logo
ಕನ್ನಡ ಸುದ್ದಿ  /  ಕ್ರಿಕೆಟ್  /  ಶ್ರೇಯಸ್​ ಅಯ್ಯರ್​​ಗೆ ಮತ್ತೆ ಬೆನ್ನು ನೋವಿನ ಸಮಸ್ಯೆ; ಕೆಕೆಆರ್​​​ ಮೊದಲ ಹಂತದ ಪಂದ್ಯಗಳಿಗೆ ಅನುಮಾನ

ಶ್ರೇಯಸ್​ ಅಯ್ಯರ್​​ಗೆ ಮತ್ತೆ ಬೆನ್ನು ನೋವಿನ ಸಮಸ್ಯೆ; ಕೆಕೆಆರ್​​​ ಮೊದಲ ಹಂತದ ಪಂದ್ಯಗಳಿಗೆ ಅನುಮಾನ

Prasanna Kumar P N HT Kannada

Mar 14, 2024 09:25 PM IST

ಶ್ರೇಯಸ್​ ಅಯ್ಯರ್​​ಗೆ ಮತ್ತೆ ಬೆನ್ನು ನೋವಿನ ಸಮಸ್ಯೆ

    • Shreyas Iyer : ಶ್ರೇಯಸ್ ಅಯ್ಯರ್​ಗೆ ಮತ್ತೆ ಬೆನ್ನಿನ ಸಮಸ್ಯೆ ಬೆಳೆಸಿಕೊಂಡಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡದ ಪರ ಆವೃತ್ತಿಯ ಮೊದಲ ಹಂತವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.
ಶ್ರೇಯಸ್​ ಅಯ್ಯರ್​​ಗೆ ಮತ್ತೆ ಬೆನ್ನು ನೋವಿನ ಸಮಸ್ಯೆ
ಶ್ರೇಯಸ್​ ಅಯ್ಯರ್​​ಗೆ ಮತ್ತೆ ಬೆನ್ನು ನೋವಿನ ಸಮಸ್ಯೆ

ಕಳೆದೊಂದು ತಿಂಗಳಿಂದ ಭಾರಿ ಸದ್ದು ಮಾಡುತ್ತಿರುವ ಭಾರತದ ಸ್ಟಾರ್​ ಬ್ಯಾಟರ್​ ಶ್ರೇಯಸ್ ಅಯ್ಯರ್ (Shreyas Iyer) ಮತ್ತೆ ಸುದ್ದಿಯಾಗಿದ್ದಾರೆ. ಅವರಿಗೆ ಮತ್ತೆ ಬೆನ್ನು ನೋವು ಕಾಣಿಸಿಕೊಂಡಿದೆ. ರಣಜಿ ಟ್ರೋಫಿ ಫೈನಲ್​​ನ (Ranji Trophy 2024) 2ನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ನಡೆಸಿದ ಅಯ್ಯರ್, ಬೆನ್ನುನೋವು ಕಾರಣ ನೀಡಿ ಫೀಲ್ಡಿಂಗ್ ನಡೆಸಲಿಲ್ಲ. ಐಪಿಎಲ್​ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಗಾಯದ ಸಮಸ್ಯೆ ಕೆಕೆಆರ್​ಗೆ ಚಿಂತೆಗೀಡು ಮಾಡಿದೆ.

ಟ್ರೆಂಡಿಂಗ್​ ಸುದ್ದಿ

ಈ ಮೂವರನ್ನು ಕಟ್ಟಿಹಾಕಿದ್ರೆ ಆರ್‌ಸಿಬಿ ಗೆಲುವು ಸಲೀಸು; ರಾಜಸ್ಥಾನ್ ರಾಯಲ್ಸ್ ಸಾಮರ್ಥ್ಯ-ದೌರ್ಬಲ್ಯ ಹಾಗೂ ಎಕ್ಸ್ ಫ್ಯಾಕ್ಟರ್

