Lakshmi Baramma: ಕೋರ್ಟ್‌ನಲ್ಲಿ ಎಲ್ಲರೆದುರು ಸತ್ಯ ಹೇಳಿದ ಲಕ್ಷ್ಮೀ; ಒತ್ತಾಯ ಮಾಡಿದ ವೈಷ್ಣವ್‌ಗೆ ಸಿಕ್ಕ ಉತ್ತರ ಏನು?
ಕನ್ನಡ ಸುದ್ದಿ  /  ಮನರಂಜನೆ  /  Lakshmi Baramma: ಕೋರ್ಟ್‌ನಲ್ಲಿ ಎಲ್ಲರೆದುರು ಸತ್ಯ ಹೇಳಿದ ಲಕ್ಷ್ಮೀ; ಒತ್ತಾಯ ಮಾಡಿದ ವೈಷ್ಣವ್‌ಗೆ ಸಿಕ್ಕ ಉತ್ತರ ಏನು?

Lakshmi Baramma: ಕೋರ್ಟ್‌ನಲ್ಲಿ ಎಲ್ಲರೆದುರು ಸತ್ಯ ಹೇಳಿದ ಲಕ್ಷ್ಮೀ; ಒತ್ತಾಯ ಮಾಡಿದ ವೈಷ್ಣವ್‌ಗೆ ಸಿಕ್ಕ ಉತ್ತರ ಏನು?

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಥೆ ಮುಂದೆ ಸಾಗುತ್ತಿಲ್ಲ ಎಂದು ವೀಕ್ಷಕರು ಒಂದೇ ಸಮನೆ ಕಾಮೆಂಟ್ ಮಾಡುತ್ತಿದ್ದಾರೆ. ಆದರೂ ಧಾರಾವಾಹಿ ನೋಡುವ ಕುತೂಹಲ ಮಾತ್ರ ಕಡಿಮೆ ಆಗಿಲ್ಲ. ಯಾವಾಗ ವೈಷ್ಣವ್ ಎದುರು ಕಾವೇರಿ ಸತ್ಯ ಬಯಲಾಗುತ್ತದೆ ಎಂದು ಕಾಯುತ್ತಿದ್ದಾರೆ.

 ಕೋರ್ಟ್‌ನಲ್ಲಿ ಎಲ್ಲರೆದುರು ಸತ್ಯ ಹೇಳಿದ ಲಕ್ಷ್ಮೀ
ಕೋರ್ಟ್‌ನಲ್ಲಿ ಎಲ್ಲರೆದುರು ಸತ್ಯ ಹೇಳಿದ ಲಕ್ಷ್ಮೀ

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕೀರ್ತಿ ಕೊಟ್ಟ ಕಂಪ್ಲೇಂಟ್‌ ಈಗ ಕಾವೇರಿಗೆ ಮುಳುವಾಗಿದೆ. ಕಾವೇರಿ ತಾನು ಅಂದುಕೊಂಡಂತೆ ಎಲ್ಲವೂ ನಡೆಯುತ್ತಿದೆ ಎಂದುಕೊಳ್ಳುವಾಗಲೇ ಸಮಸ್ಯೆ ಎದುರಾಗಿದೆ. ಆದರೆ ಜೀವಂತವಾಗಿ ಕಣ್ಣಮುಂದೆ ಕೀರ್ತಿ ಕಾಣಿಸುತ್ತಿದ್ದರೂ ಅವಳು ಕೀರ್ತಿ ಅಲ್ಲ ಎಂದು ಹೇಳಲಾಗುತ್ತಿದೆ. ಆದರೆ ಇಷ್ಟು ದಿನ ಲಕ್ಷ್ಮೀ ಕೂಡ ಕಾಣೆಯಾಗಿದ್ದಳು ಅವಳ ಮೇಲೂ ಕೊಲೆ ಮಾಡಲು ಸಂಚು ರೂಪಿಸಿದ್ದು ಕಾವೇರಿ ಎನ್ನುವುದು ಯಾರಿಗೂ ತಿಳಿದಿರಲಿಲ್ಲ.

