logo
ಕನ್ನಡ ಸುದ್ದಿ  /  ಕ್ರಿಕೆಟ್  /  ಸಾರ್ವಕಾಲಿಕ ಏಕದಿನ ವಿಶ್ವಕಪ್​ ಬೆಸ್ಟ್ ಪ್ಲೇಯಿಂಗ್​ 11 ಕಟ್ಟಿದ ಮ್ಯಾಥ್ಯೂ ಹೇಡನ್; ವಿರಾಟ್ ಕೊಹ್ಲಿಗೆ ಇಲ್ಲ ಸ್ಥಾನ!

ಸಾರ್ವಕಾಲಿಕ ಏಕದಿನ ವಿಶ್ವಕಪ್​ ಬೆಸ್ಟ್ ಪ್ಲೇಯಿಂಗ್​ 11 ಕಟ್ಟಿದ ಮ್ಯಾಥ್ಯೂ ಹೇಡನ್; ವಿರಾಟ್ ಕೊಹ್ಲಿಗೆ ಇಲ್ಲ ಸ್ಥಾನ!

Prasanna Kumar P N HT Kannada

Aug 02, 2024 03:13 PM IST

google News

ಸಾರ್ವಕಾಲಿಕ ಏಕದಿನ ವಿಶ್ವಕಪ್​ ಬೆಸ್ಟ್ ಪ್ಲೇಯಿಂಗ್​ 11 ಕಟ್ಟಿದ ಮ್ಯಾಥ್ಯೂ ಹೇಡನ್; ವಿರಾಟ್ ಕೊಹ್ಲಿಗೆ ಇಲ್ಲ ಸ್ಥಾನ!

    •  Virat Kohli: ಆಸ್ಟ್ರೇಲಿಯಾ ತಂಡದ ಸ್ಫೋಟಕ ಆರಂಭಿಕ ಬ್ಯಾಟರ್​ ಮ್ಯಾಥ್ಯೂ ಹೇಡನ್ ಅವರು ಸಾರ್ವಕಾಲಿಕ ಏಕದಿನ ವಿಶ್ವಕಪ್ ತಂಡವನ್ನು ರಚಿಸಿದ್ದು, ವಿರಾಟ್ ಕೊಹ್ಲಿ ಅವರನ್ನು ಕೈಬಿಟ್ಟಿದ್ದಾರೆ.
ಸಾರ್ವಕಾಲಿಕ ಏಕದಿನ ವಿಶ್ವಕಪ್​ ಬೆಸ್ಟ್ ಪ್ಲೇಯಿಂಗ್​ 11 ಕಟ್ಟಿದ ಮ್ಯಾಥ್ಯೂ ಹೇಡನ್; ವಿರಾಟ್ ಕೊಹ್ಲಿಗೆ ಇಲ್ಲ ಸ್ಥಾನ!
ಸಾರ್ವಕಾಲಿಕ ಏಕದಿನ ವಿಶ್ವಕಪ್​ ಬೆಸ್ಟ್ ಪ್ಲೇಯಿಂಗ್​ 11 ಕಟ್ಟಿದ ಮ್ಯಾಥ್ಯೂ ಹೇಡನ್; ವಿರಾಟ್ ಕೊಹ್ಲಿಗೆ ಇಲ್ಲ ಸ್ಥಾನ!

ಆಸ್ಟ್ರೇಲಿಯಾ ತಂಡದ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಅವರು ಏಕದಿನ ಕ್ರಿಕೆಟ್ ವಿಶ್ವಕಪ್​ ಇತಿಹಾಸದಲ್ಲಿ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ ನೀಡಿದ ಆಟಗಾರರ ಅತ್ಯುತ್ತಮ ಪ್ಲೇಯಿಂಗ್ 11 ಕಟ್ಟಿದ್ದಾರೆ. ಆದರೆ, ಒಡಿಐನಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಿರುವ ಮತ್ತು 50 ಶತಕಗಳ ಸರದಾರ ವಿರಾಟ್ ಕೊಹ್ಲಿ ಅವರನ್ನೇ ಕೈಬಿಟ್ಟು ಅಚ್ಚರಿ ಮೂಡಿಸಿದ್ದಾರೆ. ಇದು ಅವರ ಅಭಿಮಾನಿಗಳಿಗೂ ಆಶ್ಚರ್ಯ ತರಿಸಿದೆ.

