ಅಮೃತಧಾರೆ ಧಾರಾವಾಹಿ: ಮುಖ್ಯ ಹಣಕಾಸು ಅಧಿಕಾರಿ ಹುದ್ದೆಗೆ ಜೈದೇವ್‌ ಪ್ರಯತ್ನ, ಭೂಮಿಕಾ ಕೊಟ್ಟ ಐಡಿಯಾದಿಂದ ಡುಮ್ಮಸರ್‌ ನಿರಾಳ
ಕನ್ನಡ ಸುದ್ದಿ  /  ಮನರಂಜನೆ  /  ಅಮೃತಧಾರೆ ಧಾರಾವಾಹಿ: ಮುಖ್ಯ ಹಣಕಾಸು ಅಧಿಕಾರಿ ಹುದ್ದೆಗೆ ಜೈದೇವ್‌ ಪ್ರಯತ್ನ, ಭೂಮಿಕಾ ಕೊಟ್ಟ ಐಡಿಯಾದಿಂದ ಡುಮ್ಮಸರ್‌ ನಿರಾಳ

ಅಮೃತಧಾರೆ ಧಾರಾವಾಹಿ: ಮುಖ್ಯ ಹಣಕಾಸು ಅಧಿಕಾರಿ ಹುದ್ದೆಗೆ ಜೈದೇವ್‌ ಪ್ರಯತ್ನ, ಭೂಮಿಕಾ ಕೊಟ್ಟ ಐಡಿಯಾದಿಂದ ಡುಮ್ಮಸರ್‌ ನಿರಾಳ

Amruthadhaare serial today 16 Oct 2024: ಗೌತಮ್‌ ದಿವಾನ್‌ ಕಂಪನಿಯ ಸಿಎಫ್‌ಒ ಹುದ್ದೆಗೆ ಐದು ಜನರನ್ನು ಶಾರ್ಟ್‌ ಲಿಸ್ಟ್‌ ಮಾಡಲಾಗಿದೆ. ಜೈದೇವ್‌ ಮತ್ತು ಪಾರ್ಥರ ನಡುವೆ ಈ ಹುದ್ದೆಗೆ ಯಾರನ್ನು ಆಯ್ಕೆ ಮಾಡಬೇಕೆಂಬ ಸಂದಿಗ್ಧತೆ ಗೌತಮ್‌ಗೆ ಇದೆ. ಈ ಸಂದರ್ಭದಲ್ಲಿ ಭೂಮಿಕಾ ನೀಡಿದ ಸಲಹೆ ಗೌತಮ್‌ನ ನಿರಾಳಗೊಳಿಸಿದೆ.

ಅಮೃತಧಾರೆ ಧಾರಾವಾಹಿ: ಮುಖ್ಯ ಹಣಕಾಸು ಅಧಿಕಾರಿ ಹುದ್ದೆಗೆ ಜೈದೇವ್‌ ಪ್ರಯತ್ನ
ಅಮೃತಧಾರೆ ಧಾರಾವಾಹಿ: ಮುಖ್ಯ ಹಣಕಾಸು ಅಧಿಕಾರಿ ಹುದ್ದೆಗೆ ಜೈದೇವ್‌ ಪ್ರಯತ್ನ

