logo
ಕನ್ನಡ ಸುದ್ದಿ  /  ಕ್ರಿಕೆಟ್  /  ಅಪಘಾತಕ್ಕೊಳಗಾಗಿದ್ದ ರಿಷಭ್ ಪಂತ್ ಬಲ ಮೊಣಕಾಲಿಗೆ‌ ಗಂಭೀರ ಗಾಯ; ಮೈದಾನ ತೊರೆದ ವಿಕೆಟ್‌ ಕೀಪರ್, ಭಾರತಕ್ಕೆ ಗಾಯದ ಮೇಲೆ ಬರೆ

ಅಪಘಾತಕ್ಕೊಳಗಾಗಿದ್ದ ರಿಷಭ್ ಪಂತ್ ಬಲ ಮೊಣಕಾಲಿಗೆ‌ ಗಂಭೀರ ಗಾಯ; ಮೈದಾನ ತೊರೆದ ವಿಕೆಟ್‌ ಕೀಪರ್, ಭಾರತಕ್ಕೆ ಗಾಯದ ಮೇಲೆ ಬರೆ

Jayaraj HT Kannada

Oct 17, 2024 07:03 PM IST

google News

ಅಪಘಾತಕ್ಕೊಳಗಾಗಿದ್ದ ರಿಷಭ್ ಪಂತ್ ಬಲ ಮೊಣಕಾಲಿಗೆ‌ ಗಂಭೀರ ಗಾಯ; ಮೈದಾನ ತೊರೆದ ವಿಕೆಟ್‌ ಕೀಪರ್

    • ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ರಿಷಭ್ ಪಂತ್ ಅವರ ಬಲ ಮೊಣಕಾಲಿಗೆ ಗಂಭೀರ ಗಾಯವಾಗಿದೆ. ಹೀಗಾಗಿ ಮೂರನೇ ದಿನದಾಟದಲ್ಲಿ ಅವರು ಆಡುವ ಸಾಧ್ಯತೆ ಕಡಿಮೆಯಾಗಿದೆ. ಅಪಘಾತದಿಂದ ಗಾಯವಾಗಿದ್ದ ಬಲ ಮೊಣಕಾಲಿಗೆ ಮತ್ತೆ ಗಾಯವಾಗಿದ್ದು ಆತಂಕ ಹೆಚ್ಚಿಸಿದೆ.
ಅಪಘಾತಕ್ಕೊಳಗಾಗಿದ್ದ ರಿಷಭ್ ಪಂತ್ ಬಲ ಮೊಣಕಾಲಿಗೆ‌ ಗಂಭೀರ ಗಾಯ; ಮೈದಾನ ತೊರೆದ ವಿಕೆಟ್‌ ಕೀಪರ್
ಅಪಘಾತಕ್ಕೊಳಗಾಗಿದ್ದ ರಿಷಭ್ ಪಂತ್ ಬಲ ಮೊಣಕಾಲಿಗೆ‌ ಗಂಭೀರ ಗಾಯ; ಮೈದಾನ ತೊರೆದ ವಿಕೆಟ್‌ ಕೀಪರ್

ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಅಲ್ಪಮೊತ್ತಕ್ಕೆ ಆಲೌಟ್‌ ಆದ ಭಾರತ ತಂಡ, ಕಳಪೆ ದಾಖಲೆಗಳನ್ನು ನಿರ್ಮಿಸಿತು. ದಿನದಾಟದುದ್ದಕ್ಕೂ ಮೇಲುಗೈ ಸಾಧಿಸಿದ ಕಿವೀಸ್‌, ಪಂದ್ಯದಲ್ಲಿ ಹಿಡಿತ ಸಾಧಿಸಿತು. ಆದರೆ, ಭಾರತ ತಂಡ ದಿನದ ಯಾವುದೇ ಅವಧಿಯಲ್ಲಿ ಅಬ್ಬರಿಸಲು ಸಾಧ್ಯವಾಗಲಿಲ್ಲ. ಭಾರತ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡ ಬಳಿಕ ತನ್ನ ಮೊದಲೇ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ದಿನದ ಅಂತ್ಯಕ್ಕೆ ಸುಸ್ಥಿತಿಯಲ್ಲಿದೆ. ಆದರೆ, ಭಾರತಕ್ಕೆ ಗಾಯದ ಸಮಸ್ಯೆ ಕಾಡಿದೆ. ಹೀಗಾಗಿ ತಂಡಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ವಿಕೆಟ್‌ ಕೀಪಿಂಗ್ ಮಾಡುತ್ತಿದ್ದ ರಿಷಭ್ ಪಂತ್ ಮೊಣಕಾಲಿಗೆ ಗಾಯವಾಗಿದೆ. ಹೀಗಾಗಿ ತಕ್ಷಣವೇ ಅವರು ಮೈದಾನದಿಂದ ಹೊರನಡೆದಿದ್ದಾರೆ.

ರವೀಂದ್ರ ಜಡೇಜಾ ಅವರ ಐದನೇ ಓವರ್‌ನ ಕೊನೆಯ ಎಸೆತದಲ್ಲಿ, ಡೆವೊನ್ ಕಾನ್ವೇ ಡೌನ್ ದಿ ವಿಕೆಟ್‌ಗೆ ಬಂದು ಆಡಲು ಯತ್ನಿಸಿದರು. ಆದರೆ, ಕಾನ್ವೆ ಅದನ್ನು ಎದುರಿಸಲು ವಿಫಲರಾದರು. ಈ ವೇಳೆ ತ್ವರಿತವಾಗಿ ಸ್ಟಂಪಿಂಗ್ ಮಾಡಲು ಪ್ರಯತ್ನಿಸಿದ ಪಂತ್, ಚೆಂಡನ್ನು ಸಂಗ್ರಹಿಸಲು ಸಾಧ್ಯವಾಗಲಿಲ್ಲ. ಅದು ಅವರ ಬಲ ಮೊಣಕಾಲಿಗೆ ಬಡಿಯಿತು. ಹೀಗಾಗಿ ಅವರು ನೋವಿನಿಂದ ಅಲ್ಲೇ ಕುಸಿದುಬಿದ್ದರು.

ಈ ವೇಳೆ ತಕ್ಷಣವೇ ಮೈದಾನಕ್ಕೆ ಬಂದ ಫಿಸಿಯೋ, ಮೈದಾನದಲ್ಲಿಯೇ ಅವರಿಗೆ ಅಗತ್ಯ ಚಿಕಿತ್ಸೆ ನೀಡಿದರು. ಈ ವೇಳೆ ಪಂತ್ ಸುಧಾರಿಸಿಕೊಳ್ಳಲಿಲ್ಲ. ಆಟದಲ್ಲಿ ಸ್ವಲ್ಪ ಸಮಯದ ವಿರಾಮದ ನಂತರ, ತಂಡದ ಫಿಸಿಯೋ ಪಂತ್‌ ಅವರನ್ನು ಮೈದಾನದಿಂದ ಹೊರಕರೆತಂದರು. ಹೀಗಾಗಿ ಭಾರತ ತಂಡದ ಬದಲಿ ವಿಕೆಟ್ ಕೀಪರ್ ಧ್ರುವ್ ಜುರೆಲ್, ವಿಕೆಟ್‌ ಕೀಪಿಂಗ್‌ ಮಾಡಲು ಮೈದಾನಕ್ಕೆ ಬಂದರು. ನಂತರ ದಿನದಾಟ ಪೂರ್ತಿ ಜುರೆಲ್‌ ಕೀಪಿಂಗ್‌ ಮಾಡಿದರು.