ದಾಖಲೆಗಳು ಇರುವುದೇ ಮುರಿಯಲು ಎನ್ನುವಂತೆ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಅಸಾಧ್ಯ ಎನ್ನಲಾದ 49 ಏಕದಿನ ಶತಕಗಳ ದಾಖಲೆಯನ್ನು ವಿರಾಟ್ ಕೊಹ್ಲಿ ಮುರಿದಿದ್ದು, 50 ಶತಕ ಸಿಡಿಸಿದ್ದಾರೆ. 2011ರಲ್ಲಿ ಏಕದಿನ ವಿಶ್ವಕಪ್​ಗೆ ಪದಾರ್ಪಣೆ ಮಾಡಿದ್ದ ವಿರಾಟ್, ಅಂದಿನಿಂದಲೂ ಪ್ರತಿ ಆವೃತ್ತಿಯಲ್ಲೂ ರನ್​ ಮಳೆ ಹರಿಸಿದ್ದಾರೆ. ವಿಶ್ವಕಪ್​ನಲ್ಲಿ ಅಧಿಕ ರನ್ ಗಳಿಸಿದ 2ನೇ ಆಟಗಾರ ಎನಿಸಿದ್ದಾರೆ.

ರೆಡ್​ಬಾಲ್ ಕ್ರಿಕೆಟ್ ಜೊತೆಗೆ ವೈಟ್​ಬಾಲ್​ ಕ್ರಿಕೆಟ್​ನಲ್ಲೂ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ವಿರಾಟ್ ಕೊಹ್ಲಿ, ಏಕದಿನ ಇತಿಹಾಸದಲ್ಲಿ ಅತ್ಯಧಿಕ ರನ್ ಗಳಿಸಿದ ವಿಶ್ವದ ಮೂರನೇ ಆಟಗಾರ ಎನಿಸಿದ್ದಾರೆ. ಒಂದ್ವೇಳೆ 2027ರ ತನಕ ಏಕದಿನ ಕ್ರಿಕೆಟ್ ಆಡಿದರೆ, ಟಾಪ್​ ಸ್ಕೋರರ್​​ ಸಚಿನ್ ತೆಂಡೂಲ್ಕರ್ ಅವರ 18 ಸಾವಿರ ಪ್ಲಸ್​ ರನ್​ಗಳ ದಾಖಲೆ ಮುರಿಯುವುದದರಲ್ಲಿ ಯಾವುದೇ ಅನುಮಾನ ಇಲ್ಲ.

ಕಳೆದ ವರ್ಷ ತವರಿನಲ್ಲಿ ಜರುಗಿದ ಏಕದಿನ ವಿಶ್ವಕಪ್​ನಲ್ಲಿ ವಿರಾಟ್ ಕೊಹ್ಲಿ ಪ್ರಮುಖ ರನ್ ಸ್ಕೋರರ್ ಆಗಿದ್ದರು. 11 ಪಂದ್ಯಗಳಲ್ಲಿ 95.62ರ ಬ್ಯಾಟಿಂಗ್ ಸರಾಸರಿಯಲ್ಲಿ 765 ರನ್ ಗಳಿಸಿದ್ದರು. 6 ಅರ್ಧಶತಕ, 3 ಶತಕ ಸಿಡಿಸಿದ್ದರು. ಕೊಹ್ಲಿ ನಾಲ್ಕು ಏಕದಿನ ವಿಶ್ವಕಪ್​​ಗಳಲ್ಲಿ ಕಣಕ್ಕಿಳಿದಿದ್ದು, 1795 ರನ್‌ ಗಳಿಸಿದ್ದು, ಸಚಿನ್ ತೆಂಡೂಲ್ಕರ್ ನಂತರ ಸ್ಥಾನ ಪಡೆದಿದ್ದಾರೆ. ಸಚಿನ್ 2278 ರನ್ ಸಿಡಿಸಿದ್ದಾರೆ.

