logo
ಕನ್ನಡ ಸುದ್ದಿ  /  ಕ್ರಿಕೆಟ್  /  ಯುಪಿ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಟಾಸ್‌ ಗೆದ್ದ ಗುಜರಾತ್‌ ಜೈಂಟ್ಸ್‌ ಬ್ಯಾಟಿಂಗ್; ಉಭಯ ತಂಡಗಳಲ್ಲೂ ಬದಲಾವಣೆ

ಯುಪಿ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಟಾಸ್‌ ಗೆದ್ದ ಗುಜರಾತ್‌ ಜೈಂಟ್ಸ್‌ ಬ್ಯಾಟಿಂಗ್; ಉಭಯ ತಂಡಗಳಲ್ಲೂ ಬದಲಾವಣೆ

Jayaraj HT Kannada

Mar 11, 2024 07:10 PM IST

ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಟಾಸ್‌ ಗೆದ್ದ ಗುಜರಾತ್‌ ಜೈಂಟ್ಸ್‌ ಬ್ಯಾಟಿಂಗ್

    • ಗುಜರಾತ್‌ ಜೈಂಟ್ಸ್ ತಂಡದಲ್ಲಿ ಒಂದು ಬದಲಾವಣೆಯಾಗಿದೆ. ಸ್ನೇಹಾ ರಾಣಾ ಬದಲಿಗೆ ಮನ್ನತ್‌ ಕಶ್ಯಪ್‌ ಆಡುವ ಬಳಗಕ್ಕೆ ಮರಳಿದ್ದಾರೆ.‌ ಯುಪಿ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ತಹ್ಲಿಯಾ ಮೆಕ್‌ಗ್ರಾತ್ ಬದಲಿಗೆ ಚಾಮರಿ ಅಥಾಪತ್ತು ತಂಡಕ್ಕೆ ಮರಳಿದ್ದಾರೆ. ಸೈಮಾ ಠಾಕೋರ್ ಬದಲಿಗೆ ಅಂಜಲಿ ಸರ್ವಾಣಿ ಆಡುತ್ತಿದ್ದಾರೆ.
ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಟಾಸ್‌ ಗೆದ್ದ ಗುಜರಾತ್‌ ಜೈಂಟ್ಸ್‌ ಬ್ಯಾಟಿಂಗ್
ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಟಾಸ್‌ ಗೆದ್ದ ಗುಜರಾತ್‌ ಜೈಂಟ್ಸ್‌ ಬ್ಯಾಟಿಂಗ್ (Gujarat Giants Twitter)

ಡಬ್ಲ್ಯೂಪಿಎಲ್‌ನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಯುಪಿ ವಾರಿಯರ್ಸ್‌ ಮತ್ತು ಗುಜರಾತ್‌ ಜೈಂಟ್ಸ್‌ ತಂಡಗಳು (Gujarat Giants vs Up Warriorz) ತಂಡಗಳು ಮುಖಾಮುಖಿಯಾಗುತ್ತಿವೆ. ಪ್ಲೇ ಆಫ್‌ ದೃಷ್ಟಿಯಿಂದ ಉಭಯ ತಂಡಗಳಿಗೂ ಈ ಪಂದ್ಯ ಮಹತ್ವವಾಗಿದ್ದು, ಗೆಲ್ಲುವುದೊಂದೇ ತಂಡದ ಮುಂದಿರುವ ಆಯ್ಕೆ. ನಿರ್ಣಾಯಕ ಪಂದ್ಯದಲ್ಲಿ ಟಾಸ್‌ ಗೆದ್ದ ಗುಜರಾತ್‌ ನಾಯಕಿ ಬೆತ್‌ ಮೂನಿ, ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ವಿಶ್ವದ ಅತ್ಯುತ್ತಮ ತಂಡ; ಐರ್ಲೆಂಡ್ ವಿರುದ್ಧ ಪಾಕಿಸ್ತಾನ ಸರಣಿ ಗೆದ್ದ ನಂತರ ತಮ್ಮನ್ನು ತಾವೇ ಹೊಗಳಿಕೊಂಡ ಪಿಸಿಬಿ ಅಧ್ಯಕ್ಷ

ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯಬೇಕಾದ ಆರಂಭಿಕರನ್ನು ಹೆಸರಿಸಿದ ಇರ್ಫಾನ್ ಪಠಾಣ್; ಯಶಸ್ವಿ ಜೈಸ್ವಾಲ್‌ ಬೇಡವಂತೆ!

