Annayya Serial: ಪಾರು ಎದುರು ಅಣ್ಣಯ್ಯನ ಪ್ರೀತಿ ಮಾತು; ಶಿವು ಪ್ರೀತಿಸಿದ ಹುಡುಗಿ ಬಗ್ಗೆ ರಾಣಿ ಹೇಳಿದ ವಿಷಯ ಇಂದು ಹೊರಬೀಳುತ್ತಾ?
ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಎದುರು ಅಣ್ಣಯ್ಯ ಪ್ರೀತಿಯ ಮಾತುಗಳನ್ನಾಡಿದ್ದಾನೆ. ಪಾರು ಕೂಡ ಅಣ್ಣಯ್ಯನ ಬಗ್ಗೆ ಕನಿಕರ ಹೊಂದಿದ್ದಾಳೆ. ರಾಣಿ ಆಡಿದ ಒಂದು ಮಾತು ಇನ್ನೂ ಅವಳ ಕಿವಿಯಲ್ಲಿ ಗುನುಗುತ್ತಿದೆ.
ಅಣ್ಣಯ್ಯ ಧಾರಾವಾಹಿಯಲ್ಲಿ ಅಣ್ಣಯ್ಯ ತಾನೊಬ್ಬನೇ ಮರದ ಬಳಿ ಮಾತಾಡುತ್ತಾ ಇರುತ್ತಾನೆ. ಆದರೆ ಅವನು ಆ ರೀತಿ ಮಾತಾಡುವುದು ಪಾರುಗೆ ಯಾವಾಗಲೂ ಇಷ್ಟ ಆಗೋದಿಲ್ಲ. ಈ ಬಾರಿಯೂ ಅವಳು ಹೋಗಿ ಅವನನ್ನು ಪ್ರಶ್ನೆ ಮಾಡಿದ್ದಾಳೆ. ಯಾಕೆ? ಯಾಕೆ ಯಾವಾಗಲೂ ನೀನು ಈ ಮರದ ಬಳಿ ಮಾತಾಡ್ತೀಯ. ನಾನು ನಿನ್ನ ಹತ್ತಿರ ಹೇಳಿದ್ದೆ ನಿನಗೆ ಏನೇ ಅನುಮಾನ ಬಂದರೂ ನೀನು ನನ್ನ ಬಳಿ ಕೇಳು. ನಿನಗೆ ಏನೇ ಹೇಳಿಕೊಳ್ಳಬೇಕು ಎಂದೆನಿಸಿದರೂ ನನ್ನ ಬಳಿ ಹೇಳಿಕೋ ಎಂದು. ಆದರೆ ನೀನು ಮಾತ್ರ ಯಾವಾಗಲೂ ಈ ಮರದ ಬಳಿ ಮಾತ್ರ ಮಾತಾಡ್ತೀಯ ಎಂದು ಹೇಳಿದ್ದಾಳೆ. ಆಗ ಅಣ್ಣಯ್ಯ ಶಾಕ್ ಆಗಿ ಎದ್ದು ನಿಂತಿದ್ದಾನೆ.
ಅಣ್ಣಯ್ಯನ ಉತ್ತರ ನೋಡಿ
ಯಾಕೆಂದರೆ ತಾನು ಇಷ್ಟೊಂತ್ತಿಂದ ಆಡಿದ ಮಾತುಗಳೆಲ್ಲ ಪಾರುಗೆ ಕೇಳಿಸಿದೆ ಎಂದು ಅವನು ಅಂದುಕೊಂಡಿದ್ದಾನೆ. ಹಾಗಾಗಿ ಅವನಿಗೆ ಶಾಕ್ ಆಗಿದೆ. ಆ ನಂತರ ಅವಳು ಇನ್ನೂ ಒಂದಷ್ಟು ಪ್ರಶ್ನೆ ಮಾಡುತ್ತಾಳೆ. “ನಾನು ಹೋಗ್ತೀನಿ ಅಂದಾಗ ನೀನು ಒಂದು ಮಾತೂ ತಡಿಲಿಲ್ಲ. ಎಲ್ಲರೂ ಹೋಗಬೇಡ ಪಾರು ಅಂತ ಹೇಳ್ತಾ ಇದ್ರೂ ನೀನು ನನ್ನ ಕಳಿಸುವ ತಯಾರಿಯನ್ನೇ ಮಾಡಿಕೊಳ್ತಾ ಇದ್ದೆ ಯಾಕೆ?” ಎಂದು ಪ್ರಶ್ನೆ ಮಾಡುತ್ತಾಳೆ. ಆಗ ಅಣ್ಣಯ್ಯ ಹೇಳುತ್ತಾನೆ. ಹೌದು ನನಗೆ ನೀನು ಏನು ಅಂದುಕೊಳ್ಳುತ್ತೀಯೋ ಅದನ್ನು ಮಾಡಬೇಕು. ನಿನಗೆ ಸಹಕರಿಸಬೇಕು ಅನಿಸುತ್ತದೆ.
ನೀನು ಇನ್ನು ಮುಂದೆ ಇಲ್ಲಿ ಇರೋದಿಲ್ಲ ಎಂಬ ನೋವು ನನಗೂ ಇದೆ. ಆದ್ರೆ ಇನಗೆ ಸಾಧನೆ ಮಾಡಲು ಸಹಾಯ ಮಾಡಬೇಕು ಅನ್ನೋದು ನನ್ನ ಆಸೆ ಎಂದು ಹೇಳುತ್ತಾನೆ. ಆ ಮಾತನ್ನು ಕೇಳಿ ಅವಳಿಗೆ ಸಂತೋಷ ಆಗುತ್ತದೆ.
ಅಣ್ಣಯ್ಯ ಧಾರಾವಾಹಿ
ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ. ಮದುವೆ ಕೂಡ ಆಗಿದೆ. ಆದರೆ ಇನ್ನೂ ಪಾರು ಹಾಗೂ ಅಣ್ಣಯ್ಯ ಒಂದಾಗಿಲ್ಲ. ಪಾರು ಸಿದ್ದಾರ್ಥನ ಗುಂಗಿನಲ್ಲೇ ಮುಳುಗಿದ್ದಾಳೆ.
ಅಣ್ಣಯ್ಯ ಸೀರಿಯಲ್ ಪಾತ್ರವರ್ಗ
ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.
ವಿಕಾಸ್ ಉತ್ತಯ್ಯ - ಶಿವು
ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿದ್ದಾರೆ.
ನಿಶಾ ರವಿಕೃಷ್ಣನ್ - ಪಾರು
ಅಂಕಿತಾ ಗೌಡ, ನಾಗಶ್ರೀ ಬೇಗಾರ್, ಪ್ರತೀಕ್ಷಾ ಶರೀನಾಥ್ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.
ಹಳ್ಳಿ ಹುಡುಗರು ಮನಸ್ಸು ಹಂಗೇನೆ ತಾನ್ ನೋವು ಕೊಟ್ಕೊಂಡ್ರು ಪ್ರೀತ್ಸೋ ಹುಡುಗಿ ಚೆನ್ನಾಗಿರಬೇಕು ಅಂತ ಹಳ್ಳಿ ಹುಡುಗರ ಅರಿಯದ ಮನಸ್ಸು ಎಂದು ದಿಲೀಪ್ ಕಾಮೆಂಟ್ ಮಾಡಿದ್ದಾರೆ. ಈ ಧಾರಾವಾಹಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ.