logo
ಕನ್ನಡ ಸುದ್ದಿ  /  ಕ್ರಿಕೆಟ್  /  ಸರ್ಫರಾಜ್ Vs ಪಾಟೀದಾರ್ Vs ಸುಂದರ್; ಕೊಹ್ಲಿ-ಜಡೇಜಾ ಸ್ಥಾನಕ್ಕೆ ಯಾರು? ಎರಡನೇ ಟೆಸ್ಟ್‌ಗೆ 4 ಗೊಂದಲ

ಸರ್ಫರಾಜ್ vs ಪಾಟೀದಾರ್ vs ಸುಂದರ್; ಕೊಹ್ಲಿ-ಜಡೇಜಾ ಸ್ಥಾನಕ್ಕೆ ಯಾರು? ಎರಡನೇ ಟೆಸ್ಟ್‌ಗೆ 4 ಗೊಂದಲ

Prasanna Kumar P N HT Kannada

Jan 31, 2024 07:57 AM IST

google News

ರಜತ್ ಪಾಟೀದಾರ್​, ವಾಷಿಂಗ್ಟನ್ ಸುಂದರ್, ಸರ್ಫರಾಜ್ ಖಾನ್.

    • India vs England 2nd Test: ರವೀಂದ್ರ ಜಡೇಜಾ ಮತ್ತು ಕೆಎಲ್ ರಾಹುಲ್ ಹೊರಗುಳಿದ ನಂತರ ಇಂಗ್ಲೆಂಡ್​ ವಿರುದ್ಧದ 2ನೇ ಟೆಸ್ಟ್​ಗೆ​ ಆಯ್ಕೆ ಮಾಡುವ ಬಗ್ಗೆ ಭಾರತ ತಂಡಕ್ಕೆ ಗೊಂದಲ ಏರ್ಪಟ್ಟಿದೆ. ಸರ್ಫರಾಜ್ ಖಾನ್ ಮತ್ತು ರಜತ್ ಪಾಟೀದಾರ್ ನಡುವೆ ದೊಡ್ಡ ಪೈಪೋಟಿ ನಡೆಯಲಿದೆ. ವಿರಾಟ್ ಕೊಹ್ಲಿ ಸ್ಥಾನಕ್ಕೆ ಸೂಕ್ತ ಯಾರು?
ರಜತ್ ಪಾಟೀದಾರ್​, ವಾಷಿಂಗ್ಟನ್ ಸುಂದರ್, ಸರ್ಫರಾಜ್ ಖಾನ್.
ರಜತ್ ಪಾಟೀದಾರ್​, ವಾಷಿಂಗ್ಟನ್ ಸುಂದರ್, ಸರ್ಫರಾಜ್ ಖಾನ್.

ಹೈದರಾಬಾದ್​​ನಲ್ಲಿ ನಡೆದ ಮೊದಲ ಟೆಸ್ಟ್​​ನಲ್ಲಿ 28 ರನ್​ಗಳಿಂದ ಸೋತ ನಂತರ ಟೀಮ್​ ಇಂಡಿಯಾ ಗೊಂದಲಕ್ಕೆ ಸಿಲುಕಿದೆ. ಫೆಬ್ರವರಿ 2ರಂದು ವಿಶಾಖಪಟ್ಟಣದಲ್ಲಿ ನಡೆಯುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಿಂದ ಆಲ್​ರೌಂಡರ್​ ರವೀಂದ್ರ ಜಡೇಜಾ ಮತ್ತು ಬ್ಯಾಟ್ಸ್​ಮನ್​ ಕೆಎಲ್ ರಾಹುಲ್ ಹೊರಗುಳಿದಿರುವುದು ಟೀಮ್ ಮ್ಯಾನೇಜ್ಮೆಂಟ್ ಟೆನ್ಶನ್ ಹೆಚ್ಚಿಸಿದೆ. ಈಗಾಗಲೇ ಮೂವರು ಆಟಗಾರರು ತಂಡವನ್ನು ಕೂಡಿದ್ದು, ಹೊರ ಬಿದ್ದ ಆಟಗಾರರ ಸ್ಥಾನವನ್ನು ತುಂಬಲು ಯಾರು ಸೂಕ್ತ ಎಂಬ ಗೊಂದಲ ಉಂಟಾಗಿದೆ.

ವಿರಾಟ್​ ಕೊಹ್ಲಿ, ಮೊಹಮ್ಮದ್ ಶಮಿ ಸಹ ತಂಡದ ಭಾಗವಾಗಿಲ್ಲ. ಈ ನಡುವೆ ಪ್ರಮುಖ ಆಟಗಾರರು ಗಾಯಗೊಂಡಿದ್ದಾರೆ. ಈಗಾಗಲೇ ಮೊದಲ ಪಂದ್ಯ ಸೋತಿದೆ. ಹೀಗಿರುವಾಗ ಸಹಜವಾಗಿ ಟೀಮ್ ಮ್ಯಾನೇಜ್​ಮೆಂಟ್​ಗೆ ಗೊಂದಲ ಹೆಚ್ಚಾಗುತ್ತದೆ. ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಪ್ಲೇಯಿಂಗ್ ಇಲೆವೆನ್ ಬಗ್ಗೆ 4 ಪ್ರಮುಖ ಅಂಶಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿದ್ದಾರೆ. ಎರಡನೇ ಟೆಸ್ಟ್​ಗೂ ಮುನ್ನ ಕಾಡುತ್ತಿರುವ ಪ್ರಮುಖ ಗೊಂದಲಗಳು ಯಾವುವು? ಇಲ್ಲಿದೆ ವಿವರ ನೋಡೋಣ.

