ಕನ್ನಡ ಸುದ್ದಿ  /  Photo Gallery  /  Bollywood News Kangana Ranaut's Journey From Movies To Politics Running Away From Home At 15 Age Pcp

Kangana Ranaut: 15 ವಯಸ್ಸಿಗೆ ಮನೆ ಬಿಟ್ಟು ಓಡಿ ಹೋಗಿದ್ರು, ಈಗ ಲೋಕಸಭೆ ಚುನಾವಣೆಯ ಅಭ್ಯರ್ಥಿ; ಕಂಗನಾ ರಣಾವತ್‌ ಬದುಕಿನ ಕಥೆ

  • ಬಾಲಿವುಡ್‌ ನಟಿ ಕಂಗನಾ ರಣಾವತ್‌ ಅವರು ಲೋಕಸಭಾ ಚುನಾವಣೆ 2024ಗೆ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಈ ಮೂಲಕ ಕಂಗನಾ ರಾಜಕೀಯ ಎಂಟ್ರಿ ನೀಡಿದ್ದಾರೆ. ಹದಿನೈದನೇ ವಯಸ್ಸಿನಲ್ಲಿ ಮನೆ ಬಿಟ್ಟು ಬಂದಿದ್ದ ಇವರು ಬದುಕಿನ ಉದ್ದಕ್ಕೂ ಹಲವು ಸವಾಲು ಎದುರಿಸಿದ್ದಾರೆ.

ಇತ್ತೀಚೆಗೆ ಬಿಜೆಪಿ ಬಿಡುಗಡೆ ಮಾಡಿರುವ ಐದನೇ ಪಟ್ಟಿಯಲ್ಲಿ ಅಚ್ಚರಿಯ ಅಭ್ಯರ್ಥಿ ಎಂಬಂತೆ ಕಂಗನಾ ರಣಾವತ್‌ ಹೆಸರು ಕಾಣಿಸಿಕೊಂಡಿದೆ. ನಟಿ ಕಂಗನಾ ರಣಾವತ್‌ ಅವರು  ಹಿಮಾಚಲ ಪ್ರದೇಶದ ಮಂಡಿಯಿಂದ ಸ್ಪರ್ಧಿಸುತ್ತಿದ್ದಾರೆ. 2006ನೇ ಇಸವಿಯಲ್ಲಿ ಥ್ರಿಲ್ಲರ್‌ ಗ್ಯಾಂಗ್‌ಸ್ಟಾರ್‌ ಸಿನಿಮಾ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದರು. ಈ ಸಿನಿಮಾದ ನಟನೆಗೆ ಫಿಲ್ಮ್‌ಫೇರ್‌ ಪ್ರಶಸ್ತಿ ಪಡೆದಿದ್ದರು. 
icon

(1 / 9)

ಕಳೆದ ಕೆಲವು ವರ್ಷಗಳಿಂದ ಕಂಗನಾ ರಣಾವತ್‌ ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇದ್ದಾರೆ. ಆಗಾಗ ತನ್ನ ಬಾಲ್ಯದ ಫೋಟೋಗಳನ್ನೂ ಹಂಚಿಕೊಳ್ಳುತ್ತಾರೆ. ಫೆಬ್ರವರಿ 19ರಂದು ಇವರು ಹಿಮಾಚಲ ಪ್ರದೇಶದ ತನ್ನ ಶಾಲಾ ದಿನಗಳ ಫೋಟೋಗಳನ್ನು ಹಂಚಿಕೊಂಡಿದ್ದರು. 
icon

(2 / 9)

ಕಂಗನಾ ರಣಾವತ್‌ ಅವರು ಹದಿನೈದು ವರ್ಷದವಳಾಗಿದ್ದಾಗ ಮನೆಯಿಂದ ಓಡಿ ಹೋಗಿದ್ದರಂತೆ. ಮಾದಕ ವ್ಯಸನಕ್ಕೂ ಒಳಗಾಗಿದ್ದರು. ಹದಿಹರೆಯದಲ್ಲಿ ಮುಂಬೈಗೆ ತೆರಳಿದ ಬಳಿಕ ಸಾಕಷ್ಟು ಕಷ್ಟಪಟ್ಟಿದ್ದರು. 2006ರಲ್ಲಿ ಇಮ್ರಾನ್‌ ಹಸ್ಮಿ ಜತೆಗೆ ಗ್ಯಾಂಗ್‌ಸ್ಟಾರ್‌: ಎ ಲವ್‌ಸ್ಟೋರಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇದು ಇವರ ಮೊದಲ ಚಿತ್ರ. ಅಂದಿನಿಂದ 2008ರಲ್ಲಿ ಫ್ಯಾಷನ್‌, 2010ರಲ್ಲಿ ಒನ್ಸ್‌ ಅಪಾನ್‌ ಎ ಟೈಮ್‌ ಇನ್‌ ಮುಂಬೈ, 2011ರಲ್ಲಿ ತನು ವೆಡ್ಸ್‌ ಮನು ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. 2014ರಲ್ಲಿ ಕ್ವೀನ್ಸ್‌ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರಕ್ಕೆ ಸಂಭಾಷಣೆಯನ್ನೂ ಕಂಗನಾ ರಣಾವತ್‌ ಬರೆದಿದ್ದಾರೆ. 
icon

