ಅಮೃತಧಾರೆ: ಅಮ್ಮನ ಮಾತು ಧಿಕ್ಕರಿಸಿ ಪಾರ್ಥನಿಗೆ ಕಂಪನಿಯ ಡಿಎಫ್‌ಒ ಹುದ್ದೆ; ಜೈದೇವ್‌ಗೆ ತನ್ನ ಸೀಟ್ ಬಿಟ್ಟು ಕೊಡುವುದಕ್ಕೂ ಗೌತಮ್ ರೆಡಿ
Oct 17, 2024 05:43 PM IST
ಅಮ್ಮನ ಮಾತು ಧಿಕ್ಕರಿಸಿ ಪಾರ್ಥನಿಗೆ ಕಂಪನಿಯ ಡಿಎಫ್‌ಒ ಹುದ್ದೆ ನೀಡಲು ಮುಂದಾದ ಗೌತಮ್ ದಿವಾನ್
- ಜೀ ಕನ್ನಡವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಕೊನೆಗೂ ಗೌತಮ್ ದಿವಾನ್ ತನ್ನ ಮನಸ್ಸಿನ ಮಾತು ಕೇಳಿದ್ದಾರೆ. ಸಿಎಫ್‌ಒ ಹುದ್ದೆಗೆ ಜೈದೇವ್ ಸೂಕ್ತವಲ್ಲ ಎಂದುಕೊಂಡಿದ್ದಾರೆ. ಆತ ಸಂಪೂರ್ಣವಾಗಿ ಸರಿಯಾದ್ರೆ ಮುಂದೆ ನನ್ನ ಸೀಟು ಬಿಟ್ಟುಕೊಡಲು ರೆಡಿ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.
ಅಮೃತಧಾರೆ ಧಾರಾವಾಹಿಯ ಇಂದಿನ (ಅಕ್ಟೋಬರ್ 17) ಸಂಚಿಕೆಯಲ್ಲಿ ಗೌತಮ್ ದಿವಾನ್ ದೃಢ ನಿರ್ಧಾರ ತೆಗೆದುಕೊಂಡಿದ್ದಾನೆ. ಅಮ್ಮನ ವಿನಂತಿಗೆ ಒಪ್ಪದೇ ಪಾರ್ಥನನ್ನೇ ಆ ಸ್ಥಾನಕ್ಕೆ ಆಯ್ಕೆ ಮಾಡಲು ನಿರ್ಧರಿಸಿದ್ದಾನೆ. ಭೂಮಿಕಾ ಹೇಳಿದಂತೆ "ಯಾರು ಹೇಳಿದ್ರು" "ಯಾಕೆ ಹೇಳಿದ್ರು" ಇತ್ಯಾದಿ ಸೆಂಟಿಮೆಂಟ್‌ಗಳಿಗೆ ಒಪ್ಪದೇ "ಏನು ಹೇಳಿದ್ರು" "ಯಾರು ನಿಜಕ್ಕೂ ಆ ಹುದ್ದೆಗೆ ಅರ್ಹ" ಎಂದು ಯೋಚಿಸಿ ನಿರ್ಧಾರ ತೆಗೆದುಕೊಂಡಿದ್ದಾನೆ. ಈ ನಿರ್ಧಾರದ ಸಮಯದಲ್ಲಿ ಅಮ್ಮನಿಗೊಂದು ವಾಯ್ಸ್ ಮೆಸೆಜ್ ಕಳುಹಿಸಿದ್ದಾನೆ. ಈ ಕುರಿತು ಹೆಚ್ಚಿನ ವಿವರ ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಪ್ರಮೋದಿಂದ ತಿಳಿದುಬಂದಿದೆ.