ಆದರೆ ಕೋರ್ಟ್ ಕಟಕಟೆಯಲ್ಲಿ ವಿಚಾರಣೆ ನಡೆಸುತ್ತಿರುವ ಸಂದರ್ಭದಲ್ಲೇ ಕಾಣೆಯಾದ ಲಕ್ಷ್ಮೀ ಪ್ರತ್ಯಕ್ಷವಾಗಿದ್ದಾಳೆ. ಅವಳು ಬಂದು ನಾನು ಸತ್ಯ ಹೇಳುತ್ತೇನೆ ಎಂದು ಹೇಳಿದ್ದಾಳೆ. ಆಗ ಜಡ್ಜ್ ಅವಳ ಹತ್ತಿರವೇ ನೇರವಾಗಿ ಪ್ರಶ್ನೆ ಮಾಡಿದ್ದಾರೆ. ನಿನ್ನ ಕೊಲೆ ಮಾಡಲು ಪ್ರಯತ್ನ ಮಾಡಿರುವುದು ಯಾರು ಸತ್ಯ ಹೇಳು ಎಂದು ಕೇಳಿದ್ದಾರೆ. ಆಗ ಲಕ್ಷ್ಮೀ ನಾನು ಸತ್ಯ ಹೇಳ್ತೀನಿ ಎಂದು ಮುಂದೆ ಬಂದಿದ್ದಾಳೆ.

ಕಾವೇರಿಯನ್ನು ಬೊಟ್ಟು ಮಾಡಿ ತೋರಿಸಿದ ಲಕ್ಷ್ಮೀ

ನನ್ನ ಕೊಲೆ ಪ್ರಯತ್ನ ನಡೆದಿರುವುದು ನಿಜ ಆದರೆ ಕೊಲೆ ಮಾಡಲು ಮುಂದಾಗಿದ್ದು ಕೀರ್ತಿಯಲ್ಲ ಎಂದು ಹೇಳಿದ್ದಾಳೆ. ಅದಾದ ನಂತರ ನಿಮ್ಮನ್ನು ಕೊಲೆ ಮಾಡಲು ಪ್ರಯತ್ನಿಸಿದ್ದು ಯಾರು ಎಂದು ಹೇಳಿ ಲಕ್ಷ್ಮೀ ಎಂದು ವೈಷ್ಣವ್ ಕೂಗಿ ಹೇಳಿದ್ದಾನೆ. ಆಗ ಅವಳು ಕಾವೇರಿ ಕಡೆಗೆ ಕೈ ಮಾಡಿ ತೋರಿಸಿದ್ದಾಳೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.

ಲಕ್ಷ್ಮೀ ಬಾರಮ್ಮ ಪಾತ್ರವರ್ಗ

ವೈಷ್ಣವ್ ಪಾತ್ರದಲ್ಲಿ ಶಮಂತ್‌ ಗೌಡ (ಬ್ರೋ ಗೌಡ)

ಕೀರ್ತಿ ಪಾತ್ರದಲ್ಲಿ ತನ್ವಿ ರಾವ್‌

ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್‌

ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ

ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.

ಬಾಯಲ್ಲಿ ಕಾವೇರಿ ಎಂದು ಹೇಳಿದರೆ ಆಗಲ್ವಾ? ಅದೇನು ಕೈ ತೋರಿಸಿ ಅದರಲ್ಲೊಂದು ತಿರುವು ನೀಡುವುದು. ಬರಿ ಇದೇ ಆಗೋಯ್ತು. ಒಟ್ಟಿನಲ್ಲಿ ಕಾವೇರಿ ಬಣ್ಣ ಬಯಲಾಗುವುದಿಲ್ಲ ಧಾರಾವಾಹಿ ಮುಗಿಯುವುದಿಲ್ಲ ಎಂದು ರೇಣುಕಾ ಭರತ್ ಕಾಮೆಂಟ್ ಮಾಡಿದ್ಧಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಗೊಂದಲದ ಗೂಡಾಗಿದೆ. ವೀಕ್ಷಕರು ದಿನಕ್ಕೊಂದೊಂದು ಕಥೆ ನೋಡಿ ಏನಾಗ್ತಾ ಇದೆ ಎಂದು ಕಂಡು ಹಿಡಿಯಲು ಕಷ್ಟಪಡುತ್ತಿದ್ದಾರೆ. ಹೀಗಿರುವಾಗ ಕಥೆಯಲ್ಲಿ ಮತ್ತೊಂದು ಟ್ವಿಸ್ಟ್‌ ಎದುರಾಗಿದೆ.

Whats_app_banner