logo
ಕನ್ನಡ ಸುದ್ದಿ  /  ಮನರಂಜನೆ  /  ಮಲೈಕಾ ಅರೋರಾ, ಅರ್ಜುನ್ ಕಪೂರ್ ಬ್ರೇಕಪ್? ಆಕೆಯ ನಿಗೂಢ ಪೋಸ್ಟ್‌, ಈತನ ವಿಚಿತ್ರ ಪ್ರತಿಕ್ರಿಯೆಗೆ ನಾನಾ ಅರ್ಥ

ಮಲೈಕಾ ಅರೋರಾ, ಅರ್ಜುನ್ ಕಪೂರ್ ಬ್ರೇಕಪ್? ಆಕೆಯ ನಿಗೂಢ ಪೋಸ್ಟ್‌, ಈತನ ವಿಚಿತ್ರ ಪ್ರತಿಕ್ರಿಯೆಗೆ ನಾನಾ ಅರ್ಥ

Praveen Chandra B HT Kannada

Oct 31, 2024 06:02 PM IST

google News

ಮಲೈಕಾ ಅರೋರಾ, ಅರ್ಜುನ್ ಕಪೂರ್

    • ಬಾಲಿವುಡ್‌ ನಟಿ ಮಲೈಕಾ ಅರೋರ ಮತ್ತು ಅರ್ಜುನ್‌ ಕಪೂರ್‌ ಬ್ರೇಕಪ್‌ ಆಗುತ್ತಿದ್ದಾರಂತೆ. ಇತ್ತೀಚೆಗೆ ಮಲೈಕಾ ಹಂಚಿಕೊಂಡ ಸೋಷಿಯಲ್‌ ಮೀಡಿಯಾ ಪೋಸ್ಟ್‌ವೊಂದು ಅಭಿಮಾನಿಗಳ ಗೊಂದಲ ಹೆಚ್ಚಿಸಿದೆ.
ಮಲೈಕಾ ಅರೋರಾ, ಅರ್ಜುನ್ ಕಪೂರ್
ಮಲೈಕಾ ಅರೋರಾ, ಅರ್ಜುನ್ ಕಪೂರ್

ಬಾಲಿವುಡ್‌ ನಟಿ ಮಲೈಕಾ ಅರೋರ ಮತ್ತು ಅರ್ಜುನ್‌ ಕಪೂರ್‌ ಬ್ರೇಕಪ್‌ ಆಗುತ್ತಿದ್ದಾರಂತೆ. ಈ ಕುರಿತು ಅರ್ಜುನ್‌ ಇತ್ತೀಚೆಗೆ "ನಾನು ಸಿಂಗಲ್‌" ಎಂದು ಖಚಿತಪಡಿಸಿದ್ದಾರೆ. ತನ್ನ ಸಿನಿಮಾ ಸಿಂಗಮ್‌ ಅಗೇನ್‌ ಪ್ರಚಾರದ ಸಮಯದಲ್ಲಿ ಈ ಕುರಿತು ಅರ್ಜುನ್‌ ಖಚಿತಪಡಿಸಿದ್ದರು. ಅರ್ಜುನ್‌ನ ಈ ಹೇಳಿಕೆ ಆನ್‌ಲೈನ್‌ನಲ್ಲಿ ವೈರಲ್‌ ಆಗುತ್ತಿದ್ದಂತೆ ಮಲೈಕಾ ಅರೋರ ಅವರು "ಪ್ರೇಮ, ರೋಮಾನ್ಸ್‌, ಸಂಬಂಧಗಳ ಕುರಿತು" ನಿಗೂಢ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಮಲೈಕಾ ಅರೋರಾ ಪೋಸ್ಟ್‌ನಲ್ಲಿ ಏನಿದೆ?

ಇತ್ತೀಚೆಗೆ ನಟಿ ಮಲೈಕಾ ಅರೋರಾ ಅವರು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಈ ರೀತಿ ಪೋಸ್ಟ್‌ ಮಾಡಿದ್ದಾರೆ. "ಹೃದಯವನ್ನು ಟಚ್‌ ಮಾಡಲು ಸೆಕೆಂಡ್‌ಸಾಕು, ಆದರೆ, ಆತ್ಮವನ್ನು ಮುಟ್ಟಲು ಜೀವನಪೂರ್ತಿ ಸಮಯ ಬೇಕು" ಎಂದು ಬರೆದಿದ್ದಾರೆ. ಇದಾದ ಬಳಿಕ ಇವರು ಗುಡ್‌ಮಾರ್ನಿಂಗ್‌ ಮೆಸೆಜ್‌ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಗೆ ಏನೂ ವಿಶೇಷ ಅರ್ಥವನ್ನು ಇವರು ಸೂಚಿಸಿಲ್ಲ. ಇದು ಪ್ರತಿದಿನದ ಗುಡ್‌ಮಾರ್ನಿಂಗ್‌ ಮೆಸೆಜ್‌ ಎಂದುಕೊಳ್ಳಬಹುದು ಅಥವಾ ಎಂದುಕೊಳ್ಳದೆಯೂ ಇರಬಹುದು. ಆದರೆ, ಇದಕ್ಕೂ ಮುನ್ನ ಅರ್ಜುನ್‌ ಕಪೂರ್‌ ಬ್ರೇಕಪ್‌ ಸೂಚನೆ ನೀಡಿರುವುದರಿಂದ ಈ ಪೋಸ್ಟ್‌ ನಾನಾರ್ಥಗಳನ್ನು ಉಂಟುಮಾಡಿದೆ.

