ಅಪ್ಪ ಅಮ್ಮನ ಪರಿಸ್ಥಿತಿ ನೆನೆದು ಹಾಸಿಗೆ ಹಿಡಿದ ಗುಂಡಣ್ಣ, ಮಗನಿಗಾಗಿ ಮನಸ್ಸು ಬದಲಿಸ್ತಾಳಾ ಭಾಗ್ಯಾ? ಭಾಗ್ಯಲಕ್ಷ್ಮೀ ಧಾರಾವಾಹಿ
Dec 15, 2024 08:42 AM IST
ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್ 14ರ ಎಪಿಸೋಡ್
ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್ 14ರ ಎಪಿಸೋಡ್‌ನಲ್ಲಿ ತಾಂಡವ್ ಹಾಗೂ ಶ್ರೇಷ್ಠಾ ಮದುವೆ ಮಾಡಿಕೊಳ್ಳುವ ತಯಾರಿಯಲ್ಲಿದ್ದಾರೆ. ಡಿವೋರ್ಸ್ ಪೇಪರ್‌ಗೆ ಸಹಿ ಹಾಕಿದ್ದಕ್ಕೆ ಸುನಂದಾ ಭಾಗ್ಯಾ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾಳೆ. ಅಪ್ಪ ಅಮ್ಮನ ಪರಿಸ್ಥಿತಿ ನೆನಪಿಸಿಕೊಂಡು ಗುಂಡಣ್ಣನಿಗೆ ಬಹಳ ನೋವಾಗುತ್ತದೆ. ಇದೇ ಬೇಸರದಿಂದ ಗುಂಡಣ್ಣ ಜ್ವರದಿಂದ ಬಳಲುತ್ತಿದ್ದಾನೆ.
Bhagyalakshmi Serial: ಜಾಮೀನು ಕೊಟ್ಟು ಭಾಗ್ಯಾ, ಅಮ್ಮ ಸುನಂದಾಳನ್ನು ಪೊಲೀಸ್ ಸ್ಟೇಷನ್‌ನಿಂದ ಬಿಡಿಸಿಕೊಂಡು ಬರುತ್ತಾಳೆ. ಜೊತೆಗೆ ಡಿವೋರ್ಸ್ ಪೇಪರ್‌ಗೆ ಸಹಿ ಮಾಡಿ ತಾಂಡವ್ ಮುಖದ ಮೇಲೆ ಎಸೆಯುತ್ತಾಳೆ. ಇಷ್ಟು ದಿನ ಡಿವೋರ್ಸ್‌ಗಾಗಿ ಕಾದಿದ್ದ ತಾಂಡವ್‌ಗೆ ಭಾಗ್ಯಾ ಇಷ್ಟು ಸುಲಭವಾಗಿ ಡಿವೋರ್ಸ್ ಕೊಟ್ಟಿದ್ದಾಳೆ ಅನ್ನೋದನ್ನು ತಿಳಿದು ಶಾಕ್ ಆಗುತ್ತಾನೆ. ಆದರೆ ಶ್ರೇಷ್ಠಾ ಮಾತ್ರ ಬಹಳ ಖುಷಿಯಾಗುತ್ತಾಳೆ.
