ಜೈದೇವ್‌ನನ್ನು ಗೃಹಬಂಧನದಲ್ಲಿರಿಸಿದ ಗೌತಮ್‌ ದಿವಾನ್‌, ಕ್ಲಬ್‌ನಲ್ಲಿ ಆಡಿ 10 ಲಕ್ಷ ರೂ ಕಳೆದುಕೊಂಡ ಅಪೇಕ್ಷಾ- ಅಮೃತಧಾರೆ ಧಾರಾವಾಹಿ-televison apeksha loses money in gambling goutham given punishment to jaidev amruthadhaare serial today episode pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಜೈದೇವ್‌ನನ್ನು ಗೃಹಬಂಧನದಲ್ಲಿರಿಸಿದ ಗೌತಮ್‌ ದಿವಾನ್‌, ಕ್ಲಬ್‌ನಲ್ಲಿ ಆಡಿ 10 ಲಕ್ಷ ರೂ ಕಳೆದುಕೊಂಡ ಅಪೇಕ್ಷಾ- ಅಮೃತಧಾರೆ ಧಾರಾವಾಹಿ

ಜೈದೇವ್‌ನನ್ನು ಗೃಹಬಂಧನದಲ್ಲಿರಿಸಿದ ಗೌತಮ್‌ ದಿವಾನ್‌, ಕ್ಲಬ್‌ನಲ್ಲಿ ಆಡಿ 10 ಲಕ್ಷ ರೂ ಕಳೆದುಕೊಂಡ ಅಪೇಕ್ಷಾ- ಅಮೃತಧಾರೆ ಧಾರಾವಾಹಿ

Amruthadhaare Serial today episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಸೀರಿಯಲ್‌ನ ಸೆಪ್ಟೆಂಬರ್‌ 3ರ ಎಪಿಸೋಡ್‌ನಲ್ಲಿ ಸಾಕಷ್ಟು ಹೊಸ ಬೆಳವಣಿಗೆಗಳು ನಡೆದಿವೆ. ಜೈದೇವ್‌ಗೆ ಕಪಾಳಮೋಕ್ಷ ಮಾಡಿರುವ ಗೌತಮ್‌ ಆತನಿಗೆ ಗೃಹಬಂಧನದ ಶಿಕ್ಷೆ ನೀಡಿದ್ದಾನೆ. ಇನ್ನೊಂದೆಡೆ ಕ್ಲಬ್‌ನಲ್ಲಿ ಆಡಿ ಅಪೇಕ್ಷಾ 10 ಲಕ್ಷ ರೂಪಾಯಿ ಕಳೆದುಕೊಂಡಿದ್ದಾಳೆ.

ಅಮೃತಧಾರೆ ಧಾರಾವಾಹಿ
ಅಮೃತಧಾರೆ ಧಾರಾವಾಹಿ

ಝೀ ಕನ್ನಡ ಅಮೃತಧಾರೆ ಧಾರಾವಾಹಿ ಕಥೆ: ಅಪೇಕ್ಷಾ ಮನೆಯಲ್ಲಿ ಒಬ್ಬಳೇ ಯೋಚಿಸುತ್ತಾ ಇದ್ದಾಳೆ. ಶಕುಂತಲಾದೇವಿ ಬಂದು ಮಾತನಾಡುತ್ತಾರೆ. ಒಬ್ಬಳೇ ಬೋರ್‌ ಆಗುತ್ತದೆ ಎನ್ನುತ್ತಾಳೆ. "ನನಗೂ ಮೊದಲು ಬೋರ್‌ ಆಗುತ್ತಿತ್ತು. ನನ್ನದೇ ಫ್ರೆಂಡ್‌ ಸರ್ಕಲ್‌ ಕ್ರಿಯೆಟ್‌ ಮಾಡಿದ್ದೇನೆ. ಕ್ಲಬ್‌ಗೆ ಹೋಗ್ತಿನಿ. ನೀನೂ ನನ್ನ ಜತೆ ಯಾಕೆ ಕ್ಲಬ್‌ಗೆ ಬರಬಾರದು" ಎಂದು ಶಕುಂತಲಾದೇವಿ ಹೇಳುತ್ತಾರೆ. "ನೀನೀಗ ಮೊದಲಿನ ಅಪೇಕ್ಷಾ ಅಲ್ಲ. ನಿನಗೂ ಸ್ವಲ್ಪ ಚೇಂಜ್‌ ದೊರಕುತ್ತದೆ" ಎನ್ನುತ್ತಾರೆ. ಅದಕ್ಕೆ ಅಪೇಕ್ಷಾ "ನನಗೆ ಅದೆಲ್ಲ ಅಭ್ಯಾಸ ಇಲ್ಲ ಅತ್ತೆ" ಎಂದರೂ ಕೇಳದೇ ಅಪೇಕ್ಷಾಳನ್ನು ಒತ್ತಾಯ ಮಾಡಿ ಕರೆದುಕೊಂಡು ಕ್ಲಬ್‌ಗೆ ಹೋಗುತ್ತಾಳೆ.

