logo
ಕನ್ನಡ ಸುದ್ದಿ  /  ಮನರಂಜನೆ  /  Emergency: ಕಂಗನಾ ರಣಾವತ್‌ 'ಎಮರ್ಜೆನ್ಸಿʼ ಸಿನಿಮಾದ ಹೊಸ ಬಿಡುಗಡೆ ದಿನಾಂಕ ಪ್ರಕಟ, ಇಂದಿರಾ ಗಾಂಧಿ ಅವತಾರದಲ್ಲಿ ಬಿಜೆಪಿ ಸಂಸದೆ

Emergency: ಕಂಗನಾ ರಣಾವತ್‌ 'ಎಮರ್ಜೆನ್ಸಿʼ ಸಿನಿಮಾದ ಹೊಸ ಬಿಡುಗಡೆ ದಿನಾಂಕ ಪ್ರಕಟ, ಇಂದಿರಾ ಗಾಂಧಿ ಅವತಾರದಲ್ಲಿ ಬಿಜೆಪಿ ಸಂಸದೆ

Praveen Chandra B HT Kannada

Nov 18, 2024 03:32 PM IST

google News

Emergency: ಕಂಗನಾ ರಣಾವತ್‌ 'ಎಮರ್ಜೆನ್ಸಿʼ ಸಿನಿಮಾದ ಹೊಸ ಬಿಡುಗಡೆ ದಿನಾಂಕ ಪ್ರಕಟ

    • ಕಂಗನಾ ರಣಾವತ್‌ "ಎಮರ್ಜೆನ್ಸಿ" ಸಿನಿಮಾದ ಮೂಲಕ ಮೊದಲ ಬಾರಿಗೆ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವು ಸೆಪ್ಟೆಂಬರ್‌ ತಿಂಗಳಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ, ಸಿಬಿಎಫ್‌ಸಿ ಪ್ರಮಾಣಪತ್ರ ನೀಡದೆ ಇರುವ ಕಾರಣ ಇದು ಬಿಡುಗಡೆಯಾಗಿಲ್ಲ. ಇದೀಗ ಎಮರ್ಜೆನ್ಸಿ ಸಿನಿಮಾದ ಹೊಸ ಬಿಡುಗಡೆ ದಿನಾಂಕ ಪ್ರಕಟವಾಗಿದೆ.
Emergency: ಕಂಗನಾ ರಣಾವತ್‌ 'ಎಮರ್ಜೆನ್ಸಿʼ ಸಿನಿಮಾದ ಹೊಸ ಬಿಡುಗಡೆ ದಿನಾಂಕ ಪ್ರಕಟ
Emergency: ಕಂಗನಾ ರಣಾವತ್‌ 'ಎಮರ್ಜೆನ್ಸಿʼ ಸಿನಿಮಾದ ಹೊಸ ಬಿಡುಗಡೆ ದಿನಾಂಕ ಪ್ರಕಟ

ಬೆಂಗಳೂರು: ಸಾಕಷ್ಟು ವಿಳಂಬದ ನಂತರ ಕಂಗನಾ ರಣಾವತ್‌ ನಟನೆಯ ವಿವಾದಾತ್ಮಕ ಸೊಲೊ ನಿರ್ದೇಶನದ ಚಿತ್ರ "ಎಮರ್ಜೆನ್ಸಿ" ಬಿಡುಗಡೆ ದಿನಾಂಕ ಪ್ರಕಟವಾಗಿದೆ. ಇದೀಗ ಈ ಸಿನಿಮಾದ ಹೊಸ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ. ನಟಿ, ನಿರ್ದೇಶಕಿ, ಈಗ ಸಂಸದೆಯಾಗಿರುವ ಕಂಗನಾ ರಣಾವತ್‌ ಅವರ ಸಿನಿಮಾವು ಮುಂದಿನ ವರ್ಷದ ಆರಂಭದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಎಮರ್ಜೆನ್ಸಿ ಸಿನಿಮಾದ ಬಿಡುಗಡೆ ದಿನಾಂಕ