Amruthadhaare serial today 16 Oct 2024: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಕಥೆ- "ನನಗೆ ಏನು ಬೇಕಾಗುತ್ತದೆಯೋ ಅದನ್ನು ಪಡೆದೇ ತೀರುವೆ" ಎಂದು ಜೈದೇವ್‌ ಹೇಳುತ್ತಾನೆ. "ಅಲ್ಲಿ ನಿನ್ನ ಅಣ್ಣ ಸಿಎಫ್‌ಒ ಹುದ್ದೆಗೆ ಬೇರೆ ಜನರನ್ನು ಕೂರಿಸಲು ಚಿಂತಿಸುತ್ತಿದ್ದಾನೆ" ಎಂದು ರಮಾಕಾಂತ್‌ ಹೇಳುತ್ತಾರೆ. "ಆಫೀಸ್‌ನಿಂದ ಮೂವರನ್ನು, ಆಮೇಲೆ ನೀನು ಮತ್ತು ಪಾರ್ಥ ಸಿಎಫ್‌ಒ ಹುದ್ದೆಗೆ ಲಿಸ್ಟ್‌ ಮಾಡಿದ್ದಾನೆ" ಎಂದು ಮಾಹಿತಿ ನೀಡುತ್ತಾರೆ. "ಪಾರ್ಥ ನನಗೆ ಕಾಂಪಿಟೇಟರ್‌ ಅಲ್ಲ, ಉಳಿದ ಮೂವರನ್ನು ಡೀಲ್‌ ಮಾಡಿಕೊಂಡ್ರೆ ಅಯ್ತು" ಎನ್ನುತ್ತಾನೆ ಜೈದೇವ್‌. "ಈಗ ಪಾರ್ಥ ಭರವಸೆ ಹುಟ್ಟಿಸಿದ್ದಾನೆ. ಈಗ ಪಾರ್ಥನೇ ಎಲ್ಲಾ. ಮೊನ್ನೆ ದೊಡ್ಡ ಟೆಂಡರ್‌ ಸಿಕ್ಕಿದ್ದು ಅವನಿಂದಲೇ" ಎಂದು ಮಾವ ಹೇಳುತ್ತಾರೆ. ಸಿಎಫ್‌ಒ ಅಂದ್ರೆ ಚೀಫ್‌ ಫೈನಾನ್ಸ್‌ ಆಫೀಸರ್‌ ಹುದ್ದೆ ಅತ್ಯಂತ ಪ್ರಮುಖವಾದದ್ದು ಅದನ್ನು ಬಿಡಬೇಡ ಎಂದು ಕಿವಿ ಊದುತ್ತಾರೆ. ಜೈದೇವ್‌ ಮತ್ತೆ ಚಿಂತೆಗೆ ಬಿದ್ದಿದ್ದಾನೆ.

ಭೂಮಿಕಾ ಸ್ಪೂರ್ತಿದಾಯಕ ಮಾತುಗಳು

ಇನ್ನೊಂದೆಡೆ ಭೂಮಿಕಾಳನ್ನು ಪಾರ್ಥ ಹೊಗಳುತ್ತಾನೆ. ನಿಮ್ಮಿಂದಾಗಿ ನನಗೆ ಟೆಂಡರ್‌ ಸಿಗ್ತು ಎಂದು ಹೊಗಳುತ್ತಾನೆ. "ನಮ್ಮ ಕಂಪನಿಯಲ್ಲಿ ಸಿಎಫ್‌ಒ ಹುದ್ದೆ ಖಾಲಿ ಇದೆ. ಈ ಪೋಸ್ಟ್‌ಗೆ ಯಾರನ್ನು ತರಬೇಕೆಂದು ಮಾತುಕತೆ ನಡೆಯುತ್ತಿದೆ. ಆ ರೋಲ್‌ಗೆ ಆಯ್ಕೆ ಮಾಡಿಕೊಂಡವರ ಶಾರ್ಟ್‌ಲಿಸ್ಟ್‌ ಮಾಡಿರುವವರಲ್ಲಿ ನನ್ನ ಹೆಸರೂ ಇದೆ. ನನ್ನ ಹೆಸರು ಲಿಸ್ಟ್‌ಗೆ ಬಂದಿರೋದು ಖುಷಿಯಾಗಿದೆ" ಎಂದು ಹೇಳುತ್ತಾನೆ. "ನೀವು ಸೆಲೆಕ್ಟ್‌ ಆಗ್ತಿರಾ" ಎಂದು ಭೂಮಿಕಾ ಹೇಳುತ್ತಾಳೆ. "ನಾನು ಫ್ರೆಷರ್ಸ್‌, ಗ್ರಾಂ ಲೆಕ್ಕದಲ್ಲಿರೋದು ನಾನು" ಎನ್ನುತ್ತಾನೆ. "ಗ್ರಾಂನಲ್ಲಿ ಇರೋದು ಡೈಮಾಂಡ್‌ ಆಗಿದ್ದರೆ" ಎಂದು ಸ್ಪೂರ್ತಿದಾಯಕ ಮಾತುಗಳನ್ನು ಆಡುತ್ತಾರೆ. (ಎಷ್ಟು ಒಳ್ಳೆಯ ಮಾತು ಅಲ್ವಾ? ಬಂಗಾರ, ಕಬ್ಬಿಣದ ಬದಲು ವಜ್ರದ ಮೌಲ್ಯ ಜಾಸ್ತಿ, ವ್ಯಕ್ತಿತ್ವ ವಿಕಸನದ ಪಾಠ ಮಾಡ್ತಾ ಇದ್ದಾರೆ ಭೂಮಿಕಾ)

