ಗಾಸಿಪ್ಗೆ ಬಿತ್ತು ಬ್ರೇಕ್; ನಾನೀಗ ಸಿಂಗಲ್ ಎಂದ ಅರ್ಜುನ್ ಕಪೂರ್; ಮಲೈಕಾ ಜೊತೆಗಿನ ಸಂಬಂಧದ ಬಗ್ಗೆ ಸ್ಪಷ್ಟನೆ
ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಇಬ್ಬರೂ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಈ ಬಗ್ಗೆ ಅವರಿಬ್ಬರೂ ಮಾತಾಡಿರಲಿಲ್ಲ. ಈಗ ಅರ್ಜುನ್ ಕಪೂರ್ ಸ್ವತಃ ಬ್ರೇಕಪ್ ಆಗಿರುವ ಬಗ್ಗೆ ತಿಳಿಸಿದ್ದಾರೆ.
ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಇಬ್ಬರೂ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂದು ಆಗಾಗ ಸುದ್ದಿ ಹರಿದಾಡುತ್ತಿತ್ತು. ಆದರೆ ಈಗ ಅರ್ಜುನ್ ಕಪೂರ್ ಸ್ವತಃ ಬ್ರೇಕಪ್ ಆಗಿರುವ ಬಗ್ಗೆ ತಿಳಿಸಿದ್ದಾರೆ. ಅವರು ನಾನು ಈಗ ಸಿಂಗಲ್ ಎಂದು ಅವರು ಹೇಳಿಕೊಂಡಿರುವ ವಿಡಿಯೋ ವೈರಲ್ ಆಗುತ್ತಿದೆ. ಅಜಯ್ ದೇವಗನ್, ಟೈಗರ್ ಶ್ರಾಫ್, ಅರ್ಜುನ್ ಕಪೂರ್ ಮತ್ತು ನಿರ್ದೇಶಕ ರೋಹಿತ್ ಶೆಟ್ಟಿ ಸೇರಿದಂತೆ ಸಿಂಘಮ್ ಚಿತ್ರತಂಡದವರೆಲ್ಲ ಇರುವ ವೇದಿಕೆಯಲ್ಲಿ ಮೈಕ್ ಹಿಡಿದು ಅವರು ಈ ರೀತಿಯಾಗಿ ಮಾತನಾಡಿದ್ದಾರೆ. ಮುಂಬೈನ ಶಿವಾಜಿ ಪಾರ್ಕ್ನಲ್ಲಿ ರಾಜ್ ಠಾಕ್ರೆಯವರ ದೀಪಾವಳಿ ಆಚರಣೆಯಲ್ಲಿ ಅವರು ಮಲೈಕಾ ಅರೋರಾ ಹಾಗೂ ತಮ್ಮ ಸಂಬಂಧದ ಬಗ್ಗೆ ಹೇಳಿದ್ದೇನು ಎಂಬುದನ್ನು ನಾವಿಲ್ಲಿ ನೀಡಿದ್ದೇವೆ.
"ಅಭಿ ಸಿಂಗಲ್ ಹೂನ್ ಮೈನ್, ರಿಲ್ಯಾಕ್ಸ್" ಎಂದು ಹೇಳುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ಸಾಮಾಜಿಕ ಸಾಮಾಜಿಕ ಜಾಲತಾಣದಲ್ಲಿ ಶೇರ್ ಆದ ತಕ್ಷಣ ವೈರಲ್ ಆಗಿದೆ. ಇದಕ್ಕೆ ಸಾಕಷ್ಟು ಜನ ಕಾಮೆಂಟ್ ಕೂಡ ಮಾಡಿದ್ದಾರೆ. ಮಲೈಕಾ ಮತ್ತು ಅರ್ಜುನ್ 2018 ರಲ್ಲಿ ಡೇಟಿಂಗ್ ಪ್ರಾರಂಭಿಸಿ ಹೆಚ್ಚಾಗಿ ಅವರ ಜೊತೆಗೇ ಕಾಣಿಸಿಕೊಳ್ಳುತ್ತಿದ್ದರು. ಆದರೆ ಸ್ವಲ್ಲ ದಿನಗಳಿಂದ ಮಲೈಕಾ ಮತ್ತು ಅರ್ಜುನ್ ಬೇರ್ಪಟ್ಟಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು.
ಮಲೈಕಾ ಈ ಹಿಂದೆ 1998 ರಲ್ಲಿ ಅರ್ಬಾಜ್ ಖಾನ್ ಅವರನ್ನು ವಿವಾಹವಾಗಿದ್ದರು ಅದಾದ ನಂತರದಲ್ಲಿ ಅರ್ಜುನ್ ಅವರೊಟ್ಟಿಗೆ ಕೆಲ ವರ್ಷಗಳ ಕಾಲ ಡೇಟಿಂಗ್ ಮಾಡಿದರು. ತಮ್ಮ ಬ್ರೇಕಪ್ ಬಗ್ಗೆ ವದಂತಿಗಳು ಹೊರಹೊಮ್ಮಿದ ನಂತರ ಅರ್ಜುನ್ ಯಾವುದೇ ಹೇಳಿಕೆಗಳನ್ನೂ ನೀಡಿರಲಿಲ್ಲ. ಮಲೈಕಾ ಅರೋರಾ ಕೂಡ ಈ ಬಗ್ಗೆ ಮಾತನಾಡಿರಲಿಲ್ಲ. ಅರ್ಜುನ್ ಹೇಳಿಕೆಗೆ ಅಭಿಮಾನಿಗಳು ಪ್ರತಿಕ್ರಿಯಿಸುತ್ತಿದ್ದಾರೆ. ಆನ್ಲೈನ್ನಲ್ಲಿ ಕಾಮೆಂಟ್ಗಳ ಸುರಿಮಳೆಯೇ ಆಗಿದೆ. ಪಾರ್ಟಿಯ ವೈರಲ್ ವೀಡಿಯೊ ನೋಡಿ ಜನರಿಗೆ ಉತ್ತರ ಸಿಕ್ಕಂತಾಗಿದೆ.
ಅರ್ಜುನ್ ಈಗೇನು ಮಾಡುತ್ತಿದ್ದಾರೆ?
ಅರ್ಜುನ್ ಅವರು ರೋಹಿತ್ ಶೆಟ್ಟಿ ನಿರ್ದೇಶನದ ತಮ್ಮ ಮುಂದಿನ ದೊಡ್ಡ-ಬಜೆಟ್ ಚಿತ್ರ ಸಿಂಗಂ ಅಗೇನ್ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ . ಚಿತ್ರದಲ್ಲಿ ಅಜಯ್ ದೇವಗನ್, ದೀಪಿಕಾ ಪಡುಕೋಣೆ, ಕರೀನಾ ಕಪೂರ್, ಟೈಗರ್ ಶ್ರಾಫ್, ಜಾಕಿ ಶ್ರಾಫ್, ರಣವೀರ್ ಸಿಂಗ್ ಮತ್ತು ಅಕ್ಷಯ್ ಕುಮಾರ್ ಸೇರಿದಂತೆ ಹಲವಾರು ಕಲಾವಿದರಿದ್ದಾರೆ.