ಸೋಮವಾರ ಈ ಕುರಿತು ಕಂಗನಾ ರಣಾವತ್‌ ತನ್ನ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಘೋಷಿಸಿದ್ದಾರೆ. ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ರಣಾವತ್‌ ನಟಿಸಿದ್ದಾರೆ. ಈ ಚಿತ್ರದಲ್ಲಿ ಇಂದಿರಾ ಸಹೋದರ ಸಂಜಯ್‌ ಗಾಂಧಿ ಪಾತ್ರದಲ್ಲಿ ವಿಶಾಖ್‌ ನಾಯರ್‌, ಜನತಾ ಪಕ್ಷದ ನಾಯಕ ಜೈ ಪ್ರಕಾಶ್‌ ನಾರಾಯಣ್‌ ಪಾತ್ರದಲ್ಲಿ ಅನುಪಮ್‌ ಖೇರ್‌ ನಟಿಸಿದ್ದಾರೆ. ಮಾಜಿ ಪ್ರಧಾನ ಮಂತ್ರಿ ಅಟಲ್‌ ಬಿಹಾರಿ ವಾಜ್‌ಪೇಯಿ ಪಾತ್ರದಲ್ಲಿ ಶ್ರೇಯಸ್‌ ತಲ್ಪಾಡೆ ಮತ್ತು ಫೀಲ್ಡ್‌ ಮಾರ್ಷಲ್‌ ಸ್ಯಾಮ್‌ ಮಾನೇಕ್‌ಶಾ ಪಾತ್ರದಲ್ಲಿ ಮಿಲಂದ್‌ ಸೋಮನ್‌ ನಟಿಸಿದ್ದಾರೆ.

"17ನೇ ಜನವರಿ 2025ರಂದು ಭಾರತದ ಅತ್ಯಂತ ಶಕ್ತಿಶಾಲಿ ಮಹಿಳೆಯ ಮಹಾಕಾವ್ಯ ಮತ್ತು ಭಾರತದ ಭವಿಷ್ಯವನ್ನು ಬದಲಾಯಿಸಿದ ಕ್ಷಣ "ತುರ್ತುಪರಿಸ್ಥಿತಿ" ಸಿನಿಮಾವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ" ಎಂದು ಕಂಗನಾ ರಣಾವತ್‌ ಸೋಷಿಯಲ್‌ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ಭಾರತದ ಗಣರಾಜ್ಯಕ್ಕಿಂತ ಒಂದು ವಾದ ಮೊದಲು ಈ ಸಿನಿಮಾ ಬಿಡುಗಡೆಯಾಗಲಿದೆ. ಅಕ್ಷಯ್ ಕುಮಾರ್ ಅಭಿನಯದ ಅಮರ್ ಕೌಶಿಕ್ ಅವರ ಆಕ್ಷನ್ ಥ್ರಿಲ್ಲರ್ ಸಿನಿಮಾ "ಸ್ಕೈ ಫೋರ್ಸ್" ಗಣರಾಜ್ಯೋತ್ಸವದಂದು ಬಿಡುಗಡೆಯಾಗಲಿದೆ.

