logo
ಕನ್ನಡ ಸುದ್ದಿ  /  ಮನರಂಜನೆ  /  ನಾನು ಬಯಸಿ ಬಯಸಿ ವಿಲನ್‌ ಪಾತ್ರ ಮಾಡ್ತಿಲ್ಲ: ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಟಿ ರಮ್ಯಾ ರಾಜು ಸಂದರ್ಶನ

ನಾನು ಬಯಸಿ ಬಯಸಿ ವಿಲನ್‌ ಪಾತ್ರ ಮಾಡ್ತಿಲ್ಲ: ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಟಿ ರಮ್ಯಾ ರಾಜು ಸಂದರ್ಶನ

Reshma HT Kannada

Dec 11, 2024 11:30 AM IST

google News

ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಟಿ ರಮ್ಯಾ ರಾಜು

    • ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ, ಟಿಆರ್‌ಪಿಯಲ್ಲಿ ಸದಾ ಟಾಪ್ ಇರುವ ಧಾರಾವಾಹಿ ‘ಪುಟ್ಟಕ್ಕನ ಮಕ್ಕಳು‘. ಈ ಧಾರಾವಾಹಿಯಲ್ಲಿ ರಾಧಾ ಪಾತ್ರಧಾರಿ ರಮ್ಯಾ ರಾಜುಗೆ ಹೇಗೆ ಬ್ಯಾಕ್‌ ಟು ಬ್ಯಾಕ್‌ ವಿಲನ್‌ ಪಾತ್ರವೇ ಸಿಗ್ತಿದೆ? ಈ ಬಗ್ಗೆ ಅವರು Panchami Taks ಯುಟ್ಯೂಬ್‌ ಚಾನೆಲ್‌ ಜೊತೆಗೆ ಮಾತನಾಡಿದ್ದಾರೆ. (ಸಂದರ್ಶನ: ಪದ್ಮಶ್ರೀ ಭಟ್)
ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಟಿ ರಮ್ಯಾ ರಾಜು
ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಟಿ ರಮ್ಯಾ ರಾಜು

ಜೀ ಕನ್ನಡ ವಾಹಿನಿಯ ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿಯಲ್ಲಿ ನಾಯಕ ಕಂಠಿಯ ಅತ್ತೆ ಮಗಳು ರಾಧಾ ಪಾತ್ರದಲ್ಲಿ ನಟಿಸುತ್ತಿರುವ ರಮ್ಯಾ ರಾಜು ಅವರು ತಮ್ಮ ನಟನಾ ಪಯಣ, ಕುಟುಂಬದ ಬಗ್ಗೆ Panchami Talks ಯುಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಅವರ ಬಗ್ಗೆ ತಿಳಿಯುವ ಕುತೂಹಲ ಇದ್ದರೆ ಮುಂದೆ ಓದಿ.

ನಿಮ್ಮ ಹಿನ್ನೆಲೆ ತಿಳಿಸಿ

ನಾನು ಗೌರಿಬಿದನೂರಿನವಳು. ಆದರೆ ಹುಟ್ಟಿ ಬೆಳೆದಿದ್ದು ತುಮಕೂರು, ಬೆಂಗಳೂರಿನಲ್ಲಿ. ನನಗೆ ಅಕ್ಕ ಇದ್ದಾಳೆ, ಅವಳಿಗೆ ಮದುವೆಯಾಗಿದೆ. ಅಪ್ಪ ಕರೆಂಟ್‌ ಶಾಕ್‌ ಆಗಿ ತೀರಿಕೊಂಡರು. ಅಪ್ಪ ಶೆಫ್‌ ಆಗಿದ್ದು, ಇವೆಂಟ್‌ಗಳಿಗೆ ಅಡುಗೆ ಮಾಡುತ್ತಿದ್ದರು, ಹೋಟೆಲ್‌ ಕೂಡ ಇತ್ತು.

ಜೀವನ ಒಮ್ಮೊಮ್ಮೆ ಅನಿರೀಕ್ಷಿತ ಟ್ವಿಸ್ಟ್‌ ಕೊಟ್ಟಾಗ ತುಂಬ ಬದಲಾಗ್ತೀವಿ ಅಂತ ಹೇಳ್ತಾರೆ...

