Amruthadhaare serial: ಗೌತಮ್‌ ಹಳೆಕಥೆ ಕೇಳಿ ಬೆಚ್ಚಿಬಿದ್ದ ಭೂಮಿಕಾ, ರಾಜೇಂದ್ರ ಭೂಪತಿ ಮಗಳು ಬದುಕಿದ್ದಾಳಂತೆ- ಅಮೃತಧಾರೆ ಧಾರಾವಾಹಿ ಕಥೆ
ಕನ್ನಡ ಸುದ್ದಿ  /  ಮನರಂಜನೆ  /  Amruthadhaare Serial: ಗೌತಮ್‌ ಹಳೆಕಥೆ ಕೇಳಿ ಬೆಚ್ಚಿಬಿದ್ದ ಭೂಮಿಕಾ, ರಾಜೇಂದ್ರ ಭೂಪತಿ ಮಗಳು ಬದುಕಿದ್ದಾಳಂತೆ- ಅಮೃತಧಾರೆ ಧಾರಾವಾಹಿ ಕಥೆ

Amruthadhaare serial: ಗೌತಮ್‌ ಹಳೆಕಥೆ ಕೇಳಿ ಬೆಚ್ಚಿಬಿದ್ದ ಭೂಮಿಕಾ, ರಾಜೇಂದ್ರ ಭೂಪತಿ ಮಗಳು ಬದುಕಿದ್ದಾಳಂತೆ- ಅಮೃತಧಾರೆ ಧಾರಾವಾಹಿ ಕಥೆ

Amruthadhaare serial Yesterday Episode: ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ರಾಜೇಂದ್ರ ಭೂಪತಿ ಮತ್ತು ಗೌತಮ್‌ ದಿವಾನ್‌ನ ಹಳೆ ಕಥೆ ಬಹಿರಂಗಗೊಂಡಿದೆ. ಇದೇ ಸಮಯದಲ್ಲಿ ಶಕುಂತಲಾದೇವಿಗೂ ಗೌತಮ್‌ ತಂಗಿ ತಮ್ಮ ಮನೆಯಲ್ಲಿರುವ ಕೆಲಸದವಳು ಎಂಬ ಸತ್ಯ ಗೊತ್ತಾಗಿದೆ.

Amruthadhaare serial: ಗೌತಮ್‌ ದಿವಾನ್‌ ಹಳೆಕಥೆ ಕೇಳಿ ಬೆಚ್ಚಿಬಿದ್ದ ಭೂಮಿಕಾ
Amruthadhaare serial: ಗೌತಮ್‌ ದಿವಾನ್‌ ಹಳೆಕಥೆ ಕೇಳಿ ಬೆಚ್ಚಿಬಿದ್ದ ಭೂಮಿಕಾ

ಗೌತಮ್‌ ತಂಗಿ ಸುಧಾ ಯಾರು ಎಂದು ಶಕುಂತಲಾದೇವಿಗೆ ತಿಳಿಯುವ ಸಮಯ ಬಂದಿದೆ. ಆಕೆಯ ಫೋಟೋವನ್ನು ಮನೆಗೆ ಕಳುಹಿಸಿದ್ದಾರೆ. ಆ ಫೋಟೋ ಇರುವ ಪೋಸ್ಟ್‌ ಭೂಮಿಕಾಳಿಗೆ ದೊರಕಿದೆ. ಆಕೆ ತೆರೆದು ನೋಡುವ ಮುನ್ನ ಆ ಕವರ್‌ ಅನ್ನು ಶಕುಂತಲಾದೇವಿ ಪಡೆದುಕೊಂಡಿದ್ದಾರೆ. ಆ ಕವರ್‌ ತೆಗೆದುನೋಡಿದಾಗ ಅಲ್ಲಿ ಸುಧಾಳ ಫೋಟೋ ನೋಡುತ್ತಾಳೆ. "ನಮ್ಮ ಕೆಲಸದವಳ ಫೋಟೋ ಕಳುಹಿಸಿದ್ದಾರೆ" ಎಂದು ಅಚ್ಚರಿ ಪಡುತ್ತಾರೆ. "ಅವತ್ತು ಆ ಮನೆ ಸುಟ್ಟು ಹೋಗಿದ್ದಾಗ ಆ ಮನೆಯಲ್ಲಿ ಇದ್ದವಳು ಇವಳೇ. ಅವಳಿಗೆ ಒಬ್ಬಳು ಅಮ್ಮ ಇದ್ದಾಳೆ. ಮಗಳೂ ಇದ್ದಾಳೆ" ಎಂದು ಫೋಟೋ ಕಳುಹಿಸಿದವರು ಮಾಹಿತಿ ನೀಡುತ್ತಾಳೆ. "ಸುಧಾ ಗೌತಮ್‌ ತಂಗಿನಾ" ಎಂದು ಶಕುಂತಲಾ ಅಚ್ಚರಿಪಡುತ್ತಾರೆ.