ನಾನು ಒಮ್ಮೆ ಹೋದರೆ, ನೀವು ಮತ್ತೆ ನನ್ನ ನೋಡಲ್ಲ; ನಿವೃತ್ತಿ ಕುರಿತು ವಿರಾಟ್ ಕೊಹ್ಲಿ ಅಚ್ಚರಿ ಹೇಳಿಕೆ, ಫ್ಯಾನ್ಸ್​ಗೆ ಆತಂಕ

ಕ್ರಿಕೆಟ್​​​ನಲ್ಲಿ ಆಟಗಾರರು ಧರಿಸುವ ನೆಕ್ ಡಿವೈಸ್ ಅಥವಾ ಕ್ಯೂ-ಕಾಲರ್​ ಎಂದರೇನು; ಪ್ರಯೋಜನ ಮತ್ತು ಬೆಲೆ ಎಷ್ಟು?

ಗುಜರಾತ್‌ ತಂಡದಲ್ಲಿ ಒಂದು ಬದಲಾವಣೆಯಾಗಿದೆ. ಸ್ನೇಹಾ ರಾಣಾ ಬದಲಿಗೆ ಮನ್ನತ್‌ ಕಶ್ಯಪ್‌ ಆಡುವ ಬಳಗಕ್ಕೆ ಮರಳಿದ್ದಾರೆ.‌ ಯುಪಿ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ತಹ್ಲಿಯಾ ಮೆಕ್‌ಗ್ರಾತ್ ಬದಲಿಗೆ ಚಾಮರಿ ಅಥಾಪತ್ತು ತಂಡಕ್ಕೆ ಮರಳಿದ್ದಾರೆ. ಸೈಮಾ ಠಾಕೋರ್ ಬದಲಿಗೆ ಅಂಜಲಿ ಸರ್ವಾಣಿ ಆಡುತ್ತಿದ್ದಾರೆ.

ಈಗಾಗಲೇ ಮುಂಬೈ ಹಾಗೂ ಡೆಲ್ಲಿ ತಂಡಗಳು ಪ್ಲೇ ಆಫ್‌ ಹಂತಕ್ಕೆ ಲಗ್ಗೆ ಇಟ್ಟಿವೆ. ಇದೀಗ ಒಂದು ಸ್ಥಾನಕ್ಕಾಗಿ ಮೂರು ತಂಡಗಳ ನಡುವೆ ಪೈಪೋಟಿ ನಡೆಸುತ್ತಿವೆ. ಡೆಲ್ಲಿ ವಿರುದ್ಧದ ಕೊನೆಯ ಪಂದ್ಯದಲ್ಲಿ ಸೋತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸದ್ಯ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಆಡಿದ 7ರಲ್ಲಿ 3 ಗೆಲುವು, 4 ಸೋಲು ಕಂಡಿರುವ ಮಂಧಾನ ಪಡೆ 6 ಅಂಕ ಪಡೆದಿದೆ.

ಇದನ್ನೂ ಓದಿ | ಆರ್​ಸಿಬಿಯೊಂದಿಗೆ 16 ವರ್ಷ ಪೂರೈಸಿದ ವಿರಾಟ್; ಚೊಚ್ಚಲ ಐಪಿಎಲ್​ನಲ್ಲಿ ಕೊಹ್ಲಿ ಪಡೆದ ಸಂಬಳವೆಷ್ಟು, ಈಗೆಷ್ಟಿದೆ?