ತನ್ನ ಮನೆಯಲ್ಲೇ ಶ್ರೇಷ್ಠಾಳನ್ನು ಮದುವೆಯಾಗಲು ನಿರ್ಧರಿಸಿದ ತಾಂಡವ್
ಭಾಗ್ಯಾ ಡಿವೋರ್ಸ್ ಕೊಟ್ಟಾಯ್ತು, ಇನ್ನು ನಮ್ಮ ಮದುವೆಗೆ ಇದ್ದ ಎಲ್ಲಾ ಅಡೆತಡೆಗಳು ದೂರಾಯ್ತು ಎಂದು ಶ್ರೇಷ್ಠಾ ಖುಷಿಯಾಗುತ್ತಾಳೆ. ಭಾಗ್ಯಾ ಖುಷಿಯಾಗಿರಬಾರದು ಎಂದಾದರೆ ನಾವಿಬ್ಬರೂ ಮದುವೆ ಆಗಬೇಕು. ಒಮ್ಮೆ ನಾನು ಆ ಮನೆಗೆ ಬಂದ ನಂತರ ಎಲ್ಲರಿಗೂ ಮತ್ತೆ ಪಾಠ ಕಲಿಸುತ್ತೇನೆ ಎಂದು ಶ್ರೇಷ್ಠಾ ಮನಸ್ಸಿನಲ್ಲೇ ಪ್ಲ್ಯಾನ್ ಮಾಡುತ್ತಾಳೆ. ತಾಂಡವ್ ಕೂಡಾ ನಾಳೆಯೇ ನಿನ್ನನ್ನು ಮದುವೆ ಆಗುವೆ ಎಂದು ಭರವಸೆ ನೀಡುತ್ತಾನೆ. ನಾಳೆ ಬೆಳಗ್ಗೆ ಮನೆಗೆ ಬಂದುಬಿಡು, ಮನೆಯಲ್ಲಿ ಪುರೋಹಿತರ ಜೊತೆ ಮದುವೆಗೆ ಎಲ್ಲಾ ತಯಾರಿ ಮಾಡಿಕೊಂಡು ಕಾಯುತ್ತಿರುತ್ತೇನೆ. ನಿನ್ನನ್ನು ಮನೆ ತುಂಬಿಸಿಕೊಳ್ಳುತ್ತೇನೆ ಎನ್ನುತ್ತಾನೆ. ತಾಂಡವ್ ಮಾತು ಕೇಳಿ ಶ್ರೇಷ್ಠಾ ಖುಷಿಯಾಗುತ್ತಾಳೆ.
ಇನ್ಮುಂದೆ ನಾನು ಮಿಸೆಸ್ ತಾಂಡವ್ ಆಗುತ್ತೇನೆ. ತಾಂಡವ್ ಮನೆ ಇನ್ಮುಂದೆ ನನ್ನ ಮನೆ ಆಗಲಿದೆ. ನಾಳೆಯಿಂದ ನಾನು ಆ ಮನೆಗೆ ಹೋಗುತ್ತೇನೆ. ನಾಳೆಯೇ ಈ ಮನೆ ಖಾಲಿ ಮಾಡಬೇಕು, ಈ ಮದುಕ, ಮುದುಕಿಗೆ ಹೇಳಬೇಕು ಎಂದುಕೊಂಡು ಮನೆ ಓನರ್‌ನನ್ನು ಹೊರಗೆ ಬರಲು ಹೇಳುತ್ತಾಳೆ. ಇಷ್ಟು ಹೊತ್ತಿನಲ್ಲಿ ಮಾತನಾಡುವ ಅವಶ್ಯಕತೆ ಏನಿದೆ ಎಂದು ಮನೆ ಓನರ್ ಕೇಳುತ್ತಾರೆ. ಹೌದು ಈಗಲೇ ಮಾತನಾಡಬೇಕು, ನಾಳೆ ನಾನು ಮನೆ ಖಾಲಿ ಮಾಡುತ್ತಿದ್ದೇನೆ. ನಾನು ಬೆಳಗ್ಗೆ ಮನೆಯಿಂದ ಹೋಗುವಾಗ ನಾನು ಕೊಟ್ಟ ಅಡ್ವಾನ್ಸ್ ನನಗೆ ವಾಪಸ್ ಕೊಡಬೇಕು ಎಂದು ಕಂಡಿಷನ್ ಮಾಡುತ್ತಾಳೆ. ಶ್ರೇಷ್ಠಾ ಮದುವೆ ಆಗುತ್ತಿದ್ದಾಳೆ ಎಂದು ತಿಳಿದ ಮನೆ ಓನರ್ ಗಾಬರಿ ಆಗುತ್ತಾಳೆ. ಇಂಥವಳಿಗೆ ನಾನು ಮನೆ ಬಾಡಿಗೆ ಕೊಟ್ಟೇನಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ.