ಚಮಕ್‌ಚಲ್ಲೋ ದಿಯಾ ಜತೆ ಇರುವಾಗಲೂ ಜೈದೇವ್‌ ಟೆನ್ಷನ್‌ನಲ್ಲಿ ಯೋಚಿಸುತ್ತಾ ಇದ್ದಾನೆ. ಇಬ್ಬರು ಕಾರಲ್ಲಿ ಮಾತನಾಡುತ್ತ ಇದ್ದಾರೆ. "ಹೇಗಾದರೂ ಮಲ್ಲಿಗೆ ಗೇಟ್‌ ಪಾಸ್‌ ನೀಡಬೇಕು. ಆಗ ನಮ್ಮಿಬ್ಬರ ರೂಟ್‌ ಕ್ಲಿಯರ್‌ ಆಗುತ್ತದೆ" ಎಂದು ಜೈದೇವ್‌ ಹೇಳಿದಾಗ ದಿಯಾಗೆ ಖುಷಿಯಾಗುತ್ತದೆ. "ಅವಳು ಇಲ್ಲದೆ ಇದ್ದರೆ ನಾವು ಎಷ್ಟು ಆರಾಮವಾಗಿರಬಹುದಿತ್ತು ಅಲ್ವಾ" ಎಂದು ದಿಯಾ ಹೇಳುತ್ತಾಳೆ. "ಇರಿಟೇಷನ್‌, ಕಾಟ ಕೊಡ್ತಾಳೆ. ಅವಳು ಇಲ್ಲದೆ ಇದ್ದರೆ ಆರಾಮವಾಗಿ ಇರಬಹುದಿತ್ತು" ಎಂದೆಲ್ಲ ಜೈದೇವ್‌ ಹೇಳುತ್ತಾನೆ. ಹೀಗೆ ಇಬ್ಬರು ಅಕ್ರಮ ಸಂಬಂಧದ ಕಷ್ಟಸುಖ ಮಾತನಾಡುತ್ತಾರೆ.

ಜೈದೇವ್‌ ಮನೆಗೆ ಬಂದಾಗ ಮಲ್ಲಿ ಎದುರಾಗುತ್ತಾಳೆ. "ಎಲ್ಲಿ ಪ್ರಸಾದ" ಎಂದು ಕೇಳುತ್ತಾಳೆ. ಅವನಿಗೆ ಅದು ಮರೆತು ಹೋಗಿದೆ. "ನನಗೆ ಪ್ರಸಾದ ಎಲ್ಲಾ ನಂಬಿಕೆ ಇಲ್ಲ. ದೇವರಿಗೆ ಕೈಮುಗಿದು ಪೂಜೆ ಮಾಡಿಸಿ ಬಂದೆ" ಎಂದು ಜೈದೇವ್‌ ಹೇಳುತ್ತಾನೆ. "ನಮಗೆ ನಿಮ್ಮಂತಹ ಗಂಡ ದೊರಕಿದ್ರಿ ಅಲ್ವಾ. ನನಗೆ ಅದೇ ಪ್ರಸಾದ" ಎಂದು ಹೇಳುತ್ತಾಳೆ. ನಿಮ್ಮನ್ನು ಭಾವ ಬರೋಕ್ಕೆ ಹೇಳಿದ್ರು ಎಂದು ಮಲ್ಲಿ ಹೇಳಿದಾಗ ಟೆನ್ಷನ್‌ನಿಂದಲೇ ಜೈದೇವ್‌ ಗೌತಮ್‌ ಬಳಿಗೆ ಹೋಗುತ್ತಾನೆ.

