logo
ಕನ್ನಡ ಸುದ್ದಿ  /  ಕ್ರಿಕೆಟ್  /  Wpl 2025: ಆರ್​​ಸಿಬಿ ಸೇರಿ 5 ಫ್ರಾಂಚೈಸಿಗಳು ಉಳಿಸಿಕೊಂಡ ಮತ್ತು ಬಿಡುಗಡೆ ಮಾಡಿದ ಆಟಗಾರ್ತಿಯರ ಸಂಪೂರ್ಣ ಪಟ್ಟಿ ಇಲ್ಲಿದೆ

WPL 2025: ಆರ್​​ಸಿಬಿ ಸೇರಿ 5 ಫ್ರಾಂಚೈಸಿಗಳು ಉಳಿಸಿಕೊಂಡ ಮತ್ತು ಬಿಡುಗಡೆ ಮಾಡಿದ ಆಟಗಾರ್ತಿಯರ ಸಂಪೂರ್ಣ ಪಟ್ಟಿ ಇಲ್ಲಿದೆ

Prasanna Kumar P N HT Kannada

Nov 08, 2024 12:49 PM IST

google News

ಆರ್​​ಸಿಬಿ ಸೇರಿ 5 ಫ್ರಾಂಚೈಸಿಗಳು ಉಳಿಸಿಕೊಂಡ ಮತ್ತು ಬಿಡುಗಡೆ ಮಾಡಿದ ಆಟಗಾರ್ತಿಯರ ಸಂಪೂರ್ಣ ಪಟ್ಟಿ ಇಲ್ಲಿದೆ

    • Womens Premier League 2025: ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ಮುಗಿದ ಬಳಿಕ ಡಬ್ಲ್ಯುಪಿಎಲ್ ಆಕ್ಷನ್ ಡಿಸೆಂಬರ್​ನಲ್ಲಿ ಆಯೋಜಿಸುವ ಸಾಧ್ಯತೆ ಇದೆ. ಅದಕ್ಕೂ ಐದು ತಂಡಗಳು ಉಳಿಸಿಕೊಂಡ ಮತ್ತು ಬಿಡುಗಡೆ ಮಾಡಿದ ಆಟಗಾರ್ತಿಯರ ಸಂಪೂರ್ಣ ಪಟ್ಟಿ ಇಲ್ಲಿದೆ.
ಆರ್​​ಸಿಬಿ ಸೇರಿ 5 ಫ್ರಾಂಚೈಸಿಗಳು ಉಳಿಸಿಕೊಂಡ ಮತ್ತು ಬಿಡುಗಡೆ ಮಾಡಿದ ಆಟಗಾರ್ತಿಯರ ಸಂಪೂರ್ಣ ಪಟ್ಟಿ ಇಲ್ಲಿದೆ
ಆರ್​​ಸಿಬಿ ಸೇರಿ 5 ಫ್ರಾಂಚೈಸಿಗಳು ಉಳಿಸಿಕೊಂಡ ಮತ್ತು ಬಿಡುಗಡೆ ಮಾಡಿದ ಆಟಗಾರ್ತಿಯರ ಸಂಪೂರ್ಣ ಪಟ್ಟಿ ಇಲ್ಲಿದೆ

ವುಮೆನ್ಸ್ ಪ್ರೀಮಿಯರ್ ಲೀಗ್ (Womens Premier League 2025)​ 3ನೇ ಆವೃತ್ತಿಗೆ ಬಿಸಿಸಿಐ ಸಜ್ಜಾಗುತ್ತಿದೆ. ಜನವರಿ ಕೊನೆಯಲ್ಲಿ ಅಥವಾ ಫೆಬ್ರವರಿ ಆರಂಭದಲ್ಲಿ ಟೂರ್ನಿ ಆಯೋಜಿಸಲು ವಿಶ್ವದ ಶ್ರೀಮಂತ ಮಂಡಳಿ ಸಿದ್ಧತೆ ನಡೆಸುತ್ತಿದೆ. ಇದರ ನಡುವೆ 5 ತಂಡಗಳು ಉಳಿಸಿಕೊಂಡ ಮತ್ತು ಬಿಡುಗಡೆ ಮಾಡಿದ ಆಟಗಾರ್ತಿಯರ ಪಟ್ಟಿಯನ್ನು ಪ್ರಕಟಿಸಿವೆ. ಆದರೆ, ಮಿನಿ ಹರಾಜು ನಡೆಯುವ ದಿನವನ್ನು ಇನ್ನೂ ಅಂತಿಮಗೊಳಿಸಿಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ಮುಗಿದ ಬಳಿಕ ಡಬ್ಲ್ಯುಪಿಎಲ್ ಆಕ್ಷನ್ ಡಿಸೆಂಬರ್​ನಲ್ಲಿ ಆಯೋಜಿಸುವ ಸಾಧ್ಯತೆ ಇದೆ. ಮತ್ತೊಂದೆಡೆ ಆರ್​​ಸಿಬಿ ಮತ್ತೊಂದು ಪ್ರಶಸ್ತಿಯ ನಿರೀಕ್ಷೆಯಲ್ಲಿದೆ.