ಸಿಎಫ್‌ಒ ಹುದ್ದೆ ತನಗೇ ಖಾತ್ರಿ ಎಂದು ಕಾಯುತ್ತಿರುವ ಜೈದೇವ್
ಗೌತಮ್ ದಿವಾನ್ ತನ್ನ ಬೋರ್ಡ್ ಮೀಟಿಂಗ್‌ನಲ್ಲಿ ಎಲ್ಲರ ಮುಂದೆ ಮಾತನಾಡುತ್ತಿದ್ದಾನೆ. ಪಾರ್ಥ, ಜೈದೇವ್, ಆನಂದ್ ಸೇರಿದಂತೆ ಸಾಕಷ್ಟು ಜನರು ಅಲ್ಲಿದ್ದಾರೆ. ಅದು ಮುಂದಿನ ಸಿಎಫ್‌ಒ ಹುದ್ದೆಗೆ ಅರ್ಹರನ್ನು ಆಯ್ಕೆ ಮಾಡುವ ಸಮಯ. ಈ ಕುರಿತು ತನ್ನ ಆಯ್ಕೆಯನ್ನು ಪ್ರಕಟಿಸುವ ಮುನ್ನ ಭಾಷಣ ಮಾಡುತ್ತಾನೆ. ಈ ಹುದ್ದೆ ತನಗೇ ಸಿಗುತ್ತದೆ ಎಂದು ಜೈದೇವ್ ಕಾಯುತ್ತಿದ್ದಾನೆ. ಅಮ್ಮ ಹೇಳಿರುವ ಕಾರಣ ಈ ಪೋಸ್ಟ್ ನನಗೆ ಬಿಟ್ಟು ಬೇರೆ ಯಾರಿಗೂ ದೊರಕದು ಎಂದು ಆತ ಆಲೋಚಿಸುತ್ತಿದ್ದಾನೆ. ಪಾರ್ಥ ಎಂದಿನ ಎಕೈಟ್‌ಮೆಂಟ್‌ನಲ್ಲಿದ್ದಾನೆ. ಆದರೆ, ಆತನಿಗೆ ತನಗೇ ಸಿಗಬೇಕೆಂದು ಇಲ್ಲ.
"ಈ ಹುದ್ದೆ ತುಂಬಾ ದೊಡ್ಡ ಜವಾಬ್ದಾರಿ. ಆತ ಒಳ್ಳೆಯ ಸಂಪನ್ಮೂಲ ವ್ಯಕ್ತಿ ಆಗಿರಬೇಕಾಗುತ್ತದೆ. ಚೆನ್ನಾಗಿ ತಿಳಿದುಕೊಂಡವನಾಗಿರಬೇಕಾಗುತ್ತದೆ. ತುಂಬಾ ಎಥಿಕಲ್ ಆಗಿರಬೇಕಾಗುತ್ತದೆ" ಎಂದ ಗೌತಮ್‌ಗೆ ಎಥಿಕಲ್ ವಿಷಯ ಕಾಡುತ್ತದೆ. ಇನ್ನೇನೂ ಕವರ್ ತೆರೆದು ಮುಂದಿನ ಸಿಎಫ್‌ಒ ಯಾರು ಎಂದು ಘೋಷಿಸಬೇಕೆಂದುಕೊಂಡ ಗೌತಮ್‌ಗೆ ಭೂಮಿಕಾ ಹೇಳಿದ ಮಾತು ನೆನಪಿಗ ಬರುತ್ತದೆ. "ಯಾವ ಕಡೆಗೆ ವಾಲಬೇಕೆಂಬ ಯೋಚನೆ ಬಿಟ್ಟುಬಿಡಿ. ಆರಾಮವಾಗಿ ಕುಳಿತು ಯೋಚನೆ ಮಾಡಿ. ಯಾರನ್ನು ಆಯ್ಕೆ ಮಾಡಿಕೊಂಡರೆ ಸರಿಯಾಗುತ್ತದೆ ಎನಿಸುತ್ತದೆಯೋ ಅದನ್ನೇ ಮಾಡಿ" ಎಂದು ಭೂಮಿಕಾ ಹೇಳಿದ ಮಾತು ನೆನಪಿಸಿಕೊಳ್ಳುತ್ತಾನೆ.
"ಸಾರಿ ಗಯ್ಸ್, ಐ ವಾಟ್ ಸಮ್ ಮೋರ್ ಟೈಮ್" ಎಂದು ಹೊರಹೋಗುತ್ತಾನೆ. "ಜೈದೇವ್‌ಗೆ ಕೊಟ್ಟರೆ ನನ್ನ ಫ್ಯಾಮಿಲಿ ಮಾತ್ರವಲ್ಲ, ಈ ಕಂಪನಿ ನಂಬಿಕೊಂಡಿರುವ ಉದ್ಯೋಗಿಗಳ ಮೇಲೂ ಪರಿಣಾಮ ಬೀರಬಹುದು. ಈಗ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎನಿಸುತ್ತದೆ. ನನ್ನ ಒಳಮನಸ್ಸು ಏನು ಹೇಳುತ್ತದೆಯೋ ಅದನ್ನೇ ಮಾಡುವೆ" ಎಂದು ಯೋಚಿಸುತ್ತಾನೆ. ಅಮ್ಮನಿಗೆ ವಾಯ್ಸ್ ಮೆಸೆಜ್ ಕಳುಹಿಸುತ್ತಾನೆ.
