ಚಿತ್ರರಂಗಕ್ಕೆ ಬರುವವರು ರಿಜೆಕ್ಷನ್ ಸ್ವೀಕರಿಸಲು ರೆಡಿ ಇರಲೇಬೇಕು; ಅಮೃತಧಾರೆ ಧಾರಾವಾಹಿ ನಟ ಕರಣ್ ಕೆ ಆರ್ ಸಂದರ್ಶನ
Dec 22, 2024 10:00 AM IST
ಅಮೃತಧಾರೆ ಧಾರಾವಾಹಿ ನಟ ಕರಣ್ ಕೆ ಆರ್ ಸಂದರ್ಶನ
- ಸಂದರ್ಶನ: ಪದ್ಮಶ್ರೀ ಭಟ್. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ʼಅಮೃತಧಾರೆʼ ಧಾರಾವಾಹಿ ಅನೇಕ ಕಾರಣಗಳಿಂದ ಇಂದು ಕಿರುತೆರೆ ವೀಕ್ಷಕರ ಮನ ಗೆದ್ದಿದೆ. ಈ ಧಾರಾವಾಹಿಯಲ್ಲಿ ಪಾರ್ಥ ಪಾತ್ರದ ಮೂಲಕ ಜನರ ಮನಸ್ಸು ಗೆದ್ದಿರುವ ನಟ ಕರಣ್ ಕೆ ಆರ್ ಅವರು ಎಂಟು ವರ್ಷಗಳ ನಂತರ ಮತ್ತೆ ಕಿರುತೆರೆಗೆ ಮರಳಿದ್ದು, ಸೀರಿಯಲ್ ಲೋಕದ ಸವಾಲುಗಳನ್ನು ಹಂಚಿಕೊಂಡಿದ್ದಾರೆ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ʼಅಮೃತಧಾರೆʼ ಧಾರಾವಾಹಿ ಅನೇಕ ಕಾರಣಗಳಿಂದ ಇಂದು ಕಿರುತೆರೆ ವೀಕ್ಷಕರ ಮನ ಗೆದ್ದಿದೆ. ಈ ಧಾರಾವಾಹಿಯಲ್ಲಿ ಪಾರ್ಥ ಪಾತ್ರದ ಮೂಲಕ ಜನರ ಮನಸ್ಸು ಗೆದ್ದಿರುವ ನಟ ಕರಣ್ ಕೆ ಆರ್ ಅವರು ಎಂಟು ವರ್ಷಗಳ ನಂತರ ಮತ್ತೆ ಕಿರುತೆರೆಗೆ ಮರಳಿದ್ದು, ಸೀರಿಯಲ್ ಲೋಕದ ಸವಾಲುಗಳು, ಜನರ ಪ್ರತಿಕ್ರಿಯೆ ಬಗ್ಗೆ ಪಂಚಮಿ ಟಾಕ್ಸ್ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಪ್ರ: ಚಿಕ್ಕ ವಯಸ್ಸಿನಲ್ಲಿಯೇ ಹೀರೋ ಆಗಿ ಎಂಟ್ರಿ ಕೊಟ್ರಿ. ಇವತ್ತು ನಿಮಗೆ ಬೇಕಾದಂಥ ಅವಕಾಶಗಳು ಸಿಗುತ್ತವೆಯಾ? ನಿಮ್ಮಂತೆ ಕೆಲ ಕಲಾವಿದರಿಗೆ ಅವರು ಬಯಸುವ ಅವಕಾಶ ಸಿಗ್ತಿಲ್ಲ
ಉ: ನನಗೆ ಬೇಕಾದಂತಹ ಪಾತ್ರಗಳು ಸಿಗುತ್ತಿವೆ. ಆದರೆ ಪಾತ್ರಕ್ಕೆ ಆಯ್ಕೆ ಮಾಡುವವರು ಏನು ನೋಡಿ ಹೇಗೆ ಪಾತ್ರಕ್ಕೆ ಅವಕಾಶ ಕೊಡ್ತಾರೆ ಅಂತ ಗೊತ್ತಿಲ್ಲ. ಕಲಾವಿದರ ಮೇಲೆ ಇದೆಲ್ಲ ಆಧಾರಿತವಾಗಿರುತ್ತದೆ.