ಪಾರ್ಥ ಡಲ್ ಆಗಿದ್ದಾನೆ. ಯಾಕೆ ಡಲ್‌ ಆಗಿದ್ದೀರಿ ಎಂದು ಭೂಮಿಕಾ ಕೇಳುತ್ತಾಳೆ. ಆಗುಂತಕನ ಬಗ್ಗೆ ಮಾಹಿತಿ ನೀಡುತ್ತಾರೆ. "ಅವರಿಂದ ಬಿಗ್‌ಬ್ರೋ ತುಂಬಾ ಟೆನ್ಷನ್‌ ಆಗುವಂತೆ ಆಗಿದೆ. ಆಕ್ಷನ್‌ಗೆ ಅಡ್ಡ ಹಾಕಿದ್ರು. ನಮ್ಮ ಮನೆಗೆ ಬಾಂಬ್‌ ಇಟ್ಟದ್ದು, ನನ್‌ ಕಾರು ಬ್ರೇಕ್‌ ಫೈಲ್ಯೂರ್‌ ಆಗುವಂತೆ ಮಾಡಿದ್ದು ಅವರೇ ಅಂತೆ" ಎಂದು ಪಾರ್ಥ ಹೇಳುತ್ತಾನೆ. ಇದನ್ನು ಕೇಳಿ ಭೂಮಿಕಾಳಿಗೆ ಅಚ್ಚರಿಯಾಗುತ್ತದೆ.