"ದೇವಾಲಯಕ್ಕೆ ಹೋಗಿ ಬಂದೆ ಅಂತೆ. ಖುಷಿಯಾಯ್ತು" ಎಂದು ಗೌತಮ್‌ ಹೇಳುತ್ತಾನೆ. ಒಂದಿಷ್ಟು ಔಪಚಾರಿಕವಾಗಿ ಮಾತನಾಡಿದ ಬಳಿಕ "ಪಾರ್ಥ ಮತ್ತು ಅಪೇಕ್ಷಾರಿಗೆ ಯಾರೋ ಅಟ್ಯಾಕ್‌ ಮಾಡಿದ್ರು. ಅವರನ್ನು ಕೊಲೆ ಮಾಡಲು ಯತ್ನಿಸಿದರು. ಆದರೆ, ಈ ರೀತಿ ಕೊಲೆ ಮಾಡಲು ಯತ್ನಿಸಿದ್ದು ಯಾರು ಎಂದು ನೀನು ಕಂಡುಹಿಡಿಯಬೇಕು" ಎಂದು ಗೌತಮ್‌ ಹೇಳುತ್ತಾನೆ. ಇದನ್ನು ಕೇಳಿ ಜೈದೇವ್‌ಗೆ ಖುಷಿಯಾಗುತ್ತದೆ. ಕಳ್ಳನ ಕೈಗೆ ಕೀಲಿಕೈ ಕೊಟ್ಟಂತೆ ಆಯ್ತು ಎಂದು ಯೋಚಿಸುತ್ತಾನೆ. "ನಮ್ಮ ಪಾರ್ಥ ಮಗುವಿನಂತೆ. ಅವನಿಗೆ ಹೊಡೆಯಲು ಯತ್ನಿಸಿದ್ದಾರ? ಅವರನ್ನು ಸುಮ್ಮನೆ ಬಿಡಬಾರದು" ಎಂದೆಲ್ಲ ಜೈದೇವ್‌ ಮಾತನಾಡಿದಾಗ ಗೌತಮ್‌ ಕೋಪದಿಂದ ಅನುಮಾನದಿಂದಲೇ ನೋಡುತ್ತಾನೆ. ಆ ಸಮಯದಲ್ಲಿ ಗೌತಮ್‌ ಕೋಪದಿಂದ ಜೈದೇವ್‌ನ ಕೆನ್ನೆಗೆ ಎರಡೇಟು ಹೊಡೆಯುತ್ತಾರೆ. ಜೈದೇವ್‌ಗೆ ಶಾಕ್‌ ಆಗುತ್ತದೆ.

ಕ್ಲಬ್‌ನಲ್ಲಿ ಆಡಿ 10 ಲಕ್ಷ ರೂ ಕಳೆದುಕೊಂಡ ಅಪೇಕ್ಷಾ

ಇನ್ನೊಂದೆಡೆ ಕ್ಲಬ್‌ನಿಂದ ವಾಪಸ್‌ ಬಂದ ಅಪೇಕ್ಷಾ ಟೆನ್ಷನ್‌ನಲ್ಲಿದ್ದಾಳೆ. ಕ್ಲಬ್‌ಗೆ ಹೋಗಿ 10 ಲಕ್ಷ ರೂಪಾಯಿ ಕಳೆದುಕೊಂಡಿದ್ದೇನೆ ಎಂದು ಟೆನ್ಷನ್‌ ಆಗುತ್ತಾಳೆ. "ಅಯ್ಯೋ ಅಷ್ಯಾಕೆ ಟೆನ್ಷನ್‌ ಮಾಡ್ತಿ. ಆಫ್ಟರಾಲ್‌ 10 ಲಕ್ಷ" ಎನ್ನುತ್ತಾಳೆ ಶಕುಂತಲಾದೇವಿ. "ಅಯ್ಯೋ ಅಷ್ಟು ಹಣದಲ್ಲಿ ನಮ್ಮ ಮನೆಯಲ್ಲಿ ಒಂದು ವರ್ಷದ ಖರ್ಚು ಹೋಗುತ್ತದೆ. ನಮ್ಮ ಮನೆಯಲ್ಲಿ ಇದಾಗಿದ್ರೆ ಎಲ್ಲರೂ ಎದೆ ಹೊಡೆದುಕೊಳ್ಳುತ್ತಾ ಇದ್ರು" ಎಂದೆಲ್ಲ ಅಪೇಕ್ಷಾ ಹೇಳುತ್ತಾಳೆ. "ನೀನೀಗ ಹಳೆಯ ಅಪೇಕ್ಷಾ ಅಲ್ಲ. ನಮ್ಮ ಲೆವೆಲ್‌ನಲ್ಲಿ ಯೋಚನೆ ಮಾಡು" ಎಂದು ಶಕುಂತಲಾದೇವಿ ಹೇಳುತ್ತಾರೆ. "ಅದು ಚಿಕ್ಕ ಅಮೌಂಟ್‌ ಅಲ್ಲ" ಎಂದು ಅಪೇಕ್ಷಾ ಹೇಳಿದಾಗ "ನಮಗೆ ಅದೆಲ್ಲ ಲೆಕ್ಕವಿಲ್ಲ. ನಮಗೆ ಹಣ ಸಮುದ್ರದಂತೆ. ಎಷ್ಟು ತೆಗೆದುಕೊಂಡರೂ ಖಾಲಿಯಾಗುವುದಿಲ್ಲ. ಇನ್ನು ಎರಡು ಜನ್ಮ ಕುಳಿತು ತಿನ್ನುವಷ್ಟು ಹಣ ಇದೆ" ಎಂದು ಶಕುಂತಲಾದೇವಿ ಹೇಳುತ್ತಾರೆ. ಹೀಗಿದ್ದರೂ ಅಪೇಕ್ಷಾಳಿಗೆ ಗೊಂದಲ ಮುಂದುವರೆಯುತ್ತದೆ.

