logo
ಕನ್ನಡ ಸುದ್ದಿ  /  ಕ್ರಿಕೆಟ್  /  ಸ್ಮೃತಿ ಮಂಧಾನ ಅಮೋಘ ಶತಕ, 3ನೇ ಏಕದಿನದಲ್ಲಿ ಭಾರತ ತಂಡಕ್ಕೆ ಜಯ; ಟಿ20 ಚಾಂಪಿಯನ್ ನ್ಯೂಜಿಲೆಂಡ್​ಗೆ ಸರಣಿ ಸೋಲಿನ ಮುಖಭಂಗ

ಸ್ಮೃತಿ ಮಂಧಾನ ಅಮೋಘ ಶತಕ, 3ನೇ ಏಕದಿನದಲ್ಲಿ ಭಾರತ ತಂಡಕ್ಕೆ ಜಯ; ಟಿ20 ಚಾಂಪಿಯನ್ ನ್ಯೂಜಿಲೆಂಡ್​ಗೆ ಸರಣಿ ಸೋಲಿನ ಮುಖಭಂಗ

Prasanna Kumar P N HT Kannada

Oct 30, 2024 01:13 AM IST

google News

3ನೇ ಏಕದಿನದಲ್ಲಿ ಭಾರತ ತಂಡಕ್ಕೆ ಜಯ; ಟಿ20 ಚಾಂಪಿಯನ್ ನ್ಯೂಜಿಲೆಂಡ್​ಗೆ ಸರಣಿ ಸೋಲಿನ ಮುಖಭಂಗ

    • India vs New Zealand: ನ್ಯೂಜಿಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್‌ಗಳಿಂದ ಗೆದ್ದು 2-1 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ. ಸ್ಮೃತಿ ಮಂಧಾನ ಮತ್ತು ಹರ್ಮನ್‌ಪ್ರೀತ್ ಕೌರ್ ಅವರು 117 ರನ್​ಗಳ ಜೊತೆಯಾಟದ ಮೂಲಕ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
3ನೇ ಏಕದಿನದಲ್ಲಿ ಭಾರತ ತಂಡಕ್ಕೆ ಜಯ; ಟಿ20 ಚಾಂಪಿಯನ್ ನ್ಯೂಜಿಲೆಂಡ್​ಗೆ ಸರಣಿ ಸೋಲಿನ ಮುಖಭಂಗ
3ನೇ ಏಕದಿನದಲ್ಲಿ ಭಾರತ ತಂಡಕ್ಕೆ ಜಯ; ಟಿ20 ಚಾಂಪಿಯನ್ ನ್ಯೂಜಿಲೆಂಡ್​ಗೆ ಸರಣಿ ಸೋಲಿನ ಮುಖಭಂಗ

ಟೀಮ್ ಇಂಡಿಯಾ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ (Smriti Mandhana) ಅವರು ಸಿಡಿಸಿದ ಶತಕದ ನೆರವಿನಿಂದ ನ್ಯೂಜಿಲೆಂಡ್ ಮಹಿಳಾ ತಂಡದ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದ್ದು, ಸರಣಿಯನ್ನು 2-1ರಲ್ಲಿ ವಶಪಡಿಸಿಕೊಂಡಿದೆ. ಅಹ್ಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ಜರುಗಿದ ಸಿರೀಸ್ ಡಿಸೈಡರ್​ ಪಂದ್ಯದಲ್ಲಿ ಭಾರತ 6 ವಿಕೆಟ್​ಗಳ ಅಮೋಘ ಗೆಲುವು ದಾಖಲಿಸಿತು.

ಇದೇ ತಿಂಗಳು 20 ರಂದು ನಡೆದ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಬ್ಬರಿಸಿ ಬೊಬ್ಬರಿದು ಚೊಚ್ಚಲ ಚಾಂಪಿಯನ್ ಆಗಿದ್ದ ನ್ಯೂಜಿಲೆಂಡ್ ತಂಡವು ಇದೀಗ ಭಾರತದ ನೆಲದಲ್ಲಿ ಏಕದಿನ ಸರಣಿಯನ್ನು ಸೋತಿದೆ. ಮತ್ತೊಂದೆಡೆ ಪುರುಷರ ನ್ಯೂಜಿಲೆಂಡ್ ತಂಡವು ಭಾರತದಲ್ಲಿ ಟೆಸ್ಟ್ ಸರಣಿ ಆಡುತ್ತಿದ್ದು, ಸಿರೀಸ್ ಗೆದ್ದು ಐತಿಹಾಸಿಕ ದಾಖಲೆ ಬರೆದಿದೆ. ಆದರೆ, ಮಹಿಳಾ ತಂಡವು ಸರಣಿ ಗೆಲುವಿನ ನಿರೀಕ್ಷೆಯಲ್ಲಿತ್ತು. ಆದರೆ ವಿಫಲವಾಯಿತು.

