ಪ್ರೇಕ್ಷಕರನ್ನು ನೋಡುತ್ತಾ ಕೂತಿದ್ದ ಭದ್ರತಾ ಸಿಬ್ಬಂದಿ ತಲೆಗೆ ಬಡಿದ ವಿರಾಟ್ ಕೊಹ್ಲಿ ಸಿಡಿಸಿದ ಸಿಕ್ಸರ್​; ಕೆಲಕಾಲ ಆಟವೇ ಸ್ಥಗಿತ, Video
ಕನ್ನಡ ಸುದ್ದಿ  /  ಕ್ರಿಕೆಟ್  /  ಪ್ರೇಕ್ಷಕರನ್ನು ನೋಡುತ್ತಾ ಕೂತಿದ್ದ ಭದ್ರತಾ ಸಿಬ್ಬಂದಿ ತಲೆಗೆ ಬಡಿದ ವಿರಾಟ್ ಕೊಹ್ಲಿ ಸಿಡಿಸಿದ ಸಿಕ್ಸರ್​; ಕೆಲಕಾಲ ಆಟವೇ ಸ್ಥಗಿತ, Video

ಪ್ರೇಕ್ಷಕರನ್ನು ನೋಡುತ್ತಾ ಕೂತಿದ್ದ ಭದ್ರತಾ ಸಿಬ್ಬಂದಿ ತಲೆಗೆ ಬಡಿದ ವಿರಾಟ್ ಕೊಹ್ಲಿ ಸಿಡಿಸಿದ ಸಿಕ್ಸರ್​; ಕೆಲಕಾಲ ಆಟವೇ ಸ್ಥಗಿತ, Video

ಪರ್ತ್ನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನದಂದು ವಿರಾಟ್ ಕೊಹ್ಲಿ ಅವರ ಸಿಕ್ಸರ್ ಭದ್ರತಾ ಸಿಬ್ಬಂದಿಯ ತಲೆಗೆ ಹೊಡೆದಿದೆ.

ಪ್ರೇಕ್ಷಕರನ್ನು ನೋಡುತ್ತಾ ಕೂತಿದ್ದ ಭದ್ರತಾ ಸಿಬ್ಬಂದಿಗೆ ಬಡಿದ ವಿರಾಟ್ ಕೊಹ್ಲಿ ಸಿಡಿಸಿದ ಸಿಕ್ಸರ್
ಪ್ರೇಕ್ಷಕರನ್ನು ನೋಡುತ್ತಾ ಕೂತಿದ್ದ ಭದ್ರತಾ ಸಿಬ್ಬಂದಿಗೆ ಬಡಿದ ವಿರಾಟ್ ಕೊಹ್ಲಿ ಸಿಡಿಸಿದ ಸಿಕ್ಸರ್

ಪರ್ತ್​ನ ಆಪ್ಟಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ (India vs Australia 1st Test) ನಡುವಿನ ಮೊದಲ ಟೆಸ್ಟ್ ಪಂದ್ಯದ 3ನೇ ದಿನದಂದು ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಸಿಡಿಸಿದ ಸಿಕ್ಸರ್​​​ ಸೆಕ್ಯೂರಿಟಿ ಗಾರ್ಡ್​​ ತಲೆಗೆ ಬಿದ್ದಿದ್ದು, ತೀವ್ರ ಪೆಟ್ಟಾಯಿತು. ತಕ್ಷಣವೇ ಆಸ್ಟ್ರೇಲಿಯಾದ ಫೀಲ್ಡರ್​​ಗಳು ಭದ್ರತಾ ಸಿಬ್ಬಂದಿ ಬಳಿಗೆ ತೆರಳಿ ಪರಾಮರ್ಶಿಸಿದರು. ತಾನು ಹಿಟ್ ಮಾಡಿದ ಚೆಂಡು ಸಿಬ್ಬಂದಿಗೆ ಬಿತ್ತಲ್ಲ ಎಂದು ವಿರಾಟ್ ಕೊಹ್ಲಿ ತೀವ್ರ ಕಳವಳಕ್ಕೆ ಒಳಗಾಗಿ ಕೆಲಹೊತ್ತು ಆಟವನ್ನೇ ಸ್ಥಗಿತಗೊಳಿಸಿದರು. ಭಾರತದ ಎರಡನೇ ಇನ್ನಿಂಗ್ಸ್​​​ನಲ್ಲಿ ಮಿಚೆಲ್ ಸ್ಟಾರ್ಕ್ ಎಸೆದ 101ನೇ ಓವರ್​ನ ಕೊನೆಯ ಎಸೆತದಲ್ಲಿ ಕೊಹ್ಲಿ ಆಫ್ ಸ್ಟಂಪ್​ನಲ್ಲಿ ಬಂದ ಚೆಂಡನ್ನು ಥರ್ಡ್​ಮ್ಯಾನ್​ ಕಡೆಗೆ ಸಿಕ್ಸರ್​ ಚಚ್ಚಿದರು.

