IND vs AUS: ಗಾಯದಿಂದ ಆಸ್ಟ್ರೇಲಿಯಾ ಸರಣಿಯಿಂದ ಹೊರಬಿದ್ದ ಸ್ಟಾರ್ ವಿಕೆಟ್ ಕೀಪರ್; ಬದಲಿ ಪ್ಲೇಯರ್ ಪ್ರಕಟಿಸಿದ ಬಿಸಿಸಿಐ
ಕನ್ನಡ ಸುದ್ದಿ  /  ಕ್ರಿಕೆಟ್  /  Ind Vs Aus: ಗಾಯದಿಂದ ಆಸ್ಟ್ರೇಲಿಯಾ ಸರಣಿಯಿಂದ ಹೊರಬಿದ್ದ ಸ್ಟಾರ್ ವಿಕೆಟ್ ಕೀಪರ್; ಬದಲಿ ಪ್ಲೇಯರ್ ಪ್ರಕಟಿಸಿದ ಬಿಸಿಸಿಐ

IND vs AUS: ಗಾಯದಿಂದ ಆಸ್ಟ್ರೇಲಿಯಾ ಸರಣಿಯಿಂದ ಹೊರಬಿದ್ದ ಸ್ಟಾರ್ ವಿಕೆಟ್ ಕೀಪರ್; ಬದಲಿ ಪ್ಲೇಯರ್ ಪ್ರಕಟಿಸಿದ ಬಿಸಿಸಿಐ

Yastika Bhatia Injured: ಡಿಸೆಂಬರ್​ 5ರಿಂದ ಶುರುವಾಗುವ ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೂ ಮುನ್ನ ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಯಾಸ್ತಿಕಾ ಭಾಟಿಯಾ ಗಾಯಗೊಂಡು ಸರಣಿಯಿಂದ ಹೊರಬಿದ್ದಿದ್ದಾರೆ.

ಗಾಯದಿಂದ ಆಸ್ಟ್ರೇಲಿಯಾ ಸರಣಿಯಿಂದ ಹೊರಬಿದ್ದ ಸ್ಟಾರ್ ವಿಕೆಟ್ ಕೀಪರ್; ಬದಲಿ ಪ್ಲೇಯರ್ ಪ್ರಕಟಿಸಿದ ಬಿಸಿಸಿಐ
ಗಾಯದಿಂದ ಆಸ್ಟ್ರೇಲಿಯಾ ಸರಣಿಯಿಂದ ಹೊರಬಿದ್ದ ಸ್ಟಾರ್ ವಿಕೆಟ್ ಕೀಪರ್; ಬದಲಿ ಪ್ಲೇಯರ್ ಪ್ರಕಟಿಸಿದ ಬಿಸಿಸಿಐ

ಭಾರತದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ಯಾಸ್ತಿಕಾ ಭಾಟಿಯಾ (Yastika Bhatia) ಅವರು ಮಣಿಕಟ್ಟಿನ ಗಾಯದಿಂದಾಗಿ ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಉಮಾ ಚೆಟ್ರಿ ಅವರನ್ನು ಬದಲಿ ಆಟಗಾರ್ತಿಯನ್ನಾಗಿ ಘೋಷಿಸಿದೆ. ಮಹಿಳೆಯರ ಬಿಗ್ ಬ್ಯಾಷ್ ಲೀಗ್ (WBBL) ನಲ್ಲಿ ಆಡುತ್ತಿರುವಾಗ ಯಾಸ್ತಿಕಾ ಮಣಿಕಟ್ಟಿಗೆ ಗಾಯ ಮಾಡಿಕೊಂಡರು.

ಈ ಬಗ್ಗೆ ಬಿಸಿಸಿಯ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಮಣಿಕಟ್ಟಿನ ಗಾಯದಿಂದ ಯಾಸ್ತಿಕಾ ಭಾಟಿಯಾ ಅವರು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ ಎಂದು ಬಿಸಿಸಿಐ ವೈದ್ಯಕೀಯ ತಂಡ ದೃಢಪಡಿಸಿದೆ. ಅವರ ಚೇತರಿಕೆಗೆ ಸಂಬಂಧಿಸಿದಂತೆ ಬಗ್ಗೆ ವೈದ್ಯಕೀಯ ತಂಡ ಸೂಕ್ಷ್ಮವಾಗಿ ಗಮನಿಸುತ್ತಿದೆ. ಭಾರತ ಮಹಿಳಾ ತಂಡದ ಆಯ್ಕೆ ಸಮಿತಿಯು ಯಾಸ್ತಿಕಾ ಬದಲಿಗೆ ಉಮಾ ಚೆಟ್ರಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದೆ.

