ಕಂಗನಾ ರಣಾವತ್‌ ಮನೆಗೆ ಬಂತು 3 ಕೋಟಿ ರೂ ಬೆಲೆಯ ರೇಂಜ್‌ ರೋವರ್‌; ಏನೇನಿದೆ ಈ ಎಸ್‌ಯುವಿಯಲ್ಲಿ?-automobile news bollywood actor kangana ranaut buys range rover luxury suv worth over rs 2 crore pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಕಂಗನಾ ರಣಾವತ್‌ ಮನೆಗೆ ಬಂತು 3 ಕೋಟಿ ರೂ ಬೆಲೆಯ ರೇಂಜ್‌ ರೋವರ್‌; ಏನೇನಿದೆ ಈ ಎಸ್‌ಯುವಿಯಲ್ಲಿ?

ಕಂಗನಾ ರಣಾವತ್‌ ಮನೆಗೆ ಬಂತು 3 ಕೋಟಿ ರೂ ಬೆಲೆಯ ರೇಂಜ್‌ ರೋವರ್‌; ಏನೇನಿದೆ ಈ ಎಸ್‌ಯುವಿಯಲ್ಲಿ?

ಕಂಗನಾ ರಣಾವತ್‌ ಬಳಿ ಹೊಸ ರೇಂಜ್‌ ರೋವರ್‌ ಎಸ್‌ಯುವಿ ಮಾತ್ರವಲ್ಲದೆ ಮರ್ಸಿಡಿಸ್‌ ಬೆಂಜ್‌ ಮೆಬಾಕ್‌ ಎಸ್‌ ಕ್ಲಾಸ್‌, ಮರ್ಸಿಡಿಸ್‌ ಬೆಂಜ್‌ ಜಿಎಲ್‌ಇ, ಬಿಎಂಡಬ್ಲ್ಯು 7 ಸೀರಿಸ್‌ ಮತ್ತು ಔಡಿ ಕ್ಯೂ3 ಕಾರುಗಳೂ ಇವೆ.

ಕಂಗನಾ ರಣಾವತ್‌ ಖರೀದಿಸಿದ ನೂತನ ರೇಂಜ್‌ ರೋವರ್‌ ಎಸ್‌ಯುವಿ ಎಕ್ಸ್‌ ಶೋರೂಂ ದರ 2.60 ಕೋಟಿ ರೂಪಾಯಿ ಇದೆ.  ಆನ್‌ರೋಡ್‌ ದರ 3 ಕೋಟಿ ರೂಪಾಯಿ ದಾಟುತ್ತದೆ.
ಕಂಗನಾ ರಣಾವತ್‌ ಖರೀದಿಸಿದ ನೂತನ ರೇಂಜ್‌ ರೋವರ್‌ ಎಸ್‌ಯುವಿ ಎಕ್ಸ್‌ ಶೋರೂಂ ದರ 2.60 ಕೋಟಿ ರೂಪಾಯಿ ಇದೆ. ಆನ್‌ರೋಡ್‌ ದರ 3 ಕೋಟಿ ರೂಪಾಯಿ ದಾಟುತ್ತದೆ.

ರಾಜಕಾರಣಿಯಾಗಿ ಬದಲಾಗಿರುವ ಬಾಲಿವುಡ್‌ ನಟಿ ಕಂಗನಾ ರಣಾವತ್‌ ಮನೆಗೆ ಹೊಸ ವಿಲಾಸಿ ಕಾರೊಂದು ಆಗಮಿಸಿದೆ. ಈ ಮೂಲಕ ಇವರ ಕಾರು ಕಲೆಕ್ಷನ್‌ ಇನ್ನಷ್ಟು ಹಿರಿದಾಗಿದೆ. ಮಂಡಿಯ ಬಿಜೆಪಿ ಸಂಸದೆ ಸುಮಾರು 2 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ರೇಂಜ್‌ ರೋವರ್‌ ಎಸ್‌ಯುವಿ ಖರೀದಿಸಿದ್ದಾರೆ. ಭಾನುವಾರ ಇವರಿಗೆ ಹೊಸ ಎಸ್‌ಯುವಿ ಡೆಲಿವರಿಯಾಗಿದೆ. 2022ರಲ್ಲಿ ಇವರು ಸುಮಾರು 3 ಕೋಟಿ ರೂಪಾಯಿ ಮೌಲ್ಯದ ಮರ್ಸಿಡಿಸ್‌ ಬೆಂಜ್‌ ಮೆಬಾಕ್‌ ಎಸ್‌ ಕ್ಲಾಸ್‌ ಸೆಡಾನ್‌ ಕಾರು ಖರೀದಿಸಿದ್ದರು.

