ಭೂಮಿಕಾಗೆ ಅವಮಾನ ಮಾಡಿದ ಮನೆಹಾಳ ಗೆಳತಿಯರಿಗೆ ತಕ್ಕ ಶಾಸ್ತ್ರಿ ಮಾಡಿದ ಗೌತಮ್‌ ದಿವಾನ್‌; ಸೀಮಂತ ಸಂಭ್ರಮದಲ್ಲಿ ಡುಮ್ಮ ಸಾರ್‌ ಭಾವುಕ-televison news amruthadhaare serial malli baby shower event gautam diwan take class to shakuntaladevi frinds pcp ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಭೂಮಿಕಾಗೆ ಅವಮಾನ ಮಾಡಿದ ಮನೆಹಾಳ ಗೆಳತಿಯರಿಗೆ ತಕ್ಕ ಶಾಸ್ತ್ರಿ ಮಾಡಿದ ಗೌತಮ್‌ ದಿವಾನ್‌; ಸೀಮಂತ ಸಂಭ್ರಮದಲ್ಲಿ ಡುಮ್ಮ ಸಾರ್‌ ಭಾವುಕ

ಭೂಮಿಕಾಗೆ ಅವಮಾನ ಮಾಡಿದ ಮನೆಹಾಳ ಗೆಳತಿಯರಿಗೆ ತಕ್ಕ ಶಾಸ್ತ್ರಿ ಮಾಡಿದ ಗೌತಮ್‌ ದಿವಾನ್‌; ಸೀಮಂತ ಸಂಭ್ರಮದಲ್ಲಿ ಡುಮ್ಮ ಸಾರ್‌ ಭಾವುಕ

  • ಜೀ ಕನ್ನಡವಾಹಿನಿಯ ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಪ್ರಮುಖ ವಿದ್ಯಮಾನವೊಂದು ನಡೆದಿದೆ. "ನಿಮಗೆ ಯಾಕೆ ಮಕ್ಕಳಾಗಿಲ್ಲ" ಎಂದು ಭೂಮಿಕಾಗೆ ಅವಮಾನ ಮಾಡಿದ ಶಕುಂತಲಾದೇವಿಯ ಗೆಳತಿಯರಿಗೆ ಅರ್ಥವಾಗುವಂತೆ ಮಾತಿನ ಏಟು ನೀಡಿದ್ದಾರೆ ಗೌತಮ್.‌ ಪ್ರೀತಿಯ ಮಡದಿಗೆ ನೋವುಂಟು ಮಾಡಿದವರಿಗೆ ತಕ್ಕಶಾಸ್ತ್ರಿ ಮಾಡಿದ್ದಾರೆ ಡುಮ್ಮ ಸರ್‌.

ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿಗೆ ಸೀಮಂತ ಸಂಭ್ರಮ. ಇದು ಸಂಭ್ರಮದ ಕಾರ್ಯಕ್ರಮವಾಗಿದ್ದರೂ ಭೂಮಿಕಾಳ ಪಾಲಿಗೆ ಹಲವು ನೋವುಗಳು ಎದುರಾಗಿದ್ದವು. ಒಂದೆಡೆ ತನ್ನ ತಂಗಿಯಿಂದ ಅವಮಾನ, ಮತ್ತೊಂದೆಡೆ ಶಕುಂತಲಾದೇವಿಯ ಮನೆಹಾಳ ಗೆಳತಿಯರ ಚುಚ್ಚುಮಾತುಗಳನ್ನು ಕೇಳಿ ಭೂಮಿಕಾ ಭುವಿಗೆ ಇಳಿಯುವಂತೆ ದುಃಖ ಅನುಭವಿಸುತ್ತಿದ್ದಳು. ಭೂಮಿಕಾಳ ದುಃಖ ಡುಮ್ಮ ಸರ್‌ ಗಮನಕ್ಕೆ ಬಂದಿದೆ.
icon

(1 / 9)

ಮಲ್ಲಿಗೆ ಶಕುಂತಲಾದೇವಿ ಗೆಳತಿಯರು ಶಾಸ್ತ್ರ ಮಾಡಬೇಕೆನ್ನುವಾಗ ಗೌತಮ್‌ ಸರ್‌ ಅದಕ್ಕೆ ಒಪ್ಪುವುದಿಲ್ಲ. "ಚಂದನ, ಶಾಂಭವಿ, ಇಲ್ಲಿ ಬನ್ನಿ" ಎಂದು ಅಡುಗೆ ಸಹಾಯಕಿಯರನ್ನು ಕರೆಯುತ್ತಾರೆ. ನಮ್ಮ ಮನೆಯ  ಅಡುಗೆಯವರು ಶಾಸ್ತ್ರ ಮಾಡುತ್ತಾರೆ. ಮಲ್ಲಿಯನ್ನು ಅವರು ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ. ಶಾಸ್ತ್ರ ಮಾಡಲು ಒಳ್ಳೆಯ ಮನಸ್ಸು ಮುಖ್ಯ ಎಂದು ಗೌತಮ್‌ ಹೇಳುತ್ತಾರೆ. ಅದಕ್ಕೆ ಶಕುಂತಲಾದೇವಿ "ನನ್ನ ಗೆಳತಿಯರಿಗೆ ಒಳ್ಳೆಯ ಮನಸ್ಸು ಇಲ್ಲ ಎಂದು ಇದರ ಅರ್ಥನಾ?" ಎಂದು ಕೇಳುತ್ತಾರೆ. 
icon