ಎಮರ್ಜೆನ್ಸಿ ಸಿನಿಮಾದ ಪ್ರಮಾಣಪತ್ರ ಸಮಸ್ಯೆ

ಭಾರತದ ತುರ್ತು ಪರಿಸ್ಥಿತಿಯ ವಿಷಯ ಹೊಂದಿರುವುದರಿಂದ ಈ ಸಿನಿಮಾ ಬಿಡುಗಡೆಗೆ ಸಾಕಷ್ಟು ತೊಂದರೆಗಳು ಎದುರಾಗಿದ್ದು. ಸಿಖ್‌ ಗುಂಪುಗಳು ಸಿನಿಮಾ ಬಿಡುಗಡೆಗೆ ಅಡ್ಡಿಪಡಿಸಿದ್ದವು. ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದ ಸಮಯದಲ್ಲಿ 1975 ರಿಂದ 1977ರವರೆಗೆ 21 ತಿಂಗಳ ತುರ್ತು ಪರಿಸ್ಥಿತಿಯನ್ನು ಹೇರಲಾಗಿತ್ತು. ಈ ವಿಷಯದ ಕುರಿತು ಎಮರ್ಜೆನ್ಸಿ ಸಿನಿಮಾ ಮಾಡಲಾಗಿದೆ. ಈ ಸಿನಿಮಾದ ವಿರುದ್ಧ ಸಾಕಷ್ಟು ಆಕ್ಷೇಪಣೆಗಳು ಎದುರಾಗಿದ್ದವು. ಈ ಸಿನಿಮಾಕ್ಕೆ ಪ್ರಮಾಣಪತ್ರ ನೀಡಬಾರದು ಎಂದು ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದವು. ಇದರಿಂದ ಸೆಪ್ಟೆಂಬರ್‌ 5ರಂದು ಸಿನಿಮಾ ಬಿಡುಗಡೆಯಾಗರಲಿಲ್ಲ.

"“ನಾನು ಈ ಚಿತ್ರವನ್ನು ಹೇಗೆ ಮಾಡಿದ್ದೇನೆ ಎಂದು ನನಗೆ ತಿಳಿದಿದೆ. ಚಿತ್ರರಂಗದಿಂದ ನನಗೆ ಯಾವುದೇ ಬೆಂಬಲ ಸಿಗಲಿಲ್ಲ. ಇದು ಭಾರೀ ಬಜೆಟ್‌ನಲ್ಲಿ ತಯಾರಾಗಿದೆ. ಜೀ ತ್ತು ಇತರ

“ನಾನು ಈ ಚಿತ್ರವನ್ನು ಹೇಗೆ ಮಾಡಿದ್ದೇನೆ ಎಂದು ನನಗೆ ತಿಳಿದಿದೆ. ಚಿತ್ರರಂಗದಿಂದ ನನಗೆ ಯಾವುದೇ ಬೆಂಬಲ ಸಿಗಲಿಲ್ಲ. ಇದು ಭಾರೀ ಬಜೆಟ್‌ನಲ್ಲಿ ತಯಾರಾಗಿದೆ. ನಾನು ಜೀ ಮತ್ತು ಇತರ ಪಾಲುದಾರರ ನೆರವು ಪಡೆದಿದ್ದೇವೆ. ಬಿಡುಗಡೆ ವಿಳಂಬದಿಂದ ಪ್ರತಿಯೊಬ್ಬರೂ ದೊಡ್ಡ ನಷ್ಟವನ್ನು ಅನುಭವಿಸುತ್ತಿದ್ದಾರೆ. ಬಿಡುಗಡೆ ತಡವಾಗಿ ಎಲ್ಲರಿಗೂ ನಷ್ಟವಾಗಿದೆ. ಈ ಚಿತ್ರವನ್ನು ಆದಷ್ಟು ಬೇಗ ಬಿಡುಗಡೆ ಮಾಡುವ ಜವಾಬ್ದಾರಿಯನ್ನು ಸೆನ್ಸಾರ್ ಮಂಡಳಿ ತೆಗೆದುಕೊಳ್ಳಬೇಕು ಎಂದು ನಾನು ಭಾವಿಸುತ್ತೇನೆ" ಎಂದು ಕಂಗನಾ ರಣಾವತ್‌ ಅವರು ಎಎನ್‌ಐಗೆ ಪ್ರತಿಕ್ರಿಯೆ ನೀಡಿದ್ದಾರೆ.

ಜೀ ಸ್ಟುಡಿಯೋಸ್ ಮತ್ತು ಕಂಗನಾ ಅವರ ಮಣಿಕರ್ಣಿಕಾ ಫಿಲ್ಮ್ಸ್ ಸಹ-ನಿರ್ಮಾಣದಲ್ಲಿ ಎಮರ್ಜೆನ್ಸಿ ಸಿನಿಮಾ ನಿರ್ಮಿಸಲಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