ಬದಲಿ‌ ವಿಕೆಟ್ ಕೀಪರ್‌ಗೆ ಅನುಮತಿ

ಐಸಿಸಿ ನಿಯಮಗಳ ಪ್ರಕಾರ, ಬದಲಿ ಆಟಗಾರನು ಪಂದ್ಯದ ಅಂಪೈರ್‌ಗಳ ಒಪ್ಪಿಗೆಯೊಂದಿಗೆ ವಿಕೆಟ್ ಕೀಪರ್ ಆಗಿ ಆಡಬಹುದು. ಹೀಗಾಗಿ ಪಂತ್‌ ಅನುಪಸ್ಥಿತಿಯಲ್ಲಿ ಜುರೆಲ್ ಸ್ಟಂಪ್‌ಗಳ ಹಿಂದೆ ಕಾರ್ಯನಿರ್ವಹಿಸಿದರು.

ಅಭಿಮಾನಿಗಳಿಗೆ ಹೆಚ್ಚಿದ ಚಿಂತೆ

2022ರ ಡಿಸೆಂಬರ್‌ನಲ್ಲಿ ನಡೆದ ಭೀಕರ ಕಾರು ಅಪಘಾತದಿಂದ ಗಂಭೀರ ಗಾಯಗೊಂಡಿದ್ದ ಪಂತ್‌, ವರ್ಷದ ಬಳಿಕ ಮತ್ತೆ ಮೈದಾನಕ್ಕಿಳಿದಿದ್ದರು. ಜೀವನ್ಮರಣ ಹೋರಾಟದ ನಂತರ ಆಡಿದ ಮೂರನೇ ಟೆಸ್ಟ್ ಪಂದ್ಯದಲ್ಲಿ ಮತ್ತೆ ಗಾಯದ ಭೀತಿ ಎದುರಾಗಿದೆ. ಅಪಘಾತದ ಸಮಯದಲ್ಲಿ ಪಂತ್‌ ಅವರ ಬಲ ಮೊಣಕಾಲಿಗೆ ಗಂಭೀರ ಗಾಯವಾಗಿತ್ತು. ಇದೇ ಭಾಗದಲ್ಲಿ 90 ಡಿಗ್ರಿ ಕೋನದಲ್ಲಿ ಬಾಗಿ ತೀವ್ರ ಹಾನಿಯಾಗಿತ್ತು. ಇದೀಗ ಮತ್ತೆ ಅದೇ ಭಾಗಕ್ಕೆ ಪೆಟ್ಟಾಗಿದ್ದು ಅಭಿಮಾನಿಗಳ ಚಿಂತೆಗೆ ಕಾರಣವಾಗಿದೆ.

ಅಪಘಾತದ ನಂತರ 2024ರ ಐಪಿಎಲ್‌ ಮೂಲಕ ಮೈದಾನಕ್ಕಿಳಿದಿದ್ದ ಪಂತ್‌, ತಮ್ಮ ಪುನರಾಗಮನದ ಟೆಸ್ಟ್ ಸರಣಿಯಲ್ಲಿ ಅದ್ಭುತ ಶತಕ ಸಿಡಿಸಿ ಮಿಂಚಿದ್ದರು. ಇಂದು ಭಾರತದ ಇನ್ನಿಂಗ್ಸ್‌ನಲ್ಲಿ ಪಂತ್‌ ಗಳಿಸಿದ ಮೊತ್ತವೇ ತುಸು ದೊಡ್ಡದು. ಮೊದಲ ಇನ್ನಿಂಗ್ಸ್‌ಲ್ಲಿ ಎರಡಂಕಿ ದಾಟಿದ ಇಬ್ಬರು ಭಾರತೀಯ ಬ್ಯಾಟರ್‌ಗಳಲ್ಲಿ ಪಂತ್ ಕೂಡ ಒಬ್ಬರು.

ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ, ಅನಿರೀಕ್ಷಿತ ಪ್ರದರ್ಶನ ನೀಡಿತು. ಕೇವಲ 46 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ತನ್ನ ಮೂರನೇ ಕನಿಷ್ಠ ಮೊತ್ತ ದಾಖಲಿಸಿತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