ಸುಧಾಳ ಬಳಿಕ ಕ್ಲ್ಯಾರಿಫೈ ಮಾಡಿಕೊಂಡ ಶಕುಂತಲಾದೇವಿ

ಸುಧಾ ಕೆಲಸ ಮಾಡುತ್ತಿದ್ದಾಳೆ. ಅಲ್ಲಿಗೆ ಶಕುಂತಲಾ ಬರುತ್ತಾರೆ. "ನಿನ್ನಲ್ಲಿ ಸರಿ ಮಾತನಾಡಲು ಆಗಿಲ್ಲ. ಇದಕ್ಕೂ ಮೊದಲು ಎಲ್ಲಿ ಕೆಲಸ ಮಾಡ್ತಾ ಇದ್ದೆ" ಎಂದು ಶಕುಂತಲಾ ಕೇಳುತ್ತಾರೆ. "ಆನಂದ್‌ ಮನೆಯಲ್ಲಿ ಇದ್ದೆ. ನಮ್ಮ ಮನೆ ಉತ್ತರಹಳ್ಳಿ ಸ್ಲಮ್‌ನಲ್ಲಿ ಇರೋದು" ಎಂದು ಹೇಳುತ್ತಾಳೆ. "ಮನೆ ಇದೆ ತಾನೇ, ಇಲ್ಲಿ ಯಾಕೆ ಬಂದೆ" ಎಂದು ಕೇಳುತ್ತಾರೆ. "ಮನೆ ಇತ್ತು, ಕರೆಂಟ್‌ ಸಮಸ್ಯೆಯಾಗಿ ಮೊನ್ನೆ ಸುಟ್ಟು ಹೋಯ್ತು. ಅದಕ್ಕೆ ಅತ್ತಿಗೆ ಕ್ವಾಟರ್ಸ್‌ನಲ್ಲಿ ಇರಿ ಅಂದ್ರು" ಎಂದು ಹೇಳುತ್ತಾಳೆ. "ನಿನ್ನ ಅಮ್ಮ ಎಲ್ಲೂ ಕಾಣಿಸುವುದಿಲ್ಲ" ಎಂದು ಶಕುಂತಲಾದೇವಿ ಕೇಳುತ್ತಾರೆ. ಹೀಗೆ ಸಾಕಷ್ಟು ಪ್ರಶ್ನೆ ಕೇಳಿ ತಿಳಿದುಕೊಳ್ಳುತ್ತಾರೆ. ಈ ಮೂಲಕ ಶಕುಂತಾಳಗೆ ಈಕೆ ಗೌತಮ್‌ ತಂಗಿ ಎನ್ನುವುದು ಕನ್‌ಫರ್ಮ್‌ ಆಗುತ್ತದೆ. "ಬಲಿ ಆಗುವ ಕುರಿಯನ್ನು ಮನೆಯಲ್ಲಿಟ್ಟುಕೊಂಡು ಎಲ್ಲೆಲ್ಲೂ ಹುಡುಕುತ್ತಾ ಇದ್ದೇವೆ" ಎಂದು ಲಕ್ಷ್ಮಿಕಾಂತ್‌ನ ಬಳಿ ಶಕುಂತಲಾ ಹೇಳುತ್ತಾರೆ. ಆದಷ್ಟು ಬೇಗ ಇವರನ್ನು ಮುಗಿಸಬೇಕು ಎಂದು ಮಾತನಾಡುತ್ತಾರೆ.

ರಾಜೇಂದ್ರ ಭೂಪತಿ ಮತ್ತು ಗೌತಮ್‌ ದಿವಾನ್‌ ದ್ವೇಷದ ಕಥೆ

ಭೂಮಿಕಾ ಮತ್ತು ಗೌತಮ್‌ ಮಾತನಾಡುತ್ತಾರೆ. ಈ ವಿಷಯದ ಕುರಿತು ಪ್ರಶ್ನಿಸುತ್ತಾರೆ. ಆರಂಭದಲ್ಲಿ ಏನೂ ಹೇಳುವುದಿಲ್ಲ. ಬಳಿಕ ಆ ಆಗುಂತಕ ರಾಜೇಂದ್ರ ಭೂಪತಿ ಬಗ್ಗೆ ಹೇಳುತ್ತಾರೆ. "ಅದೊಂದು ದೊಡ್ಡಕಥೆ. ತುಂಬಾ ವರ್ಷ ಹಿಂದಿನದ್ದು" ಎಂದು ಹೇಳುತ್ತಾರೆ.

