logo
ಕನ್ನಡ ಸುದ್ದಿ  /  ಮನರಂಜನೆ  /  ದಿವಂಗತ ಸಿಧು ಮೂಸೆವಾಲಾರ ತಾಯಿ 58ನೇ ವಯಸ್ಸಿನಲ್ಲಿ ಮತ್ತೆ ಗರ್ಭಿಣಿ; ಮಾರ್ಚ್‌ನಲ್ಲಿ ಎರಡನೇ ಮಗುವಿನ ಜನನ ನಿರೀಕ್ಷೆ

ದಿವಂಗತ ಸಿಧು ಮೂಸೆವಾಲಾರ ತಾಯಿ 58ನೇ ವಯಸ್ಸಿನಲ್ಲಿ ಮತ್ತೆ ಗರ್ಭಿಣಿ; ಮಾರ್ಚ್‌ನಲ್ಲಿ ಎರಡನೇ ಮಗುವಿನ ಜನನ ನಿರೀಕ್ಷೆ

Praveen Chandra B HT Kannada

Feb 27, 2024 02:50 PM IST

google News

ಸಿಧು ಮೂಸೆವಾಲಾರ ತಾಯಿ 58ನೇ ವಯಸ್ಸಿನಲ್ಲಿ ಮತ್ತೆ ಗರ್ಭಿಣಿ

    • Sidhu Moosewala mother: ದಿವಂಗತ ಸಿಧು ಮೂಸೆವಾಲಾರ ಅಮ್ಮ ಚರಣ್‌ ಸಿಂಗ್‌ ಮತ್ತೆ 58ನೇ ವಯಸ್ಸಿನಲ್ಲಿ ಗರ್ಭಿಣಿಯಾಗಿದ್ದಾರೆ. ಅಮ್ಮ ಚರಣ್‌ ಸಿಂಗ್‌ ಐವಿಎಫ್‌ ಚಿಕಿತ್ಸೆ ಮೂಲಕ ಮಗು ಪಡೆಯುತ್ತಿದ್ದಾರೆ. ಮಾರ್ಚ್‌ ತಿಂಗಳಲ್ಲಿ ಮಗು ಜನನವಾಗುವ ನಿರೀಕ್ಷೆಯಿದೆ.
ಸಿಧು ಮೂಸೆವಾಲಾರ ತಾಯಿ 58ನೇ ವಯಸ್ಸಿನಲ್ಲಿ ಮತ್ತೆ ಗರ್ಭಿಣಿ
ಸಿಧು ಮೂಸೆವಾಲಾರ ತಾಯಿ 58ನೇ ವಯಸ್ಸಿನಲ್ಲಿ ಮತ್ತೆ ಗರ್ಭಿಣಿ

ಪಂಜಾಬ್‌ನ ಜನಪ್ರಿಯ ಗಾಯಕರಾಗಿದ್ದ ದಿವಂಗತ ಸಿಧು ಮೂಸೆವಾಲಾರ ಹೆತ್ತವರು ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸಿದ್ದು ಅಮ್ಮ ಚರಣ್‌ ಸಿಂಗ್‌ ಐವಿಎಫ್‌ ಚಿಕಿತ್ಸೆ ಮೂಲಕ ಮಗು ಪಡೆಯುತ್ತಿದ್ದಾರೆ. ಮಾರ್ಚ್‌ ತಿಂಗಳಲ್ಲಿ ಮಗು ಹೆರುವ ನಿರೀಕ್ಷೆಯಿದೆ ಎಂದು ಕುಟುಂಬದ ಮೂಲಗಳು ಟ್ರಿಬ್ಯೂನ್‌ ಪತ್ರಿಕೆಗೆ ಖಚಿತಪಡಿಸಿದ್ದಾರೆ. ಚರಣ್‌ ಸಿಂಗ್‌ ಅವರ ಏಕೈಕ ಮಗ ಸಿಧು ಮೂಸೆವಾಲಾ 2022ರ ಮೇ ತಿಂಗಳಿನಲ್ಲಿ ಹತ್ಯೆಗೀಡಾಗಿದ್ದರು.

ಸಿಧು ಮೂಸೆವಾಲಾ ತಾಯಿಗೆ 58 ವರ್ಷ

ಚರಣ್‌ ಸಿಂಗ್‌ ಅವರಿಗೆ ಈಗ 58 ವರ್ಷ ವಯಸ್ಸು ಎನ್ನಲಾಗಿದೆ. ಸಿಧು ಅವರು ಮಾನ್ಸಾದಲ್ಲಿ ಚುನಾವಣೆಗೆ ನಿಂತ ಸಂದರ್ಭದಲ್ಲಿ ಪ್ರಮಾಣಪತ್ರದಲ್ಲಿ 56 ವರ್ಷ ಎಂದು ನಮೂದಿಸಿದ್ದರು. ಈ ಆಧಾರದಲ್ಲಿ ಹೇಳುವುದಾರೆ ಸಿಧು ಅಮ್ಮನಿಗೆ ಈಗ 58 ವರ್ಷ ವಯಸ್ಸು. ಸಹಜವಾಗಿ ಈ ವಯಸ್ಸಲ್ಲಿ ಗರ್ಭಧಾರಣೆ ಕಷ್ಟವಾಗಿರುವುದರಿಂದ ಐವಿಎಫ್‌ ಹಾದಿ ಮೂಲಕ ಮಗುವನ್ನು ಪಡೆಯುತ್ತಿದ್ದಾರೆ. ಸದ್ಯ ಚರಣ್‌ ಸಿಂಗ್‌ ಅವರು ವೈದ್ಯಕೀಯ ನಿಗಾದಲ್ಲಿದ್ದಾರೆ.