ಆರಂಭದಲ್ಲಿ ತಾಳ್ಮೆಯಿಂದ ಬ್ಯಾಟಿಂಗ್ ನಡೆಸುತ್ತಿದ್ದ ವಿರಾಟ್ ಕೊಹ್ಲಿ, ಸ್ಟಾರ್ಕ್​ ಎಸೆದ ಬೌನ್ಸ್​ ಅನ್ನು ಬಲವಾಗಿ ಶಾಟ್ ಮಾಡಿದರು. ಚೆಂಡು ಸ್ಲಿಪ್ ಕಾರ್ಡ್​​ನಲ್ಲಿ ಹಾರಿ ಸಿಕ್ಸರ್​ ಗೆರೆ ದಾಟಿತು. ಆದರೆ ಪರ್ತ್ ಪ್ರೇಕ್ಷಕರನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಕುಳಿತಿದ್ದ ಭದ್ರತಾ ಸಿಬ್ಬಂದಿಗೆ ಚೆಂಡು ಬಡಿಯಿತು. ಅವರು ಹೆಲ್ಮೆಟ್ ಧರಿಸಿರಲಿಲ್ಲ. ಕ್ಯಾಪ್ ಹಾಕಿದ್ದರು. ಇದು ಆಸೀಸ್ ಫೀಲ್ಡರ್ಸ್​ಗೆ ಮತ್ತು ವಿರಾಟ್​ಗೆ ಚಿಂತರಗೀಡು ಮಾಡಿತು. ಅಲ್ಲದೆ, ಕೆಲ ಹೊತ್ತು ಆಟವನ್ನೇ ನಿಲ್ಲಿಸಲಾಯಿತು. ಆಸ್ಟ್ರೇಲಿಯಾದ ಫಿಸಿಯೋ ತಕ್ಷಣವೇ ಸ್ಪಂದಿಸಿ ಅಗತ್ಯ ಚಿಕಿತ್ಸೆ ನೀಡಿದರು. ಪ್ರೇಕ್ಷಕರು ಸಹ ಆತಂಕ್ಕೆ ಒಳಗಾದರು. ಈ ವಿಡಿಯೋ ಸಾಮಾಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಕೆಲವು ದಿನಗಳ ಹಿಂದಷ್ಟೇ ಜೋಹಾನ್ಸ್​​ಬರ್ಗ್​ನ ವಾಂಡರರ್ಸ್​​ನಲ್ಲಿ ನಡೆದ ಭಾರತ-ದಕ್ಷಿಣ ಆಫ್ರಿಕಾ ನಡುವಿನ 4ನೇ ಟಿ20 ಪಂದ್ಯದ ವೇಳೆ ಸಂಜು ಸ್ಯಾಮ್ಸನ್ ಸಿಡಿಸಿದ ಸಿಕ್ಸ್ ಕ್ರೀಡಾಂಗಣದಲ್ಲಿ ಮಹಿಳೆಯೊಬ್ಬರ ಮುಖಕ್ಕೆ ಹೊಡೆದಿತ್ತು. ಗಾಯಗೊಂಡು ಕಣ್ಣೀರು ಹಾಕಿದ ಮಹಿಳೆಗೆ ಸಂಜು ಸ್ಯಾಮ್ಸನ್​ ಕೈಮುಗಿದು ಕ್ಷಮೆಯಾಚಿಸಿದರು. ಈ ಹಿಂದೆ ನ್ಯೂಜಿಲೆಂಡ್ ಆಟಗಾರ್ತಿ ಸೋಫಿ ಡಿವೈನ್ ಅವರು ತಾನು ಸಿಕ್ಸರ್​ ಸಿಡಿಸಿದ್ದ ಚೆಂಡು ಪ್ರೇಕ್ಷಕರಿಗೆ ಬಡಿದಿತ್ತು. ತಕ್ಷಣವೇ ಮೈದಾನ ತೊರೆದು ಗಾಯಗೊಂಡವರ ಪರಿಸ್ಥಿತಿ ವಿಚಾರಿಸಿದ್ದರು. ಬ್ಯಾಟರ್​​ಗಳು ಬಾರಿಸಿದ ಚೆಂಡು ಪ್ರೇಕ್ಷಕರಿಗೆ ಬಡಿದಿರುವು ಘಟನೆಗಳು ಈ ಹಿಂದೆಯೂ ನಡೆದಿವೆ. ಕೆಲವರು ಗಂಭೀರವಾಗಿ ಗಾಯಗೊಂಡಿದ್ದೂ ಉಂಟು. 