ವಿಕೆಟ್ ಕೀಪರ್ ಉಮಾ ಚೆಟ್ರಿ ಅವರು‌ ಭಾರತ ತಂಡದ ಪರ ನಾಲ್ಕು ಟಿ20ಐಗಳನ್ನು ಆಡಿದ್ದಾರೆ. ಜುಲೈನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಚೊಚ್ಚಲ ಪಂದ್ಯವನ್ನಾಡಿದ್ದರು. ವಿಕೆಟ್‌ಕೀಪರ್ ಬ್ಯಾಟರ್ ದೇಶೀಯ ಟಿ20 ಚಾಲೆಂಜರ್ ಟ್ರೋಫಿಯಲ್ಲಿ 154.00 ಸ್ಟ್ರೈಕ್ ರೇಟ್‌ನಲ್ಲಿ 231 ರನ್ ಗಳಿಸುವ ಮೂಲಕ 2ನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. ಮೆಗಾ ಈವೆಂಟ್‌ನಲ್ಲಿ ಶತಕ ಸಿಡಿಸಿದ ಏಕೈಕ ಆಟಗಾರ್ತಿಯೂ ಹೌದು. ಉಮಾ 71 ಎಸೆತಗಳಲ್ಲಿ 122 ರನ್ ಸಿಡಿಸಿದರು.

ಚೆಟ್ರಿ ಅವರು ಆಗಸ್ಟ್‌ನಲ್ಲಿ ಭಾರತ ಎ ತಂಡದ ಭಾಗವಾಗಿದ್ದ ಕಾರಣ ಆಸ್ಟ್ರೇಲಿಯಾದಲ್ಲಿ ಆಡಿದ್ದರು. ಆದರೆ ಆಗ ಅವರು ದೊಡ್ಡ ಸ್ಕೋರ್ ಮಾಡಲು ವಿಫಲರಾಗಿದ್ದರು. ಟಿ20 ಗಳಲ್ಲಿ 7 ಮತ್ತು 11, ಏಕದಿನದಲ್ಲಿ 16 ಮತ್ತು ಟೆಸ್ಟ್ ಪಂದ್ಯದಲ್ಲಿ 2 ಮತ್ತು 47 ಗಳಿಸಿದರು. ಮತ್ತೊಂದೆಡೆ, ಯಾಸ್ತಿಕಾ ಭಾಟಿಯಾ ಮೂರು ಟೆಸ್ಟ್ ಪಂದ್ಯಗಳು, 28 ಏಕದಿನ ಮತ್ತು 19 ಟಿ20ಐಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಮೊದಲ ಎರಡು ಏಕದಿನ ಪಂದ್ಯಗಳು ಡಿಸೆಂಬರ್ 5 ಮತ್ತು ಡಿಸೆಂಬರ್ 8 ರಂದು ಬ್ರಿಸ್ಬೇನ್‌ನ ಅಲನ್ ಬಾರ್ಡರ್ ಫೀಲ್ಡ್‌ನಲ್ಲಿ ನಡೆಯಲಿದ್ದು , ಮೂರನೇ ಹಣಾಹಣಿ ಡಿಸೆಂಬರ್ 11 ರಂದು ಪರ್ತ್‌ನ ಡಬ್ಲ್ಯುಎಸಿಎ (WACA) ಮೈದಾನದಲ್ಲಿ ನಡೆಯಲಿದೆ.

ಪರಿಷ್ಕರಿಸಿದ ಭಾರತ ಮಹಿಳಾ ಏಕದಿನ ತಂಡ

ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪ ನಾಯಕಿ), ಪ್ರಿಯಾ ಪುನಿಯಾ, ಜೆಮಿಮಾ ರೋಡ್ರಿಗಸ್, ಹರ್ಲೀನ್ ಡಿಯೋಲ್, ರಿಚಾ ಘೋಷ್ (ವಿಕೆಟ್ ಕೀಪರ್), ತೇಜಲ್ ಹಸಬ್ನಿಸ್, ದೀಪ್ತಿ ಶರ್ಮಾ, ಮಿನ್ನು ಮಣಿ, ಪ್ರಿಯಾ ಮಿಶ್ರಾ, ರಾಧಾ ಯಾದವ್, ಟಿಟಾಸ್ ಸಾಧು, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್ ಠಾಕೂರ್, ಸೈಮಾ ಠಾಕೂರ್, ಉಮಾ ಚೆಟ್ರಿ (ವಿಕೆಟ್ ಕೀಪರ್).

ಆಸ್ಟ್ರೇಲಿಯಾ ಏಕದಿನ ತಂಡ

ತಾಲಿಯಾ ಮೆಕ್‌ಗ್ರಾತ್ (ನಾಯಕಿ), ಡಾರ್ಸಿ ಬ್ರೌನ್, ಆಶ್ಲೇ ಗಾರ್ಡ್ನರ್, ಕಿಮ್ ಗಾರ್ತ್, ಅಲಾನಾ ಕಿಂಗ್, ಫೋಬೆ ಲಿಚ್‌ಫೀಲ್ಡ್, ಸೋಫಿ ಮೊಲಿನೆಕ್ಸ್, ಬೆತ್ ಮೂನಿ, ಎಲ್ಲಿಸ್ ಪೆರಿ, ಮೇಗನ್ ಶುಟ್, ಅನ್ನಾಬೆಲ್ ಸದರ್ಲ್ಯಾಂಡ್, ಜಾರ್ಜಿಯಾ ವೇರ್‌ಹ್ಯಾಮ್, ಜಾರ್ಜಿಯಾ ವೋಲ್.

Whats_app_banner