logo
ಕನ್ನಡ ಸುದ್ದಿ  /  ಕ್ರಿಕೆಟ್  /  ಏಕದಿನ ವಿಶ್ವಕಪ್ ಸೋತಿದ್ದೇ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್​ ಅವರಿಂದ; ವೀರೇಂದ್ರ ಸೆಹ್ವಾಗ್ ಗಂಭೀರ ಆರೋಪ

ಏಕದಿನ ವಿಶ್ವಕಪ್ ಸೋತಿದ್ದೇ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್​ ಅವರಿಂದ; ವೀರೇಂದ್ರ ಸೆಹ್ವಾಗ್ ಗಂಭೀರ ಆರೋಪ

Prasanna Kumar P N HT Kannada

May 09, 2024 05:50 PM IST

ಏಕದಿನ ವಿಶ್ವಕಪ್ ಸೋತಿದ್ದೇ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್​ ಅವರಿಂದ; ವೀರೇಂದ್ರ ಸೆಹ್ವಾಗ್ ಗಂಭೀರ ಆರೋಪ

    • Virender Sehwag : ಏಕದಿನ ವಿಶ್ವಕಪ್ 2023 ಟೂರ್ನಿಯಲ್ಲಿ ಟೀಮ್ ಇಂಡಿಯಾ ಸೋಲಿಗೆ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಕಾರಣ ಎಂದು ವೀರೇಂದ್ರ ಸೆಹ್ವಾಗ್ ಆರೋಪ ಮಾಡಿದ್ದಾರೆ.
ಏಕದಿನ ವಿಶ್ವಕಪ್ ಸೋತಿದ್ದೇ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್​ ಅವರಿಂದ; ವೀರೇಂದ್ರ ಸೆಹ್ವಾಗ್ ಗಂಭೀರ ಆರೋಪ
ಏಕದಿನ ವಿಶ್ವಕಪ್ ಸೋತಿದ್ದೇ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್​ ಅವರಿಂದ; ವೀರೇಂದ್ರ ಸೆಹ್ವಾಗ್ ಗಂಭೀರ ಆರೋಪ

ಭಾರತದಲ್ಲಿ ನಡೆದ 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ (ODI World Cup 2023) ಒಂದು ಪಂದ್ಯವನ್ನೂ ಸೋಲುನುಭವಿಸದೆ ಸತತ 10 ಪಂದ್ಯಗಳಲ್ಲಿ ಜಯಿಸಿ ಟೀಮ್ ಇಂಡಿಯಾ (Team India) ಫೈನಲ್ ಪ್ರವೇಶಿಸಿತ್ತು. ಆದರೆ, ಪ್ರಶಸ್ತಿ ಸುತ್ತಿನ ಫೈಟ್​ನಲ್ಲಿ ಆಸ್ಟ್ರೇಲಿಯಾ (Australia) ವಿರುದ್ಧ ಸೋತು 2013ರ ನಂತರ ಟ್ರೋಫಿ ಜಯಿಸುವಲ್ಲಿ ವಿಫಲವಾಗಿತ್ತು. ಈ ಪರಾಜಯ ಕ್ರಿಕೆಟ್ ಅಭಿಮಾನಿಗಳಿಗೆ ಈಗಲೂ ಕಾಡುತ್ತಿದೆ. ಆದರೆ, ರೋಹಿತ್​ ಶರ್ಮಾ (Rohit Sharma) ನೇತೃತ್ವದ ತಂಡದ ಸೋಲಿಗೆ ಕಾರಣ ಯಾರೆಂದು ಸ್ಫೋಟಕ ಆರಂಭಿಕ ವೀರೇಂದ್ರ ಸೆಹ್ವಾಗ್​ (Virender Sehwag) ಬಹಿರಂಪಡಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಆರ್‌ಸಿಬಿ vs ಆರ್‌ಆರ್‌, ಕೆಕೆಆರ್‌ vs ಎಸ್‌ಆರ್‌ಎಚ್‌ ಪ್ಲೇಆಫ್‌ ಪಂದ್ಯಗಳಿಗೆ ಮಳೆ ಆತಂಕ ಇದೆಯಾ? ಅಹಮದಾಬಾದ್‌ ಹವಾಮಾನ ವರದಿ ಹೀಗಿದೆ

RCB vs RR: ಒಂದೂ ಸೋಲದ ಮತ್ತು ಒಂದೂ ಗೆಲ್ಲದ ತಂಡಗಳ ನಡುವೆ ಎಲಿಮಿನೇಟರ್ ಫೈಟ್; ಯಾರ ಕೈ ಹಿಡಿಯುತ್ತೆ ಅದೃಷ್ಟ?