ಕಂಗನಾ ರಣಾವತ್‌ ಖರೀದಿಸಿದ ನೂತನ ರೇಂಜ್‌ ರೋವರ್‌ ಎಸ್‌ಯುವಿ ಎಕ್ಸ್‌ ಶೋರೂಂ ದರ 2.60 ಕೋಟಿ ರೂಪಾಯಿ ಇದೆ. ಭಾರತದಲ್ಲಿ ಕಂಪನಿಯು ರೇಂಜ್‌ ರೋವರ್‌ ಎಸ್‌ಯುವಿಯ ಎರಡು ಆವೃತ್ತಿಗಳನ್ನು ಮಾರಾಟ ಮಾಡುತ್ತಿದೆ. ಇದು ಲಾಂಗ್‌ ವೀಲ್‌ ಬೇಸ್‌ ಆವೃತ್ತಿ ಮತ್ತು ಸಾಮಾನ್ಯ ವೀಲ್‌ ಬೇಸ್‌ ಆವೃತ್ತಿ ಹೊಂದಿದೆ. ಇವೆರಡೂ ಕಾರುಗಳು ಪೆಟ್ರೋಲ್‌ ಮತ್ತು ಡೀಸೆಲ್‌ ಎಂಜಿನ್‌ ಆಯ್ಕೆಗಳಲ್ಲಿ ಲಭ್ಯವಿದೆ. ಈ ಎಸ್‌ಯುವಿಯ ದರ ಮುಂಬೈನಲ್ಲಿ 3.08 ಕೋಟಿ ರೂಪಾಯಿವರೆಗಿದೆ. ಅಂದರೆ, ಆನ್‌ರೋಡ್‌ ದರ ಇಷ್ಟಿದೆ. ಟಾಟಾ ಮೋಟಾರ್ಸ್‌ ಮಾಲೀಕತ್ವದ ಕಂಪನಿಯಾಗಿದೆ. ಈ ಕಂಪನಿಯು ಇತ್ತೀಚೆಗೆ ರಾಂಥಭೋರ್‌ ಎಡಿಸನ್‌ ಎಸ್‌ಯುವಿ ಲಾಂಚ್‌ ಮಾಡಿತ್ತು. ಇದರ ದರ 4.98 ಕೋಟಿ ರೂಪಾಯಿ ಇದೆ. ಇದು ಎಕ್ಸ್‌ ಶೋರೂಂ ದರ.

ರೇಂಜ್‌ ರೋವರ್‌ನ ಈ ಎಸ್‌ಯುವಿ ಬಗ್ಗೆ ಹೆಚ್ಚಿನ ವಿವರ

ಈ ರೇಂಜ್‌ ರೋವರ್‌ ಎಸ್‌ಯುವಿಯು 3.0-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ ಆಯ್ಕೆಗಳಲ್ಲಿ ಲಭ್ಯವಿದೆ. ಪೆಟ್ರೋಲ್‌ ಎಂಜಿನ್‌ 394 ಬಿಎಚ್‌ಪಿ ಪವರ್ ಮತ್ತು 550 ಎನ್‌ಎಂ ಗರಿಷ್ಠ ಟಾರ್ಕ್ ನೀಡುತ್ತದೆ. ಆರು ಸಿಲಿಂಡರ್‌ನ ಡೀಸೆಲ್‌ ಎಂಜಿನ್‌ 354 ಬಿಎಚ್‌ಪಿ ಪವರ್ ಮತ್ತು 700 ಎನ್‌ಎಂ ಗರಿಷ್ಠ ಟಾರ್ಕ್ ನೀಡುತ್ತದೆ. ಇದು ಕೇವಲ 5.9 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿ.ಮೀ. ವೇಗವನ್ನು ಪಡೆಯುತ್ತದೆ. ಎಂಟು ಹಂತದ ಸ್ವಯಂಚಾಲಿತ ಗಿಯರ್‌ ಬಾಕ್ಸ್‌ ಮತ್ತು ಆಲ್-ವೀಲ್ ಡ್ರೈವ್ ತಂತ್ರಜ್ಞಾನ ಹೊಂದಿದೆ.