100% ಸತ್ಯ. ನಮಗೆ ಯಾವುದೇ ವಸ್ತು ಬೇಕು ಅಂತ ಅಂದಾಗ ಹಠ ಮಾಡಿ ಕಿತ್ತುಕೊಳ್ತೀವಿ. ಹೊರಗಡೆ ನಗುವ ನಾವು ಒಳಗಡೆ ಅಳುತ್ತಿರುತ್ತೇವೆ.

ನೀವು ಎಷ್ಟು ಬದಲಾಗಿದ್ದೀರಿ?

ಮೊದಲು ಬಾಲಿಶವಾಗಿದ್ದೆ, ಈಗ ಜವಾಬ್ದಾರಿ ಇದೆ ಕಾರಣಕ್ಕೆ ಬಾಲಿಶತನ ಹೋಗಿದೆ. ಏನೇ ತಗೊಳ್ಳಬೇಕು ಅಂತ ಅಂದಾಗ ಈ ವಸ್ತು ನನಗೆ ಬೇಕಾ? ಬೇಡವಾ? ಎಂಬ ಪ್ರಶ್ನೆ ಬರುತ್ತದೆ. ಪಾಲಕರ ರೀತಿ ನಾವು ಕೂಡ ಆಲೋಚನೆ ಮಾಡುತ್ತಿರುತ್ತೇವೆ. ಜೀವನ ತುಂಬ ಪಾಠ ಕಲಿಸಿದೆ.

ಅಪ್ಪ ಹೋದ್ಮೇಲೆ ಜೀವನ ಬದಲಾಗಿದ್ಯಾ?

ಅಪ್ಪ ಇದ್ದಾಗ ಎಲ್ಲರೂ ಇದ್ರು. ಜವಾಬ್ದಾರಿ ತಗೊಳ್ಳುವ ಪ್ರೌಢಿಮೆ ಇರದ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡೆವು. ಅಪ್ಪ ಹೋದ್ಮೇಲೆ ಪ್ರಪಂಚದಲ್ಲಿ ಏನೂ ಇಲ್ಲ ಅಂತ ಅನಿಸಿತ್ತು. ಅಪ್ಪ ಇದ್ದಾಗ, ನಮಗೆ ಬೇಕಾಗಿದ್ದನ್ನೆಲ್ಲ ತೆಗೆಸಿಕೊಡುತ್ತಿದ್ದರು. ಅಪ್ಪನನ್ನು ಕಳೆದುಕೊಂಡ ಮೇಲೆ ಜೀವನ ಏನು ಅನ್ನೋದು ಅರ್ಥ ಆಯ್ತು. ನಾವು ಕೆಳಗಡೆ ಹೋದರೂ ಕೂಡ, ಎಲ್ಲೋ ಒಂದು ಕಡೆ ನಮ್ಮನ್ನು ಅಷ್ಟು ಕೆಳಗಡೆ ಇಟ್ಟಿಲ್ಲ. ನನ್ನ ಅಕ್ಕನಿಗೆ ಮದುವೆಯಾಗಿ ಮಗು ಇದೆ. ಈಗ ಅವಳು ಟೀಚರ್‌ ಆಗಿ ಕೆಲಸ ಮಾಡುತ್ತಿದ್ದಾಳೆ.

ನಿಮ್ಮ ನಟನೆ ಜರ್ನಿ ಹೇಗೆ ಶುರು ಆಯ್ತು?

2016 ರಲ್ಲಿ ʼಓಂ ಶಕ್ತಿ ಓಂ ಶಾಂತಿʼ ಧಾರಾವಾಹಿಯಲ್ಲಿ ಲೀಡ್‌ ಆಗಿ ನಟಿಸಿದೆ. ಆಮೇಲೆ ನಾನು ಈ ಪಾತ್ರದಿಂದ ಹೊರಗಡೆ ಬರಬೇಕಾಯಿತು. ಆಮೇಲೆ ಸ್ವಲ್ಪ ಚಿತ್ರರಂಗದಿಂದ ಗ್ಯಾಪ್‌ ತಗೊಂಡೆ. ಆಮೇಲೆ ʼಗೀತಾ‘, ʼಮನಸಾರೆ‘, ʼಕೆಂಡಸಂಪಿಗೆ‘ ಧಾರಾವಾಹಿಯಲ್ಲಿ ವಿಲನ್‌ ಆಗಿ ನಟಿಸಿದೆ. ನನಗೆ ಪದೇ ಪದೇ ವಿಲನ್‌ ಪಾತ್ರ ಬರುತ್ತಿದೆ. ನಾನು ಬಯಸಿ ಬಯಸಿ ವಿಲನ್‌ ಪಾತ್ರ‌ ಮಾಡುತ್ತಿಲ್ಲ, ಅದಾಗಿಯೇ ಬರುತ್ತಿದೆ.