ಸಿಎಸ್​ಕೆ ನಿಮಗೊಂದು ಕಪ್ ಕೊಡುತ್ತೆ, ಮೆರವಣಿಗೆ ಮಾಡಿ; ಆರ್​ಸಿಬಿ ತಂಡವನ್ನು ಅಣಕಿಸಿದ ಅಂಬಾಟಿ ರಾಯುಡು

ಐಪಿಎಲ್ ಪ್ಲೇಆಫ್ ಪಂದ್ಯಗಳ ವೇಳಾಪಟ್ಟಿ; ಕ್ವಾಲಿಫೈಯರ್ -1, ಎಲಿಮಿನೇಟರ್ ಎಲ್ಲಿ, ಯಾವಾಗ, ಎಷ್ಟೊತ್ತಿಗೆ? ಇಲ್ಲಿದೆ ವಿವರ

ಅಹ್ಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ ನಿಗದಿತ 50 ಓವರ್​​​ಗಳಲ್ಲಿ 240 ರನ್​​ಗಳಿಗೆ ಆಲೌಟ್​ ಆಗಿತ್ತು. ವಿರಾಟ್ ಕೊಹ್ಲಿ 54 ರನ್, ಕೆಎಲ್ ರಾಹುಲ್ 66 ರನ್ ಗಳಿಸಿದ್ದರು. ಆದರೆ ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 43 ಓವರ್​​ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಗುರಿ ಬೆನ್ನಟ್ಟಿತು. ಟ್ರಾವಿಸ್ ಹೆಡ್ 137 ರನ್ ಮತ್ತು ಮಾರ್ನಸ್ ಲಬುಶೇನ್ 58 ರನ್ ಗಳಿಸಿದರು. ಇದರೊಂದಿಗೆ ಆಸೀಸ್​ ಮತ್ತೊಮ್ಮೆ ವಿಶ್ವಕಪ್ ಗೆದ್ದಿತು.

ಕೊಹ್ಲಿ-ರಾಹುಲ್ ನಿಧಾನವಾಗಿ ಆಡಿದರು ಎಂದ ಸೆಹ್ವಾಗ್

ಏಕದಿನ ವಿಶ್ವಕಪ್ ಮುಕ್ತಾಯಗೊಂಡು ಆರು ತಿಂಗಳ ನಂತರ ಫೈನಲ್ ಪಂದ್ಯದ ಸೋಲಿಗೆ ಕಾರಣ ಏನೆಂಬುದನ್ನು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ತಿಳಿಸಿದ್ದಾರೆ. ಫೈನಲ್​ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ 11 ರಿಂದ 40 ಓವರ್​​​ಗಳ ಮಧ್ಯೆ ಒತ್ತಡ ಮುಕ್ತರಾಗಿ, ನಿರ್ಭೀತವಾಗಿ ಬ್ಯಾಟಿಂಗ್ ನಡೆಸದೆ ಇರುವುದೇ ಟೀಮ್ ಇಂಡಿಯಾ ಸೋಲಿಗೆ ಪ್ರಮುಖ ಕಾರಣ ಎಂದು ಪರೋಕ್ಷವಾಗಿ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಬ್ಯಾಟಿಂಗ್ ವಿರುದ್ಧ ವೀರು ಗಂಭೀರ ಆರೋಪ ಮಾಡಿದ್ದಾರೆ.