ಗೌತಮ್‌ ಹೊಡೆದಾಗ ಜೈದೇವ್‌ಗೆ ಅಚ್ಚರಿಯಾಗುತ್ತದೆ. "ಡ್ರಾಮಾ ಮಾಡ್ತಾ ಇದ್ದೀಯ. ಮಾಡಿದ್ದೆಲ್ಲ ಮಾಡಿ ನಾಟಕ ಮಾಡ್ತಾ ಇದ್ದೀಯ. ಮನುಷ್ಯನಾ ನೀನು. ನಾಚಿಕೆಯಾಗಬೇಕು ನಿನಗೆ. ಅವರನ್ನು ಸಾಯಿಸಲು ನೋಡಿದ್ಯ. ಮಲ್ಲಿಗೆ ಮೋಸ ಮಾಡಿ ದಿಯಾಳ ಜತೆ ಹೋಗಿದ್ಯ. ದ್ವೇಷ ಸಾಧಿಸಲು ಹೋಗ್ತ ಇದ್ದಿಯಾ. ನನಗೆ ಎಲ್ಲಾ ಗೊತ್ತಾಗಿದೆ. ಇನ್ನೊಂದುಸಲ ಈ ರೀತಿ ಮಾಡಿದ್ರೆ ಪರಿಣಾಮ ಬೇರೆರೀತಿ ಇರುತ್ತದೆ" ಎಂದೆಲ್ಲ ಗೌತಮ್‌ ಹೇಳಿದಾಗ ಜೈದೇವ್‌ "ಸಾರಿ ಬ್ರೋ" ಎಂದು ಹೇಳಿದಾಗ ಗೌತಮ್‌ ಬೈಗುಳ ಮುಂದುವರೆಯುತ್ತದೆ. "ವಿಷಯ ಗೊತ್ತಾದಗ ನನಗೆ ಎಷ್ಟು ಸಂಕಟ ಆಯ್ತು. ನಿಂತ ನೆಲ ಕುಸಿದೋಯ್ತು. ಇದು ರಿಪೀಟ್‌ ಆಗಬಾರದು. ರಿಪೀಟ್‌ ಆದ್ರೆ ಮುಂದೆ ಏನಾಗಬೇಕೋ ಅದನ್ನು ಎದುರಿಸಲು ರೆಡಿಯಾಗು" ಎಂದು ಹೇಳಿ ಗೌತಮ್‌ ಹೋಗುತ್ತಾನೆ.