ಜೈದೇವ್‌ ಶಕುಂತಲಾದೇವಿ ಬಳಿಗೆ ಬಂದಿದ್ದಾನೆ. ಅಮ್ಮ ಮಾತನಾಡೋಲ್ಲ. ಕೋಪದಿಂದ ಇದ್ದಾರೆ. ಒಂದಿಷ್ಟು ಕ್ಷಮೆಯ ಮಾತುಗಳನ್ನಾಡುತ್ತಾನೆ. ತುಂಬಾ ಸೆಂಟಿಮೆಂಟ್‌ ಮಾತನಾಡಿ ಕೊನೆಗೆ ಸಿಎಫ್‌ಒ ಹುದ್ದೆಯ ಕುರಿತು ಮಾತನಾಡುತ್ತಾನೆ. "ನೀನು ಹೆತ್ತ ಮಗ ಅನ್ನೋ ಕಾರಣಕ್ಕೆ ನನಗೆ ಸಿಎಫ್‌ಒ ಹುದ್ದೆ ಸಿಗೋ ರೀತಿ ಮಾಡು, ಒಂದೇ ಹೆಲ್ಪ್‌ ಮಾಡು" ಎಂದು ಕೇಳುತ್ತಾನೆ. "ಸರಿ ನಾನು ಗೌತಮ್‌ ಬಳಿ ಮಾತನಾಡುತ್ತೇನೆ" ಎಂದು ಹೇಳುತ್ತಾರೆ.

ಡುಮ್ಮ ಸರ್‌ ಭೂಮಿಕಾಗೆ ಮಲ್ಲಿಗೆ ಹೂವು ತಂದಿದ್ದಾರೆ. ಟೆಂಡರ್‌ ಬಂದದ್ದಕ್ಕೆ ಲಂಚನಾ ಎಂದು ಕೇಳುತ್ತಾರೆ ಭೂಮಿಕಾ. ಒಂದಿಷ್ಟು ಮಧುರ ಮಾತುಗಳನ್ನಾಡುತ್ತಾರೆ. ಇದೇ ಸಂದರ್ಭದಲ್ಲಿ "ಪಾರ್ಥ ಅವರಿಗೆ ಸಿಎಫ್‌ಒ ಪೋಸ್ಟ್‌ಗೆ ಕನ್ಸಿಡರ್‌ ಮಾಡ್ತಿರಲ್ವ. ನಾನು ಹೇಳೋದನ್ನು ಶಿಫಾರಸು ಅಂದುಕೊಳ್ಳಬೇಡಿ, ಮನವಿ. ಪಾರ್ಥನನ್ನೇ ಆಯ್ಕೆ ಮಾಡಬಹುದಲ್ವ" ಎಂದು ಭೂಮಿಕಾ ಹೇಳುತ್ತಾಳೆ. "ಅವನಿಗೆ ಅರ್ಹತೆ ಇದೆ, ಆದರೆ, ಅನುಭವ ಇಲ್ಲ" ಎಂದು ಹೇಳುತ್ತಾರೆ. ಒಂದಿಷ್ಟು ಪ್ರೀತಿಯ ಮಾತುಗಳ ಮೂಲಕ ಈ ರಿಕ್ವೆಸ್ಟ್‌ ಕನ್ಸಿಡರ್‌ ಮಾಡುವೆ ಎಂದು ಗೌತಮ್‌ ಹೇಳುತ್ತಾರೆ. ಅದೇ ಸಮಯದಲ್ಲಿ ಶಕುಂತಲಾದೇವಿ ಫೋನ್‌ ಮಾಡಿ ಬರಲು ಹೇಳುತ್ತಾರೆ.

