Annayya Serial: ಯಾರು ಏನೇ ಅಂದ್ರು ಪಾರು ನಿರ್ಧಾರ ಮಾತ್ರ ಬದಲಾಗಲಿಲ್ಲ; ನಮ್ಮನೆಲ್ಲ ಮರೆತುಬಿಡು ಎಂದು ಕಳಿಸಿಕೊಟ್ಟ ಶಿವು
Dec 23, 2024 10:06 AM IST
ಯಾರು ಏನೇ ಅಂದ್ರು ಪಾರು ನಿರ್ಧಾರ ಮಾತ್ರ ಬದಲಾಗಲಿಲ್ಲ
- ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ತನ್ನ ನಿರ್ಧಾರವನ್ನು ಬದಲಿಸಿಲ್ಲ. ಯಾರು ಎಷ್ಟೇ ಬೇಡ ಅಂದ್ರೂ ಅವಳು ಮಾತ್ರ ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗೇ ಹೋಗ್ತೀನಿ ಎಂದು ಹೊರಟಿದ್ದಾಳೆ. ಹೀಗಿರುವಾಗ ಅತೀವ ದುಃಖ ಆಗಿದ್ದು ಮಾತ್ರ ಶಿವುಗೆ.
ಅಣ್ಣಯ್ಯ ಧಾರಾವಾಹಿಯಲ್ಲಿಯಲ್ಲಿ ಶಿವು ಪಾರುವನ್ನು ಕಳಿಸಿಕೊಡಲು ಬಂದಿದ್ದಾನೆ. ಅವಳು ವಿದೇಶಕ್ಕೆ ಹೋಗುತ್ತಾಳೆ ಎಂದು ಅವಳಿಗೆ ಬೇಕಾದ ಎಲ್ಲ ಸೌಕರ್ಯ ಮಾಡಿಕೊಟ್ಟಿದ್ದಾನೆ. ತನ್ನ ಬಳಿ ಸಾಧ್ಯ ಆದಷ್ಟು ಹಣ ಹೊಂದಿಸಿ ಕೊಟ್ಟಿದ್ದಾನೆ. ಹೀಗೆಲ್ಲ ಇರುವಾಗ ಅವಳಿಗೆ ತಾನು ಹೋಗಲೇಬೇಕು ಎಂದು ಮತ್ತೆ ಮತ್ತೆ ಯಾಕೆ ಅನಿಸಿದೆ ಎಂದು ತಿಳಿಯದು. ಮನೆಯಲ್ಲಿ ಅವಳ ಎಲ್ಲ ನಾದಿನಿಯರು ಅತ್ತಿಗೆ ಹೋಗುತ್ತಾಳೆ ಎಂದು ತುಂಬಾ ಬೇಸರ ಮಾಡಿಕೊಂಡಿದ್ದರು.
ಅತ್ತಿಗೆ ಮನೆಯಲ್ಲೇ ಇರಬೇಕು ಎಂದು ತುಂಬಾ ಆಸೆ ಇಟ್ಟುಕೊಂಡಿದ್ದರು. ಆದರೆ ಯಾವುದೂ ಆಗಲಿಲ್ಲ. ಇನ್ನು ಅಣ್ಣಯ್ಯ ತನ್ನ ಸ್ಕೂಟರ್ ತೆಗೆದುಕೊಂಡು ಅವಳನ್ನು ಬಿಟ್ಟು ಬರಲು ಹೋಗಿದ್ದಾನೆ. ಇನ್ನೇನು ಬಸ್‌ಸ್ಟ್ಯಾಂಡ್ ಹತ್ತಿರ ಬರುತ್ತಿದ್ದಂತೆ ಅವನ ಭಾವನೆಗಳಲ್ಲಿ ಬದಲಾವಣೆಯನ್ನು ಬೇಕು ಎಂದೇ ತಂದುಕೊಂಡಿದ್ದಾನೆ.. ಅವಳ ಹತ್ತಿರ ಆಡ ಬಾರದ ಮಾತುಗಳನ್ನು ಆಡಿದ್ದಾನೆ.
ನಮ್ಮನ್ನೆಲ್ಲ ಮರೆತುಬಿಡು ಎಂದ ಶಿವು
ಪಾರು ತನ್ನ ಹೊಸ ಬದುಕನ್ನು ಆರಂಭಿಸಲಿ, ಅವಳ ಇಷ್ಟದಂತೆ ಅವಳು ಇರಲಿ ಎಂದು ಭಾವಿಸುತ್ತಾ ಶಿವು ಅವಳಿಗೆ ಇಲ್ಲಿನ ಪ್ರಪಂಚ ಬೇಕಾಗಿಲ್ಲ ಎಂಬುದನ್ನು ಅರಿತುಕೊಂಡು. ಪಾರು ನೀನು ಇಲ್ಲಿ ಆಗಿರೋದನ್ನೆಲ್ಲ ಮರೆತು ಬಿಡು. ಹೊಸ ಜೀವನ ಆರಂಭ ಮಾಡು. ನಮ್ಮನ್ನೂ ಮರೆತುಬಿಡು ಎಂದು ಹೇಳುತ್ತಾನೆ. ಆ ಮಾತಿನಿಂದ ಪಾರುಗೆ ಬೇಸರ ಆಗುತ್ತದೆ. ಅವನೇ ಬಸ್ ಹತ್ತಿ ಅವಳ ಲಗೇಜ್ ಇಟ್ಟು ಹೊರ ಬರುತ್ತಾನೆ. ಪಾರು ಕಣ್ಣಲ್ಲಿ ಬೇಸರ ಇದೆ. ಅವನು ಹೋಗುವಾಗ ಅವಳು ಅಳುತ್ತಾಳೆ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.
ಅಣ್ಣಯ್ಯ ಧಾರಾವಾಹಿ
ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ. ಮದುವೆ ಕೂಡ ಆಗಿದೆ. ಆದರೆ ಇನ್ನೂ ಪಾರು ಹಾಗೂ ಅಣ್ಣಯ್ಯ ಒಂದಾಗಿಲ್ಲ. ಪಾರು ಸಿದ್ದಾರ್ಥನ ಗುಂಗಿನಲ್ಲೇ ಮುಳುಗಿದ್ದಾಳೆ.
ಅಣ್ಣಯ್ಯ ಸೀರಿಯಲ್ ಪಾತ್ರವರ್ಗ
ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.
ವಿಕಾಸ್ ಉತ್ತಯ್ಯ - ಶಿವು
ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿದ್ದಾರೆ.
ನಿಶಾ ರವಿಕೃಷ್ಣನ್ - ಪಾರು
ಅಂಕಿತಾ ಗೌಡ, ನಾಗಶ್ರೀ ಬೇಗಾರ್, ಪ್ರತೀಕ್ಷಾ ಶರೀನಾಥ್ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.