ಕೊಹ್ಲಿ ಬದಲಿ ಸ್ಥಾನಕ್ಕೆ ಯಾರು?

ರೋಹಿತ್ ಶರ್ಮಾ ನಂತರ ಭಾರತ ತಂಡಕ್ಕೆ ಬೇರೆ ಯಾವುದೇ ಅನುಭವಿ ಬ್ಯಾಟ್ಸ್​​ಮನ್​ ಇಲ್ಲದಿರುವ ಕಾರಣ ಈ ವಿಷಯ ಅತ್ಯಂತ ನಿರ್ಣಾಯಕವಾಗಿದೆ. ಮೊದಲ ಟೆಸ್ಟ್​ನಲ್ಲಿ ಕೊಹ್ಲಿ ನಾಲ್ಕನೇ ಕ್ರಮಾಂಕವನ್ನು ತುಂಬಿದ್ದ ರಾಹುಲ್ 86 ರನ್ ಗಳಿಸಿದ್ದರು. ಆದರೀಗ ಅವರು ಗಾಯಗೊಂಡಿರುವ ಕಾರಣ ಶ್ರೇಯಸ್ ಅಯ್ಯರ್ ಅವರನ್ನು ಈ ಸ್ಥಾನದಲ್ಲಿ ಆಡಿಸುವ ಸಾಧ್ಯತೆ ಇದೆ. ಸ್ಪಿನ್ನರ್ಸ್ ವಿರುದ್ಧ ಅಯ್ಯರ್ ಅದ್ಧುತ ಪ್ರದರ್ಶನ ನೀಡುತ್ತಾರೆ ಎಂದು ಮ್ಯಾನೇಜ್​ಮೆಂಟ್ ನಂಬುತ್ತದೆ. ಅಲ್ಲದೆ, ಬೇರೆ ಆಯ್ಕೆಗೂ ಇಲ್ಲ.

ಶುಭ್ಮನ್ ಗಿಲ್ ಮುಂದುವರಿಯುತ್ತಾರೆಯೇ?

ಕೊಹ್ಲಿಯ ಉತ್ತರಾಧಿಕಾರಿ ಮತ್ತು ಭಾರತೀಯ ಕ್ರಿಕೆಟ್​ನ ಮುಂದಿನ ಸೂಪರ್​ಸ್ಟಾರ್​ ಎಂದು ಕರೆಸಿಕೊಳ್ಳುವ ಶುಭ್ಮನ್ ಗಿಲ್, ಸದ್ಯ ರೆಡ್​ಬಾಲ್​ನಲ್ಲಿ ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ಹೈದರಾಬಾದ್​ ಟೆಸ್ಟ್​ನ 2 ಇನ್ನಿಂಗ್ಸ್​ಗಳಲ್ಲಿ 23 ಮತ್ತು 0 ರನ್ ಗಳಿಸಿದ್ದರು. ಭಾರತಕ್ಕೆ ಆಯ್ಕೆಗಳ ಕೊರತೆ ಇರುವುದರಿಂದ, ಗಿಲ್ ಬಹುಶಃ ವೈಜಾಗ್ ಟೆಸ್ಟ್​​​ನಲ್ಲಿ ಆಡುವುದು ಖಚಿತ. ರಾಹುಲ್ ಮತ್ತು ಕೊಹ್ಲಿ ತಂಡಕ್ಕೆ ಮರಳಿದರೆ ಉಳಿದ ಟೆಸ್ಟ್​ಗಳಲ್ಲಿ ಅವಕಾಶ ಸಿಗುವುದು ಮರೀಚಿಕೆಯಾಗಬಹುದು.

