ಇಂದು ಭಾರತ-ಆಫ್ರಿಕಾ ಮೊದಲ ಟಿ20: ಸೂರ್ಯ ನಾಯಕತ್ವದಲ್ಲಿ ಯಾರಿಗೆಲ್ಲ ಅವಕಾಶ? ಲೈವ್ ಸ್ಟ್ರೀಮ್ ಯಾವುದರಲ್ಲಿ?
ಕನ್ನಡ ಸುದ್ದಿ  /  ಕ್ರಿಕೆಟ್  /  ಇಂದು ಭಾರತ-ಆಫ್ರಿಕಾ ಮೊದಲ ಟಿ20: ಸೂರ್ಯ ನಾಯಕತ್ವದಲ್ಲಿ ಯಾರಿಗೆಲ್ಲ ಅವಕಾಶ? ಲೈವ್ ಸ್ಟ್ರೀಮ್ ಯಾವುದರಲ್ಲಿ?

ಇಂದು ಭಾರತ-ಆಫ್ರಿಕಾ ಮೊದಲ ಟಿ20: ಸೂರ್ಯ ನಾಯಕತ್ವದಲ್ಲಿ ಯಾರಿಗೆಲ್ಲ ಅವಕಾಶ? ಲೈವ್ ಸ್ಟ್ರೀಮ್ ಯಾವುದರಲ್ಲಿ?

ind vs sa T20I Series: ಈ ಬಾರಿ ಭಾರತ ತಂಡ ದಕ್ಷಿಣ ಆಫ್ರಿಕಾದಲ್ಲಿ ತವರಿನಲ್ಲಿ ಟಿ20 ಸರಣಿ ಗೆಲ್ಲುವತ್ತ ಕಣ್ಣಿಟ್ಟಿದೆ. ಸೂರ್ಯಕುಮಾರ್ ನಾಯಕತ್ವಕ್ಕೆ ಇದು ಮತ್ತೊಂದು ಸವಾಲಾಗಿದೆ. ಇದಕ್ಕಾಗಿ ಸೂರ್ಯ 11 ಬಲಿಷ್ಠ ಆಟಗಾರರೊಂದಿಗೆ ಮೈದಾನಕ್ಕಿಳಿಯಲು ಯೋಜನೆ ಹಾಕಿಕೊಂಡಿದ್ದಾರೆ.

ಇಂದು ಭಾರತ-ಆಫ್ರಿಕಾ ಮೊದಲ ಟಿ20: ಸೂರ್ಯ ನಾಯಕತ್ವದಲ್ಲಿ ಯಾರಿಗೆಲ್ಲ ಅವಕಾಶ
ಇಂದು ಭಾರತ-ಆಫ್ರಿಕಾ ಮೊದಲ ಟಿ20: ಸೂರ್ಯ ನಾಯಕತ್ವದಲ್ಲಿ ಯಾರಿಗೆಲ್ಲ ಅವಕಾಶ

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 4 ಪಂದ್ಯಗಳ ಟಿ20 ಸರಣಿಯು ನವೆಂಬರ್ 8 ರಿಂದ ಆರಂಭವಾಗಲಿದೆ. ಈ ಸರಣಿಯ ಮೊದಲ ಪಂದ್ಯವು ಡರ್ಬನ್‌ನ ಕಿಂಗ್ಸ್‌ಮೀಡ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಹಲವು ಯುವ ಆಟಗಾರರು ಈ ಸರಣಿಯಲ್ಲಿ ಆಡಲಿದ್ದಾರೆ. ಕಳೆದ ವರ್ಷವೂ ಸೂರ್ಯ ನಾಯಕತ್ವದಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ 3 ಪಂದ್ಯಗಳ ಟಿ20 ಸರಣಿಯನ್ನು ಆಡಿತ್ತು. ಇದರಲ್ಲಿ ಒಂದು ಪಂದ್ಯ ಮಳೆಯಿಂದ ರದ್ದಾದರೆ, ಉಭಯ ತಂಡಗಳು 1-1 ಅಂತರದ ಸಮಬಲ ಸಾಧಿಸಿತ್ತು.

ಈ ಬಾರಿ ಭಾರತ ತಂಡ, ದಕ್ಷಿಣ ಆಫ್ರಿಕಾ ನೆಲದಲ್ಲಿ ಟಿ20 ಸರಣಿ ಗೆಲ್ಲುವತ್ತ ಕಣ್ಣಿಟ್ಟಿದೆ. ಸೂರ್ಯಕುಮಾರ್ ನಾಯಕತ್ವಕ್ಕೆ ಇದು ಮತ್ತೊಂದು ಸವಾಲಾಗಿದೆ. ಇದಕ್ಕಾಗಿ ಸೂರ್ಯ 11 ಬಲಿಷ್ಠ ಆಟಗಾರರೊಂದಿಗೆ ಮೈದಾನಕ್ಕಿಳಿಯಲು ಯೋಜನೆ ಹಾಕಿಕೊಂಡಿದ್ದಾರೆ.