 

Malaika Arora Instagram story

ಇದೇ ಸೋಮವಾರ, ಅರ್ಜುನ್ ಕಪೂರ್ ಅವರು ಸಿಂಗಮ್ ಆಗೇನ್‌ ತಂಡದೊಂದಿಗೆ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ರಾಜಕಾರಣಿ ರಾಜ್ ಠಾಕ್ರೆ ಆಯೋಜಿಸಿದ್ದ ದೀಪಾವಳಿ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಅರ್ಜುನ್ ಜನಸಮೂಹವನ್ನುದ್ದೇಶಿಸಿ ಮಾತನಾಡುವಾಗ ಯಾರೋ ಮಲೈಕಾ ಅವರ ಹೆಸರನ್ನು ಕೂಗಿದರು. ಆ ಸಮಯದಲ್ಲಿ ನಗುತ್ತಾ ಅರ್ಜುನ್, "ನಹೀ ಅಭಿ ಸಿಂಗಲ್ ಹೂಂ. ರಿಲ್ಯಾಕ್ಸ್ ಕರೋ (ಇಲ್ಲ, ನಾನೀಗ ಸಿಂಗಲ್ ಆಗಿದ್ದೇನೆ. ರಿಲ್ಯಾಕ್ಸ್)" ಎಂದು ಹೇಳಿದ್ದಾರೆ. "ಮದುವೆಯ ಬಗ್ಗೆ ಮಾತನಾಡುತ್ತ ಇದ್ದಾರೆ ಎಂದುಕೊಂಡೆ, ಅದಕ್ಕೆ ರಿಲಾಕ್ಸ್‌ ಅಂದೆ" ಎಂದು ಅವರು ಹೇಳಿದ್ದರು.

ಮಲೈಕಾ ಮತ್ತು ಅರ್ಜುನ್ ಸಂಬಂಧ

ಮಲೈಕಾ ಮತ್ತು ಅರ್ಜುನ್ 2018ರಲ್ಲಿ ಡೇಟಿಂಗ್ ಪ್ರಾರಂಭಿಸಿದರು. ಅವರು ತಮ್ಮ ಸಂಬಂಧವನ್ನು ದೀರ್ಘಕಾಲದವರೆಗೆ ಮುಚ್ಚಿಟ್ಟಿದ್ದರು. ಸಾರ್ವಜನಿಕವಾಗಿ ಅದರ ಬಗ್ಗೆ ಅಷ್ಟೇನೂ ಮಾತನಾಡಲಿಲ್ಲ. ಕೆಲವೊಂದು ಫೋಟೋಗಳ ಹೊರತುಪಡಿಸಿ ಇವರು ಆದಷ್ಟು ತಮ್ಮ ಸಂಬಂಧವನ್ನು ಖಾಸಗಿಯಾಗಿಡಲು ನಿರ್ಧರಿಸಿದ್ದರು. ಕೆಲವು ವರದಿಗಳ ಪ್ರಕಾರ ಈ ವರ್ಷದ ಆರಂಭದಲ್ಲಿ ಇವರಿಬ್ಬರು ಬ್ರೇಕಪ್‌ ಆಗಿದ್ದರು. ಕಳೆದ ತಿಂಗಳು ಮಲೈಕಾ ತಂದೆ ಅನಿಲ್ ಮೆಹ್ತಾ ನಿಧನರಾದ ನಂತರ ಅರ್ಜುನ್ ಅವರನ್ನು ಭೇಟಿ ಮಾಡಿದ್ದರು.

"ಮಲೈಕಾ ಮತ್ತು ಅರ್ಜುನ್‌ ಬಹಳ ವಿಶೇಷ ಸಂಬಂಧವನ್ನು ಹೊಂದಿದ್ದರು. ಇಬ್ಬರೂ ಪ್ರತಿಯೊಬ್ಬರಿಗೂ ತಮ್ಮ ಹೃದಯದಲ್ಲಿ ವಿಶೇಷ ಸ್ಥಾನ ನೀಡಿದ್ದಾರೆ. ಅವರು ಬೇರೆಯಾಗಲು ನಿರ್ಧರಿಸಿದ್ದಾರೆ. ಆದರೆ, ಈ ವಿಷಯದಲ್ಲಿ ಘನತೆಯ ಮೌನ ಕಾಯ್ದುಕೊಳ್ಳಲು ಬಯಸಿದ್ದಾರೆ. ತಮ್ಮ ಸಂಬಂಧದ ಕುರಿತು ಯಾರ ಜತೆಯೂ ಹಂಚಿಕೊಳ್ಳಲು ಬಯಸುವುದಿಲ್ಲ" ಎಂದು ಪಿಂಕ್‌ವಿಲ್ಲಾ ಮೂಲವೊಂದನ್ನು ಉಲ್ಲೇಖಿಸಿ ಈ ವರ್ಷದ ಆರಂಭದಲ್ಲಿಯೇ ವರದಿ ಮಾಡಿತ್ತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