ಟಾಸ್ ಜಯಿಸಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್, 49.5 ಓವರ್​​ಗಳಲ್ಲಿ ತನ್ನೆಲ್ಲಾ ವಿಕೆಟ್​​ಗಳನ್ನು ಕಳೆದುಕೊಂಡು 232 ರನ್ ಗಳಿಸಿತು. ಬ್ರೂಕ್ ಹ್ಯಾಲಿಡೇ ಭರ್ಜರಿ 89 ರನ್ ಸಿಡಿಸಿ ತಂಡದ ಮೊತ್ತ 200ರ ಗಡಿ ದಾಟಿಸಿದರು. ಮತ್ತೊಂದೆಡೆ ಟೀಮ್ ಇಂಡಿಯಾ ಪರ ದೀಪ್ತಿ ಶರ್ಮಾ 3 ವಿಕೆಟ್ ಪಡೆದು ಮಿಂಚಿದರು. ಈ ಗುರಿ ಬೆನ್ನಟ್ಟಿದ ಭಾರತ ತಂಡವು, 44.2 ಓವರ್​​ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ಬೆನ್ನಟ್ಟಿತು. ಸ್ಮೃತಿ ಮಂಧಾನ 100, ಹರ್ಮನ್​ಪ್ರೀತ್ ಕೌರ್ ಅಜೇಯ 59 ರನ್ ಸಿಡಿಸಿ ಮಿಂಚಿದರು.

ಸ್ಮೃತಿ ಮಂಧಾನ ಶತಕ, ಹರ್ಮನ್ ಅರ್ಧಶತಕ

ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಅವರು ಅದ್ಭುತ ಪ್ರದರ್ಶನ ನೀಡಿದರು. ಶಫಾಲಿ ವರ್ಮಾ 12 ರನ್ ಗಳಿಸಿ ಬೇಗನೇ ಔಟಾದರೂ ಸ್ಮೃತಿ ತಂಡಕ್ಕೆ ಆಸರೆಯಾದರು. ಯಾಸ್ತಿಕ ಭಾಟಿಯಾ ಜೊತೆಗೂಡಿ 2ನೇ ವಿಕೆಟ್​ಗೆ 76 ರನ್​ಗಳ ಪಾಲುದಾರಿಕೆ ನೀಡಿದರು. ಯಾಸ್ತಿಕಾ 35 ರನ್ ಗಳಿಸಿ ಔಟಾದರು. ನಾಯಕಿ ಹರ್ಮನ್​ಪ್ರೀತ್ ಜೊತೆಯೂ ಉತ್ತಮ ಪಾಲುದಾರಿಕೆ ಒದಗಿಸಿದ ಮಂಧಾನ, 3ನೇ ವಿಕೆಟ್​ಗೆ 117 ರನ್​ಗಳ ಜೊತೆಯಾಟ ಆಡಿದರು. ಅಲ್ಲದೆ, ತಂಡವನ್ನು ಗೆಲುವಿನ ಸನಿಹಕ್ಕೆ ತಂದಿಟ್ಟರು.

ಇದೇ ವೇಳೆ ಸ್ಮೃತಿ ಮಂಧಾನ ಅಮೋಘ ಶತಕವನ್ನು ಸಿಡಿಸಿ ದಾಖಲೆಯೊಂದನ್ನು ಬರೆದರು. ಜವಾಬ್ದಾರಿಯುತ ಪ್ರದರ್ಶನ ನೀಡಿದ ಉಪನಾಯಕಿ 112 ಎಸೆತಗಳಲ್ಲಿ 100 ರನ್ ಸಿಡಿಸಿ ಮಿಂಚಿದರು. ಆದರೆ ಸೆಂಚುರಿ ಸಿಡಿಸಿದ ಬೆನ್ನಲ್ಲೇ ಹನ್ನಾ ರೋವ್ ಬೌಲಿಂಗ್​ನಲ್ಲಿ ಕ್ಲೀನ್​ ಬೋಲ್ಡ್ ಆದರು. ಮತ್ತೊಂದೆಡೆ ಅಬ್ಬರಿಸಿದ ನಾಯಕಿ ಹರ್ಮನ್​, ಭರ್ಜರಿ ಅರ್ಧಶತಕ ಸಿಡಿಸಿದರು. 63 ಎಸೆತಗಳಲ್ಲಿ 6 ಬೌಂಡರಿಗಳ ಸಹಾಯದಿಂದ 59 ರನ್ ಚಚ್ಚಿ ಅಜೇಯರಾಗಿ ಉಳಿದರು. ಜೆಮಿಮಾ ರೋಡ್ರಿಗಸ್ 22 ರನ್ ಬಾರಿಸಿದರು.

ಸ್ಮೃತಿ ಮಂಧಾನ ದಾಖಲೆ

ಕಿವೀಸ್ ವಿರುದ್ಧ ಮಂಧಾನ ಸಿಡಿಸಿದ ಶತಕವು 8ನೇಯದ್ದಾಗಿದೆ. ಏಕದಿನ ಸ್ವರೂಪದಲ್ಲಿ ಭಾರತ ತಂಡದ ಪರ ಅತ್ಯಧಿಕ ಶತಕ ಸಿಡಿಸಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದರೊಂದಿಗೆ ಏಳು ಶತಕ ಸಿಡಿಸಿದ್ದ ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್ ಅವರ ದಾಖಲೆಯನ್ನು ಪುಡಿಗಟ್ಟಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