ನಿಮ್ಮ ಪಾತ್ರಗಳ ಬಗ್ಗೆ ವೀಕ್ಷಕರು ಏನು ಹೇಳುತ್ತಾರೆ?

ಸ್ನೇಹಿತರು, ಸಂಬಂಧಿಕರು ಕೂಡ ಫೋನ್‌ ಮಾಡಿ ಯಾಕೆ ನೀನು ಸ್ಯಾಡಿಸ್ಟ್‌, ಯಾಕೆ ಸ್ನೇಹಾಗೆ ತೊಂದರೆ ಕೊಟ್ಟೆ? ಕಂಠಿ-ಸ್ನೇಹಾಳನ್ನು ದೂರ ಮಾಡಬೇಡ ಅಂತ ಹೇಳುತ್ತಿದ್ದರು. ಆದರೆ ಕೆಲವರು ಸೋಶಿಯಲ್‌ ಮೀಡಿಯಾದಲ್ಲಿ ರಾಧಾ ಪಾತ್ರಕ್ಕೆ ಬೆಂಬಲ ಕೊಟ್ಟಿದ್ದು ನೋಡಿ ಖುಷಿಯಾಗಿತ್ತು.

ಒಮ್ಮೆ ದೇವಸ್ಥಾನಕ್ಕೆ ಹೋದಾಗ ಅಜ್ಜಿಯೊಬ್ಬರು ಸಿಕ್ಕಿ, ಯಾಕೆ ನೀನು ಸ್ನೇಹಾಗೆ ಕಾಟ ಕೊಡ್ತಿದೀಯಾ ಅಂತ ಹೇಳಿದ್ದರು. ಅಜ್ಜಿ ಬೈಯ್ಯೋದು ನೋಡಿ ನನಗೆ ಏನಾದ್ರೂ ಹೊಡೆಯುತ್ತಾರಾ ಎಂಬ ಭಯ ಶುರುವಾಗಿತ್ತು. ಸೀರಿಯಲ್‌ನಲ್ಲಿ ನಟಿಸುವಾಗಲೂ ಡೈರೆಕ್ಟರ್‌ ಬಳಿ ‘ಜನರು ನನಗೆ ಕಲ್ಲಲ್ಲಿ ಹೊಡೆಯೋ ಹಾಗೆ ಪಾತ್ರ ಕೊಡ್ತೀರಾ‘ ಅಂತ ಹೇಳುತ್ತಿರುತ್ತೇನೆ. ಜನರು ಸಿಕ್ಕಾಗೆಲ್ಲ ನೀನು ಯಾಕೆ ಎಲ್ಲ ಧಾರಾವಾಹಿಯಲ್ಲಿಯೂ ಗಂಡ-ಹೆಂಡತಿ ಮಧ್ಯೆ ಹೋಗ್ತೀಯಾ? ರಿಯಲ್‌ ಲೈಫ್‌ನಲ್ಲಿ ಒಂದು ಹುಡುಗನನ್ನು ನೋಡ್ಕೊಂಡು ಮದುವೆ ಆಗು ಅಂತ ಹೇಳುತ್ತಿರುತ್ತಾರೆ.

ನಟನೆ ಬಗ್ಗೆ ಏನು ಹೇಳುತ್ತೀರಿ?

ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಗ್ತು, ಆಮೇಲೆ ಒಂದಾದ ಮೇಲೆ ಒಂದರಂತೆ ಧಾರಾವಾಹಿಯಲ್ಲಿ ನಟಿಸಿದೆ. ಬೇರೆ ಭಾಷೆಗಳಿಂದ ಅಷ್ಟಾಗಿ ಆಫರ್‌ ಬಂದಿಲ್ಲ. ಒಂದು ತೆಲುಗು ಧಾರಾವಾಹಿಯಿಂದ ಆಫರ್‌ ಬಂದರೂ ಕೂಡ ನನಗೆ ಅಷ್ಟಾಗಿ ಹಿಡಿಸಿಲ್ಲ. ಇಂದು ಕನ್ನಡ ಚಿತ್ರರಂಗದಲ್ಲಿ ಅವಕಾಶಗಳು ಸಿಗುತ್ತಿರೋದು ಖುಷಿ ಕೊಟ್ಟಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