ಅಪ್ಪ-ಅಮ್ಮ ದೂರಾದ ನೋವಲ್ಲೇ ಹಾಸಿಗೆ ಹಿಡಿದ ಗುಂಡಣ್ಣ
ಇತ್ತ ಸುನಂದಾ, ಮಗಳ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸುತ್ತಾಳೆ. ಡಿವೋರ್ಸ್ ಪೇಪರ್‌ಗೆ ಏಕೆ ಸಹಿ ಹಾಕಿದೆ ಎಂದು ಕೇಳುತ್ತಾಳೆ. ಆ ಮದುವೆಯಲ್ಲಿ ಏನು ಉಳಿದಿದೆ ಎಂದು ಭಾಗ್ಯಾ ಕೇಳುತ್ತಾಳೆ. ಭಾಗ್ಯಾ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸುವ ಕುಸುಮಾ ಸೊಸೆ ಮನೆಗೆ ಬಂದ ನಂತರ ಗಂಡನಿಗೆ ಏನು ಬೇಕೋ ಅದು ಮಾಡುವಂತೆ, ಅವನ ಬೇಕು ಬೇಡಗಳನ್ನು ಪೂರೈಸುವಂತೆ, ಅವನಿಗೆ ಗೌರವಿಸುವಂತೆ ಹೇಳಿಕೊಟ್ಟ ನಾನು, ಸೊಸೆಯನ್ನು ಹೇಗೆ ನೋಡಿಕೊಳ್ಳಬೇಕು ಎಂದು ಮಗನಿಗೆ ಹೇಳಿಕೊಡಲು ಸಾಧ್ಯವಾಗಲಿಲ್ಲ, ನನ್ನ ಸೊಸೆ ಏನು ಮಾಡಿದರೂ, ಯಾವ ನಿರ್ಧಾರ ಕೈಗೊಂಡರೂ ನನಗೆ ಅವಳ ಬೆಂಬಲವಿದೆ ಎನ್ನುತ್ತಾಳೆ. ಧರ್ಮರಾಜ್ ಕೂಡಾ ಸೊಸೆಯ ನಿರ್ಧಾರವನ್ನು ಬೆಂಬಲಿಸುತ್ತಾರೆ.
ಆದರೆ ಅಪ್ಪ ಅಮ್ಮ ಇನ್ನು ಜೊತೆಯಲ್ಲಿ ಇರುವುದಿಲ್ಲ ಎಂದು ತಿಳಿದ ಗುಂಡಣ್ಣ ಜ್ವರದಿಂದ ಮಲಗಿದ್ದಾನೆ. ಅಪ್ಪ ಅಪ್ಪ ಜೊತೆಯಾಗಿರಬೇಕು, ಸ್ಕೂಲ್‌ನಲ್ಲಿ ತಮಾಷೆ ಮಾಡುತ್ತಾರೆ ಎಂದು ಕನವರಿಸುತ್ತಲೇ ಇದ್ದಾನೆ. ತನ್ಮಯ್‌ನನ್ನು ಚೆಕಪ್ ಮಾಡಲು ಬರುವ ಡಾಕ್ಟರ್ ಇದು ಮಾನಸಿಕ ಒತ್ತಡದಿಂದ ಬಂದಿರುವ ಜ್ವರ. ಆ ಮಗುವಿಗೆ ಯಾರಾದರೂ ಬೇಜಾರು ಮಾಡಿದ್ರಾ ಎಂದು ಕೇಳುತ್ತಾರೆ. ಹೌದು ಎಂದು ಸುಂದ್ರಿ ಹೇಳುತ್ತಾಳೆ. ಆದರೆ ಪೂಜಾ ಅವಳನ್ನು ತಡೆಯುತ್ತಾಳೆ.
ಮಗನಿಗಾಗಿ ಭಾಗ್ಯಾ ಮನಸ್ಸು ಬದಲಿಸಿಕೊಳ್ಳುತ್ತಾಳಾ? ತಾಂಡವ್ ಶ್ರೇಷ್ಠಾ ಮದುವೆ ಆಗುವುದನ್ನು ತಡೆಯುತ್ತಾಳಾ ಕಾದು ನೋಡಬೇಕು
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್