ಇದೇ ಸಂದರ್ಭದಲ್ಲಿ ರಾಜೇಂದ್ರ ಭೂಪತಿ ಮನೆಗೆ ಕಥೆ ತೆರೆದುಕೊಳ್ಳುತ್ತದೆ. ಅಲ್ಲೂ ರಾಜೇಂದ್ರ ಭೂಪತಿಕ ಈ ಕಥೆ ಹೇಳುತ್ತಾರೆ. "ಅಂದು ಆಗಿರುವ ಗಾಯ ಮರೆತಿಲ್ಲ" ಎಂದು ಹೇಳುತ್ತಾರೆ. "ನಾನು ಸರ್ವಸ್ವವನ್ನೂ ಕಳೆದುಕೊಂಡೆ. ಮನೆ ಮಠ, ಮಾನಮರ್ಯಾದೆ ಎಲ್ಲವನ್ನೂ ಕಳೆದುಕೊಂಡೆ" ಎಂದು ಹೇಳುತ್ತಾರೆ. "ನಾನು ಹಣದ ಸಮಸ್ಯೆಯಲ್ಲಿ ಸಿಲುಕಿದ್ದೆ. ಆಗ ನಾನು ಚಿಟ್‌ಫಂಡ್‌ ವ್ಯವಹಾರದಲ್ಲಿ ಸ್ವಲ್ಪ ಆಚೆ ಈಚೆ ಮಾಡಿದೆ. ಅದನ್ನು ನಾನೇ ಸರಿ ಮಾಡುತ್ತಿದ್ದೆ. ಎಲ್ಲವೂ ಅಲ್ಲಲ್ಲಿ ಮುಚ್ಚಿ ಹೋಗುತ್ತಿರುವುದು. ಆದರೆ, ಆ ಗೌತಮ್‌ ದಿವಾನ್‌, ಅವನ ಅಪ್ಪನಲ್ಲಿ ಈ ವಿಷಯ ತಿಳಿಸಿದ. ಅವನ ಅಪ್ಪ ಪೊಲೀಸ್‌ ಕಂಪ್ಲೇಟ್‌ ಕೊಟ್ಟ. ಜನರ ಹಣವನ್ನು ಗೋಲ್‌ಮಾಲ್‌ ಮಾಡಿದ್ದ ನಾನು, ನಂತರ ಅದನ್ನು ನಾನೇ ಸರಿ ಮಾಡುತ್ತಿದ್ದೆ. ಈ ಅಪ್ಪ ಮತ್ತು ಮಗ ಈ ವಿಷಯವನ್ನು ಪೊಲೀಸ್‌ ಸ್ಟೇಷನ್‌ಗೆ ಕೊಂಡೊಯ್ದರು. ನಂತರ ನಾನು ಮನೆ ಕಳೆದುಕೊಂಡೆ. ನನ್ನ ಕೈ ಕಳೆದುಕೊಂಡೆ. ಕಟ್ಟಿಕೊಂಡವಳನ್ನು ಕಳೆದುಕೊಂಡೆ. ನನ್ನ ಪ್ರಾಣಕ್ಕೆ ಪ್ರಾಣವಾಗಿದ್ದ ಮಗಳನ್ನು ಕಳೆದುಕೊಂಡೆ. ಹತ್ತಾರು ವರ್ಷ ಜೈಲಲ್ಲಿ ಕೊಳೆಯುವ ಹಾಗಾಯ್ತು. ಇದಕ್ಕೆಲ್ಲ ಕಾರಣ ಆ ಅಪ್ಪ ಮತ್ತು ಮಗ. ಆದರೂ, ನಾನು ಬದುಕಿದ್ದೀನಿ. ನಾನು ಈಗ ಈ ಲೆವೆಲ್‌ನಲ್ಲಿ ಇರಲು ಕಾರಣ ದ್ವೇಷ" ಎಂದು ರಾಜೇಂದ್ರ ಭೂಪತಿ ಹೇಳುತ್ತಾರೆ.