ಮೂಸೆವಾಲಾರ ಸಾವಿನ ಕುರಿತು

ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ 2022ರಲ್ಲಿ ಸಿಧು ಮೂಸೆವಾಲಾರನ್ನು ಶೂಟ್‌ ಮಾಡಿ ಹತ್ಯೆ ಮಾಡಲಾಗಿತ್ತು. ಜನಪ್ರಿಯ ಗಾಯಕ ಸಿಧುರ ಗ್ರಾಮಾ ಮೂಸಾದಿಂದ ಸುಮಾರು ಹತ್ತು ಕಿಲೋಮೀಟರ್‌ ದೂರದ ಜವಹರ್ಕೆ ಗ್ರಾಮದಲ್ಲಿ ಸುಮಾರು ಆರು ಜನರು ಶೂಟರ್‌ಗಳು ಇವರನ್ನು ಹತ್ಯೆ ಮಾಡಿದ್ದರು.

ಸಿಧು ಹತ್ಯೆ ರಾಷ್ಟ್ರೀಯ ಸುದ್ದಿಯಾಗಿತ್ತು. ಪಂಜಾಬ್‌ ಪೊಲೀಸ್‌ ವಿಶೇಷ ತನಿಖಾ ಪಡೆಯು ಸುಮಾರು 32 ಜನರು ಆರೋಪಿಗಳ ಹೆಸರನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದರು. ಗ್ಯಾಂಗ್‌ಸ್ಟಾರ್‌ ಲಾರೆನ್ಸ್‌ ಬಿಸ್ನೋಯ್‌, ಗೋಲ್ಡಿ ಬ್ರಾರ್‌ ಮತ್ತು ಜಗ್ಗು ಭಗ್ವನ್‌ಪುರಿಯಾ ಹೆಸರುಗಳು ಈ ಪಟ್ಟಿಯಲ್ಲಿದ್ದವು.

ಹತ್ಯೆಗೀಡಾದ ಮೂಸೆವಾಲಾರ ಹತ್ಯೆಯ ತನಿಖೆ ಮತ್ತು ನ್ಯಾಯಕ್ಕಾಗಿ ಸಿಧು ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಕ್ಯಾಂಡಲ್‌ ಮೆರವಣಿಗೆ ಮಾಡಿದ್ದರು. ರಾಜಕಾರಣಿಯಾಗಿ ಬದಲಾದ ಗಾಯಕ ದಿವಂಗತ ಸಿಧು ಮೂಸೆವಾಲಾ ಅವರು ಸೋ ಹೈ, ಸೇಮ್‌ ಬೀಪ್‌, ದಿ ಲಾಸ್ಟ್‌ ರೈಡ್‌ ,ಜಸ್ಟ್‌ ಲಿಷನ್‌ ಸೇರಿದಂತೆ ಹಲವು ಹಿಟ್‌ ಹಾಡುಗಳನ್ನು ನೀಡಿದ್ದರು.

ಐವಿಎಫ್‌ ಎಂದರೇನು?

ಸಿಧು ಮೂಸೆವಾಲಾ ಅಮ್ಮ ಐವಿಎಫ್‌ ಮೂಲಕ ಮಗುವನ್ನು ಪಡೆಯುತ್ತಿದ್ದಾರೆ. ಸಹಜವಾಗಿ ಗರ್ಭಧಾರಣೆಯಾಗುವ ಸಾಧ್ಯತೆ ಇಲ್ಲದೆ ಇರುವಾಗ ಇನ್‌ ವಿಟ್ರೊ ಫರ್ಟಿಲೈಸೇಷನ್‌ ಎಂಬ ವಿಧಾನದ ಮೂಲಕ ಮಗುವನ್ನು ಪಡೆಯಲಾಗುತ್ತದೆ. ಪತ್ನಿಯ ಅಂಡಾಣು, ಪತಿಯ ವೀರ್ಯವನ್ನು ಪಡೆದು ಲ್ಯಾಬ್‌ನಲ್ಲಿ ಭ್ರೂಣವನ್ನು ಬೆಳೆಸಲಾಗುತ್ತದೆ. ಇದಾದ ಬಳಿಕ ಈ ಭ್ರೂಣವನ್ನು ಪತ್ನಿಯ ಗರ್ಭ ಕೋಶಕ್ಕೆ ವರ್ಗಾವಣೆ ಮಾಡಲಾಗುತ್ತದೆ. ಕರ್ನಾಟಕದ ಬೆಂಗಳೂರು ಮಾತ್ರವಲ್ಲದೆ ಇತರೆ ಪಟ್ಟಣಗಳಲ್ಲಿ, ದೇಶಾದ್ಯಂತ ಈಗ ಐವಿಎಫ್‌ ಜನಪ್ರಿಯ ಗರ್ಭಧಾರಣೆ ವಿಧಾನವಾಗಿ ಪ್ರಚಾರ ಪಡೆಯುತ್ತಿದೆ. ಮಕ್ಕಳಿಲ್ಲದವರು ಐವಿಎಫ್‌ ಮೂಲಕ ಮಗು ಹೊಂದುವ ಕನಸನ್ನು ಈಡೇರಿಸಿಕೊಳ್ಳುತ್ತಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