ತುತ್ತಾ.. ಮುತ್ತಾ…

ಶಕುಂತಲಾದೇವಿಯೂ ಅದೇ ವಿಷಯ ಮಾತನಾಡುತ್ತಾರೆ. "ನಮ್ಮ ಕಂಪನಿಯಲ್ಲಿ ಹೊಸ ಬೆಳವಣಿಗೆ ಆಗಿರೋದು ಖುಷಿಯಾಗಿದೆ. ಹೊಸ ಟೆಂಡರ್‌ ಸಿಕ್ಕಿದ್ದು ಖುಷಿಯಾಯ್ತು" ಎಂದು ಹೇಳುತ್ತಾರೆ. "ಇದು ಭೂಮಿಕಾ ಮತ್ತು ಪಾರ್ಥನಿಂದ ಟೆಂಡರ್‌ ಸಿಕ್ಕಿದ್ದು" ಎಂದು ಗೌತಮ್‌ ಹೇಳುತ್ತಾರೆ. "ಸಿಎಫ್‌ಒ ಹುದ್ದೆಗೆ ಜೈದೇವ್‌ನ ಸೆಲೆಕ್ಟ್‌ ಮಾಡು. ಇದು ನನ್ನ ರಿಕ್ವೆಸ್ಟ್‌" ಎಂದು ಹೇಳುತ್ತಾರೆ ಶಕುಂತಲಾದೇವಿ. "ಇಷ್ಟೆಲ್ಲ ಆದಮೇಲೂ ಅವನನ್ನು ಆ ಜಾಗದಲ್ಲಿ ಕೂರಿಸೋದು ಎಷ್ಟು ಸರಿ" ಎಂದು ಕೇಳುತ್ತಾರೆ ಗೌತಮ್‌. "ಸಮಸ್ಯೆ ಇದ್ದದ್ದು ಅವನು ಕ್ಯಾರೆಕ್ಟರ್‌ನಲ್ಲಿ. ಈಗ ತಿದ್ದಿಕೊಳ್ಳುತ್ತೇನೆ ಎಂದಿದ್ದಾನೆ. ತಿದ್ದಿಕೊಳ್ಳದೆ ಇದ್ದರೆ ಅವನಿಗೆ ಬೇರೆ ಭವಿಷ್ಯ ಇಲ್ಲ ಎಂದು ಅವನಿಗೆ ಗೊತ್ತಿದೆ" ಎಂದು ಹೇಳುತ್ತಾರೆ ಶಕುಂತಲಾ. "ನನಗೆ ಯಾಕೋ ಧೈರ್ಯ ಬರುತ್ತಿಲ್ಲ. ಅವನ ಮೇಲೆ ನಂಬಿಕೆ ಬರುತಿಲ್ಲ" ಎಂದು ಹೇಳುತ್ತಾರೆ. "ತಾಯಿಯಾಗಿ ಅವನನ್ನು ಹೀಗೆಯೇ ನೋಡುತ್ತಾ ಇರಲು ಆಗುತ್ತಿಲ್ಲ. ಅವನ ಮನಸ್ಸು ಏನಾಗುತ್ತದೆ ಗೊತ್ತಿಲ್ಲ. ಈ ರೀತಿ ಒಂದು ಜವಾಬ್ದಾರಿ ಕೊಟ್ಟರೆ ಅವನಿಗೆ ಉತ್ತೇಜನ ನೀಡಿದ ಹಾಗೇ ಆಗುತ್ತದೆ" ಎಂದು ಅಮ್ಮ ಹೇಳುತ್ತಾರೆ. ತುತ್ತಾಮುತ್ತಾ ಪ್ರಶ್ನೆ ಗೌತಮ್‌ ಮುಂದೆ ಬರುತ್ತದೆ.