ಈಗ ಗೌತಮ್‌ ಭೂಮಿಕಾಳ ಬಳಿ ಕಥೆ ಹೇಳುತ್ತಾರೆ. "ಹಾಗಂತ ಅವರು ಅಂದುಕೊಂಡಿದ್ದಾರೆ. ನಾವೇನೂ ದೂರದವರಲ್ಲ. ನನ್ನ ತಂದೆ ಅವರು ತುಂಬಾ ಕ್ಲೋಸ್‌ ಆಗಿದ್ದರು. ವಯಸ್ಸಲ್ಲಿ ತಂದೆಗಿಂತ ಚಿಕ್ಕವರಾಗಿದ್ದರು. ಒಂದು ಕೆಟ್ಟ ಘಟನೆ, ಇಡೀ ಜನ್ಮಕ್ಕೆ ಆಗುವಷ್ಟು ದ್ವೇಷ ಹುಟ್ಟು ಹಾಕಿತ್ತು. ತಪ್ಪು ತಿಳುವಳಿಕೆ ಎನ್ನುವುದು ವಿಷ ಇದ್ದಂತೆ. ಈಗ ಬೆಂಕಿ ಬಿದ್ದಿದೆ. ಆರಿಸೋದು ಹೇಗೆ ಎಂದು ಗೊತ್ತಾಗ್ತಾ ಇಲ್ಲ. ಅವರು ಈಗ ದ್ವೇಷ ಸಾಧಿಸಲು ಆರಂಭಿಸಿದ್ದಾರೆ. ಯಾರದ್ದೋ ತಪ್ಪಿಗೆ ಇನ್ಯಾರಿಗೋ ಶಿಕ್ಷೆಯಾಗುತ್ತಿದೆ" ಎಂದು ಗೌತಮ್‌ ಹೇಳುತ್ತಾರೆ. ಕಥೆ ಆಗುಂತಕನ ಮನೆಗೆ ಹೋಗುತ್ತದೆ. "ನನಗೆ ಗೊತ್ತು, ಅವನಿಗೆ ಇದು ಸಹಿಸಲು ಆಗೋದಿಲ್ಲ. ಅದಕ್ಕೆ ಅವರ ಮನೆಯವರನ್ನು ಟಾರ್ಗೇಟ್‌ ಮಾಡಿರೋದು" ಎಂದು ಆತ ಹೇಳುತ್ತಾನೆ. ಕಥೆ ಗೌತಮ್‌ ಮನೆಗೆ ಬರುತ್ತದೆ. "ಅವನ ಹೆಂಡತಿ ಮಗಳ ಸಾವಿಗೆ ನಾವು ಕಾರಣ ಎಂದುಕೊಂಡಿದ್ದಾನೆ. ಅದು ಸುಳ್ಳು. ಅವತ್ತು ನಡೆದ ಘಟನೆಯಲ್ಲಿ ಅವನ ಮಗಳು ಸತ್ತಿಲ್ಲ. ಅವಳು ಎಲ್ಲಿದ್ದಾಳೆ. ಯಾರ ಜತೆ ಇದ್ದಾಳೆ, ಒಂದೂ ಗೊತ್ತಿಲ್ಲ" ಎಂದು ಗೌತಮ್‌ ಹೇಳುತ್ತಾನೆ. ಈ ಮೂಲಕ ಆತನ ಮಗಳ ಎಂಟ್ರಿಯೂ ಆಗುವ ಸೂಚನೆ ಇದೆ. ಹೀಗೆ, ಅಮೃತಧಾರೆ ಬೇರೊಂದು ತಿರುವು ಪಡೆದುಕೊಂಡಿದೆ.

ಧಾರಾವಾಹಿ ಹೆಸರು: ಅಮೃತಧಾರೆ.

ಎಪಿಸೋಡ್‌: ಡಿಸೆಂಬರ್‌ 23, 2024

ಯಾವ ಚಾನೆಲ್‌: ಜೀ ಕನ್ನಡ

ಪ್ರಸಾರ ಸಮಯ: ಪ್ರತಿದಿನ ರಾತ್ರಿ 7 ಗಂಟೆಗೆ

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ: ಛಾಯಾ ಸಿಂಗ್‌: ಭೂಮಿಕಾ (ನಾಯಕಿ), ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ), ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ), ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ), ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ), ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ), ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ), ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ), ರಾಣವ್‌: ಜೈದೇವ್‌, ಚಂದನ್‌: ಅಶ್ವಿನಿ, ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ), ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ).

Whats_app_banner