logo
ಕನ್ನಡ ಸುದ್ದಿ  /  ಕ್ರಿಕೆಟ್  /  ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿದರೂ ಶುಭ್ಮನ್ ಗಿಲ್‌ಗೆ ತಂದೆ ಭಯ; ತಪ್ಪಾದ ಹೊಡೆತದಿಂದ ಔಟಾಗಿದ್ದನ್ನು ಒಪ್ಪಿದ ಪ್ರಿನ್ಸ್

ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿದರೂ ಶುಭ್ಮನ್ ಗಿಲ್‌ಗೆ ತಂದೆ ಭಯ; ತಪ್ಪಾದ ಹೊಡೆತದಿಂದ ಔಟಾಗಿದ್ದನ್ನು ಒಪ್ಪಿದ ಪ್ರಿನ್ಸ್

Jayaraj HT Kannada

Feb 05, 2024 09:33 AM IST

ಶತಕ ಸಿಡಿಸಿದರೂ ಶುಭ್ಮನ್ ಗಿಲ್‌ಗೆ ತಂದೆ ಭಯ

    • India vs England 2nd Test: ತಾನು ಔಟಾದ ಬಗ್ಗೆ ತಮ್ಮ ತಂದೆಯ ಪ್ರತಿಕ್ರಿಯೆಯ ತಿಳಿದುಕೊಳ್ಳುವುದಾಗಿ ಶುಭ್ಮನ್‌ ಗಿಲ್‌ ಹೇಳಿದ್ದಾರೆ. ತಪ್ಪು ಹೊಡೆತಕ್ಕೆ ಕೈ ಹಾಕಿದ್ದಾಗಿ ತಂದೆ ಹೇಳಬಹುದೇ ಎಂದು ಶಾಸ್ತ್ರಿ ಕೇಳಿದ ಪ್ರಶ್ಮೆಗೆ ಗಿಲ್‌ ಹೌದು ಎಂದು ಹೇಳಿದ್ದಾರೆ.
ಶತಕ ಸಿಡಿಸಿದರೂ ಶುಭ್ಮನ್ ಗಿಲ್‌ಗೆ ತಂದೆ ಭಯ
ಶತಕ ಸಿಡಿಸಿದರೂ ಶುಭ್ಮನ್ ಗಿಲ್‌ಗೆ ತಂದೆ ಭಯ (AP)

ಇಂಗ್ಲೆಂಡ್‌ ವಿರುದ್ಧದದ ಎರಡನೇ ಟೆಸ್ಟ್‌ (India vs England 2nd Test) ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಶುಭ್ಮನ್‌ ಗಿಲ್‌ (Shubman Gill) ಆಕರ್ಷಕ ಶತಕ ಸಿಡಿಸಿದರು. ಮುಂದಿನ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಸೇರಿದಂತೆ ಪ್ರಮುಖ ಆಟಗಾರರು ತಂಡಕ್ಕೆ ಹಿಂದಿರುಗಿದಾಗ, ಟೀಮ್‌ ಇಂಡಿಯಾ ಆಡುವ ಬಳಗದಲ್ಲಿ ಗಿಲ್‌ ಉಳಿಯಬೇಕೇ ಅಥವೇ ಬೇಡವೇ ಎಂಬ ಚರ್ಚೆ ನಡುವೆಯೇ ಗಿಲ್‌ ಶತಕ ಗಳಿಸಿದ್ದಾರೆ. ಭಾರತದ ಪರ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಮೊದಲ ಶತಕ ಬಾರಿಸಿದ ಅವರು, ಟೀಕೆಗಳಿಗೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿದರು.

ಟ್ರೆಂಡಿಂಗ್​ ಸುದ್ದಿ

ನೋಡದೆಯೇ 98 ಮೀಟರ್​ ದೂರ ಸಿಕ್ಸರ್​ ಬಾರಿಸಿದ ವಿರಾಟ್ ಕೊಹ್ಲಿ; ಕಣ್ ಕಣ್ ಬಿಟ್ಟು ನೋಡಿದ ಎಂಎಸ್ ಧೋನಿ, VIDEO

ಆರ್‌ಸಿಬಿ-ಸಿಎಸ್‌ಕೆ ಮ್ಯಾಚ್‌ ಸಂದರ್ಭ ಮೈದಾನದಲ್ಲಿ ಓಡುವೆ ಎಂದು ರೀಲ್ಸ್‌ ಬಿಟ್ಟವನ ಸ್ಥಿತಿ ನೋಡಿ! ಬೆಂಗಳೂರು ಪೊಲೀಸರ ಪ್ರತಿಭೆಗೆ ಸಾಟಿಯುಂಟೆ

