logo
ಕನ್ನಡ ಸುದ್ದಿ  /  ಮನರಂಜನೆ  /  Annayya Serial: ಶಿವು ಬಾಳಲ್ಲಿ ಚಿಗುರೊಡೆಯಿತು ಪ್ರೀತಿಯ ಕುಡಿ; ಪಾರು ಕೆನ್ನೆಯಲ್ಲಿ ಹೂ ಅರಳುವ ಸಮಯ ಬಂದಾಯ್ತು ನೋಡಿ

Annayya Serial: ಶಿವು ಬಾಳಲ್ಲಿ ಚಿಗುರೊಡೆಯಿತು ಪ್ರೀತಿಯ ಕುಡಿ; ಪಾರು ಕೆನ್ನೆಯಲ್ಲಿ ಹೂ ಅರಳುವ ಸಮಯ ಬಂದಾಯ್ತು ನೋಡಿ

Suma Gaonkar HT Kannada

Dec 04, 2024 01:13 PM IST

google News

ಶಿವು ಬಾಳಲ್ಲಿ ಚಿಗುರೊಡೆಯಿತು ಪ್ರೀತಿಯ ಕುಡಿ

    • ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಹಾಗೂ ಶಿವು ಯಾವಾಗ ಒಂದಾಗುತ್ತಾರೆ ಎನ್ನುವುದೇ ಎಲ್ಲರ ಪ್ರಶ್ನೆಯಾಗಿತ್ತು. ಹೀಗಿರುವಾಗ ಶಿವು ಮತ್ತು ಪಾರು ಇಬ್ಬರೂ ಈಗ ಒಂದಾದ ರೀತಿಯಲ್ಲಿ ಪ್ರೋಮೋ ಒಂದು ಬಿಡುಗಡೆಯಾಗಿದೆ. ಇದನ್ನು ನೋಡಿ ಕನಸಿರಬಹುದು ಎಂದು ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ. 
ಶಿವು ಬಾಳಲ್ಲಿ ಚಿಗುರೊಡೆಯಿತು ಪ್ರೀತಿಯ ಕುಡಿ
ಶಿವು ಬಾಳಲ್ಲಿ ಚಿಗುರೊಡೆಯಿತು ಪ್ರೀತಿಯ ಕುಡಿ

ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ಹಾಗೂ ಪಾರು ಮದುವೆಯಾಗಿ ಹಲವು ವಾರಗಳು ಕಳೆಯುತ್ತಾ ಬಂದರೂ ಅವರಿಬ್ಬರೂ ಇನ್ನೂ ಒಂದಾಗಿರಲಿಲ್ಲ. ಶಿವು ಪಾರುವನ್ನು ಪ್ರೀತಿಸುತ್ತಿದ್ದರೂ ಸಹ ಪಾರು ಮಾತ್ರ ಇನ್ನೂ ಸಿದ್ದಾರ್ಥ್‌ ನೆನಪಿನಲ್ಲೇ ಇದ್ದಾಳೆ. ಶಿವು ಹಾಗೂ ಪಾರು ಜೋಡಿ ತುಂಬಾ ಮುದ್ದಾಗಿದ್ದರೂ ಅವರಿನ್ನೂ ಪ್ರೀತಿಯಲ್ಲಿ ಒಂದಾಗಿಲ್ಲ ಎಂದು ವೀಕ್ಷಕರಿಗಿತ್ತು. ಆದರೆ ಶಿವು ತಂಗಿಯರು ಹಾಗೂ ವೀಕ್ಷಕರ ಆಸೆಯಂತೆ ಶಿವು ಹಾಗೂ ಪಾರು ಈಗ ಒಂದಾಗಿದ್ದಾರೆ. ಆದರೆ ಪಾರು ತನ್ನೆಲ್ಲ ಕನಸನ್ನು ಬಿಟ್ಟು ಈಗ ಒಂದೇ ಬಾರಿ ಶಿವುವವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದೂ ಸಹ ಅನಿಸುತ್ತಿದೆ.

ಈಗ ಬಿಡುಗಡೆಯಾದ ಪ್ರೋಮೋದಲ್ಲಿ ಶಿವು ಹಾಗೂ ಪಾರು ಒಂದಾಗಿದ್ದಾರೆ. ತುಂಬಾ ಪ್ರೀತಿಯಿಂದ ನಡೆದುಕೊಳ್ಳುತ್ತಿದ್ದಾರೆ. ಹೀಗಿರುವಾಗ ಮುಂದೆ ಏನಾಗಬಹುದು ಎಂದು ಆಲೋಚಿಸುತ್ತಿರುವವರು ಇದು ಶಿವು ತಂಗಿಯರು ಕಂಡ ಕನಸಿರಬಹುದು ಅಥವಾ ಶಿವು ತಾನು ಮತ್ತು ಪಾರು ಸರಿಯಾಗಿದ್ದರೆ ಹೀಗೆಲ್ಲ ಆಗಬಹುದು ಎಂದು ಅಂದುಕೊಂಡಿರಬಹುದು ಎಂದು ಕಾಮೆಂಟ್ ಮಾಡುತ್ತಿದ್ಧಾರೆ. ಯಾಕೆಂದರೆ ಇದು ಶಿವು ಹಾಗೂ ಪಾರು ಪ್ರಣಯದ ದೃಷ್ಯವಾಗಿದೆ.

ಹೇಗಿತ್ತು ಪಾರು ಶಿವು ಪ್ರಣಯ ಪ್ರಸಂಗ?
ಪಾರು ಹಾಗೂ ಶಿವು ಇಬ್ಬರೂ ಒಂದು ಕೋಣೆಯಲ್ಲಿರುತ್ತಾರೆ. ಶಿವು ಪಾರುಗಾಗಿ ಮಲ್ಲಿಗೆ ಹೂ ತಂದಿರುತ್ತಾನೆ. ತಂದು ಅವಳಿಗೆ ಕೊಡುತ್ತಾನೆ ಆಗ ಅವಳು ಇದೇ ಮೊದಲ ಬಾರಿಗೆ ಚಿನ್ನು ಎಂದು ಶಿವುವನ್ನು ಕರೆದಿದ್ದಾಳೆ. ಅದನ್ನು ಕೇಳಿ ಶಿವು ಖುಷಿಯಾಗುತ್ತಾನೆ. ನಂತರ ಶಿವು ಆ ಮಲ್ಲಿಗೆ ಹೂವನ್ನು ಮುಡಿಸಲು ಮುಂದಾಗುತ್ತಾನೆ. ನಂತರ ಪಾರು ಕೆನ್ನೆಗೊಂದು ಮುತ್ತು ಕೊಡುತ್ತಾನೆ.

ಅಣ್ಣಯ್ಯ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