Annayya Serial: ಅಣ್ಣಯ್ಯನ ತಂಗಿಯರು ಅನಾಥರಲ್ಲ, ಶಿವು ತಾಯಿ ಇನ್ನೂ ಬದುಕಿದ್ದಾಳೆ; ಇಲ್ಲಿದೆ ವೀರಭದ್ರನ ಮೋಸದ ಕಥೆ
ಅಣ್ಣಯ್ಯ ಧಾರಾವಾಹಿಯಲ್ಲಿ ಒಂದೊಂದೇ ಸತ್ಯ ಈಗ ಹೊರಬರುತ್ತಿದೆ. ಅಣ್ಣಯ್ಯನಿಗೆ ಅಮ್ಮ ಇಲ್ಲ. ತಂಗಿಯರನ್ನೆಲ್ಲ ಅವನೊಬ್ಬನೇ ಸಾಕಿದ್ದಾನೆ ಎಂದು ಎಲ್ಲರೂ ಅಂದುಕೊಂಡಿರುವಾಗ ಸತ್ಯವೊಂದು ವೀರಭದ್ರನ ಬಾಯಿಂದ ಹೊರಬಿದ್ದಿದೆ.
ಅಣ್ಣಯ್ಯ ಧಾರಾವಾಹಿಯಲ್ಲಿ ಅಣ್ಣಯ್ಯ ಹಾಗೂ ಅವನ ತಂಗಿಯರು ಅಪ್ಪ, ಅಮ್ಮ ಇದ್ದರೂ ಅನಾಥರಂತೆ ಬದುಕುತ್ತಿದ್ದಾರೆ. ತಂದೆ ದಿನ ದಿನವೂ ಕುಡಿದುಕೊಂಡು ಮನೆಗೆ ಬರುತ್ತಾನೆ. ಇನ್ನು ತಾಯಿ ಇಲ್ಲವೇ ಇಲ್ಲ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಇಲ್ಲಿ ಬೇರೆಯದೇ ಆಗಿದೆ. ವೀರಭದ್ರ ಆಸ್ತಿ ಲಪಟಾಯಿಸುವ ಸಲುವಾಗ ತನ್ನ ಸ್ವಂತ ಸಹೋದರಿಯನ್ನು ಜೈಲಿಗೆ ಕಳಿಸಿದ್ದಾನೆ. ಶಿವು ತಾಯಿ ಎಲ್ಲಿದ್ಧಾಳೆ ಅಂತ ನನಗೆ ಮಾತ್ರ ಗೊತ್ತಿದೆ ಎಂದು ಗಹಗಹಿಸಿ ನಗುತ್ತಿದ್ದಾನೆ. ಅಣ್ಣಯ್ಯ ಮಾವಯ್ಯ ಎಂದರೆ ದೇವರು ಎಂದುಕೊಂಡು ಬದುಕುತ್ತಿದ್ದಾನೆ.
ಹಿಂದಿನ ದಿನ ವೀರಭದ್ರನಿಗೆ ಎದೆ ನೋವು ಬಂದ ಕಾರಣ ಮಾವನಿಗೆ ಏನಾಗುತ್ತದೆಯೋ ಏನೋ ಎಂದು ಅನುಮಾನ ಆರಂಭವಾಗಿತ್ತು. ಆ ರೀತಿ ಆದಾಗಿನಿಂದ ಶಿವು ತುಂಬಾ ಬೇಸರದಲ್ಲಿದ್ದಾನೆ. ಮಾವನಿಗೆ ಹೀಗೆಲ್ಲ ಆಗಬಾರದಿತ್ತು ಎಂದು ಅಂದುಕೊಳ್ಳುತ್ತಾ ಇದ್ದಾನೆ. ಆದರೆ ಅಲ್ಲಿ ನಡೆದಿರುವುದೇ ಬೇರೆ. ಅಂದು ವೀರಭದ್ರನಿಗೆ ಎದೆನೂವು ಬಂದೇ ಇಲ್ಲ. ಅದೆಲ್ಲವೂ ನಾಟಕ. ಈ ನಾಟಕದ ಬಗ್ಗೆ ಪಾರು ಸತ್ಯ ಅರಿತುಕೊಂಡಿದ್ದಾಳೆ.
ಪಾರು ಈಗ ಶಿವು ತಾಯಿ ರೀತಿಯೇ ಆಡುತ್ತಿದ್ದಾಳೆ. ಕೊನೆಗೊಂದು ದಿನ ಶಿವು ತಾಯಿಗೆ ಆದ ಗತಿಯೇ ಪಾರ್ವತಿಗೂ ಆಗುತ್ತದೆ ಎಂದು ವೀರಭದ್ರ ಹೇಳುತ್ತಿದ್ದಾನೆ. ಆದರೆ ಶಿವು ತಾಯಿ ಎಲ್ಲಿದ್ದಾಳೆ ಎಂಬ ಸತ್ಯ ಈಗ ಹೊರಬಿದ್ದಿದೆ. ಈ ಹಿಂದೆ ಎಲ್ಲೂ ಆ ಪ್ರಸ್ತಾಪ ಬಂದಿರಲಿಲ್ಲ. ಶಿವು ತಾಯಿ ಈಗ ಜೈಲಿನಲ್ಲಿದ್ದಾಳೆ. ತುಂಬಾ ಬೇಸರದಲ್ಲಿ ಅಳುತ್ತಿದ್ದಾಳೆ.
ಅಣ್ಣಯ್ಯ ಧಾರಾವಾಹಿ
ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.
ಅಣ್ಣಯ್ಯ ಸೀರಿಯಲ್ ಪಾತ್ರವರ್ಗ
ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.
ವಿಕಾಸ್ ಉತ್ತಯ್ಯ - ಶಿವು
ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿದ್ದಾರೆ.
ನಿಶಾ ರವಿಕೃಷ್ಣನ್ - ಪಾರು
ಅಂಕಿತಾ ಗೌಡ, ನಾಗಶ್ರೀ ಬೇಗಾರ್, ಪ್ರತೀಕ್ಷಾ ಶರೀನಾಥ್ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.