ಐಪಿಎಲ್ 2025 ಮೆಗಾ ಹರಾಜಿನಲ್ಲಿರುವ ಕರ್ನಾಟಕದ 24 ಕ್ರಿಕೆಟಿಗರಿವರು; ಮೂವರಿಗೆ 2 ಕೋಟಿ, ಇಬ್ಬರಿಗೆ 1 ಕೋಟಿ ಮೂಲ ಬೆಲೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್ 2025 ಮೆಗಾ ಹರಾಜಿನಲ್ಲಿರುವ ಕರ್ನಾಟಕದ 24 ಕ್ರಿಕೆಟಿಗರಿವರು; ಮೂವರಿಗೆ 2 ಕೋಟಿ, ಇಬ್ಬರಿಗೆ 1 ಕೋಟಿ ಮೂಲ ಬೆಲೆ

ಐಪಿಎಲ್ 2025 ಮೆಗಾ ಹರಾಜಿನಲ್ಲಿರುವ ಕರ್ನಾಟಕದ 24 ಕ್ರಿಕೆಟಿಗರಿವರು; ಮೂವರಿಗೆ 2 ಕೋಟಿ, ಇಬ್ಬರಿಗೆ 1 ಕೋಟಿ ಮೂಲ ಬೆಲೆ

Karnataka Players: ಸೌದಿ ಅರೇಬಿಯಾದ ಜೆದ್ದಾ ನಗರದಲ್ಲಿ ನವೆಂಬರ್ 24, 25ರಂದು ಮಧ್ಯಾಹ್ನ 12:30ಕ್ಕೆ ಆಟಗಾರರ ಖರೀದಿ ಮೇಳ ಆರಂಭವಾಗಲಿದೆ. ಹತ್ತು ಫ್ರಾಂಚೈಸಿಗಳು 70 ವಿದೇಶಿಗರು ಸೇರಿ 204 ಆಟಗಾರರನ್ನು ಖರೀದಿಸಲು ಅವಕಾಶ ಇದೆ. ಈ ಪೈಕಿ ಕರ್ನಾಟಕದ 24 ಆಟಗಾರರು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಐಪಿಎಲ್ 2025 ಮೆಗಾ ಹರಾಜಿನಲ್ಲಿರುವ ಕರ್ನಾಟಕದ 24 ಆಟಗಾರರು ಇವರು; ಮೂವರಿಗೆ 2 ಕೋಟಿ, ಇಬ್ಬರಿಗೆ 1 ಕೋಟಿ ಮೂಲ ಬೆಲೆ
ಐಪಿಎಲ್ 2025 ಮೆಗಾ ಹರಾಜಿನಲ್ಲಿರುವ ಕರ್ನಾಟಕದ 24 ಆಟಗಾರರು ಇವರು; ಮೂವರಿಗೆ 2 ಕೋಟಿ, ಇಬ್ಬರಿಗೆ 1 ಕೋಟಿ ಮೂಲ ಬೆಲೆ

ಇಂಡಿಯನ್ ಪ್ರೀಮಿಯರ್ ಲೀಗ್​ 2025 ಮೆಗಾ ಹರಾಜಿಗೆ (IPL 2025 Mega Auction) ದಿನಗಣನೆ ಆರಂಭವಾಗಿದೆ. ನೋಂದಾಯಿಸಿಕೊಂಡಿದ್ದ 1,574 ಆಟಗಾರರ ಪೈಕಿ 574 ಮಂದಿಯನ್ನು ಕಿರುಪಟ್ಟಿ ಮಾಡಲಾಗಿದೆ. ಹರಾಜಿಗೆ ಬರುವ ಆಟಗಾರರ ಅಂತಿಮ ಪಟ್ಟಿ ಬಿಸಿಸಿಐ ಪ್ರಕಟಿಸಿದ್ದು, ಅದರಲ್ಲಿ 366 ಭಾರತೀಯರು, 208 ವಿದೇಶಿ ಕ್ರಿಕೆಟಿಗರು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಸೌದಿ ಅರೇಬಿಯಾದ ಜೆದ್ದಾ ನಗರದಲ್ಲಿ ನವೆಂಬರ್ 24, 25ರಂದು ಮಧ್ಯಾಹ್ನ 12:30 ಆಟಗಾರರ ಖರೀದಿ ಮೇಳ ಆರಂಭವಾಗಲಿದೆ. ಹತ್ತು ಫ್ರಾಂಚೈಸಿಗಳು 70 ವಿದೇಶಿಗರು ಸೇರಿ 204 ಆಟಗಾರರನ್ನು ಖರೀದಿಸಲು ಅವಕಾಶ ಇದೆ. ಈ ಪೈಕಿ 24 ಕನ್ನಡಿಗರು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ವಿದೇಶಿಗಳು-ಭಾರತೀಯರು ಎಷ್ಟು?

ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಣಕ್ಕಿಳಿದ ಭಾರತೀಯರ ಸಂಖ್ಯೆ - 48

ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಣಕ್ಕಿಳಿದ ವಿದೇಶಿಗರ ಸಂಖ್ಯೆ - 193

ಭಾರತದ ಅನ್​ಕ್ಯಾಪ್ಡ್ ಆಟಗಾರರ ಸಂಖ್ಯೆ - 318

ವಿದೇಶದ ಅನ್​ಕ್ಯಾಪ್ಡ್ ಆಟಗಾರರ ಸಂಖ್ಯೆ - 12

ಐಸಿಸಿ ಅಸೋಸಿಯೇಟ್‌ ರಾಷ್ಟ್ರಗಳ ಆಟಗಾರರ ಸಂಖ್ಯೆ - 3

ಯಾವ ದೇಶದವರು ಹೆಚ್ಚು ಕಾಣಿಸಿಕೊಂಡಿದ್ದಾರೆ?

ಆಸ್ಟ್ರೇಲಿಯಾ - 37 ಆಟಗಾರರು

ಇಂಗ್ಲೆಂಡ್‌ನ - 37 ಆಟಗಾರರು

ನ್ಯೂಜಿಲೆಂಡ್‌ - 24 ಆಟಗಾರರು

ದಕ್ಷಿಣ ಆಫ್ರಿಕಾ - 31 ಆಟಗಾರರು

ವೆಸ್ಟ್‌ಇಂಡೀಸ್‌ - 22 ಆಟಗಾರರು

ಅಫ್ಘಾನಿಸ್ತಾನ - 18 ಆಟಗಾರರು

ಬಾಂಗ್ಲಾದೇಶ - 12 ಆಟಗಾರರು

ಶ್ರೀಲಂಕಾ - 19 ಆಟಗಾರರು

ಮೂಲ ಬೆಲೆ ಮತ್ತು ಆಟಗಾರರ ಸಂಖ್ಯೆ

2 ಕೋಟಿ - 81 ಆಟಗಾರರು

1.50 ಕೋಟಿ - 27 ಆಟಗಾರರು

1.25 ಕೋಟಿ - 18 ಆಟಗಾರರು

1 ಕೋಟಿ - 23 ಆಟಗಾರರು

75 ಲಕ್ಷ - 92 ಆಟಗಾರರು

50 ಲಕ್ಷ - 8 ಆಟಗಾರರು

40 ಲಕ್ಷ - 5 ಆಟಗಾರರು

30 ಲಕ್ಷ - 320 ಆಟಗಾರರು

ಹರಾಜಿನಲ್ಲಿರುವ ಅತ್ಯಂತ ಕಿರಿಯ-ಹಿರಿಯ ಆಟಗಾರ

ವೈಭವ್ ಸೂರ್ಯವಂಶಿ (ಭಾರತ) - 13 ವರ್ಷ, ಮೂಲ ಬೆಲೆ 30 ಲಕ್ಷ

ಜೇಮ್ಸ್ ಆಂಡರ್​ಸನ್ (ಇಂಗ್ಲೆಂಡ್) - 42 ವರ್ಷ, ಮೂಲ ಬೆಲೆ 1.25 ಕೋಟಿ

