Annayya Serial: ಪಾರುವನ್ನು ವಿದೇಶಕ್ಕೆ ಕಳಿಸಲು ಪರದಾಡುತ್ತಿದ್ದಾನೆ ಶಿವು; ಹಣಕ್ಕಾಗಿ ಮನೆ ಪತ್ರ ಅಡ ಇಡುವ ನಿರ್ಧಾರ
Dec 17, 2024 12:03 PM IST
ಪಾರುವನ್ನು ವಿದೇಶಕ್ಕೆ ಕಳಿಸಲು ಪರದಾಡುತ್ತಿದ್ದಾನೆ ಶಿವು
- Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ಪಾರುಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾನೆ. ಆದರೆ ಹಣ ಹೊಂದಿಸಲು ಅವನಿಗೆ ತುಂಬಾ ಕಷ್ಟ ಆಗುತ್ತಿದೆ. ಆದರೆ ಈ ಕಷ್ಟವನ್ನು ಪಾರು ಹತ್ತಿರ ಹೇಳಿಕೊಂಡಿಲ್ಲ.
Annayya Serial: ಅಣ್ಣಯ್ಯ ಮಧ್ಯಮವರ್ಗದ ಕುಟುಂಬದವನಾಗಿದ್ದರಿಂದ ಅವನ ಬಳಿ ಸಾಕಷ್ಟು ಹಣ ಇಲ್ಲ. ಅವನು ತುಂಬಾ ತೊಂದರೆಯಲ್ಲಿದ್ದಾನೆ. ತಾನು ಏನಾದರೂ ಮಾಡಿ ಪಾರುಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು. ಉನ್ನತ ಶಿಕ್ಷಣಕ್ಕಾಗಿ ಅವಳನ್ನು ವಿದೇಶಕ್ಕೆ ಕಳಿಸಲೇಬೇಕು ಎಂಬ ನಿರ್ಧಾರ ಮಾಡಿದ್ದಾನೆ. ಹೀಗಿರುವಾಗ ಹಣ ಹೊಂದಿಸಲು ಅವನು ಪರದಾಡುತ್ತಿದ್ದಾನೆ, ಹೇಗಾದರೂ ಮಾಡಿ ಒಂದಷ್ಟು ಲಕ್ಷ ಹಣ ಹೊಂದಿಸಿ ಅವಳನ್ನು ವಿದೇಶಕ್ಕೆ ಕಳಿಸಬೇಕು ಎನ್ನುವುದು ಅವನ ಆಸೆ. ಆದರೆ ಆ ಆಸೆ ನಿರಾಸೆ ಉಂಟು ಮಾಡುತ್ತಿದೆ.
ಅಂಗಡಿಯಲ್ಲಿ ಹಣ ಹೊಂದಿಸುತ್ತಾ ಕುಳಿತಿರುವಾಗ ಅಂಗಡಿಯಲ್ಲಿರುವ ಸಹಾಯಕ ಗೋಡಂಬಿ ತಾನೂ ಅಮೇರಿಕಾಗೆ ಬರುತ್ತೇನೆ ಎಂದು ಹೇಳುತ್ತಾನೆ. ಆಗ ನೀನು ತಮಾಷೆ ಮಾಡಬೇಡ, ಅಲ್ಲಿಗೆ ಹೋಗಲು ಎಷ್ಟು ಹಣ ಬೇಕಾಗುತ್ತದೆ ಗೊತ್ತಾ? ಎಂದು ಶಿವು ಪ್ರಶ್ನೆ ಮಾಡುತ್ತಾನೆ, ಆಗ ಒಂದು ಡಾಲರ್ ಹಣಕ್ಕೆ ನಾವು ಇಲ್ಲಿ ಭಾರತದಿಂದ ಕೊಟ್ಟು ಕಳಿಸಿದ ಹಣ ಏನಕ್ಕೂ ಸಾಲುವುದಿಲ್ಲ ಎಂದು ಅವರು ಮಾತಾಡಿಕೊಳ್ಳುತ್ತಾರೆ.
ಮನೆ ಪತ್ರ ಅಡ ಇಡ್ತಾನಂತೆ ಶಿವು
ಪಾರು, ಅಲ್ಲಿ ಊಟ ತಿಂಡಿಗೆ ಏನು ಮಾಡುತ್ತಾಳೆ? ಎಂದು ಅವನು ಪ್ರಶ್ನೆ ಮಾಡುತ್ತಾನೆ. ಅಲ್ಲಿನ ಖರ್ಚನ್ನು ಹೇಗೆ ಬರಿಸುವುದು ಎಂದು ಯೋಚಿಸುತ್ತಾನೆ. ಹೀಗೆ ಮಾಡುತ್ತಾ ಅವನ ದಿನ ಕಳೆಯುತ್ತಿರುತ್ತದೆ. ಆಗ ಗೋಡಂಬಿ “ಅಣ್ಣ ನೀನು ಯೋಚನೆ ಮಾಡ್ತಾ ಇರೋದನ್ನು ನೋಡಿದ್ರೆ ಈ ಅಂಗಡಿನಾ ಅಡ ಇಡೋ ಹಾಗಿದೆ” ಎನ್ನುತ್ತಾನೆ. ಆಗ ಶಿವು ಇಲ್ಲ ನಾನು ಮನೆಯನ್ನೆ ಅಡ ಇಡುತ್ತೇನೆ ಎಂದು ಹೇಳುತ್ತಾನೆ.
ಅಣ್ಣಯ್ಯ ಧಾರಾವಾಹಿ
ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ. ಮದುವೆ ಕೂಡ ಆಗಿದೆ. ಆದರೆ ಇನ್ನೂ ಪಾರು ಹಾಗೂ ಅಣ್ಣಯ್ಯ ಒಂದಾಗಿಲ್ಲ. ಪಾರು ಸಿದ್ದಾರ್ಥನ ಗುಂಗಿನಲ್ಲೇ ಮುಳುಗಿದ್ದಾಳೆ.
ಅಣ್ಣಯ್ಯ ಸೀರಿಯಲ್ ಪಾತ್ರವರ್ಗ
ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.
ವಿಕಾಸ್ ಉತ್ತಯ್ಯ - ಶಿವು
ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿದ್ದಾರೆ.
ನಿಶಾ ರವಿಕೃಷ್ಣನ್ - ಪಾರು
ಅಂಕಿತಾ ಗೌಡ, ನಾಗಶ್ರೀ ಬೇಗಾರ್, ಪ್ರತೀಕ್ಷಾ ಶರೀನಾಥ್ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.