ವಿಶ್ವ ಕ್ರಿಕೆಟ್‌ನ ಅತಿ ದೊಡ್ಡ ಸವಾಲು; ಭಾರತ ತಂಡದ ಮುಖ್ಯ ಕೋಚ್ ಹುದ್ದೆ ಕುರಿತು ಜಸ್ಟಿನ್ ಲ್ಯಾಂಗರ್ ಪ್ರತಿಕ್ರಿಯೆ

ಆರ್‌ಸಿಬಿ-ಸಿಎಸ್‌ಕೆ ಪಂದ್ಯ ನೋಡೋಕೆ ಬೈಕ್‌ನಲ್ಲಿ ಹೋಗ್ತಿದ್ದಾರಾ; ತಲೆಗೆ ಹೆಲ್ಮೆಟ್ ಮರೆಯಬೇಡಿ, ಬೆಂಗಳೂರು ಟ್ರಾಫಿಕ್ ಪೊಲೀಸರ ಸಂದೇಶ

ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಗಿಲ್‌ 104 ರನ್‌ ಗಳಿಸಿ ಔಟಾದರು. ಆ ಮೂಲಕ ಭಾರತವು ಇಂಗ್ಲೆಂಡ್‌ಗೆ 399 ರನ್‌ಗಳ ಬೃಹತ್ ಗುರಿ ನೀಡಿತು.‌ ತಂಡದ ಮೊತ್ತವನ್ನು ಹಿಗ್ಗಿಸುವ ಪ್ರಯತ್ನಕ್ಕೆ ಕೈಹಾಕಿದ್ದ ಗಿಲ್, ಅನಗತ್ಯ ಹೊಡೆತಕ್ಕೆ ಕೈ ಹಾಕಿ ಔಟಾದರು. ಆಗ ಅವರ ಮುಖದಲ್ಲಿ ನಿರಾಶೆ ಕಾಣಿಸುತ್ತಿತ್ತು. ಅವರು ಇನ್ನಿಂಗ್ಸ್ ಅಂತ್ಯಕ್ಕೆ ಕಾರಣವಾದ ತನ್ನ ಅಜಾಗರೂಕ ಹೊಡೆತದಿಂದ ತನ್ನ ತಂದೆ ಕಾಲೆಳೆಯುವ ಸಾಧ್ಯತೆಯಿದೆ ಎಂದು ಹೇಳಿದರು.

ಬೆನ್ ಸ್ಟೋಕ್ಸ್ ಮೈಂಡ್ ಗೇಮ್‌ ಯಶಸ್ವಿ

ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮೈಂಡ್ ಗೇಮ್‌ ಯಶಸ್ವಿಯಾಯ್ತು. ಗಿಲ್ ಬ್ಯಾಟಿಂಗ್‌ ವೇಳೆ ನಿರಂತರ ಫೀಲ್ಡಿಂಗ್‌ನಲ್ಲಿ ಬದಲಾವಣೆ ಮಾಡಲಾಯ್ತು. ಶೋಯೆಬ್ ಬಶೀರ್ ಔಟ್‌ಸೈಡ್‌ ಆಫ್‌ ಫುಲ್ಲರ್‌ ಡೆಲಿವರಿಗೆ ರಿವರ್ಸ್ ಸ್ವೀಪ್ ಮಾಡಲು ಪ್ರಯತ್ನಿಸಿದ ಗಿಲ್‌, ಲಯ ಕಳೆದುಕೊಂಡರು. ಆ ಚೆಂಡು ಇಂಗ್ಲೆಂಡ್ ವಿಕೆಟ್ ಕೀಪರ್ ಬೆನ್ ಫೋಕ್ಸ್ ಕೈಸೇರಿತು. ರಿವ್ಯೂ ಮೂಲಕ ಇಂಗ್ಲೆಂಡ್‌ ಗಿಲ್‌ ವಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಯ್ತು.