ಈ ಥರ ಆಡಿದ್ರೆ ಈ ಸಲ ಕಪ್ ನಮ್ದೇ; ಆರ್‌ಸಿಬಿ ತಂಡದ ಸಾಮರ್ಥ್ಯ, ದೌರ್ಬಲ್ಯ ಹಾಗೂ ಗೆಲುವಿನ ಎಕ್ಸ್-ಫ್ಯಾಕ್ಟರ್‌ಗಳಿವು

ಭಾರತ ತಂಡದ ಮುಖ್ಯ ಕೋಚ್ ಆಯ್ಕೆಗೆ ಸಿಎಸ್‌ಕೆ ನೆಚ್ಚಿಕೊಂಡ ಬಿಸಿಸಿಐ; ಮನವೊಲಿಕೆ ಜವಾಬ್ದಾರಿ ಎಂಎಸ್ ಧೋನಿ ಹೆಗಲಿಗೆ

ಇಂಪ್ಯಾಕ್ಟ್‌ ಪ್ಲೇಯರ್ ನಿಯಮ ಪಂದ್ಯದ ಸಮತೋಲನವನ್ನೇ ಹಾಳು ಮಾಡುತ್ತೆ; ರೋಹಿತ್‌ ಬಳಿಕ ವಿರಾಟ್ ಕೊಹ್ಲಿ ವಿರೋಧ

ಫೈನಲ್​​ನ ಎರಡನೇ ಇನ್ನಿಂಗ್ಸ್​​ನಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಅಯ್ಯರ್, 111 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್​ ಸಹಿತ 95 ರನ್ ಗಳಿಸಿ ಮುಂಬೈ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧದ ವಿಶಾಖಪಟ್ಟಣದಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದ ನಂತರ ಅಯ್ಯರ್ ಅವರನ್ನು ಕಾರಣ ಇಲ್ಲದೆಯೇ ಭಾರತ ತಂಡದಿಂದ ಕೈಬಿಡಲಾಯಿತು.

ಐಪಿಎಲ್​ನ ಮೊದಲ ಹಂತದ ಪಂದ್ಯಗಳಿಗೆ ಡೌಟ್?

ಅಯ್ಯರ್​ಗೆ ಮತ್ತೆ ಬೆನ್ನಿನ ಸಮಸ್ಯೆ ಬೆಳೆಸಿಕೊಂಡಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡದ ಪರ ಆವೃತ್ತಿಯ ಮೊದಲ ಹಂತವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಅವರು ಚೇತರಿಸಿಕೊಳ್ಳಲು ಕೆಲ ದಿನಗಳು ಬೇಕಿರುವ ಕಾರಣ ಮೊದಲ ಹಂತದ ಐಪಿಎಲ್ ಮಿಸ್ ನಿರೀಕ್ಷೆ ಎಂದು ಹೇಳಲಾಗಿದೆ. 29 ವರ್ಷದ ಆಟಗಾರ ತಮ್ಮ ಬೆನ್ನಿನ ಸ್ಕ್ಯಾನ್‌ಗೆ ಒಳಗಾಗಿದ್ದಾರೆ ಎಂದು ವರದಿ ಮಾಡಿದೆ.

ಇದು ಅವರ ಗಾಯದ ತೀವ್ರತೆಯನ್ನು ಸೂಚಿಸಿದ ನಂತರವೇ ಅವರು ಫೈನಲ್ ಪಂದ್ಯದ 4ನೇ ದಿನದಾಟದಲ್ಲಿ ಫೀಲ್ಡಿಂಗ್​​ ಭಾಗವಾಗಲಿಲ್ಲ. ಇದು ಭವಿಷ್ಯದ ಭಾಗವಹಿಸುವಿಕೆ ಬಗ್ಗೆ ಕಳವಳ ಉಂಟುಮಾಡಿದೆ. ಅದೇ ಬೆನ್ನುನೋವು ಉಲ್ಬಣಗೊಂಡಿದೆ. ಅವರು ರಣಜಿ ಫೈನಲ್‌ನ 5 ನೇ ದಿನದಂದು ಮೈದಾನಕ್ಕಿಳಿಯುವ ಸಾಧ್ಯತೆ ಇಲ್ಲ. ಐಪಿಎಲ್‌ನ ಆರಂಭಿಕ ಪಂದ್ಯಗಳನ್ನು ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ ಎಂದು ಹೇಳಲಾಗಿದೆ.

