logo
ಕನ್ನಡ ಸುದ್ದಿ  /  ಕ್ರಿಕೆಟ್  /  Virat Kohli: ಶಕೀಬ್ ಅಲ್ ಹಸನ್‌ಗೆ ವಿರಾಟ್ ಸ್ಪೆಷಲ್ ಗಿಫ್ಟ್: ಮರೆಯಲಾಗದ ಉಡುಗೊರೆ ನೀಡಿದ ಕೊಹ್ಲಿ

Virat Kohli: ಶಕೀಬ್ ಅಲ್ ಹಸನ್‌ಗೆ ವಿರಾಟ್ ಸ್ಪೆಷಲ್ ಗಿಫ್ಟ್: ಮರೆಯಲಾಗದ ಉಡುಗೊರೆ ನೀಡಿದ ಕೊಹ್ಲಿ

Prasanna Kumar P N HT Kannada

Oct 02, 2024 09:29 AM IST

google News

ಶಕೀಬ್ ಅಲ್ ಹಸನ್‌ಗೆ ವಿರಾಟ್ ಸ್ಪೆಷಲ್ ಗಿಫ್ಟ್

    • Shakib Al Hasan: ಭಾರತ-ಬಾಂಗ್ಲಾ ಟೆಸ್ಟ್ ಪಂದ್ಯ ಮುಗಿದ ಬಳಿಕ ಕಾನ್ಪುರದ ಮೈದಾನದಲ್ಲಿ ವಿಶೇಷ ಘಟನೆ ಸಂಭವಿಸಿತು. ವಿರಾಟ್ ಕೊಹ್ಲಿ ಅವರು ಬಾಂಗ್ಲಾದೇಶದ ಆಲ್‌ರೌಂಡರ್ ಶಕೀಬ್ ಅಲ್ ಹಸನ್‌ ಅವರಿಗೆ ಮರೆಯಲಾಗದ ಉಡುಗೊರೆಯನ್ನು ನೀಡುತ್ತಿರುವುದು ಕಂಡುಬಂದಿದೆ.
 ಶಕೀಬ್ ಅಲ್ ಹಸನ್‌ಗೆ ವಿರಾಟ್ ಸ್ಪೆಷಲ್ ಗಿಫ್ಟ್
ಶಕೀಬ್ ಅಲ್ ಹಸನ್‌ಗೆ ವಿರಾಟ್ ಸ್ಪೆಷಲ್ ಗಿಫ್ಟ್

ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿ ಮುಕ್ತಾಯಗೊಂಡಿದೆ. ಭಾರತ 2-0 ಅಂತರದಿಂದ ಸರಣಿ ಕ್ಲೀನ್ ಸ್ವೀಪ್ ಮಾಡಿದೆ. ಮಳೆಯಿಂದಾಗಿ ಕೇವಲ ಮೂರು ದಿನ ನಡೆದ ಆಟದಲ್ಲಿ ಟೀಮ್ ಇಂಡಿಯಾ ಗೆದ್ದು ಇತಿಹಾಸ ಸೃಷ್ಟಿಸಿತು. ಅಲ್ಲದೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ಗೆ ಮತ್ತಷ್ಟು ಹತ್ತಿರವಾಯಿತು. ಪಂದ್ಯ ಮುಗಿದ ಬಳಿಕ ಕಾನ್ಪುರದ ಮೈದಾನದಲ್ಲಿ ವಿಶೇಷ ಘಟನೆ ಸಂಭವಿಸಿತು. ವಿರಾಟ್ ಕೊಹ್ಲಿ ಅವರು ಬಾಂಗ್ಲಾದೇಶದ ಆಲ್‌ರೌಂಡರ್ ಶಕೀಬ್ ಅಲ್ ಹಸನ್‌ ಅವರಿಗೆ ಮರೆಯಲಾಗದ ಉಡುಗೊರೆಯನ್ನು ನೀಡುತ್ತಿರುವುದು ಕಂಡುಬಂದಿದೆ.