ಇದನ್ನೂ ಓದಿ | 11 ತಿಂಗಳ ನಂತರ ಶುಭ್ಮನ್ ಗಿಲ್ ಶತಕ; ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ಕ್ಲಬ್ ಸೇರಿದ ಪ್ರಿನ್ಸ್

ದಿನದಾಟದ ಅಂತ್ಯದಲ್ಲಿ ಔಟಾದ ಬಗ್ಗೆ ಭಾರತದ ಮಾಜಿ ಮುಖ್ಯ ಕೋಚ್ ರವಿ ಶಾಸ್ತ್ರಿ ಅವರೊಂದಿಗೆ ಮಾತನಾಡಿದ ಗಿಲ್, ಹೋಟೆಲ್ ತಲುಪಿದ ನಂತರ ತನ್ನ ವಿಕೆಟ್‌ ಬಗ್ಗೆ ತಮ್ಮ ತಂದೆಯ ಪ್ರತಿಕ್ರಿಯೆಯ ಬಗ್ಗೆ ತಿಳಿದುಕೊಳ್ಳುವುದಾಗಿ ಬಹಿರಂಗಪಡಿಸಿದರು. ಗಿಲ್ ತಪ್ಪು ಹೊಡೆತಕ್ಕೆ ಕೈ ಹಾಕಿದ್ದಾಗಿ ತಂದೆ ಹೇಳಬಹುದೇ ಎಂದು ಶಾಸ್ತ್ರಿ ಕೇಳಿದ ಪ್ರಶ್ಮೆಗೆ ಗಿಲ್‌ ಹೌದು ಎಂದು ಹೇಳಿದ್ದಾರೆ.

“ಹೌದು ನಾನು ಕೂಡಾ ಹಾಗೇ ಭಾವಿಸುತ್ತೇನೆ” ಎಂದು ಗಿಲ್ ತುಸು ಹಿಂಜರಿಕೆಯಿಂದ ಜಿಯೋ ಸಿನಿಮಾಗೆ ತಿಳಿಸಿದರು. “ನಾನು ಹೋಟೆಲ್‌ಗೆ ಮರಳಿದ ಬಳಿಕ ಆ ಬಗ್ಗೆ ತಿಳಿದುಕೊಳ್ಳುತ್ತೇನೆ. ನಾನು ಮಾಡಿದ್ದು ತಪ್ಪು ಎಂದೇ ಅವರು ಹೇಳಬಹುದು. ಅವರು ನನ್ನ ಹೆಚ್ಚಿನ ಪಂದ್ಯಗಳಿಗೆ ಬರುತ್ತಾರೆ. ಹೀಗಾಗಿ ನನಗೆ ಹೆಚ್ಚಿನ ಒತ್ತಡವಿಲ್ಲ” ಎಂದು ಗಿಲ್‌ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ | ಡಬ್ಲ್ಯುಟಿಸಿಯಲ್ಲಿ ಅಧಿಕ ರನ್; ಕಳಪೆ ಪ್ರದರ್ಶನದ ನಡುವೆಯೂ ವಿರಾಟ್ ಕೊಹ್ಲಿ ದಾಖಲೆ ಮುರಿದ ರೋಹಿತ್ ಶರ್ಮಾ

ಗಿಲ್ ಅವರ 104 ರನ್‌ಗಳ ಶತಕದ ನೆರವಿನಿಂದ ಭಾರತವು ಆಂಗ್ಲರಿಗೆ 399 ರನ್‌ಗಳ ಬೃಹತ್ ಗುರಿ ನೀಡಿದೆ. ಸದ್ಯ ಇಂಗ್ಲೆಂಡ್‌ ತಂಡವು ಕೊನೆಯ ಇನ್ನಿಂಗ್ಸ್‌ನಲ್ಲಿ ಉತ್ತಮ ಆರಂಭ ಪಡೆದಿದೆ. ಆರಂಭಿಕ ಜೋಡಿಯಾದ ಜಾಕ್ ಕ್ರಾಲೆ ಮತ್ತು ಬೆನ್ ಡಕೆಟ್ ಮೊದಲ ವಿಕೆಟ್‌ಗೆ ಅರ್ಧಶತಕದ ಜೊತೆಯಾಟವಾಡಿದ್ದಾರೆ. ನಾಲ್ಕನೇ ದಿನಕ್ಕೆ ಇಂಗ್ಲೆಂಡ್ ಟಾರ್ಗೆಟ್‌ 332 ರನ್‌ಗಳಿಗೆ ಇಳಿದಿದೆ.

ಇದನ್ನೂ ಓದಿ | ಟಿ20 ವಿಶ್ವಕಪ್‌ಗೆ ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಇಲ್ಲದ ಭಾರತ ತಂಡ‌ವನ್ನು ನೋಡುವುದೇ ಕಷ್ಟ ಕಷ್ಟ!

(This copy first appeared in Hindustan Times Kannada website. To read more like this please logon to kannada.hindustantime.com)

IPL, 2024

Live

RCB

218/5

20.0 Overs

VS

CSK

YTB

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