ಐಪಿಎಲ್ 2025 ಆಟಗಾರರ ಖರೀದಿ ಮೇಳದಲ್ಲಿ ಆರ್ಸಿಬಿ ಟಾರ್ಗೆಟ್ ಮಾಡಬೇಕಾದ ಕ್ರಿಕೆಟರ್ಸ್ ಯಾರು? ಇಲ್ಲಿದೆ ವಿವರ
Nov 18, 2024 09:48 AM IST
ಐಪಿಎಲ್ 2025 ಆಟಗಾರರ ಖರೀದಿ ಮೇಳದಲ್ಲಿ ಆರ್ಸಿಬಿ ಟಾರ್ಗೆಟ್ ಮಾಡಬೇಕಾದ ಕ್ರಿಕೆಟರ್ಸ್ ಯಾರು? ಇಲ್ಲಿದೆ ವಿವರ
- RCB Target: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಬಳಿ ಉಳಿದಿರುವ 83 ಕೋಟಿ ಪರ್ಸ್ನಲ್ಲಿ ಐಪಿಎಲ್ 2025 ಮೆಗಾ ಹರಾಜಿನಲ್ಲಿ ಟಾರ್ಗೆಟ್ ಮಾಡಬೇಕಾದ ಆಟಗಾರರು ಯಾರು? ಇಲ್ಲಿದೆ ವಿವರ.
ಇಂಡಿಯನ್ ಪ್ರೀಮಿಯರ್ ಲೀಗ್ 2025 ಮೆಗಾ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 37 ಕೋಟಿ ಕೊಟ್ಟು ಮೂವರು ಆಟಗಾರರನ್ನು ಉಳಿಸಿಕೊಂಡಿದೆ. ಇದರೊಂದಿಗೆ 120 ಕೋಟಿ ಪರ್ಸ್ನಲ್ಲಿ ಇನ್ನೂ 83 ಕೋಟಿ ಉಳಿದಿದೆ. ಆದರೆ ಆರ್ಸಿಬಿ ಹರಾಜಿಗೆ ಬರುವುದಕ್ಕೂ ಮುನ್ನ ಆರ್ಸಿಬಿ ತಂತ್ರಗಳು ಹೇಗಿವೆ, ಖರೀದಿಸಲು ಆರ್ಸಿಬಿ ಟಾರ್ಗೆಟ್ ಮಾಡುವ ಕ್ರಿಕೆಟರ್ಸ್ ಯಾರು? ಕರ್ನಾಟಕ ಸರ್ಕಾರದಿಂದ ಒತ್ತಡ ಇರೋದ್ಯಾಕೆ? ಇಲ್ಲಿದೆ ವಿವರ.
ಆರ್ಸಿಬಿ ಪ್ರತಿ ವರ್ಷದಂತೆ ಈ ಬಾರಿ ತಪ್ಪುಗಳನ್ನು ಮಾಡಬಾರದು. ಬ್ಯಾಟಿಂಗ್ನಲ್ಲಿ ಘಟಾನುಘಟಿ ಆಟಗಾರರನ್ನೇ ಖರೀದಿಸುವ ಆರ್ಸಿಬಿ, ಬೌಲಿಂಗ್ ವಿಚಾರಕ್ಕೆ ಬಂದಾಗ ಅನಾನುಭವಿಗಳನ್ನೇ ಖರೀದಿಸುವ ಮೂಲಕ ಟೀಕೆಗೆ ಗುರಿಯಾಗುತ್ತದೆ. ಹಾಗಾಗಿ ಎರಡು ವಿಭಾಗಗಳಲ್ಲಿ ಸಮತೋಲನ ಕಾಯ್ದುಕೊಳ್ಳಬೇಕು. ಅನುಭವಿಗಳು, ಯುವ ಆಟಗಾರರ ಮಿಶ್ರಣದಿಂದ ಕೂಡಿರಬೇಕು. ಹಲವು ವರ್ಷಗಳಿಂದ ಬೌಲಿಂಗ್ನಲ್ಲಿ ಸಮಸ್ಯೆ ಎದುರಿಸುತ್ತಿದೆ. ಹೀಗಾಗಿ ಆ ವಿಭಾಗಕ್ಕೆ ಹೆಚ್ಚು ಒತ್ತು ನೀಡಬೇಕು ಆರಂಭಿಕರಿಂದ ಹಿಡಿದು 11ನೇ ಆಟಗಾರನ ತನಕ ತಂಡವನ್ನು ರಕ್ಷಿಸುವವರಾಗಿರಬೇಕು. ಆರ್ಸಿಬಿ ಟಾರ್ಗೆಟ್ ಮಾಡಬೇಕಾದ ಪಾತ್ರಗಳು ಯಾವುವು? ಇಲ್ಲಿದೆ ವಿವರ.
ರೋಲ್ ನಂಬರ್ 1: ಆರಂಭಿಕ ಆಟಗಾರ, ಮೇಲಾಗಿ ಸ್ಪಿನ್ ವಿರುದ್ಧ ಉತ್ತಮವಾಗಿ ಆಡಬೇಕು. ಅವರು ವಿಕೆಟ್ ಕೀಪರ್ ಆಗಿದ್ದರೆ ಬೋನಸ್. ಅಂತಹವರ ಪೈಕಿ 6 ಆಟಗಾರರು ಉತ್ತಮ.