ಪಾರ್ಥ ಮನೆಯಲ್ಲಿ ಅಪೇಕ್ಷಾಳ ಬಳಿ ಬರುತ್ತಾನೆ. ಎಲ್ಲಿ ಹೋಗಿದ್ರಿ ಎಂದು ಕೇಳುತ್ತಾನೆ. "ಅತ್ತೆ ಕರೆದ್ರು ಅಂತ ಕ್ಲಬ್‌ಗೆ ಹೋದೆ" ಎಂದು ಹೇಳುತ್ತಾಳೆ. "ನಿಮಗೆ ಆ ಜಾಗ ಸೆಟ್‌ ಆಗೋದಿಲ್ಲ. ಯಾಕೆ ಹೋದ್ರಿ" ಎಂದು ಪಾರ್ಥ ಕೇಳುತ್ತಾನೆ. "ಅತ್ತೆ ಹೇಳಿದ್ರು..." ಎಂದಾಗ "ನೀವು ಕ್ಲಬ್‌ಗೆ ಬೇಕಾದ್ರೆ ಹೋಗಿ ಆದರೆ, ಗ್ಯಾಂಬ್ಲಿಂಗ್‌, ಕಾರ್ಡ್ಸ್‌ ಎಂದೆಲ್ಲ ಆಡಬೇಡಿ. ಅದರಿಂದ ಮನೆಮಠ ಮಾರಬೇಕಾಗುತ್ತದೆ. ಅಂದಹಾಗೆ ನೀವು ಅದರಲ್ಲಿ ಇನ್ವಾಲ್‌ ಆಗಿಲ್ಲ ಅಲ್ವ?" ಎಂದು ಕೇಳುತ್ತಾನೆ ಪಾರ್ಥ. "ಇಲ್ಲ ಇಲ್ಲ ನನಗೆ ಕಾರ್ಡ್ಸ್‌ ಹೇಗೆ ಹಿಡಿಯೋದು ಅಂತಾನೇ ಗೊತ್ತಿಲ್ಲ" ಎಂದು ತಡವರಿಸಿ ಹೇಳುತ್ತಾಳೆ ಅಪೇಕ್ಷಾ. "ಈ ಗ್ಯಾಂಬ್ಲಿಂಗ್‌ ಆಟ ಇತ್ಯಾದಿ ನಮ್ಮ ಮೆಂಟಲ್‌ ಹಾಳು ಮಾಡುತ್ತದೆ. ನಾನು ಅಷ್ಟು ಕಳೆದುಕೊಂಡಿದ್ದೇನೆ, ಇಷ್ಟು ಕಳೆದುಕೊಂಡಿದ್ದೇನೆ ಎಂದು ಯೋಚಿಸಿ ತಲೆ ಹಾಳಾಗುತ್ತದೆ" ಎಂದು ಪಾರ್ಥ ಹೇಳುತ್ತಾನೆ. "ಸ್ಮಶಾನಕ್ಕೆ ಹೋದ ಹೆಣ, ಕ್ಲಬ್‌ಗೆ ಹೋದ ಹಣ ವಾಪಸ್‌ ಬರೋದಿಲ್ಲ. ಇಲ್ಲಿ ಗೆದ್ದವರಿಗಿಂತ ಸೋತವರೇ ಹೆಚ್ಚು. ನೀವು ಇದರಲ್ಲಿ ಇನ್ವಾಲ್‌ ಆಗಬೇಡಿ. ಇದು ಸಜೆಷನ್‌ ಅಲ್ಲ. ಇದು ವಾರ್ನಿಂಗ್‌" ಎಂದೆಲ್ಲ ಪಾರ್ಥ ಹೇಳಿ ಹೋಗುತ್ತಾನೆ. "ಅಯ್ಯೋ ನಾನು ಸೋತರೆ ನನಗೆ ಗಂಡ ಸಪೋರ್ಟ್‌ ಮಾಡೋಲ್ಲ. ಅತ್ತೆ ಇರುವ ಕಾರಣ ಭಯ ಇಲ್ಲ" ಎಂದು ಯೋಚಿಸುತ್ತಾನೆ.

ಜೈದೇವ್‌ನನ್ನು ಗೃಹಬಂಧನದಲ್ಲಿರಿಸಿದ ಗೌತಮ್‌ ದಿವಾನ್‌

ಗೌತಮ್‌ ಎಲ್ಲರನ್ನೂ ಮೀಟಿಂಗ್‌ ಕರೆದಿದ್ದಾನೆ. ನಾನು ನಿಮಗೆಲ್ಲ ಒಂದು ವಿಷಯ ಹೇಳಬೇಕಿತ್ತು ಎಂದಾಗ ಜೈದೇವ್‌ಗೆ ಭಯವಾಗುತ್ತದೆ. "ಇನ್ನು ಮುಂದೆ ಜೈದೇವ್‌ ಈ ಮನೆ ಬಿಟ್ಟು ಎಲ್ಲಿಗೂ ಹೊರಗೆ ಹೋಗುವಂತೆ ಇಲ್ಲ. ಇನ್ನು ಮುಂದೆ ಇಲ್ಲೇ ಇರುತ್ತಾನೆ" ಎಂದು ಗೌತಮ್‌ ಹೇಳಿದಾಗ ಎಲ್ಲರಿಗೂ ಆಶ್ವರ್ಯವಾಗುತ್ತದೆ. ಯಾಕೆ ಎಂದು ಶಕುಂತಲಾ ಕೇಳುತ್ತಾರೆ. "ಅವನ ಅವಶ್ಯಕತೆ ಅಲ್ಲಿಗಿಂತ ಇಲ್ಲಿ ಜಾಸ್ತಿ ಇದೆ" ಎಂದು ಗೌತಮ್‌ ಹೇಳುತ್ತಾರೆ. ಸೀರಿಯಲ್‌ ಮುಂದುವರೆಯುತ್ತದೆ.

 

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)