logo
ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್ ಹರಾಜು ಇತಿಹಾಸದ ದುಬಾರಿ ಆಟಗಾರನ ಐತಿಹಾಸಿಕ ದಾಖಲೆ ಪುಡಿಗಟ್ಟಿದ ಅನ್​ಸೋಲ್ಡ್ ಪ್ಲೇಯರ್! ಗೇಲ್ ದಾಖಲೆಯೂ ಉಡೀಸ್

ಐಪಿಎಲ್ ಹರಾಜು ಇತಿಹಾಸದ ದುಬಾರಿ ಆಟಗಾರನ ಐತಿಹಾಸಿಕ ದಾಖಲೆ ಪುಡಿಗಟ್ಟಿದ ಅನ್​ಸೋಲ್ಡ್ ಪ್ಲೇಯರ್! ಗೇಲ್ ದಾಖಲೆಯೂ ಉಡೀಸ್

Prasanna Kumar P N HT Kannada

Nov 28, 2024 11:04 AM IST

google News

ಐಪಿಎಲ್ ಹರಾಜು ಇತಿಹಾಸದ ದುಬಾರಿ ಆಟಗಾರ ರಿಷಭ್ ಪಂತ್ ಐತಿಹಾಸಿಕ ದಾಖಲೆ ಪುಡಿಗಟ್ಟಿದ ಅನ್​ಸೋಲ್ಡ್ ಪ್ಲೇಯರ್ ಉರ್ವಿಲ್ ಪಟೇಲ್

    • Urvil Patel: ಸೈಯದ್ ಮುಷ್ತಾಕ್ ಅಲಿ ಟಿ20 ಪಂದ್ಯದಲ್ಲಿ ತ್ರಿಪುರಾ ವಿರುದ್ಧ 28 ಎಸೆತಗಳಲ್ಲೇ ಶತಕ ಬಾರಿಸುವ ಮೂಲಕ ಐಪಿಎಲ್ ಹರಾಜಿನಲ್ಲಿ ಅನ್​ಸೋಲ್ಡ್ ಆಗಿರುವ ಉರ್ವಿಲ್ ಪಟೇಲ್, ಅತ್ಯಂತ ದುಬಾರಿ ಆಟಗಾರ ರಿಷಭ್ ಪಂತ್ ದಾಖಲೆ ಮುರಿದಿದ್ದಾರೆ.
ಐಪಿಎಲ್ ಹರಾಜು ಇತಿಹಾಸದ ದುಬಾರಿ ಆಟಗಾರ ರಿಷಭ್ ಪಂತ್ ಐತಿಹಾಸಿಕ ದಾಖಲೆ ಪುಡಿಗಟ್ಟಿದ ಅನ್​ಸೋಲ್ಡ್ ಪ್ಲೇಯರ್ ಉರ್ವಿಲ್ ಪಟೇಲ್
ಐಪಿಎಲ್ ಹರಾಜು ಇತಿಹಾಸದ ದುಬಾರಿ ಆಟಗಾರ ರಿಷಭ್ ಪಂತ್ ಐತಿಹಾಸಿಕ ದಾಖಲೆ ಪುಡಿಗಟ್ಟಿದ ಅನ್​ಸೋಲ್ಡ್ ಪ್ಲೇಯರ್ ಉರ್ವಿಲ್ ಪಟೇಲ್