(2 / 9)

"ಒಳ್ಳೆಯ ಮನಸ್ಸು ಇದ್ದಿದ್ದರೆ ಅವರು ಯಾಕಮ್ಮ ಹೀಗೆ ಮಾತನಾಡ್ತಾ ಇದ್ರಮ್ಮ" ಎಂದು ಗೌತಮ್‌ ಕೇಳುತ್ತಾರೆ. "ಮನುಷ್ಯರ ಸಂಸ್ಕಾರ ಅವರ ನಾಲಿಗೆ ಹೇಳುತ್ತದೆಯಂತೆ, ಮನಸ್ಸಲ್ಲಿ ಇರೋದೆ ಅಲ್ವ ಬಾಯಿಗೆ ಬರೋದು. ಯಾರನ್ನೂ ಸ್ಟೇಟಸ್‌ ನೋಡಿ ಅಳೆಯಬಾರದು, ಅವರ ಮೆಂಟಲ್‌ ಸ್ಟೇಟಸ್‌ ನೋಡಿ ಅಳೆಯಬೇಕು" ಎಂದು ಗೌತಮ್‌ ಹೇಳಿದಾಗ ಮನೆಹಾಳ ಗೆಳತಿಯರು ತಲೆತಗ್ಗಿಸುತ್ತಾರೆ.
icon

(3 / 9)

ಯಾಕಪ್ಪ ಅವರು ಏನು ಮಾಡಿದ್ರು? ಎಂದು ಅಜ್ಜಮ್ಮ ಕೇಳುತ್ತಾರೆ. "ವಿನಾಕಾರಣ ಒಬ್ಬರ ಮನಸ್ಸಿಗೆ ನೋವು ಉಂಟು ಮಾಡಿದ್ದಾರೆ. ಒಬ್ಬರು ಕಣ್ಣೀರು ಹಾಕುವ ಹಾಗೆ ಮಾಡಿದ್ದಾರೆ" ಎಂದು ಗೌತಮ್‌ ಹೇಳಿದಾಗ ಭೂಮಿಕಾ, ಮಲ್ಲಿ, ಅಪೇಕ್ಷಾ ಎಲ್ಲರೂ ಮುಖಮುಖ ನೋಡಿಕೊಳ್ಳುತ್ತಾರೆ. ನನ್ನ ನೋವಿಗೆ ಗೌತಮ್‌ ಸ್ಪಂದಿಸುತ್ತಿದ್ದಾನೆ ಎಂದು ಭೂಮಿಕಾಳಿಗೆ ಅರಿವಾಗ್ತ ಇದೆ.
icon

(4 / 9)

"ತಾವೇನು, ತಮ್ಮ ಸ್ಟೇಟಸ್‌ ಏನೆಂದು ಮರೆತು ಚೀಪ್‌ ಆಗಿ ಮಾತನಾಡಿದ್ದಾರೆ. ತಾವು  ಏನು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಮನಸ್ಸಲ್ಲಿ ಕಸ, ವಿಷ ತುಂಬಿಕೊಂಡು ಆಶೀರ್ವಾದ ಮಾಡಿದ್ರೆ ಏನು ಫಲ ಸಿಗುತ್ತದೆ. ಆಶೀರ್ವಾದ ಮಾಡುವುದಕ್ಕೂ ಒಂದು ಅರ್ಹತೆ, ಯೋಗ್ಯತೆ ಇರಬೇಕು" ಎಂದು ಗೌತಮ್‌ ಹೇಳುತ್ತಾರೆ. 
icon

(5 / 9)

"ಏನ್‌ ಕೇಳಿದ್ರಿ ನೀವು, ಭೂಮಿಕಾಗೆ ಯಾಕೆ ಮಗು ಆಗಿಲ್ಲ ಅಂತನಾ? ಹಾಗೇ ಕೇಳಬಹುದಾ ನೀವು. ಹೇಳಿಕೊಳ್ಳುವುದಕ್ಕೆ ದೊಡ್ಡ ಜನ. ಆದರೆ, ನಿಮ್ಮದು ಇಷ್ಟು ಸಣ್ಣ ಬುದ್ಧಿ ಎಂದು ಗೊತ್ತಿರಲಿಲ್ಲ." ಎಂದು ಗೌತಮ್‌ ಹೇಳಿದಾಗ ಎಲ್ಲರಿಗೂ ವಿಷಯ ಏನೆಂದು ಅರಿವಾಗುತ್ತದೆ.
icon

(6 / 9)