ಫಾರ್ಮ್​ಗೆ ಮರಳಿದ ಕೊಹ್ಲಿ

ಬಾರ್ಡರ್-ಗವಾಸ್ಕರ್ ಟ್ರೋಫಿ ಆರಂಭಿಕ ಪಂದ್ಯದಲ್ಲಿ ಭಾರತ ತಂಡದ ಸ್ಟಾರ್​ ಬ್ಯಾಟರ್ ವಿರಾಟ್ ಕೊಹ್ಲಿ ಫಾರ್ಮ್​ಗೆ ಮರಳಿದರು. ಈ ಹಿಂದಿನ ಸರಣಿಗಳಲ್ಲಿ ನಿರೀಕ್ಷಿತ ಪ್ರದರ್ಸನ ನೀಡದ ಹಿನ್ನೆಲೆ ಟೀಕೆಗೆ ಗುರಿಯಾಗಿದ್ದರು. ಅಲ್ಲದೆ, ಇದೇ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 5 ರನ್​ ಗಳಿಸಿ ಔಟಾಗಿ ನಿರಾಸೆ ಮೂಡಿಸಿದ್ದ ಕೊಹ್ಲಿ, ಎರಡನೇ ಇನ್ನಿಂಗ್ಸ್​ ಭರವಸೆ ಮೂಡಿಸಿದ್ದಾರೆ. ಕೊಹ್ಲಿ ಜೊತೆಗೆ ಯಶಸ್ವಿ ಜೈಸ್ವಾಲ್ (161) ದಾಖಲೆಯ ಶತಕ, ಕೆಎಲ್ ರಾಹುಲ್ (77) ತಾಳ್ಮೆಯ ಅರ್ಧಶತಕ ಸಿಡಿಸಿ ಭಾರತ ತಂಡ ಲೀಡ್ ಅನ್ನು 500ರ ಗಡಿ ದಾಟಿಸಿದರು. ಮೊದಲ ಇನ್ನಿಂಗ್ಸ್​​ನಲ್ಲಿ ಭಾರತ 150 ರನ್ ಗಳಿಸಿತ್ತು. ಆಸೀಸ್ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ 104 ರನ್ ಗಳಿಸಿ 46 ರನ್​ಗಳ ಹಿನ್ನಡೆ ಅನುಭವಿಸಿತ್ತು.

Whats_app_banner