ಕೆಎಲ್ ರಾಹುಲ್
ಡೆವೊನ್ ಕಾನ್ವೆ
ಜಾನಿ ಬೈರ್ಸ್ಟೋ
ಡೇವಿಡ್ ವಾರ್ನರ್
ರಚಿನ್ ರವೀಂದ್ರ
ರಹಮಾನುಲ್ಲಾ ಗುರ್ಬಾಜ್
ಜೋಸ್ ಬಟ್ಲರ್
ಜೇಕ್ ಫ್ರೇಸರ್-ಮೆಕ್‌ಗುರ್ಕ್
ರೋಲ್ ನಂಬರ್ 2: ಮೂರನೇ ಅಥವಾ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಸ್ಪಿನ್ ಮತ್ತು ವೇಗದ ಬೌಲರ್ಸ್ ವಿರುದ್ಧ ಮಿಂಚಬೇಕು. ತಂಡಕ್ಕೆ ತಿರುವು ನೀಡುವವರಾಗಿರಬೇಕು.
ವಿಲ್ ಜ್ಯಾಕ್ಸ್
ಗ್ಲೆನ್ ಮ್ಯಾಕ್ಸ್ವೆಲ್
ರಿಲೀ ರೊಸ್ಸೌವ್
ಲಿಯಾಮ್ ಲಿವಿಂಗ್ಸ್ಟನ್
ಶ್ರೇಯಸ್ ಅಯ್ಯರ್
ಐಡೆನ್ ಮಾರ್ಕ್ರಾಮ್
ರೋಲ್ ನಂಬರ್ 3: 5ನೇ ಕ್ರಮಾಂಕ ಮತ್ತು ಆರನೇ ಕ್ರಮಾಂಕದಲ್ಲಿ ವೇಗಿಗಳ ವಿರುದ್ಧ ಅಬ್ಬರಿಸುವವರು ಬೇಕು. ಫಿನಿಷರ್ಗಳು.
ಡೇವಿಡ್ ಮಿಲ್ಲರ್
ಟಿಮ್ ಡೇವಿಡ್
ಶೆರ್ಫೇನ್ ರುದರ್‌ಫೋರ್ಡ್
ರೊಮಾರಿಯೋ ಶೆಫರ್ಡ್
ವಿಷ್ಣು ವಿನೋದ್
ಮಾರ್ಕಸ್ ಸ್ಟೊಯಿನಿಸ್
ರೋಲ್ ನಂಬರ್ 4: ಬ್ಯಾಟಿಂಗ್ ಜೊತೆಗೆ ಮಿಂಚುವ ಸ್ಪಿನ್ನರ್ಗಳು
ವಾಷಿಂಗ್ಟನ್ ಸುಂದರ್
ಹರ್‌ಪ್ರೀತ್ ಬ್ರಾರ್
ಕೃನಾಲ್ ಪಾಂಡ್ಯ
ಅಕೇಲ್ ಹೊಸೈನ್
ಕೇಶವ ಮಹಾರಾಜ್
ಶಹಬಾಜ್ ಅಹ್ಮದ್
ರೋಲ್ ನಂಬರ್ 5: ಒಬ್ಬ ನಿಜವಾದ ವಿಕೆಟ್-ಟೇಕರ್ ಒಬ್ಬ ಮಣಿಕಟ್ಟಿನ ಸ್ಪಿನ್ನರ್ ಬೇಕು.
ಯುಜ್ವೇಂದ್ರ ಚಹಲ್
ನೂರ್ ಅಹ್ಮದ್
ಮಹೇಶ್ ತೀಕ್ಷಣ
ಮಾಯಾಂಕ್ ಮಾರ್ಕಾಂಡೆ
ಸುಯಾಶ್ ಶರ್ಮಾ
ರೋಲ್ ನಂಬರ್ 6: ಮಧ್ಯಮ ಓವರ್‌ಗಳಲ್ಲಿ ಬೌಲಿಂಗ್ಗಳಲ್ಲಿ ವಿಕೆಟ್ ಪಡೆಯುವ ಬೌಲರ್ಗಳು.
ಅವೇಶ್ ಖಾನ್
ಪ್ರಸಿದ್ಧ್ ಕೃಷ್ಣ
ಜೋಶ್ ಹೇಜಲ್ವುಡ್
ಕುಲದೀಪ್ ಸೇನ್
ಯಶ್ ಠಾಕೂರ್
ರೋಲ್ ನಂಬರ್ 7: ಡೆತ್-ಓವರ್ಸ್ ಸ್ಪೆಷಲಿಸ್ಟ್. ಆರ್ಸಿಬಿಗೆ ಬೇಕಾದ ರೋಲ್ ಇದಾಗಿದೆ. ಕಳೆದ ಹಲವು ವರ್ಷಗಳಿಂದ ಇದೇ ಸಮಸ್ಯೆ ಎದುರಿಸಿ ಗೆಲ್ಲುವ ಪಂದ್ಯಗಳನ್ನು ಕೈಚೆಲ್ಲಿದೆ.
ಮೊಹಮ್ಮದ್ ಶಮಿ
ಹರ್ಷಲ್ ಪಟೇಲ್
ಮಿಚೆಲ್ ಸ್ಟಾರ್ಕ್
ಮುಸ್ತಫಿಜುರ್ ರೆಹಮಾನ್
ಟಿ ನಟರಾಜನ್
ಅರ್ಷದೀಪ್ ಸಿಂಗ್