"ನೀವೆಲ್ಲರೂ ನನ್ನ ತಾಯಿ ವಯಸ್ಸಿನವರು. ಆದರೆ, ವಯಸ್ಸಿಗೆ ತಕ್ಕ ಮಾತು,  ನಡವಳಿಕೆ ಯಾವುದೂ ನಿಮ್ಮಲ್ಲಿ ಇಲ್ಲ. ಇಷ್ಟು ವರ್ಷ ಬರೀ ಗೌತ್ತು, ಅಹಂಕಾರ ಇಷ್ಟನ್ನೇ ಬೆಳೆಸಿಕೊಂಡಿದ್ದೀರ" ಎಂದೆಲ್ಲ ಗೌತಮ್‌ ಬಯ್ಯುತ್ತಾರೆ. ಗೌತಮ್‌ ಭಾವುಕ ಮಾತು ಎಲ್ಲರನ್ನೂ ತಟ್ಟಿದೆ. ವಿಶೇಷವಾಗಿ ಭೂಮಿಕಾಗೆ ಹೃದಯ ತುಂಬಿಬರುವಂತೆ ಮಾಡಿದೆ. 
icon

(7 / 9)

ಜೀ ಕನ್ನಡ ಬಿಡುಗಡೆ ಮಾಡಿರುವ ಪ್ರಮೋಗೆ ವೀಕ್ಷಕರು ಜೈಕಾರ ಹಾಕಿದ್ದಾರೆ. "ಗೌತಮ್ ಮಾತನಾಡಿದ ಈ ಎಪಿಸೋಡ್ ಇನ್ನೂ ಮತ್ತೆ ಮತ್ತೆ ಪ್ರಸಾರವಾಗಲೇ ಬೇಕು!!!!!!ಯಾರು ಡೈಲಾಗ್ ಬರೆದಿರುವರೋ ಅವರಿಗೆ ಒಂದು ನಮನ. ಈ ಕ್ಲಬ್, ಹಾಗೂ ಸೊಸೈಟಿ ಲೇಡೀಸ್ ಅವರು ಮಾಡುವುದು ಇದನ್ನೇ. ಒಬ್ಬರ ಮೇಲೆ ಒಬ್ಬರು ಮಾತನಾಡಿಕೊಳ್ಳುವುದು. ಯಾಕೆಂದರೆ ಅವರ ಬೆನ್ನು ಅವರಿಗೆ ಕಾಣಿಸುವುದಿಲ್ಲ ಅಲ್ಲವೇ!?. ಅದೇ ರೀತಿ ಗೌತಮ್ ಅವರೂ ಬಹಳ ಚೆನ್ನಾಗಿ ಭಾವನೆಗಳನ್ನು ವ್ಯಕ್ತಪಡಿಸಿದರು!!!!!!! ಎಲ್ಲರಿಗೂ ಚುರುಕ್ ಅನ್ನುವ ರೀತಿಯಲ್ಲಿ ಮಾತನಾಡಿದರು" ಎಂದೆಲ್ಲ ಪ್ರೇಕ್ಷಕರು ಈ ಎಪಿಸೋಡ್‌ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. 
icon

(8 / 9)

"ನಾಲ್ಕು ಗೋಡೆಗಳ ಮದ್ಯೆ ಹೆಂಡತಿಯನ್ನು ಪ್ರೀತಿಸುವುದು ಸಹಜ. ನಾಲ್ಕು ಜನಗಳ ಮುಂದೆ ಹೆಂಡತಿಯನ್ನು ಗೌರವಿಸುವುದಿದೆಯಲ್ಲ, ಅದು ಗಂಡ ಹೆಂಡತಿಗೆ ಕೊಡುವ ನಿಜವಾದ ಪ್ರೀತಿ" "ಪ್ರತಿಯೊಬ್ಬ ಗಂಡ, ತನ್ನ ಹೆಂಡತಿಯ ಜೊತೆಗೆ ಹೀಗೆ ನಿಲ್ಲಬೇಕು" "ಹೆಂಡತಿಗೆ ಅವಮಾನ ಆದ್ರೆ ಹೇಗೆ ಸುಮ್ನೆ ಇರೋಕೆ ಸಾಧ್ಯ ಅದು ಯಾರೋ ಮೂರನೇಯವ್ರು ಮನೆ ಹಾಳು ಮಾಡೋ ಶಕುಂತಲಾ ನಾಲಾಯಕ್ ಫ್ರೆಂಡ್ಸ್... ಸರಿಯಾಗಿ ಉತ್ತರ ಕೊಟ್ಟಿದಿರಾ ಗೌತಮ್ ಸರ್ ಸೂಪರ್.. ಹೆಂಡತಿಗೆ ಗಂಡ ಪ್ರತಿಯೊಂದು ಹಂತದಲ್ಲೂ ಜೊತೆಗೆ ನಿಲ್ಲಬೇಕು ಆಗ ಸಂಬಂಧ ಇನ್ನು ಗಟ್ಟಿಯಾಗುತ್ತೆ ಸೂಪರ್ ಎಪಿಸೋಡ್ " ಎಂದೆಲ್ಲ ಪ್ರೇಕ್ಷಕರು ಹೊಗಳಿದ್ದಾರೆ. 
icon

(9 / 9)

ಇತರ ಗ್ಯಾಲರಿಗಳು