0, 0, 0, 0, 0… ಐವರು ಡಕೌಟ್; ಮತ್ತೊಂದು ಕಳಪೆ ದಾಖಲೆ ಬರೆದ ಭಾರತ, 1948ರ ನಂತರ ಆರನೇ ಬಾರಿ ಈ ಸಾಧನೆ
- India vs New Zealand 1st Test: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ನ ಪ್ರಥಮ ಇನ್ನಿಂಗ್ಸ್ನಲ್ಲಿ ಭಾರತದ ಐವರು ಡಕೌಟ್ ಆಗುವ ಮೂಲಕ ಕೆಟ್ಟ ದಾಖಲೆ ಬರೆದಿದೆ.
- India vs New Zealand 1st Test: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ನ ಪ್ರಥಮ ಇನ್ನಿಂಗ್ಸ್ನಲ್ಲಿ ಭಾರತದ ಐವರು ಡಕೌಟ್ ಆಗುವ ಮೂಲಕ ಕೆಟ್ಟ ದಾಖಲೆ ಬರೆದಿದೆ.
(1 / 5)
ನ್ಯೂಜಿಲೆಂಡ್ ಬೌಲರ್ಸ್ ದಾಳಿಗೆ ತತ್ತರಿಸಿದ ಹಿನ್ನೆಲೆ ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 46 ರನ್ಗಳಿಗೆ ಆಲೌಟ್ ಆಗಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ನಲ್ಲಿ ಐವರು ಬ್ಯಾಟರ್ಗಳು ಡಕೌಟ್ ಆದ ಹಿನ್ನೆಲೆ ಭಾರತ ತಂಡ ಮತ್ತೊಂದು ಕೆಟ್ಟ ದಾಖಲೆ ಬರೆದಿದೆ.
(2 / 5)
ತವರು ನೆಲದಲ್ಲಿ ಅತಿ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿ ಅತ್ಯಂತ ಕಳಪೆ ದಾಖಲೆ ನಿರ್ಮಿಸಿರುವ ಭಾರತ ತಂಡವು, ಡಕೌಟ್ ವಿಚಾರದಲ್ಲೂ ಮತ್ತೊಂದು ಕೆಟ್ಟ ರೆಕಾರ್ಡ್ ನಿರ್ಮಿಸಿದೆ. ಭಾರತದ ಇನ್ನಿಂಗ್ಸ್ವೊಂದರಲ್ಲಿ ಐವರು ಅಥವಾ ಅದಕ್ಕಿಂತ ಹೆಚ್ಚಿನ ಮಂದಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿರುವುದು ಟೆಸ್ಟ್ ಇತಿಹಾಸದಲ್ಲಿ 6ನೇ ಬಾರಿಯಾಗಿದೆ.
(3 / 5)
2014ರಲ್ಲಿ ಮ್ಯಾಂಚೆಸ್ಟರ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಇನ್ನಿಂಗ್ಸ್ನಲ್ಲಿ ಭಾರತದ 6 ಬ್ಯಾಟರ್ಗಳು ಡಕೌಟ್ ಆಗಿದ್ದರು. ಅದೇ ರೀತಿ ಇದೇ ವರ್ಷ ನಡೆದ ಕೇಪ್ಟೌನ್ನಲ್ಲಿ ಜರುಗಿದ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ನ 2ನೇ ಇನ್ನಿಂಗ್ಸ್ನಲ್ಲಿ ಭಾರತ ತಂಡದ 6 ಬ್ಯಾಟರ್ಸ್ ಡಕೌಟ್ ಆಗಿದ್ದರು.
(4 / 5)
1948ರಲ್ಲಿ ಅಡಿಲೇಡ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಟೆಸ್ಟ್ ಮತ್ತು 1952ರಲ್ಲಿ ಲೀಡ್ಸ್ನಲ್ಲಿ ಇಂಗ್ಲೆಂಡ್ ವಿರುದ್ಧವೇ ಮತ್ತೊಂದು ಟೆಸ್ಟ್ನಲ್ಲಿ ಭಾರತದ ಐದು ಬ್ಯಾಟರ್ಗಳು ಡಕೌಟ್ ಆಗಿದ್ದರು.
ಇತರ ಗ್ಯಾಲರಿಗಳು