ಟೆಸ್ಟ್‌ಗೆ ಶಕೀಬ್ ನಿವೃತ್ತಿ

ಕಾನ್ಪುರ ಟೆಸ್ಟ್ ಆರಂಭಕ್ಕೂ ಮುನ್ನ ಶಕೀಬ್ ಅಲ್ ಹಸನ್ ನಿವೃತ್ತಿ ಘೋಷಿಸಿದ್ದರು. ಅಂದರೆ, ಭದ್ರತಾ ಕಾರಣಗಳಿಂದಾಗಿ ತವರು ನೆಲದಲ್ಲಿ ಪಂದ್ಯವನ್ನು ಆಡಲು ಸಾಧ್ಯವಾಗದಿದ್ದರೆ ಕಾನ್ಪುರ ತನ್ನ ಕೊನೆಯ ಟೆಸ್ಟ್ ಆಗಿರಬಹುದು ಎಂದು ಅವರು ಹೇಳಿದ್ದರು. ಈಗ ಶಕೀಬ್ ಮುಂದಿನ ಹೆಜ್ಜೆ ಏನು? ಬಾಂಗ್ಲಾದೇಶಕ್ಕೆ ಹೋಗಿ ಟೆಸ್ಟ್ ಆಡುತ್ತಾರಾ ಅಥವಾ ಇಲ್ಲವೇ ಎಂಬುದು ತಿಳಿದಿಲ್ಲ. ಆದರೆ ಶಕೀಬ್ ಇನ್ನು ಮುಂದೆ ಭಾರತದಲ್ಲಿ ಟೆಸ್ಟ್ ಆಡುವುದಿಲ್ಲ ಎಂಬುದು ಖಚಿತವಾಗಿದೆ. ಭಾರತದ ನೆಲದಲ್ಲಿ ಇದು ಅವರ ಕೊನೆಯ ಟೆಸ್ಟ್ ಆಗಿದೆ.

ಕೊಹ್ಲಿಯಿಂದ ಬ್ಯಾಟ್ ಉಡುಗೊರೆ

ಕಾನ್ಪುರ ಟೆಸ್ಟ್‌ನಲ್ಲಿ ಭಾರತ 7 ವಿಕೆಟ್‌ಗಳಿಂದ ಬಾಂಗ್ಲಾದೇಶ ತಂಡವನ್ನು ಸೋಲಿಸಿತು. ಈ ಟೆಸ್ಟ್ ಪಂದ್ಯದ ಅಂತ್ಯದ ನಂತರ, ವಿರಾಟ್ ಕೊಹ್ಲಿ ತಮ್ಮ ಬ್ಯಾಟ್ ಅನ್ನು ಶಕೀಬ್ ಅಲ್ ಹಸನ್‌ಗೆ ಉಡುಗೊರೆಯಾಗಿ ನೀಡಿದರು. ಇದರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ವಿರಾಟ್ ತಮ್ಮ ಸಹಿ ಮಾಡಿದ ಬ್ಯಾಟ್ ಅನ್ನು ಶಕೀಬ್‌ಗೆ ಉಡುಗೊರೆಯಾಗಿ ನೀಡಿದರು.

ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಶಕೀಬ್ ಸಾಧನೆ

ಶಕೀಬ್ ಅಲ್ ಹಸನ್ ಬಾಂಗ್ಲಾದೇಶ ವಿರುದ್ಧದ 2 ಟೆಸ್ಟ್‌ಗಳ 4 ಇನ್ನಿಂಗ್ಸ್‌ಗಳಲ್ಲಿ 66 ರನ್ ಗಳಿಸಿದರು. ಇದರಲ್ಲಿ 32 ರನ್ ಅವರ ಗರಿಷ್ಠ ಸ್ಕೋರ್ ಆಗಿತ್ತು. ಬೌಲಿಂಗ್​ನಲ್ಲಿ 4 ವಿಕೆಟ್ ಪಡೆದರು. ಈ ಸರಣಿಯು ಶಕೀಬ್‌ಗೆ ಉತ್ತಮವಾಗಿರಲಿಲ್ಲ. ಅತ್ತ ವಿರಾಟ್ ಕೊಹ್ಲಿ ಕೂಡ ಈ ಟೆಸ್ಟ್ ಚೆನ್ನಾಗಿ ಆಗಲಿಲ್ಲ. ಇವರು 4 ಇನ್ನಿಂಗ್ಸ್‌ಗಳಲ್ಲಿ 100 ರನ್ ಗಳಿಸಿದ್ದರಷ್ಟೆ.

ಗಂಭೀರ್-ರೋಹಿತ್ ಮಾಸ್ಟರ್ ಪ್ಲಾನ್

ಕಾನ್ಪುರದಲ್ಲಿ ಭಾರತ ತಂಡದ ಗೆಲುವಿಗೆ ನಾಯಕ ರೋಹಿತ್ ಶರ್ಮಾ ಮತ್ತು ಗೌತಮ್ ಗಂಭೀರ್ ಮಾಡಿದ ಮಾಸ್ಟರ್ ಪ್ಲಾನ್ ಕಾರಣ. ವಾಸ್ತವವಾಗಿ, ಪಂದ್ಯದ ಮೊದಲ ದಿನವೂ ಮಳೆಯು ಆಟಕ್ಕೆ ಅಡ್ಡಿಪಡಿಸಿತು. ಕೇವಲ 35 ಓವರ್‌ಗಳನ್ನು ಮಾತ್ರ ಆಡಲು ಸಾಧ್ಯವಾಯಿತು. ಇದಾದ ಬಳಿಕ ಮಳೆ ಹಾಗೂ ಮೈದಾನ ಒದ್ದೆಯಾಗಿದ್ದ ಕಾರಣ ಎರಡು ಮತ್ತು ಮೂರನೇ ದಿನ ಒಂದೇ ಒಂದು ಚೆಂಡನ್ನು ಎಸೆಯಲಾಗಲಿಲ್ಲ. ಹೀಗಾಗಿ ಈ ಪಂದ್ಯ ಡ್ರಾ ಆಗಲಿದ್ದು, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಪಾಯಿಂಟ್ಸ್ ಪಟ್ಟಿಯಲ್ಲಿ ಟೀಮ್ ಇಂಡಿಯಾ ಕುಸಿಯಲಿದೆ ಎಂದೇ ನಂಬಲಾಗಿತ್ತು.

ಆದರೆ ಗಂಭೀರ್-ರೋಹಿತ್ ವಿಭಿನ್ನ ಪ್ಲಾನ್ ಮಾಡಿದರು. ಆಕ್ರಮಣಕಾರಿ ಕ್ರಿಕೆಟ್ ಆಡುವ ಮೂಲಕ ಪಂದ್ಯವನ್ನು ಗೆಲ್ಲಲು ನಿರ್ಧರಿಸಿದ್ದಾರೆ. ಭಾರತ ತಂಡದ ಬ್ಯಾಟ್ಸ್‌ಮನ್‌ಗಳು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 50, 100, 150, 200 ಮತ್ತು 250 ರ ವೇಗದ ರನ್ ಗಳಿಸುವ ಮೂಲಕ ಪಂದ್ಯವನ್ನು ಗೆಲ್ಲಲು ಏನು ಮಾಡಬಹುದು ಎಂಬುದನ್ನು ತೋರಿಸಿದರು. ಇದಾದ ಬಳಿಕ ಟೀಮ್ ಇಂಡಿಯಾ ಬೌಲಿಂಗ್​ನಲ್ಲೂ ಯಶಸ್ಸು ಕಂಡು ಅದ್ಭುತ ಕಯ ಕಂಡಿತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