2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಅನ್​ಸೋಲ್ಡ್ ಕೆಲವೇ ದಿನಗಳಲ್ಲಿ ಗುಜರಾತ್ ವಿಕೆಟ್ ಕೀಪರ್-ಬ್ಯಾಟ್ಸ್​ಮನ್ ಉರ್ವಿಲ್ ಪಟೇಲ್, ಇಂಡಿಯನ್ ಪ್ರೀಮಿಯರ್ ಲೀಗ್​ನ ದುಬಾರಿ ಆಟಗಾರ ರಿಷಭ್ ಪಂತ್ ಅವರ ವೇಗದ ಟಿ20 ಶತಕದ ದಾಖಲೆ ಮುರಿದಿದ್ದಾರೆ. ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆದ 2 ದಿನಗಳ ಹರಾಜಿನಲ್ಲಿ ಮಾರಾಟವಾಗದೆ ಉಳಿದ ಉರ್ವಿಲ್, ಇಂದೋರ್​​ನ ಎಮರಾಲ್ಡ್ ಹೈಟ್ಸ್ ಇಂಟರ್ನ್ಯಾಷನಲ್ ಸ್ಕೂಲ್ ಮೈದಾನದಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟಿ20 ಪಂದ್ಯದಲ್ಲಿ ತ್ರಿಪುರಾ ವಿರುದ್ಧ 28 ಎಸೆತಗಳಲ್ಲೇ ಶತಕ ಬಾರಿಸಿ ನೂತನ ಇತಿಹಾಸ ನಿರ್ಮಿಸಿದ್ದಾರೆ.

ಉರ್ವಿಲ್ ಪಟೇಲ್ ಒಂದೇ ಒಂದು ಎಸೆತದ ಅಂತರದಿಂದ ವೇಗದ ಟಿ20 ಶತಕದ ವಿಶ್ವ ದಾಖಲೆ ಮುರಿಯಲು ಮಿಸ್ ಮಾಡಿಕೊಂಡರು. ಆದರೆ, ಭಾರತದ ಪರ ಪಂತ್ ಸಿಡಿಸಿದ್ದ ದಾಖಲೆಯನ್ನು ಧ್ವಂಸಗೊಳಿಸಿದರು. 2018ರಲ್ಲಿ ಹಿಮಾಚಲ ಪ್ರದೇಶ ವಿರುದ್ಧ 32 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ದ ಪಂತ್ ಅವರು ಅತಿ ವೇಗದ ನೂರು ಮುಟ್ಟಿದ ಭಾರತದ ಆಟಗಾರ ಎನಿಸಿಕೊಂಡಿದ್ದರು. ಪ್ರಸ್ತುತ ಅವರು ಲಕ್ನೋ ಸೂಪರ್​ ಜೈಂಟ್ಸ್ ತಂಡವನ್ನು ಸೇರ್ಪಡೆಯಾಗಿದ್ದಾರೆ. 27 ಕೋಟಿ ರೂ ಪಡೆದಿರುವ ಪಂತ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಎಂಬ ದಾಖಲೆ ಬರೆದಿದ್ದಾರೆ. ಇದೀಗ ಇಂತಹ ಆಟಗಾರನ ರೆಕಾರ್ಡ್​ ಅನ್ನೇ ಉರ್ವೀಲ್ ಪಟೇಲ್ ಮುರಿಯುವ ಮೂಲಕ ಫ್ರಾಂಚೈಸಿಗಳಿಗೆ ಶಾಕ್ ನೀಡಿದ್ದಾರೆ.

ಉರ್ವಿಲ್ 30ಕ್ಕಿಂತ ಕಡಿಮೆ ಎಸೆತಗಳಲ್ಲಿ ಟಿ20 ಶತಕ ಗಳಿಸಿದ ಮೊದಲ ಭಾರತೀಯ ಬ್ಯಾಟರ್​. ಅಲ್ಲದೆ, ಅತಿ ವೇಗದ ಸೆಂಚುರಿ ಸಿಡಿಸಿದ ವಿಶ್ವದ ಎರಡನೇ ಆಟಗಾರನೂ ಹೌದು. 2013ರ ಐಪಿಎಲ್​ನಲ್ಲಿ ಪುಣೆ ವಾರಿಯರ್ಸ್ ವಿರುದ್ಧ 30 ಎಸೆತಗಳಲ್ಲಿ ಶತಕ ಬಾರಿಸಿದ ವೆಸ್ಟ್ ಇಂಡೀಸ್ ದಂತಕಥೆ ಕ್ರಿಸ್ ಗೇಲ್ ಅವರನ್ನು ಹಿಂದಿಕ್ಕಿ ಉರ್ವಿಲ್ ವೇಗದ ಟಿ20 ಶತಕಗಳ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಈ ವರ್ಷದ ಆರಂಭದಲ್ಲಿ ಸೈಪ್ರಸ್ ವಿರುದ್ಧ 27 ಎಸೆತಗಳಲ್ಲಿ ಸೆಂಚುರಿ ಬಾರಿಸಿದ ಎಸ್ಟೋನಿಯಾದ ಸಾಹಿಲ್ ಚೌಹಾಣ್ ಮೊದಲ ಸ್ಥಾನದಲ್ಲಿದ್ದಾರೆ.

