BBK 11 TRP: ಟಿಆರ್‌ಪಿಯಲ್ಲಿ ಆಲ್ ಟೈಮ್ ದಾಖಲೆ ಬರೆದ ಬಿಗ್ ಬಾಸ್ ಕನ್ನಡ; ಹಿಂದಿನ ರೆಕಾರ್ಡ್‌ಗಳೆಲ್ಲ ಧೂಳಿಪಟ
Nov 04, 2024 06:40 PM IST
ನವೆಂಬರ್ ಮೊದಲ ವಾರದ ಟಿಆರ್‌ಪಿಯಲ್ಲಿ ಬಿಗ್ ಬಾಸ್‌ನ ವಾರಾಂತ್ಯದ ಎರಡು ಏಪಿಸೋಡ್‌ಗಳು ದಾಖಲೆಯ ಟಿಆರ್‌ಪಿ ಪಡೆದುಕೊಂಡಿವೆ.
- Bigg Boss Kannada 11 TRP: ನವೆಂಬರ್ ಮೊದಲ ವಾರದ ಟಿಆರ್‌ಪಿಯಲ್ಲಿ ಬಿಗ್ ಬಾಸ್‌ನ ವಾರಾಂತ್ಯದ ಎರಡು ಏಪಿಸೋಡ್‌ಗಳು ದಾಖಲೆಯ ಟಿಆರ್‌ಪಿ ಪಡೆದುಕೊಂಡಿವೆ. ಹಾಗಾದರೆ, ವಾರದ ಕಥೆ ಕಿಚ್ಚನ ಜೊತೆಯ ಎರಡು ಏಪಿಸೋಡ್‌ಗಳಿಗೆ ಸಿಕ್ಕ ಟಿಆರ್‌ಪಿ ಎಷ್ಟು? ಇಲ್ಲಿದೆ ವಿವರ.
Bigg Boss Kannada 11: ಬಿಗ್ ಬಾಸ್ ಕನ್ನಡದ ಶೋ ಆರಂಭವಾಗಿ 5 ವಾರಗಳಾಯಿತು. ಆರಂಭದಲ್ಲಿದ್ದ ಜೋಶ್ ಕೊಂಚ, ಇದೀಗ ಮತ್ತೆ ಕಾಣುತ್ತಿದೆ. ವೈಲ್ಡ್ ಕಾರ್ಡ್ ಎಂಟ್ರಿ ರೂಪದಲ್ಲಿ ಹನುಮಂತ ಲಮಾಣಿ ಬಂದಮೇಲಿಂದ ಬಿಗ್ ಮನೆಯ ವಾತಾವರಣ ಬದಲಾಗಿದೆ. ವೀಕ್ಷಕರನ್ನೂ ಸೆಳೆಯುತ್ತಿದೆ ಬಿಗ್ ಬಾಸ್. ಅದೇ ರೀತಿ ಅಕ್ಟೋಬರ್ 20ರಂದು ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ನಿಧನದ ಹಿನ್ನೆಲೆಯಲ್ಲಿ ಅಕ್ಟೋಬರ್ 26 ಮತ್ತು 27ರ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿರಲಿಲ್ಲ. ಈಗ ನ. 2 ಮತ್ತು 3ರ ಏಪಿಸೋಡ್‌ನಲ್ಲಿ ಅವರ ಆಗಮನವಾಗಿತ್ತು. ಆ ಏಪಿಸೋಡ್‌ಗಳಿಗೆ ಇದೀಗ ದಾಖಲೆಯ ಟಿಆರ್‌ಪಿ ಸಿಕ್ಕಿದೆ.
ಕಿಚ್ಚನ ಅನುಪಸ್ಥಿತಿಯಲ್ಲಿ ನಿರ್ದೇಶಕ ಯೋಗರಾಜ್ ಭಟ್ ಮತ್ತು ನಟ, ನಿರೂಪಕ ಸೃಜನ್ ಲೋಕೇಶ್ (ಅಕ್ಟೋಬರ್ 26 ಮತ್ತು 27) ವಾರಾಂತ್ಯದ ಎರಡು ದಿನಗಳಲ್ಲಿ ಕಾಣಿಸಿಕೊಂಡಿದ್ದರು. ಮನೆ ಮಂದಿಗೆ ಸರಣಿ ಗೇಮ್ ಆಡಿಸಿ, ಬುದ್ಧಿವಾದ ಹೇಳಿ ಮೋಕ್ಷಿತಾ ಪೈ ಮತ್ತು ಹಂಸಾ ಇಬ್ಬರ ಪೈಕಿ ಹಂಸಾ ಅವರು, ತಮ್ಮ ಆಟ ಮುಗಿಸಿ ಮನೆಯಿಂದ ಎಲಿಮಿನೇಟ್ ಆಗಿದ್ದರು. ಹಾಗಾದರೆ ಆ ವಾರ ಬಿಗ್‌ಬಾಸ್ ಶೋಗೆ ಸಿಕ್ಕ ಟಿಆರ್‌ಪಿ ಎಷ್ಟು? ಕಿಚ್ಚ ರಿಟರ್ನ್ಸ್ ಆದಮೇಲೆ ಸಿಕ್ಕ ಟಿಆರ್‌ಪಿ ಎಷ್ಟು? ಇಲ್ಲಿದೆ ಎರಡೂ ವಾರದ ಟಿಆರ್‌ಪಿ ವಿವರ.