ಕೊಹ್ಲಿ ಮತ್ತು ರಾಹುಲ್ ಅವರು ಮಧ್ಯಮ ಓವರ್​ಗಳಲ್ಲಿ ನಿಧಾನವಾಗಿ ಬ್ಯಾಟಿಂಗ್ ನಡೆಸಿದ್ದರು. ಸತತ ವಿಕೆಟ್​ಗಳನ್ನು ಕಳೆದುಕೊಂಡ ಕಾರಣ ಈ ಜೋಡಿ ಸ್ಲೋ ಬ್ಯಾಟಿಂಗ್ ನಡೆಸಿದ್ದರು. ವಿರಾಟ್ 63 ಎಸೆತಗಳಲ್ಲಿ 4 ಬೌಂಡರಿ ಸಹಿತ 54 ರನ್ ಗಳಿಸಿದ್ದರು. ಕೊಹ್ಲಿ ಆಟ ಪರವಾಗಿಲ್ಲ ಎನಿಸಿದರೂ ರಾಹುಲ್ ಬ್ಯಾಟಿಂಗ್ ತೀರಾ ನಿಧಾನವಾಗಿತ್ತು. 107 ಎಸೆತಗಳಲ್ಲಿ 66 ರನ್ ಸಿಡಿಸಿದ್ದರು. ಅವರ ಇನ್ನಿಂಗ್ಸ್​​ನಲ್ಲಿ ಇದ್ದಿದ್ದೇ ಒಂದೇ ಒಂದು ಬೌಂಡರಿ ಇತ್ತು. ಇದೇ ಕಾರಣಕ್ಕಾಗಿ ಸೆಹ್ವಾಗ್​ ಈ ಇಬ್ಬರನ್ನೂ ಟೀಕಿಸಿದ್ದಾರೆ.

ಪ್ರತಿ ಪಂದ್ಯವನ್ನೂ ನಾಕೌಟ್​ನಂತೆ ಆಡಬೇಕು ಎಂದ ಮಾಜಿ ಕ್ರಿಕೆಟಿಗ

2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ಕ್ರಿಕೆಟ್ ವಿಶ್ವಕಪ್​ನಲ್ಲಿ ನಾವು ಪ್ರತಿ ಪಂದ್ಯವನ್ನೂ ನಾಕೌಟ್​ ಪಂದ್ಯ ಎನ್ನುವಂತೆ ಆಡಿದ್ದೆವು. ಇದೇ ಕಾರಣಕ್ಕೆ ನಾವು ಎರಡೂ ವಿಶ್ವಕಪ್​ಗಳನ್ನು ಗೆದ್ದಿದ್ದೆವು. ಆದರೆ ಫೈನಲ್​​ನಲ್ಲಿ 11 ಮತ್ತು 40ನೇ ಓವರ್​​​ನಲ್ಲಿ ಯಾರೂ ನಿರ್ಭೀತ ಕ್ರಿಕೆಟ್ ಆಡಲಿಲ್ಲ; ಕೇವಲ 1 ಅಥವಾ 2 ಬೌಂಡರಿಗಳನ್ನಷ್ಟೇ ಸಿಡಿಸಿದ್ದೇವೆ. ಕೊಹ್ಲಿ ಮತ್ತು ರಾಹುಲ್ ಸ್ಟ್ರೈಕ್​ರೇಟ್​ ಸುಧಾರಿಸಬೇಕಿತ್ತು. ಆಕ್ರಮಣಕಾರಿ ಆಟವನ್ನು ಆಡಬೇಕಿತ್ತು ಎಂದು ಹೇಳಿದ್ದಾರೆ.

ನಾಕೌಟ್ ಪಂದ್ಯಕ್ಕೆ ಹೋದಾಗ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್​ನಲ್ಲಿ ನಿರ್ಭಯವಾಗಿ, ಧೈರ್ಯದ ಮನಸ್ಥಿತಿ ಬೇಕು ಎಂದು ನಾನು ಭಾವಿಸುತ್ತೇನೆ. ಆದರೆ, ಫೈನಲ್​​ನಲ್ಲಿ ಆಡಿದ್ದು ಭಯಭೀತರಾಗಿ ಆಡಿದ್ದರು. ಆತ್ಮವಿಶ್ವಾಸದ ಕೊರತೆ ಕಾಡುತ್ತಿತ್ತು ಎಂದು ನಾನು ಭಾವಿಸುತ್ತೇನೆ. ಆಟಗಾರರು ಪ್ರತಿಯೊಂದು ಪಂದ್ಯವನ್ನು ನಾಕೌಟ್ ಪಂದ್ಯವನ್ನಾಗಿ ಪರಿಗಣಿಸಬೇಕು. ಅದಕ್ಕೆ ತಕ್ಕಂತೆ ಮನಸ್ಸನ್ನು ಹೊಂದಿಸಿಕೊಳ್ಳಬೇಕು ಎಂದು ಟಿ20 ವಿಶ್ವಕಪ್​ ಟೂರ್ನಿಗೂ ಮುನ್ನ ಸೆಹ್ವಾಗ್ ಸಲಹೆ ನೀಡಿದ್ದಾರೆ. ವೀರು ನೀಡಿರುವ ಹೇಳಿಕೆಯ ವಿಡಿಯೋ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