ಸರ್ಫರಾಜ್ ಖಾನ್ vs ರಜತ್ ಪಾಟೀದಾರ್

ಕೆಲವು ವರ್ಷಗಳಿಂದ ದೇಶೀಯ ಕ್ರಿಕೆಟ್​ನಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಿರುವ ಸರ್ಫರಾಜ್ ಖಾನ್​ ಕೊನೆಗೂ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕಳೆದ ವಾರ ಭಾರತ ಎ ಮತ್ತು ಇಂಗ್ಲೆಂಡ್ ಲಯನ್ಸ್ ನಡುವಿನ ಅನಧಿಕೃತ 4 ದಿನಗಳ ಟೆಸ್ಟ್​ನಲ್ಲೂ ಆತ 161 ಎಸೆತಗಳಲ್ಲಿ 160 ರನ್ ಗಳಿಸಿದ್ದರು. ಅಲ್ಲದೆ, ಅದಕ್ಕೂ ಹಿಂದಿನ ಟೆಸ್ಟ್​ನಲ್ಲಿ 96 ರನ್ ಸಿಡಿಸಿದ್ದರು. ಮತ್ತೊಂದೆಡೆ ರಜತ್ ಪಾಟೀದಾರ್ ಕೂಡ ಅದೇ ರೀತಿ ಫಾರ್ಮ್​ನಲ್ಲಿದ್ದು, ಆಯ್ಕೆಯ ಪೈಪೋಟಿಯಲ್ಲಿದ್ದಾರೆ. ತಾನು ಕೂಡ ಸಮರ್ಥ ಎನ್ನುತ್ತಿದ್ದಾರೆ.

ಕೊಹ್ಲಿ ಬದಲಿ ಆಟಗಾರನಾಗಿ ಸೇರಿಕೊಂಡ ಪಾಟೀದಾರ್​ ಮತ್ತು ಸರ್ಫರಾಜ್​ ನಡುವೆ ಯಾರಿಗೆ ಮಣೆ ಹಾಕಬೇಕೆಂಬ ಗೊಂದಲ ಹೆಚ್ಚಾಗಿದೆ. ಸದ್ಯ ಮೊದಲ ಆಯ್ಕೆ ಇರುವುದು ರಜತ್ ಪಾಟೀದಾರ್ ಎಂದು ಹೇಳಲಾಗುತ್ತಿದೆ. ಕೊಹ್ಲಿ ಸ್ಥಾನ ತುಂಬಿದ್ದ ರಾಹುಲ್ ಇಲ್ಲದ ಕಾರಣ ಈ ಇಬ್ಬರಲ್ಲಿ ಒಬ್ಬರಿಗೆ ಮಣೆ ಹಾಕುವುದು ಖಚಿತ. ಇಂಗ್ಲೆಂಡ್​​ನಂತೆ ಭಾರತ ಒಬ್ಬ ವೇಗದ ಬೌಲರ್ ಆಯ್ಕೆ ಮಾಡಿದರೆ, ಬಹುಶಃ 2 ಇನ್ನಿಂಗ್ಸ್​ಗಳಲ್ಲಿ 11 ಓವರ್​ ಎಸೆದ ಸಿರಾಜ್​ಗೆ ವಿಶ್ರಾಂತಿ ನೀಡಿ ಕುಲ್ದೀಪ್​ಗೆ ಸ್ಥಾನ ನೀಡಬಹುದು.

ರವೀಂದ್ರ ಜಡೇಜಾ ಸ್ಥಾನ ತುಂಬುವವರು ಯಾರು?

2ನೇ ಟೆಸ್ಟ್​​ನಲ್ಲಿ ರವೀಂದ್ರ ಜಡೇಜಾ ಬದಲಿಗೆ ಯಾರನ್ನಾಡಿಸಬೇಕೆಂಬುದು ಭಾರತಕ್ಕೆ ಕಾಡುತ್ತಿರುವ ಪ್ರಮುಖ ಚಿಂತೆಯಾಗಿದೆ. 2016 ರಿಂದೀಚೆಗೆ ಟೆಸ್ಟ್ ಕ್ರಿಕೆಟ್​​ನಲ್ಲಿ 53 ಪಂದ್ಯಗಳಲ್ಲಿ ಬ್ಯಾಟ್​​ನೊಂದಿಗೆ 40ಕ್ಕಿಂತ ಹೆಚ್ಚು ಮತ್ತು ಚೆಂಡಿನೊಂದಿಗೆ 25ಕ್ಕಿಂತ ಕಡಿಮೆ ಸರಾಸರಿ ಹೊಂದಿರುವ ಜಡ್ಡು ಬದಲಿಗೆ ವಾಷಿಂಗ್ಟನ್ ಕಣಕ್ಕಿಳಿಯುವ ಸಾಧ್ಯತೆ ಇದೆ. ಅಷ್ಟೇ ಅಲ್ಲ, ಸೌರಭ್ ಕುಮಾರ್ ಸಹ ಈ ಪೈಪೋಟಿಯಲ್ಲಿದ್ದಾರೆ. ಇಂಗ್ಲೆಂಡ್ ಲಯನ್ಸ್ ವಿರುದ್ಧ ಅಬ್ಬರಿಸಿದ್ದ ಸೌರಭ್ 5 ವಿಕೆಟ್ ಉರುಳಿಸಿದ್ದರು. ಬ್ಯಾಟಿಂಗ್​ನಲ್ಲೂ ಕಾಣಿಕೆ ನೀಡುತ್ತಾರೆ. ಆದರೆ ಯಾರಿಗೆಲ್ಲಾ ಅವಕಾಶ ಸಿಗುತ್ತದೆ ಎಂಬುದೇ ಸದ್ಯ ಕುತೂಹಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