ಅತಿ ವೇಗದ ಟಿ20 ಶತಕಗಳು

27 ಎಸೆತ - ಸಾಹಿಲ್ ಚೌಹಾಣ್ (ಎಸ್ಟೋನಿಯಾ) - ಸೈಪ್ರಸ್ ವಿರುದ್ಧ, 2024

28 ಎಸೆತ - ಉರ್ವಿಲ್ ಪಟೇಲ್ (ಗುಜರಾತ್) - ತ್ರಿಪುರಾ ವಿರುದ್ಧ, 2024

30 ಎಸೆತ - ಕ್ರಿಸ್ ಗೇಲ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು) - ಪುಣೆ ವಾರಿಯರ್ಸ್ ವಿರುದ್ಧ, 2013

- ರಿಷಭ್ ಪಂತ್ (ದೆಹಲಿ) - ಹಿಮಾಚಲ ಪ್ರದೇಶ ವಿರುದ್ಧ, 2018

35 ಎಸೆತಗಳಲ್ಲಿ ಅಜೇಯ 113 ರನ್

ತ್ರಿಪುರಾ ವಿರುದ್ಧ 156 ರನ್​ಗಳ ಗುರಿ ಬೆನ್ನಟ್ಟಿದ ಗುಜರಾತ್ 10.2 ಓವರ್​​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 156 ರನ್​ ಗಳಿಸಿ ಗೆಲುವಿನ ನಗೆ ಬೀರಿತು. ಬಲಗೈ ಬ್ಯಾಟರ್​ ಉರ್ವಿಲ್ 35 ಎಸೆತಗಳಲ್ಲಿ 12 ಸಿಕ್ಸರ್ ಮತ್ತು ಏಳು ಬೌಂಡರಿ ಸಹಿತ ಅಜೇಯ 113 ರನ್ ಗಳಿಸಿದರು. 322.86ರ ಸ್ಟ್ರೈಕ್​ರೇಟ್​ನಲ್ಲಿ ಸ್ಕೋರ್ ಮಾಡಿದ್ದಾರೆ. 2024ರ ಐಪಿಎಲ್​ನಲ್ಲಿ ಗುಜರಾತ್ ಟೈಟಾನ್ಸ್ ಭಾಗವಾಗಿದ್ದ ಉರ್ವಿಲ್, ಐಪಿಎಲ್ 2025 ಹರಾಜಿಗೆ ಬಿಡುಗಡೆ ಮಾಡಲಾಯಿತು. ಅವರ ಮೂಲ ಬೆಲೆ 30 ಲಕ್ಷ ಇತ್ತು.

2023ರ ನವೆಂಬರ್ 27ರಂದು ಚಂಡೀಗಢದಲ್ಲಿ ಅರುಣಾಚಲ ಪ್ರದೇಶ ವಿರುದ್ಧ ವಿಜಯ್ ಹಜಾರೆ ಟ್ರೋಫಿಯಲ್ಲಿ ಗುಜರಾತ್ ಪರ ಕೇವಲ 41 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ಸಖತ್ ಸುದ್ದಿಯಾಗಿದ್ದ ಪಟೇಲ್, 2009/10ರ ಋತುವಿನಲ್ಲಿ ಯೂಸುಫ್ ಪಠಾಣ್ 40 ಎಸೆತಗಳಲ್ಲಿ ಶತಕ ಬಾರಿಸಿದ ನಂತರ ಈ ಸಾಧನೆ ಮಾಡಿದ ಭಾರತೀಯರ ಎರಡನೇ ಅತಿ ವೇಗದ ಶತಕದ ದಾಖಲೆಯನ್ನು ಹೊಂದಿದ್ದಾರೆ.

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