ಮುಂಬೈ ಇಂಡಿಯನ್ಸ್ 2023ರ ಆವೃತ್ತಿಯಲ್ಲಿ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಇಸ್ಸಿ ವಾಂಗ್​​ರನ್ನು ಕೈಬಿಟ್ಟಿದೆ. ಎರಡೂ ಸೀಸನ್‌ಗಳಲ್ಲಿ ಪ್ಲೇಆಫ್ ತಲುಪಲು ವಿಫಲವಾದ ನಂತರ ಭಾರತದ ಪ್ರಧಾನ ಆಲ್‌ರೌಂಡರ್ ಸ್ನೇಹ್ ರಾಣಾ ಅವರನ್ನು ಗುಜರಾತ್ ಜೈಂಟ್ಸ್ ಬಿಡುಗಡೆ ಮಾಡಿದೆ. ಟಿ20 ವಿಶ್ವಕಪ್ 2024ರಲ್ಲಿ ಅಬ್ಬರಿಸಿದ ನ್ಯೂಜಿಲೆಂಡ್ ತಂಡದ ಲಿಯಾ ತಹುಹು ಅವರನ್ನು ಸಹ ಗುಜರಾತ್ ಕೈ ಬಿಟ್ಟಿದೆ. ಯಾವ ತಂಡ ಯಾರನ್ನು ಉಳಿಸಿಕೊಂಡಿದೆ, ಯಾರನ್ನೆಲ್ಲಾ ರಿಲೀಸ್ ಮಾಡಲಾಗಿದೆ ಎಂಬುದರ ವಿವರ ಇಲ್ಲಿದೆ ನೋಡಿ.

ರಾಯಲ್ ಚಾಲೆಂಜರ್ಸ್ ಬೆಂಗಳೂರು

ಉಳಿಸಿಕೊಂಡವರು: ಸ್ಮೃತಿ ಮಂಧಾನ, ಸಬ್ಬಿನೇನಿ ಮೇಘನಾ, ರಿಚಾ ಘೋಷ್, ಎಲ್ಲಿಸ್ ಪೆರ್ರಿ, ಜಾರ್ಜಿಯಾ ವೇರ್ಹ್ಯಾಮ್, ಶ್ರೇಯಾಂಕಾ ಪಾಟೀಲ್, ಆಶಾ ಸೊಭಾನಾ, ಸೋಫಿ ಡಿವೈನ್, ರೇಣುಕಾ ಸಿಂಗ್, ಸೋಫಿ ಮೊಲಿನೆಕ್ಸ್, ಏಕ್ತಾ ಬಿಶ್ತ್, ಕೇಟ್ ಕ್ರಾಸ್, ಕನಿಕಾ ಅಹುಜಾ.

ಬಿಡುಗಡೆಯಾದವರು: ದಿಶಾ ಕಸತ್, ಇಂದ್ರಾಣಿ ರಾಯ್, ನಡಿನ್ ಡಿ ಕ್ಲರ್ಕ್, ಶುಭಾ ಸತೀಶ್, ಶ್ರದ್ಧಾ ಪೋಕರ್ಕರ್, ಸಿಮ್ರಾನ್ ಬಹದ್ದೂರ್.

ಮುಂಬೈ ಇಂಡಿಯನ್ಸ್

ಉಳಿಸಿಕೊಂಡವರು: ಅಮನ್‌ಜೋತ್ ಕೌರ್, ಅಮೆಲಿಯಾ ಕೆರ್, ಕ್ಲೋಯ್ ಟ್ರಯಾನ್, ಹರ್ಮನ್‌ಪ್ರೀತ್ ಕೌರ್, ಹೇಲಿ ಮ್ಯಾಥ್ಯೂಸ್, ಜಿಂಟಿಮಣಿ ಕಲಿತಾ, ನ್ಯಾಟ್ ಸ್ಸಿವರ್-ಬ್ರಂಟ್, ಪೂಜಾ ವಸ್ತ್ರಾಕರ್, ಸೈಕಾ ಇಶಾಕ್, ಯಾಸ್ತಿಕಾ ಭಾಟಿಯಾ, ಶಬ್ನಿಮ್ ಇಸ್ಮಾಯಿಲ್, ಎಸ್ ಸಜನಾ, ಅಮನ್‌ದೀಪ್ ಕೌರ್, ಕೀರ್ತನಾ ಬಾಲಕೃಷ್ಣ.