ರೂಂಗೆ ಬಂದು ಗೌತಮ್‌ ಚಿಂತೆಯಲ್ಲಿದ್ದಾರೆ. ಭೂಮಿಕಾ ಕೇಳಿದರೂ ಹೇಳುತ್ತಿಲ್ಲ. ಕೊನೆಗೆ ಅಮ್ಮನ ರಿಕ್ವೆಸ್ಟ್‌ ಬಗ್ಗೆ ಹೇಳುತ್ತಾನೆ. "ಕಂಪನಿಯ ಸಿಎಫ್‌ಒ ಆಗಿ ಜೈದೇವ್‌ನ ಅಪಾಯಿಂಟ್‌ಮಾಡುತ್ತ ಎಂದು ಕೇಳಿಕೊಂಡರು" ಎನ್ನುತ್ತಾರೆ. "ಅವನನ್ನು ಸೈಡ್‌ಲೈನ್‌ ಮಾಡೋದು ಬೇಡ ಅಂದ್ರು. ನನಗೆ ಜೆನ್ಯುನ್‌ ಕನ್ಸರ್ನ್‌ ಕಾಣಿಸ್ತು. ಆದರೆ, ಪರ್ಸನಲಿ ನನಗೆ ಜೈದೇವ್‌ನ ಆ ಸೀಟ್‌ನಲ್ಲಿ ಕೂರಿಸಲು ಇಷ್ಟವಿಲ್ಲ. ಪಾರ್ಥ ಬೆಟರ್‌ ಆಪ್ಷನ್‌" ಎನ್ನುತ್ತಾನೆ.

ಯಾರ ಕಡೆ ವಾಲಬೇಕು ಎಂದುಕೊಳ್ಳಬೇಡಿ. ಯಾರೂ ಹೇಳಿದ್ರೂ ಅದನ್ನೂ ಮರೆತುಬಿಡಿ. ಏನು ಹೇಳಿದ್ರು ಅದನ್ನು ನೋಡಿ ಎಂದು ಗೌತಮ್‌ಗೆ ಭೂಮಿಕಾ ಸಲಹೆ ನೀಡುತ್ತಾರೆ. ಗೌತಮ್‌ಗೆ ಸ್ಪೂರ್ತಿದಾಯಕ ಮಾತುಗಳಾಗುತ್ತದೆ ಇದು. "ಒಂದು ಸಲ ನಿರ್ಧಾರ ತೆಗೆದುಕೊಂಡ ಮೇಲೆ ಹಿಂತುರುಗಿ ನೋಡಬೇಡಿ" ಎನ್ನುತ್ತಾರೆ ಭೂಮಿಕಾ. ಅದಕ್ಕೆ ಗೌತಮ್‌ ಒಪ್ಪುತ್ತಾರೆ. ಇದಾದ ಬಳಿಕ ಭೂಮಿಕಾಳೇ ಗೌತಮ್‌ಗೆ ತಿನ್ನಿಸುತ್ತಾರೆ. ಗೌತಮ್‌ಗೆ ಅಮ್ಮ ನೆನಪಾಗುತ್ತಾರೆ.

Whats_app_banner