರಾಟ್ ಕೊಹ್ಲಿ ನೋಡಿಕೊಳ್ಳುತ್ತಾರೆ ಎಂದು ನಗುತ್ತಾ ಹೇಳಿದ್ದರು.
ಅಫ್ಘಾನಿಸ್ತಾನದ ಎದುರಿನ 3ನೇ ಏಕದಿನ ಪಂದ್ಯದಲ್ಲಿ 59 ರನ್ಗಳಿಂದ ಗೆದ್ದ ನಂತರ ಎದುರಾದ ಅರ್ಗಕರ್ ಹೇಳಿಕೆಗೆ ಸಂಬಂಧಿಸಿದ ಪ್ರಶ್ನೆಗೆ ಆಲ್ರೌಂಡರ್ ಮತ್ತು ಉಪನಾಯಕ ಶಾದಾಬ್ ಖಾನ್ ಉತ್ತರಿಸಿದ್ದಾರೆ. ನಗುತ್ತಾ ಉತ್ತರ ಕೊಟ್ಟ ಶಾದಾಬ್, ಕೇವಲ ಮಾತುಗಳು ನಿಜ ಆಗಲಲ್ಲ. ಮುಂದಾಗುವ ಸತ್ಯವನ್ನೂ ಎಂದಿಗೂ ನೋಡಲಾಗದು ಎಂದಿದ್ದಾರೆ.
‘ಹೇಳಿಕೆಯಿಂದ ಎಲ್ಲವೂ ಆಗದು’
ಇದೊಂದು ನಿರ್ದಿಷ್ಟ ದಿನದ ಮೇಲೆ ಅವಲಂಬಿತವಾಗಿದೆ. ಭಾರತ ಅಥವಾ ನಮ್ಮಿಂದಲೇ ಏನು ಬೇಕಾದರೂ ಹೇಳಬಹುದು. ಯಾರಾದರೂ ಏನು ಬೇಕಾದರೂ ಮಾತನಾಡಬಹುದು. ಆದರೆ ಅವು ಕೇವಲ ಪದಗಳು ಎನ್ನುವುದಷ್ಟೇ ನಾವು ಭಾವಿಸುತ್ತೇವೆ. ಒಂದು ಹೇಳಿಕೆ ಏನನ್ನೂ ಬದಲಾಯಿಸಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.
ಒಂದು ಹೇಳಿಕೆ ಪರಿಣಾಮ ಬೀರುವುದಿಲ್ಲ. ನಾವು ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡದೇ ಹೋದರೆ, ಅದರ ಪರಿಣಾಮವೇ ಬೇರೆ. ಆದರೆ ಆ ಹೇಳಿಕೆ ಫಲಿತಾಂಶಕ್ಕೆ ಅವಲಂಬಿತವಾಗಿಲ್ಲ ಎಂದಿದ್ದಾರೆ. ಪಂದ್ಯದಲ್ಲಿ ಹೇಗೆ ಪ್ರದರ್ಶನ ಮೂಡಿಸುತ್ತದೆ, ಏನಾಗುತ್ತದೆ ಎಂದು ನಾವು ಕೂಡ ಕಾದು ನೋಡುತ್ತಿದ್ದೇವೆ ಎಂದು ಅವರು ಹೇಳಿದರು.
2022ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ವಿರಾಟ್ ಕೊಹ್ಲಿ, ಪಾಕ್ ಎದುರು ಸೋಲುವ ಪಂದ್ಯವನ್ನು ಗೆದ್ದುಕೊಟ್ಟಿದ್ದರು. ಅದರಲ್ಲೂ ಹ್ಯಾರಿಸ್ ರವೂಫ್ಗೆ ಕೊಹ್ಲಿ ಸಿಡಿಸಿದ್ದ ರೋಮಾಂಚನಕಾರಿ ಎರಡು ಸಿಕ್ಸರ್ಗಳು, ವಿಶ್ವ ಕ್ರಿಕೆಟ್ನ ಮನ ಗೆದ್ದಿತ್ತು. ಹಾಗಾಗಿ ಅಂತಹ ಬೌಲರ್ಗಳನ್ನು ಎದುರಿಸಲು ಟೀಮ್ ಇಂಡಿಯಾ ಯಾವ ರೀತಿ ಸಿದ್ಧತೆ ನಡೆಸುತ್ತಿದೆ ಎಂಬ ಪ್ರಶ್ನೆಗೆ ಅಗರ್ಕರ್, ಕೊಹ್ಲಿ ನೋಡಿಕೊಳ್ತಾರೆ ಎಂದಿದ್ದರು.
ಏಷ್ಯಾಕಪ್ ಟೂರ್ನಿಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಪ್ರಸಿದ್ಧ್ ಕೃಷ್ಣ.