ಹರಾಜಿನಲ್ಲಿರುವ ಕರ್ನಾಟಕದ 24 ಆಟಗಾರರು ಇವರು

ಕೆಎಲ್ ರಾಹುಲ್ - ಮೂಲ ಬೆಲೆ 2 ಕೋಟಿ

ದೇವದತ್ ಪಡಿಕ್ಕಲ್ - ಮೂಲ ಬೆಲೆ 2 ಕೋಟಿ

ಪ್ರಸಿದ್ಧ್‌ ಕೃಷ್ಣ - ಮೂಲ ಬೆಲೆ 2 ಕೋಟಿ

ಮಯಾಂಕ್‌ ಅಗರ್‌ವಾಲ್‌ - ಮೂಲ ಬೆಲೆ 1 ಕೋಟಿ

ಕೆ ಗೌತಮ್‌ - ಮೂಲ ಬೆಲೆ 1 ಕೋಟಿ

ಮನೀಶ್‌ ಪಾಂಡೆ - ಮೂಲ ಬೆಲೆ 75 ಲಕ್ಷ

ಲುವ್ನಿತ್‌ ಸಿಸೋಡಿಯಾ - ಮೂಲ ಬೆಲೆ 30 ಲಕ್ಷ

ಸ್ಮರಣ್ ರವಿಚಂದ್ರನ್ - ಮೂಲ ಬೆಲೆ 30 ಲಕ್ಷ

ಎಲ್​ಆರ್‌ ಚೇತನ್‌ - ಮೂಲ ಬೆಲೆ 30 ಲಕ್ಷ

ಮನೋಜ್‌ ಭಾಂಡಗೆ - ಮೂಲ ಬೆಲೆ 30 ಲಕ್ಷ

ಅಭಿಲಾಷ್ ಶೆಟ್ಟಿ - ಮೂಲ ಬೆಲೆ 30 ಲಕ್ಷ

ವೈಶಾಖ್‌ ವಿಜಯ್‌ ಕುಮಾರ್‌ - ಮೂಲ ಬೆಲೆ 30 ಲಕ್ಷ

ಪ್ರವೀಣ್‌ ದುಬೆ - ಮೂಲ ಬೆಲೆ 30 ಲಕ್ಷ

ಮನ್ವಂತ್‌ ಕುಮಾರ್‌ - ಮೂಲ ಬೆಲೆ 30 ಲಕ್ಷ

ಶ್ರೇಯಸ್‌ ಗೋಪಾಲ್‌ - ಮೂಲ ಬೆಲೆ 30 ಲಕ್ಷ

ಹಾರ್ದಿಕ್‌ ರಾಜ್‌ - ಮೂಲ ಬೆಲೆ 30 ಲಕ್ಷ

ಅಭಿನವ್‌ ಮಹೋಹರ್‌ - ಮೂಲ ಬೆಲೆ 30 ಲಕ್ಷ

ಬಿಆರ್‌ ಶರತ್‌ - ಮೂಲ ಬೆಲೆ 30 ಲಕ್ಷ

ಶ್ರೀಜಿತ್‌ ಕೃಷ್ಣನ್‌ - ಮೂಲ ಬೆಲೆ 30 ಲಕ್ಷ

ವಿದ್ವತ್‌ ಕಾವೇರಪ್ಪ - ಮೂಲ ಬೆಲೆ 30 ಲಕ್ಷ

ದೀಪಕ್‌ ದೇವಾಡಿಗ - ಮೂಲ ಬೆಲೆ 30 ಲಕ್ಷ

ವಿದ್ಯಾಧರ್‌ ಪಾಟೀಲ್‌ - ಮೂಲ ಬೆಲೆ 30 ಲಕ್ಷ

ಶುಭಾಂಗ್‌ ಹೆಗಡೆ - ಮೂಲ ಬೆಲೆ 30 ಲಕ್ಷ

ಸಮರ್ಥ್‌ ನಾಗರಾಜ್‌ - ಮೂಲ ಬೆಲೆ 30 ಲಕ್ಷ

Whats_app_banner