ಯುಪಿ ವಾರಿಯರ್ಸ್ ತಂಡವು ಸದ್ಯ ನಾಲ್ಕನೇ ಸ್ಥಾನದಲ್ಲಿದೆ. ಆರ್‌ಸಿಬಿಯಷ್ಟೇ ಸೋಲು-ಗೆಲುವು ಪಡೆದಿರುವ ಯುಪಿ, ಇಂದಿನ ಪಂದ್ಯದಲ್ಲಿ ಪಂದ್ಯದಲ್ಲಿ ಗೆದ್ದರೆ, ಪ್ಲೇಆಫ್​​ ಪ್ರವೇಶಿಸುವ ಸಾಧ್ಯತೆ ಹೆಚ್ಚುತ್ತದೆ. ಅಂತೆಯೇ ಗುಜರಾತ್‌ ಜೈಂಟ್ಸ್‌ ತಂಡ ಟೂರ್ನಿಯಿಂದ ಹೊರಬೀಳಲಿದೆ. ಪ್ರಸ್ತುತ ನೆಟ್​​ ರನ್ ರೇಟ್​ ವಿಚಾರದಲ್ಲಿ ಆರ್‌​ಸಿಬಿಗಿಂತ (+0.027) ಹಿಂದಿರುವ ಯುಪಿ (-0.365) ಇಂದಿನ ಪಂದ್ಯ ಸೋತರೆ, ನಾಳೆ ಆರ್‌ಸಿಬಿ ಸೋಲಿಗಾಗಿ ಕಾಯಬೇಕಾಗುತ್ತದೆ.

ಯುಪಿ ವಾರಿಯರ್ಜ್ ಆಡುವ ಬಳಗ

ಅಲಿಸ್ಸಾ ಹೀಲಿ (ನಾಯಕಿ ಮತ್ತು ವಿಕೆಟ್‌ ಕೀಪರ್), ಕಿರಣ್ ನವಗಿರೆ, ಚಾಮರಿ ಅಥಾಪತ್ತು, ಗ್ರೇಸ್ ಹ್ಯಾರಿಸ್, ದೀಪ್ತಿ ಶರ್ಮಾ, ಶ್ವೇತಾ ಸೆಹ್ರಾವತ್, ಪೂನಂ ಖೇಮ್ನಾರ್, ಸೋಫಿ ಎಕ್ಲೆಸ್ಟೋನ್, ಸೈಮಾ ಠಾಕೋರ್, ರಾಜೇಶ್ವರಿ ಗಾಯಕ್ವಾಡ್, ಅಂಜಲಿ ಸರ್ವಾನಿ.

ಗುಜರಾತ್ ಜೈಂಟ್ಸ್ ಆಡುವ ಬಳಗ

ಲಾರಾ ವೊಲ್ವಾರ್ಡ್ಟ್, ಬೆತ್ ಮೂನಿ (ನಾಯಕಿ ಮತ್ತು ವಿಕೆಟ್‌ ಕೀಪರ್), ಫೋಬ್ ಲಿಚ್‌ಫೀಲ್ಡ್, ದಯಾಲನ್ ಹೇಮಲತಾ, ಆಶ್ಲೀಗ್ ಗಾರ್ಡ್ನರ್, ಭಾರತಿ ಫುಲ್ಮಾಲಿ, ಕ್ಯಾಥರಿನ್ ಬ್ರೈಸ್, ಮನ್ನತ್ ಕಶ್ಯಪ್, ತನುಜಾ ಕನ್ವರ್, ಮೇಘನಾ ಸಿಂಗ್, ಶಬ್ನಮ್ ಎಂಡಿ ಶಕೀಲ್.

ಇದನ್ನೂ ಓದಿ | ಚಾಣಕ್ಯನ ಬದಲಿಗೆ ಧೋನಿಯ 3D ಚಿತ್ರ ರಚಿಸಿದ ಎಐ; ನಗೆಪಾಟಲಿಗೀಡಾದ ಮಗಧ ಡಿಎಸ್ ವಿಶ್ವವಿದ್ಯಾಲಯ ಟ್ರೋಲ್

ಕ್ರಿಕೆಟ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