ಚಿಕ್ಕ ವಯಸ್ಸಿನವರಿಗೆ ತಾಯಿ ಪಾತ್ರ ಸಿಗ್ತಿದೆ
'ಅಮೃತಧಾರೆʼ ಧಾರಾವಾಹಿಯಲ್ಲಿ ನಾನು ಇವತ್ತು ಇಪ್ಪತ್ತಾರು-ಇಪ್ಪತ್ತೇಳು ವಯಸ್ಸಿನ ಪಾತ್ರವನ್ನು ನಾನು ನಿಭಾಯಿಸುತ್ತಿದ್ದೇನೆ. ಆದರೆ ನನ್ನ ರಿಯಲ್ ವಯಸ್ಸು ಇದಲ್ಲ. ಕಲಾವಿದನಿಗೆ ದೇಹ ಎನ್ನೋದು ತುಂಬ ಮುಖ್ಯ, ಆದರೆ ನೋಡಲು ತುಂಬ ಚೆನ್ನಾಗಿರಬೇಕು ಅಂತ ಕೂಡ ಇಲ್ಲ, ಆದರೆ ಫಿಟ್‌ನೆಸ್ ಹೊಂದಿರಬೇಕು. ಈ ಪಾತ್ರಗಳಿಗೆ ಹೊಂದಿಕೆ ಆಗ್ತೀರಾ ಅಂದ್ರೆ ಅವರು ವಯಸ್ಸು ಎಷ್ಟೇ ಆಗಿರಲಿ ತಗೊಳ್ತಾರೆ. ಚಿತ್ರರಂಗದಲ್ಲಿ ರಿಜೆಕ್ಷನ್ ಸ್ವೀಕರಿಸಲು ಸಿದ್ಧರಾಗಿರಬೇಕು. ಅಮೃತಧಾರೆ ಧಾರಾವಾಹಿಗೂ ಮುನ್ನ ಲೀಡ್ ಪಾತ್ರ ಬೇಕು ಸಾಕಷ್ಟು ಆಡಿಷನ್ಸ್‌ನಲ್ಲಿ ನಾನು ಭಾಗವಹಿಸಿದರೂ ಆಗಲಿಲ್ಲ. ಆದರೆ ನನಗೆ ಹೀರೋ ಆಗಬೇಕು ಅಂತಿಲ್ಲ. ಜನರು ನನ್ನನ್ನು ಇಷ್ಟಪಟ್ಟಿರೋದು ತುಂಬ ಖುಷಿ ಕೊಟ್ಟಿದೆ.
ಪ್ರ: ನೀವು ʼಅರಸಿʼ ಧಾರಾವಾಹಿಯಿಂದ ಇವತ್ತಿನವರೆಗೆ ನೋಡಲು ಸುಂದರವಾಗಿ, ಫಿಟ್‌ನೆಸ್ ಕಾಯ್ದುಕೊಂಡಿದ್ದೀರಿ ಹೇಗೆ?
ಉ: ಅರಸಿ ಮುಗಿದಮೇಲೆ ನಾನು ಫಿಟ್‌ನೆಸ್ ಕಾಪಾಡಿಕೊಂಡಿರಲಿಲ್ಲ, ಸೌಂದರ್ಯವರ್ಧಕಗಳನ್ನು ಬಳಸುತ್ತಿರಲಿಲ್ಲ. ಅನುವಂಶೀಕತೆಯಿಂದ ನಾನು ಹೀಗೆ ಇರಬಹುದು. ಆದರೆ ನನ್ನನ್ನು ನಾನು ನೋಡಲು ಸುಂದರ ಅಂತ ಮಾತ್ರ ಪರಿಗಣಿಸಿಲ್ಲ. ನನ್ನ ತಂದೆ ನನಗೆ ಕಾಫಿ ಎಸ್ಟೇಟ್‌ನಲ್ಲಿ ಕೆಲಸ ವಹಿಸಿದ್ದರು, ಕಾಫಿ ಸೀಸನ್ ಮುಗಿದ್ಮೇಲೆ ನಾನು ಜಿಮ್‌ಗೆ ಹೋದೆ, ನಾಲ್ಕು ತಿಂಗಳಲ್ಲಿ ರೆಡಿಯಾದೆ. ಆಮೇಲೆ ಫೋಟೋಶೂಟ್ ಮಾಡಿಸಿಕೊಂಡು ಆಡಿಷನ್ ಕೊಡಲು ಶುರು ಮಾಡಿದೆ. ಆಗ ನನಗೆ ʼಅಮೃತಧಾರೆʼ ಧಾರಾವಾಹಿ ಅವಕಾಶ ಬಂತು. ಆರಂಭದಲ್ಲಿ ಲೀಡ್ ಅಲ್ಲ ಅಂತ ನಾನು ರಿಜೆಕ್ಟ್ ಮಾಡಿದ್ದೆ, ಆಮೇಲೆ ಪಾತ್ರದ ಬಗ್ಗೆ ಕೇಳಿ ತುಂಬ ಇಷ್ಟ ಆಗಿ ಒಪ್ಪಿಕೊಂಡೆ.