ಆದರೆ, ಅಯ್ಯರ್​​ಗೆ ಬೆನ್ನು ನೋವು ಕಾಣಿಸಿಕೊಂಡ ಕಾರಣ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್​​ನಿಂದ ಕೈಬಿಡಲಾಗಿತ್ತು ಎಂದು ಮೂಲಗಳು ಹೇಳಿದ್ದವು. ವಿಶ್ರಾಂತಿ ಬಳಿಕ ಅಯ್ಯರ್​​ಗೆ ರಣಜಿ ಆಡುವಂತೆ ಬಿಸಿಸಿಐ ಸೂಚಿಸಿದ್ದರೂ ಬೆನ್ನು ನೋವೆಂದು ರಣಜಿ ಆಡದೆ ನಿರ್ಲಕ್ಷಿಸಿದ್ದರು. ಆದರೆ, ಎನ್‌ಸಿಎ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಬಿಸಿಸಿಐಗೆ ಇ-ಮೇಲ್​ ಮೂಲಕ ಅಯ್ಯರ್​​ ಫಿಟ್ ಆಗಿದ್ದಾರೆ ಎಂದು ಹೇಳಿತ್ತು.

ಅಯ್ಯರ್ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಭಾವಿಸಿದ ಬಿಸಿಸಿಐ, ಅವರನ್ನು ಆಟಗಾರರ ವಾರ್ಷಿಕ ಗುತ್ತಿಗೆ ಪಟ್ಟಿಯಿಂದ ಕೈಬಿಟ್ಟು ತಕ್ಕ ಶಿಕ್ಷೆ ನೀಡಿತು. ಆದರೆ ಕಾಂಟ್ರಾಕ್ಟ್​ನಿಂದ ಕಿತ್ತಾಕಿದ ಬಳಿಕ ಅಯ್ಯರ್​ ರಣಜಿ ಆಡಿದರು. ಸೆಮಿಫೈನಲ್​ ಮತ್ತು ಫೈನಲ್​​ನಲ್ಲಿ ಆಡಿದರು. ಇದೀಗ ಐಪಿಎಲ್​ ಅನ್ನೂ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಹಲವು ವರದಿಗಳು ಹೇಳುತ್ತಿವೆ.

ಅಯ್ಯರ್ ಬೆನ್ನುನೋವಿನ ಸಮಸ್ಯೆಗಳು

ಶ್ರೇಯಸ್ ಅಯ್ಯರ್ ಬೆನ್ನುನೋವಿನ ಕಾರಣ ಕಳೆದ ವರ್ಷ ಸಂಪೂರ್ಣ ಇಂಡಿಯನ್ ಪ್ರೀಮಿಯರ್ ಲೀಗ್​ನಿಂದ ಹೊರಗುಳಿಯಬೇಕಾಯಿತು. ಅವರು 2023ರ ಏಪ್ರಿಲ್‌ನಲ್ಲಿ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ನಂತರ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್​​ಗೂ ಭಾರತ ತಂಡದಿಂದ ಹೊರ ಬಿದ್ದರು.

ಚೇತರಿಕೆಯ ನಂತರ 29 ವರ್ಷದ ಆಟಗಾರ ಏಷ್ಯಾಕಪ್‌ನಲ್ಲಿ ರಾಷ್ಟ್ರೀಯ ತಂಡಕ್ಕೆ ಮರಳಿದರು. 2023ರ ವಿಶ್ವಕಪ್‌ನಲ್ಲೂ ಭಾಗವಹಿಸಿ ಅಯ್ಯರ್, 11 ಪಂದ್ಯಗಳಲ್ಲಿ 530 ರನ್ ಗಳಿಸುವ ಮೂಲಕ ಟೂರ್ನಿಯಲ್ಲಿ ಭಾರತದ ಪರ 3ನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿದರು.

IPL, 2024

Live

SRH

21/2

2.5 Overs

VS

KKR

YTB

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