ಮೊದಲ ಟಿ20ಗೆ ಭಾರತದ ಪ್ಲೇಯಿಂಗ್ ಇಲೆವೆನ್

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20ಯಲ್ಲಿ ಅಭಿಷೇಕ್ ಶರ್ಮಾ ಜೊತೆಗೆ ಓಪನಿಂಗ್ ಜವಾಬ್ದಾರಿಯನ್ನು ಸಂಜು ಸ್ಯಾಮ್ಸನ್ ನಿಭಾಯಿಸುವುದು ಬಹುತೇಕ ಖಚಿತ. ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯಲ್ಲಿ ಸಂಜು ಸ್ಯಾಮ್ಸನ್‌ಗೆ ಆರಂಭಿಕ ಅವಕಾಶ ಸಿಕ್ಕಿತು. ನಂತರ ಅಮೋಘ ಶತಕವನ್ನೂ ಬಾರಿಸಿದರು. ಸೂರ್ಯಕುಮಾರ್ ಯಾದವ್ ಅವರನ್ನು ಮೂರನೇ ಸ್ಥಾನದಲ್ಲಿ ಕಾಣಬಹುದು.

ಇವರಲ್ಲದೆ ತಿಲಕ್ ವರ್ಮಾ ಕೂಡ ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ಪಡೆಯಬಹುದು. ಗಾಯದಿಂದ ಚೇತರಿಸಿಕೊಂಡ ನಂತರ ತಿಲಕ್ ವರ್ಮಾ ಬಹಳ ಸಮಯದ ನಂತರ ಟಿ20 ತಂಡವನ್ನು ಸೇರಿಕೊಂಡಿದ್ದಾರೆ. ಹಾರ್ದಿಕ್ ಪಾಂಡ್ಯ ಕೂಡ ಈ ಸರಣಿ ಭಾಗವಾಗಿದ್ದಾರೆ. ಅವರು 5ನೇ ಸ್ಥಾನದಲ್ಲಿ ಆಡಲಿದ್ದಾರೆ. ಇದಲ್ಲದೇ ಫಿನಿಶಿಂಗ್ ಜವಾಬ್ದಾರಿ ರಿಂಕು ಸಿಂಗ್ ಮತ್ತು ಅಕ್ಷರ್ ಪಟೇಲ್ ಅವರಿಗೆ ಸಿಗಬಹುದು. ಭಾರತ ತಂಡವು 1 ಸ್ಪಿನ್ನರ್ ಮತ್ತು 3 ವೇಗದ ಬೌಲರ್‌ಗಳನ್ನು ಆಡುವ 11 ರಲ್ಲಿ ಸೇರಿಸಿಕೊಳ್ಳಬಹುದು.

ವರುಣ್ ಚಕ್ರವರ್ತಿ ಎರಡನೇ ಸ್ಪಿನ್ನರ್ ಆಗಿ ಆಡುವ 11 ರ ಭಾಗವಾಗಬಹುದು. ಅದೇ ಸಮಯದಲ್ಲಿ, ಅರ್ಷದೀಪ್ ಸಿಂಗ್, ಯಶ್ ದಯಾಳ್ ಮತ್ತು ಅವೇಶ್ ಖಾನ್ ವೇಗದ ಬೌಲರ್‌ಗಳಾಗಿರುತ್ತಾರೆ. ದಯಾಳ್‌ಗೆ ಅವಕಾಶ ಸಿಕ್ಕರೆ ಇದು ಅವರ ಚೊಚ್ಚಲ ಪಂದ್ಯವಾಗಲಿದೆ. ಇದಲ್ಲದೇ ಜಿತೇಶ್ ಶರ್ಮಾ, ರಮಣದೀಪ್ ಸಿಂಗ್, ರವಿ ಬಿಷ್ಣೋಯ್ ಮತ್ತು ವಿಜಯ್‌ಕುಮಾರ್ ವಿಶಾಕ್ ಅವರಂತಹ ಆಟಗಾರರೂ ಟೀಂ ಇಂಡಿಯಾದಲ್ಲಿದ್ದಾರೆ.

ಭಾರತ ಸಂಭಾವ್ಯ ಪ್ಲೇಯಿಂಗ್ XI

ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ಯಶ್ ದಯಾಳ್, ಅರ್ಷದೀಪ್ ಸಿಂಗ್ ಮತ್ತು ಅವೇಶ್ ಖಾನ್.

ನೇರಪ್ರಸಾರ ಯಾವುದರಲ್ಲಿ?

ಭಾರತ vs ದಕ್ಷಿಣ ಆಫ್ರಿಕಾ ಮೊದಲ ಟಿ20I ಪಂದ್ಯವನ್ನು ಸ್ಪೋರ್ಟ್ಸ್ 18 1 ಮತ್ತು ಸ್ಪೋರ್ಟ್ಸ್ 18 1 HD ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮ್ ವೀಕ್ಷಿಸಬಹುದು. ಪಂದ್ಯ ರಾತ್ರಿ 8:30 IST ಕ್ಕೆ ಪ್ರಾರಂಭವಾಗುತ್ತದೆ.

Whats_app_banner