(3 / 9)

ಕಂಗನಾ ರನೌತ್ ಮುಖ್ಯವಾಗಿ ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಲೈವಿ (2021) ಮತ್ತು ಚಂದ್ರಮುಖಿ 2 (2023) ನಂತಹ ಕೆಲವು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ.  ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ಐದು ಫಿಲ್ಮ್‌ಫೇರ್‌ ಪ್ರಶಸ್ತಿಗಳು, ಮೂರು ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಗಳು ಮತ್ತು  ಜೀ ಸಿನಿ, ಸೈಮಾ ಮತ್ತು ನಿರ್ಮಾಪಕರ ಗಿಲ್ಡ್ ಪ್ರಶಸ್ತಿ ಸಮಾರಂಭಗಳಿಂದ ತಲಾ ಒಂದು ಪ್ರಶಸ್ತಿಯನ್ನು ಗೆದ್ದಿದ್ದಾರೆ. 2021 ರಲ್ಲಿ, ಕಂಗನಾ ತನ್ನ ನಾಲ್ಕನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಸ್ವೀಕರಿಸಿದ್ದರು. ಪಂಗಾ ಮತ್ತು ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ ಚಿತ್ರಗಳಿಗಾಗಿ ಅವರು ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ. 
icon

(4 / 9)

2020ರಲ್ಲಿ ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌ ಅವರಿಂದ ಪದ್ಮಶ್ರೀ ಪ್ರಶಸ್ತಿ ಪಡೆದರು. "ಹೆಣ್ಣು ಆಗಿ ಗೌರವ ಗಳಿಸಲು ಬಯಸುತ್ತೇನೆ. ಅದು ನನ್ನ ಸಂಪತ್ತು. ಈ ಉಡುಗೊರೆ ನೀಡಿದ್ದಕ್ಕೆ ಧನ್ಯವಾದಗಳು" ಎಂದು ಪದ್ಮಶ್ರೀ ಪಡೆದ ಬಳಿಕ ಸೋಷಿಯಲ್‌ ಮೀಡಿಯಾದಲ್ಲಿ ಬರೆದಿದ್ದರು. 
icon

(5 / 9)

ಕಂಗನಾ ರಣಾವತ್‌ ದೇಶದ ವಿವಿಧ ದೇಗುಲಗಳಿಗೆ ಆಗಾ ಭೇಟಿ ನೀಡುತ್ತಾರೆ. ಇವರು  ಪ್ರಸಿದ್ಧ ಆಧ್ಯಾತ್ಮಿಕ ನಾಯಕ ಸದ್ಗುರು ಜಗ್ಗಿ ವಾಸುದೇವ್ ಅವರ ಅನುಯಾಯಿ.  
icon

(6 / 9)

ಯಾವುದೇ ಸಿನಿಮಾ ಅಥವಾ ಪ್ರಾಜೆಕ್ಟ್‌ ಬಿಡುಗಡೆಗೆ ಮುನ್ನ ವಿವಿಧ ದೇಗುಲಗಳಿಗೆ ಹೋಗಿ ಆಶೀರ್ವಾದ ಪಡೆಯುತ್ತಾರೆ. 2022ರಲ್ಲಿ ಸಹನಟರಾದ ಅರ್ಜುನ್ ರಾಂಪಾಲ್ ಮತ್ತು ದಿವ್ಯಾ ದತ್ತಾ ಅವರು ತಮ್ಮ ಚಿತ್ರ ಧಾಕಡ್ ಜತೆಗೆ ಉತ್ತರ ಪ್ರದೇಶದ  ಶ್ರೀ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. 
icon

(7 / 9)

2024 ರ ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಭೇಟಿ ನೀಡಿದ್ದರು. ಬಾಲರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಅಪ್ಲೋಡ್‌ ಮಾಡಿದ್ದರು. 
icon

(8 / 9)

ಕಂಗನಾ ರಣಾವತ್‌ ಅವರು ತಮ್ಮ ಮಹಾತ್ವಾಕಾಂಕ್ಷಿ "ಎಮರ್ಜೆನ್ಸಿ" ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಇದು ಕಂಗನಾ ರಣಾವತ್‌ ಬರೆದ, ನಿರ್ದೇಶಿಸಿದ ಸಿನಿಮಾ. ಈ ಸಿನಿಮಾದಲ್ಲಿ ಇಂದಿರಾ ಗಾಂಧಿಯಾಗಿ ಕಂಗನಾ ಕಾಣಿಸಿಕೊಳ್ಳಲಿದ್ದಾರೆ. 
icon

(9 / 9)

ಇತರ ಗ್ಯಾಲರಿಗಳು