ಅಮ್ಮನಿಗೆ ವಾಯ್ಸ್ ಮೆಸೆಜ್ ಕಳುಹಿಸಿದ ಗೌತಮ್ ದಿವಾನ್
"ಅಮ್ಮ ನಿಮ್ಮ ಆಸೆ ಈಡೇರಿಸಲು ಆಗುತ್ತಿಲ್ಲ. ಒಬ್ಬ ಕಂಪನಿಯ ಓನರ್ ಆಗಿ ನನಗೆ ಇದು ಸರಿಯಾದ ನಿರ್ಧಾರ ಅನಿಸುತ್ತಿಲ್ಲ. ಹಾಗಾಗಿ ಜೈದೇವ್‌ನನ್ನು ಈ ಪೋಸ್ಟ್‌ಗೆ ಕನ್ಸಿಡರ್ ಮಾಡುತ್ತಿಲ್ಲ. ದಯವಿಟ್ಟು ತಪ್ಪು ತಿಳಿದುಕೊಳ್ಳಬೇಡಿ, ಅನ್ಯಥಾ ಭಾವಿಸಬೇಡಿ. ಜೈದೇವ್ ತನ್ನನ್ನು ತಾನು ಬದಲಾಯಿಸಿಕೊಳ್ಳುವುದು ತುಂಬಾ ಇದೆ ಅಮ್ಮ. ಅವನು ತನ್ನ ತಪ್ಪನ್ನು ತಿದ್ದಿಕೊಂಡು ಕಂಪ್ಲಿಟ್ ಆಗಿ ಬದಲಾಗಿದ್ದಾನೆ ಎಂದು ನನಗೆ ಯಾವಾಗ ಅನಿಸುತ್ತದೆಯೋ ಆಗ ಅವನಿಗೆ ಒಳ್ಳೆಯ ಹುದ್ದೆ ಕೊಡಲು ನಾನು ರೆಡಿ, ಬೇಕಿದ್ರೆ ನನ್ನ ಸೀಟ್ ಬಿಟ್ಟಕೊಡಲು ರೆಡಿಯಾಗಿದ್ದೇನೆ. ಆದರೆ, ಈಗ ನಾನು ನನ್ನ ಡಿಸಿಸನ್ ಪ್ರಕಾರವೇ ಹೋಗುತ್ತೇನೆ ಅಮ್ಮ" ಎಂದು ಹೇಳುತ್ತಾರೆ ಗೌತಮ್ ದಿವಾನ್. ಈ ಮೂಲಕ ಶಕುಂತಲಾದೇವಿ ಶಿಫಾರಸು ಒಪ್ಪದೇ ಸರಿಯಾದ ನಿರ್ಧಾರ ಕೈಗೊಂಡಿದ್ದಾರೆ ಡುಮ್ಮ ಸಾರ್.
ಅಮೃತಧಾರೆ ಸೀರಿಯಲ್ ಪಾತ್ರವರ್ಗ
ಛಾಯಾ ಸಿಂಗ್: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್ ದಿವಾನ್ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್ ಮಲತಾಯಿ)
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್ ತಂದೆ)
ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ಸಾರಾ ಅಣ್ಣಯ್ಯ : ಮಹಿಮಾ (ಗೌತಮ್ ತಂಗಿ, ಶಂಕುತಳಾ ಮಗಳು, ಜೀವನ್ ಹೆಂಡತಿ)
ಶಶಿ ಹೆಗ್ಗಡೆ: ಜೀವನ್ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)
ರಣವ್: ಜೈದೇವ್
ಚಂದನ್: ಅಶ್ವಿನಿ
ಸ್ವಾತಿ: ಅಪರ್ಣಾ (ಆನಂದ್ ಹೆಂಡತಿ)
ಆನಂದ್: ಆನಂದ್ (ಗೌತಮ್ ಸ್ನೇಹಿತ, ಅಪರ್ಣಾ ಗಂಡ)