ಅಮ್ಮನ ನಿಧನದ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್ ಒಂದು ವಾರ ಬಿಗ್‌ಬಾಸ್ ವಾರದ ಪಂಚಾಯ್ತಿಗೆ ಬ್ರೇಕ್ ಹಾಕಿದರು. ಅದರಲ್ಲಿ ಶನಿವಾರ 7.9, ಭಾನುವಾರ 9.4 ಮತ್ತು ಇನ್ನುಳಿದ 5 ದಿನಗಳಿಗೆ 7.0 ಟಿಆರ್‌ಪಿ ಸಿಕ್ಕಿತ್ತು. ಕಿಚ್ಚನ ಅನುಪಸ್ಥಿತಿಯ ನಡುವೆಯೂ ಒಳ್ಳೆಯ ರೇಟಿಂಗ್ಸ್ ಪಡೆದುಕೊಂಡಿತ್ತು ವಾರಾಂತ್ಯದ ಏಪಿಸೋಡ್‌ಗಳು. ಇದೀಗ ಈ ವಾರ ಕಿಚ್ಚನ ಆಗಮನವಾಗಿದೆ. ಅಮ್ಮ ಇಲ್ಲದ ನೋವಿನಲ್ಲಿಯೇ ನಗು ನಗುತ್ತಲೇ ಶೋ ನಡೆಸಿಕೊಟ್ಟಿದ್ದಾರೆ. ಆ ಎರಡು ದಿನಗಳ ಏಪಿಸೋಡ್‌ಗೆ ಇದೀಗ ಭರ್ಜರಿ ಟಿಆರ್‌ಪಿ ಸಿಕ್ಕಿದೆ.
ದಾಖಲೆಯ ಟಿಆರ್‌ಪಿ ಪಡೆದ ಬಿಗ್ ಬಾಸ್
ಈ ವಿಚಾರವನ್ನು ಕಲರ್ಸ್ ಕನ್ನಡ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಪುಟದಲ್ಲಿ ಈ ಸುದ್ದಿಯನ್ನು ಶೇರ್ ಮಾಡಿದೆ. "ದಾಖಲೆಯ 12.3 ಟಿವಿಆರ್ ಗಳಿಸಿದ ಬಿಗ್ ಬಾಸ್. ಕಲರ್ಸ್ ಕನ್ನಡದಲ್ಲಿ ಕಳೆದ ಶನಿವಾರ ಪ್ರಸಾರಗೊಂಡ ಬಿಗ್ ಬಾಸ್ ಕನ್ನಡ ಸೀಸನ್ 11ರ ‘ವಾರದ ಕತೆ ಕಿಚ್ಚನ ಜೊತೆ’ ಸಂಚಿಕೆಯು ವೀಕ್ಷಣೆಯಲ್ಲಿ ಹೊಸ ದಾಖಲೆಯನ್ನೇ ಬರೆದಿದೆ. ಕರ್ನಾಟಕದ 15 ಪ್ಲಸ್ ವೀಕ್ಷಕರ ವಿಭಾಗದಲ್ಲಿ ಈ ಸಂಚಿಕೆಯು 12.3 ಟಿವಿಆರ್ ಗಳಿಸಿದೆ ಎಂದು ಬಾರ್ಕ್ ತಿಳಿಸಿದೆ" ಎಂದು ಪೋಸ್ಟ್ ಹಂಚಿಕೊಂಡಿದೆ. ಈ ಮೂಲಕ ಇದೇ ಮೊದಲ ಸಲ ಅತಿ ಹೆಚ್ಚು ಟಿಆರ್‌ಪಿ ಪಡೆದುಕೊಂಡಿದೆ ಕನ್ನಡದ ಬಿಗ್ ಬಾಸ್.
ಅತಿ ಹೆಚ್ಚು ವೀಕ್ಷಣೆ ಕಂಡ ಕನ್ನಡದ ವಾಹಿನಿ
ಜೀ ಕನ್ನಡ 1351.03
ಕಲರ್ಸ್ ಕನ್ನಡ 1193.84
ಸ್ಟಾರ್ ಸುವರ್ಣ 489.43
ಉದಯ ಟಿವಿ 437.62
ಉದಯ ಮೂವೀಸ್ 330.92
ಟಿಆರ್‌ಪಿ ಲೆಕ್ಕದಲ್ಲಿ ಕನ್ನಡದ ಟಾಪ್ 10 ಸೀರಿಯಲ್‌ಗಳು
ಪುಟ್ಟಕ್ಕನ ಮಕ್ಕಳು
ಅಮೃತಧಾರೆ
ಲಕ್ಷ್ಮೀ ನಿವಾಸ
ಅಣ್ಣಯ್ಯ
ಭಾಗ್ಯಲಕ್ಷ್ಮೀ, ಲಕ್ಷ್ಮೀ ಬಾರಮ್ಮ
ಶ್ರಾವಣಿ ಸುಬ್ರಮಣ್ಯ
ರಾಮಾಚಾರಿ
ನಿನಗಾಗಿ
ಶ್ರೀಗೌರಿ
ಸೀತಾರಾಮ