ಬಿಡುಗಡೆಯಾದವರು: ಇಸ್ಸಿ ವಾಂಗ್, ಫಾತಿಮಾ ಜಾಫರ್, ಹುಮೈರಾ ಕಾಜಿ, ಪ್ರಿಯಾಂಕಾ ಬಾಲಾ.

ಡೆಲ್ಲಿ ಕ್ಯಾಪಿಟಲ್ಸ್

ಉಳಿಸಿಕೊಂಡವರು: ಆಲಿಸ್ ಕ್ಯಾಪ್ಸೆ, ಅರುಂಧತಿ ರೆಡ್ಡಿ, ಜೆಮಿಮಾ ರಾಡ್ರಿಗಸ್, ಜೆಸ್ ಜೊನಾಸೆನ್, ಮರಿಜಾನ್ನೆ ಕಪ್, ಮೆಗ್ ಲ್ಯಾನಿಂಗ್, ಮಿನ್ನು ಮಣಿ, ರಾಧಾ ಯಾದವ್, ಶಫಾಲಿ ವರ್ಮಾ, ಶಿಖಾ ಪಾಂಡೆ, ಸ್ನೇಹಾ ದೀಪ್ತಿ, ತಾನಿಯಾ ಭಾಟಿಯಾ, ಟೈಟಾಸ್ ಸಾಧು, ಅನ್ನಾಬೆಲ್ ಸದರ್ಲ್ಯಾಂಡ್.

ಬಿಡುಗಡೆಯಾದವರು: ಲಾರಾ ಹ್ಯಾರಿಸ್, ಪೂನಂ ಯಾದವ್, ಅಪರ್ಣಾ ಮೊಂಡಲ್, ಅಶ್ವನಿ ಕುಮಾರಿ.

ಯುಪಿ ವಾರಿಯರ್ಸ್

ಉಳಿಸಿಕೊಂಡವರು: ಅಲಿಸ್ಸಾ ಹೀಲಿ, ಅಂಜಲಿ ಸರ್ವಾಣಿ, ದೀಪ್ತಿ ಶರ್ಮಾ, ಗ್ರೇಸ್ ಹ್ಯಾರಿಸ್, ಕಿರಣ್ ನವಗಿರೆ, ಚಾಮರಿ ಅಥಾಪತ್ತು, ರಾಜೇಶ್ವರಿ ಗಾಯಕ್‌ವಾಡ್, ಶ್ವೇತಾ ಸೆಹ್ರಾವತ್, ಸೋಫಿ ಎಕ್ಲೆಸ್ಟೋನ್, ತಹ್ಲಿಯಾ ಮೆಕ್‌ಗ್ರಾತ್, ವೃಂದಾ ದಿನೇಶ್, ಪೂನಂ ಖೇಮ್‌ನಾರ್, ಗೊಮಾ ಥಾಕ್ನರ್.

ಬಿಡುಗಡೆಯಾದವರು: ಲಾರೆನ್ ಬೆಲ್, ಲಕ್ಷ್ಮಿ ಯಾದವ್, ಪಾರ್ಶವಿ ಚೋಪ್ರಾ, ಸೊಪ್ಪದಂಡಿ ಯಶಸ್ರಿ.

ಗುಜರಾತ್ ಜೈಂಟ್ಸ್

ಉಳಿಸಿಕೊಂಡವರು: ಆಶ್ಲೀಗ್ ಗಾರ್ಡ್ನರ್, ಬೆತ್ ಮೂನಿ, ದಯಾಲನ್ ಹೇಮಲತಾ, ಹರ್ಲೀನ್ ಡಿಯೋಲ್, ಲಾರಾ ವೊಲ್ವಾರ್ಡ್, ಶಬ್ನಮ್ ಶಕಿಲ್, ತನುಜಾ ಕನ್ವರ್, ಫೋಬೆ ಲಿಚ್‌ಫೀಲ್ಡ್, ಮೇಘನಾ ಸಿಂಗ್, ಕಾಶ್ವೀ ಗೌತಮ್, ಪ್ರಿಯಾ ಮಿಶ್ರಾ, ಮನ್ನತ್ ಕಶ್ಯಪ್, ಸಯಾಲಿ ಸತ್ಗರೆ.

ಬಿಡುಗಡೆಯಾದವರು: ಸ್ನೇಹ್ ರಾಣಾ, ಕ್ಯಾಥರಿನ್ ಬ್ರೈಸ್, ತ್ರಿಶಾ ಪೂಜಿತಾ, ವೇದಾ ಕೃಷ್ಣಮೂರ್ತಿ, ತರನ್ನುಮ್ ಪಠಾಣ್, ಲಿಯಾ ತಹುಹು.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