ಇದರಲ್ಲಿ ಹಲವು ಆರಾಮದಾಯಕ ಫೀಚರ್‌ಗಳಿವೆ. 13.1-ಇಂಚಿನ ಪಿವಿ ಪ್ರೊ ಇನ್ಫೋಟೈನ್‌ಮೆಂಟ್ ಸ್ಕ್ರೀನ್, 13.7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಪ್ರೀಮಿಯಂ ಲೆದರ್ ಅಪ್‌ಹೋಲ್‌ಸ್ಟರಿ, 35-ಸ್ಪೀಕರ್ ಮೆರಿಡಿಯನ್ ಸೌಂಡ್ ಸಿಸ್ಟಮ್, ಹಿಂಬದಿಯ ಸೀಟ್‌ನಲ್ಲಿ ಕುಳಿತವರಿಗೂ ಎಂಟರ್‌ಟೈನ್‌ಮೆಂಟ್ ಸ್ಕ್ರೀನ್‌ಗಳು, ಹೆಡ್-ಅಪ್ ಡಿಸ್ಪ್ಲೇ, ಕ್ಲೈಮೇಟ್‌ ಕಂಟ್ರೋಲ್‌, ಐದು ಆಸನಗಳ ರಚನೆಯ ಬದಲು ಕಂಪನಿಯು ಇದೇ ಮೊದಲ ಬಾರಿಗೆ ಮೂರು ಸಾಲಿನ ವಿನ್ಯಾಸದಲ್ಲಿ ಇದನ್ನು ಬಿಡುಗಡೆ ಮಾಡಿದೆ.

ಬಾಲಿವುಡ್‌ ಸೆಲೆಬ್ರಿಟಿಗಳಲ್ಲಿ ಯಾರಲ್ಲಿದೆ ಈ ಕಾರು?

ರೇಂಜ್‌ ರೋವರ್‌ ಎಸ್‌ಯುವಿಯು ಸಾಕಷ್ಟು ಬಾಲಿವುಡ್‌ ನಟನಟಿಯರಲ್ಲಿದೆ. ಸಲ್ಮಾನ್‌ ಖಾನ್‌, ಸಂಜಯ್‌ ದತ್‌, ಹೃತಿಕ್‌ ರೋಷನ್‌, ಕಾರ್ತಿಕ್‌ ಆರ್ಯನ್‌, ಜಾಹ್ನವಿ ಕಪೂರ್‌, ಅನನ್ಯಾ ಪಾಂಡೆ ಸೇರಿದಂತೆ ಹಲವು ಸೆಲೆಬ್ರಿಟಿಗಳು ಈ ಅದ್ಧೂರಿ ಎಸ್‌ಯುವಿ ಹೊಂದಿದ್ದಾರೆ.

ಕಂಗನಾ ರಣಾವತ್‌ ಕಾರು ಕಲೆಕ್ಷನ್‌

ಕಂಗನಾ ರಣಾವತ್‌ ಬಳಿ ಹೊಸ ರೇಂಜ್‌ ರೋವರ್‌ ಎಸ್‌ಯುವಿ ಮಾತ್ರವಲ್ಲದೆ ಮರ್ಸಿಡಿಸ್‌ ಬೆಂಜ್‌ ಮೆಬಾಕ್‌ ಎಸ್‌ ಕ್ಲಾಸ್‌, ಮರ್ಸಿಡಿಸ್‌ ಬೆಂಜ್‌ ಜಿಎಲ್‌ಇ, ಬಿಎಂಡಬ್ಲ್ಯು 7 ಸೀರಿಸ್‌ ಮತ್ತು ಔಡಿ ಕ್ಯೂ3 ಕಾರುಗಳೂ ಇವೆ.

mysore-dasara_Entry_Point