292 ಏಕದಿನಗಳಲ್ಲಿ 58.68ರ ಬ್ಯಾಟಿಂಗ್ ಸರಾಸರಿಯಲ್ಲಿ 13848 ರನ್ ಗಳಿಸಿ ಅತ್ಯುತ್ತಮ ಪ್ರದರ್ಶನ ನೀಡಿರುವ ವಿರಾಟ್ ಕೊಹ್ಲಿ ಅವರನ್ನು ಹೇಡನ್ ಕೈಬಿಟ್ಟಿದ್ದು ನಿಜಕ್ಕೂ ಅಚ್ಚರಿಯಾಗಿದೆ. ಏಕದಿನ ಕ್ರಿಕೆಟ್​​ನಲ್ಲಿ ಅತ್ಯಂತ ಯಶಸ್ವಿ ಬ್ಯಾಟರ್​​ಗೇ ಅವಕಾಶ ನೀಡದಿರುವುದು ಯಾವ ಕಾರಣಕ್ಕೆ? ಯಾವ ಆಧಾರದಲ್ಲಿ ತಂಡವನ್ನು ರಚಿಸಿದ್ದೀರಿ? ಇನ್ನು ಹೇಗೆ ಆಡಬೇಕು ಎಂದು ಅಭಿಮಾನಿಗಳು ಹೇಡನ್​ಗೆ ಪ್ರಶ್ನಿಸಿದ್ದಾರೆ.

ಹೇಡನ್ ಕಟ್ಟಿದ ತಂಡದಲ್ಲಿ ಯಾರಿಗೆಲ್ಲಾ ಸಿಕ್ಕಿದೆ ಚಾನ್ಸ್?

ಮ್ಯಾಥ್ಯೂ ಹೇಡನ್ ನಿರ್ಮಿಸಿರುವ ಏಕದಿನ ವಿಶ್ವಕಪ್​ ಅತ್ಯುತ್ತಮ ಪ್ಲೇಯಿಂಗ್​​ನಲ್ಲಿ ಆಸೀಸ್​ ಆಟಗಾರರದ್ದೇ ದರ್ಬಾರ್ ಇದೆ. ನಾಯಕತ್ವದ ಪಟ್ಟವನ್ನೂ ಆಸ್ಟ್ರೇಲಿಯಾ ಆಟಗಾರರನಿಗೇ ನೀಡಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ಇಬ್ಬರು ಆಟಗಾರರಿಗೆ, ವೆಸ್ಟ್ ಇಂಡೀಸ್, ಪಾಕಿಸ್ತಾನ, ಶ್ರೀಲಂಕಾ ಮತ್ತು ಸೌತ್ ಆಫ್ರಿಕಾ ತಂಡಗಳಲ್ಲಿ ತಲಾ ಒಬ್ಬೊಬ್ಬರಿಗೆ ಅವಕಾಶ ನೀಡಿದ್ದಾರೆ.

ಮ್ಯಾಥ್ಯೂ ಹೇಡನ್ ಅವರ ಸಾರ್ವಕಾಲಿಕ ಏಕದಿನ ವಿಶ್ವಕಪ್ XI

  • ಆಡಮ್ ಗಿಲ್‌ಕ್ರಿಸ್ಟ್ (ವಿಕೆಟ್ ಕೀಪರ್​, ಆಸ್ಟ್ರೇಲಿಯಾ)
  • ವೀರೇಂದ್ರ ಸೆಹ್ವಾಗ್ (ಭಾರತ)
  • ರಿಕಿ ಪಾಂಟಿಂಗ್ (ನಾಯಕ, ಆಸ್ಟ್ರೇಲಿಯಾ)
  • ಸಚಿನ್ ತೆಂಡೂಲ್ಕರ್ (ಭಾರತ)
  • ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್)
  • ಜಾಕ್ ಕಾಲಿಸ್ (ಸೌತ್ ಆಫ್ರಿಕಾ)
  • ವಾಸಿಮ್ ಅಕ್ರಮ್ (ಪಾಕಿಸ್ತಾನ)
  • ವಕಾರ್ ಯೂನಿಸ್ (ಪಾಕಿಸ್ತಾನ)
  • ಶೇನ್ ವಾರ್ನ್ (ಆಸ್ಟ್ರೇಲಿಯಾ)
  • ಮುತ್ತಯ್ಯ ಮುರಳೀಧರನ್ (ಶ್ರೀಲಂಕಾ)
  • ಗ್ಲೆನ್ ಮೆಗ್ರಾಥ್ (ಆಸ್ಟ್ರೇಲಿಯಾ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