ಪ್ರ: 'ಅಮೃತಧಾರೆʼ ಮೊದಲ ಶೂಟಿಂಗ್ ಅನುಭವದ ಬಗ್ಗೆ ಹೇಳಿ
ನಾನು ಎಂಟು ವರ್ಷದ ನಂತರ ಕ್ಯಾಮರಾ ಮುಂದೆ ಬಂದಿದ್ದೆ. ಹೊರಗಡೆ ಮೊದಲ ದಿನದ ಶೂಟಿಂಗ್ ಇತ್ತು. ಛಾಯಾ ಸಿಂಗ್ ಅವರ ಜೊತೆ ಮೊದಲ ಎಪಿಸೋಡ್ ಶೂಟಿಂಗ್‌ನಲ್ಲಿ ಭಾಗವಹಿಸಿದೆ, ತುಂಬ ಬೇಗ ಬೇಗ ಶೂಟಿಂಗ್ ಆಗಿ ಚೆನ್ನಾಗಾಯ್ತು.
ಪ್ರ: 'ಅಮೃತಧಾರೆʼ ಧಾರಾವಾಹಿ ಪಾರ್ಥ ಪಾತ್ರದ ಬಗ್ಗೆ ಹೇಳಿ
ಉ: ಪಾರ್ಥ ಪಾತ್ರಕ್ಕೂ ನನಗೂ ವ್ಯತ್ಯಾಸವಿದೆ. ಪಾರ್ಥ ತುಂಬ ಹೈಪರ್ ಆಕ್ಟಿವ್, ಆದ್ರೆ ನಾನು ಹಾಗಲ್ಲ. ಬೆಳಗ್ಗೆಯಿಂದ ರಾತ್ರಿವರೆಗೆ ಆ ಎನರ್ಜಿ ಮ್ಯಾನೇಜ್ ಮಾಡೋದು ತುಂಬ ಕಷ್ಟ.
ವೀಕ್ಷಕರು ಏನು ಹೇಳ್ತಾರೆ?
ಉ: ನನ್ನ ಅಪೇಕ್ಷಾ ಪಾತ್ರ ಅನೇಕರಿಗೆ ಇಷ್ಟ ಆಗಿದೆ. ನಿನ್ನ ಹೆಂಡ್ತಿ ಅಪೇಕ್ಷಾಗೆ ಬುದ್ಧಿ ಕಲಿಸು ಅಂತ ಕೆಲವರು ಹೇಳ್ತಾರೆ. ಇನ್ನೂ ಕೆಲವರು ನನ್ನ ನೋಡಿ ನೀವು ಬಾಲಿವುಡ್‌ನವ್ರಾ? ಹಾಲಿವುಡ್‌ನವ್ರಾ ಅಂತ ಪ್ರಶ್ನೆ ಮಾಡಿದ್ದುಂಟು. ಆದರೆ ನಾನು ಸಕಲೇಶಪುರದ ಹುಡುಗ, ಪಕ್ಕಾ ಕನ್ನಡಿಗ
(ಸಂದರ್ಶನ: ಪದ್ಮಶ್ರೀ ಭಟ್, ಪಂಚಮಿ ಟಾಕ್ಸ್)