ಅಪ್ಪನ ಬ್ಯಾಂಕ್ ಪಾಸ್‌ಬುಕ್‌ನಲ್ಲಿ 25 ಲಕ್ಷ ನೋಡಿ ಗಾಬರಿಯಾದ ಸಂತೋಷ್, ಹಣ ಲಪಟಾಯಿಸಲು ಪ್ಲ್ಯಾನ್; ಲಕ್ಷ್ಮೀ ನಿವಾಸ ಧಾರಾವಾಹಿ
Nov 02, 2024 10:03 AM IST
ಲಕ್ಷ್ಮೀ ನಿವಾಸ ಧಾರಾವಾಹಿ ನವೆಂಬರ್ 1ರ ಎಪಿಸೋಡ್‌ನಲ್ಲಿ ಸಂತೋಷ್ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಅಪ್ಪನ ಪಾಸ್‌ಬುಕ್ ಕದಿಯುತ್ತಾನೆ.
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ನವೆಂಬರ್ 1ರ ಎಪಿಸೋಡ್‌ನಲ್ಲಿ ಅಪ್ಪ ಶ್ರೀನಿವಾಸ್ ಬ್ಯಾಂಕ್ ಪಾಸ್‌ಬುಕ್‌ನಲ್ಲಿ 25 ಲಕ್ಷ ರೂ. ಹಣ ನೋಡಿ ಸಂತೋಷ್ ಗಾಬರಿಯಾಗುತ್ತಾನೆ. ಮತ್ತೊಂದೆಡೆ ಜಾಹ್ನವಿಗೆ ಜಯಂತ್ ತಂದುಕೊಟ್ಟಿದ್ದ ಮೊಲ ಕಾಣೆಯಾಗುತ್ತದೆ.
Lakshmi Nivasa Serial: ಕೆಲಸದಿಂದ ನಿವೃತ್ತಿ ಆದ ನಂತರ ಮನೆ ನಡೆಸಲು ಶ್ರೀನಿವಾಸ್ ಆಟೋ ಓಡಿಸಲು ಆರಂಭಿಸುತ್ತಾನೆ. ಆದರೆ ಪ್ಯಾಸೆಂಜರ್ ಒಬ್ಬರನ್ನು ಕರೆದೊಯ್ಯುವಾಗ ಆಟೋ ಕೆಡುತ್ತದೆ. ಸಿಟ್ಟಾದ ಪ್ರಯಾಣಿಕ ಶ್ರೀನಿವಾಸ್‌ನನ್ನು ಬೈದು ಇಳಿದು ಹೋಗುತ್ತಾನೆ. ಈ ವಿಚಾರವನ್ನು ಹೆಂಡತಿ ಲಕ್ಷ್ಮೀ ಬಳಿ ಹೇಳಿದಾಗ ನಿಮ್ಮ ಪಿಎಫ್ ಅಕೌಂಟ್‌ನಲ್ಲಿರುವ ಹಣದಿಂದ ಆಟೋ ರಿಪೇರಿ ಮಾಡಿಸಿಕೊಳ್ಳಿ ಎನ್ನುತ್ತಾಳೆ.
ಅಪ್ಪನ ಬ್ಯಾಂಕ್ ಪಾಸ್‌ಬುಕ್ ಕದ್ದ ಸಂತೋಷ್
ಲಕ್ಷ್ಮೀ ಸಲಹೆಯಂತೆ ಶ್ರೀನಿವಾಸ್, ಬ್ಯಾಂಕ್‌ಗೆ ಹೋಗಿ ಹಣ ಡ್ರಾ ಮಾಡುತ್ತಾನೆ. ಹಣವನ್ನು ಎಣಿಸಿ ಪ್ಯಾಂಟ್ ಜೇಬಿನಲ್ಲಿಟ್ಟುಕೊಳ್ಳುತ್ತಾನೆ. ಪಾಸ್‌ಬುಕ್‌ನಲ್ಲಿ ಎಷ್ಟು ಬ್ಯಾಲೆನ್ಸ್ ಇದೆ ಅಂತ ಮತ್ತೊಮ್ಮೆ ನೋಡಿ ಅದನ್ನು ಷರ್ಟ್ ಜೇಬಿನಲ್ಲಿ ಇಡುತ್ತಾನೆ. ಅಪ್ಪನನ್ನ ಬ್ಯಾಂಕ್ ಬಳಿ ನೋಡುವ ಸಂತೋಷ್, ಇವರು ಏಕೆ ಇಲ್ಲಿಗೆ ಬಂದಿದ್ದಾರೆ? ಪಾಸ್ ಬುಕ್ ಬೇರೆ ಇದೆ, ರಿರ್ಟೈರ್ಡ್ ಆದ ದುಡ್ಡು ಬಂತಾ ಹೇಗೆ? ಎಂದುಕೊಳ್ಳುತ್ತಾನೆ. ಹೇಗಾದರೂ ಮಾಡಿ ಆ ಪಾಸ್‌ಬುಕ್‌ನಲ್ಲಿ ಎಷ್ಟು ಹಣ ಇದೆ ನೋಡಬೇಕು ಎಂದು ಪ್ಲ್ಯಾನ್ ಮಾಡುತ್ತಾನೆ. ತನ್ನ ಗುರುತು ಸಿಗಬಾರದು ಎಂದುಕೊಂಡು ಮುಖಕ್ಕೆ ಬಟ್ಟೆ ಕಟ್ಟಿಕೊಳ್ಳುತ್ತಾನೆ. ಶ್ರೀನಿವಾಸ್ ಸ್ಕೂಟರ್ ತೆಗೆಯುವಾಗ ಮೆಲ್ಲಗೆ ಪಾಸ್‌ಬುಕ್ ಎಗರಿಸಿ, ಅಲ್ಲಿಂದ ಪರಾರಿಯಾಗುತ್ತಾನೆ. ತನ್ನ ಪಾಸ್‌ಬುಕ್ ಕದ್ದಿದ್ದು ಯಾರು ಎಂದು ತಿಳಿಯದೆ ಶ್ರೀನಿವಾಸ್ ಗಾಬರಿಯಾಗುತ್ತಾನೆ. ಆದರೆ ಹಣ ತನ್ನ ಬಳಿ ಇರುವುದಕ್ಕೆ ಸಮಾಧಾನಗೊಳ್ಳುತ್ತಾನೆ.
ಅಪ್ಪನ ಪಾಸ್‌ಬುಕ್‌ನಲ್ಲಿ 25 ಲಕ್ಷ ರೂ. ಹಣ ಇರುವುದನ್ನು ನೋಡಿ ಸಂತೋಷ್ ಗಾಬರಿ ಆಗುತ್ತಾನೆ. ಅಪ್ಪನ ಅಕೌಂಟ್‌ನಲ್ಲಿ ಇಷ್ಟು ದುಡ್ಡು ಹೇಗೆ ಬಂತು ಎಂದು ತಿಳಿಯದೆ ಕನ್ಫ್ಯೂಸ್ ಆಗುತ್ತಾನೆ. ಅಪ್ಪ, ಹೆತ್ತ ಮಕ್ಕಳ ಬಳಿ ಸುಳ್ಳು ಹೇಳಿ ಇಷ್ಟು ಹಣ ಮೇಂಟೇನ್ ಮಾಡುತ್ತಿದ್ದಾರೆ, ನಮಗೆಲ್ಲಾ ಮೋಸ ಮಾಡುತ್ತಿದ್ದಾರೆ. ಇಷ್ಟು ಹಣ ಎಲ್ಲಿಂದ ಬಂತು ಕೇಳಬೇಕು, ಹೇಗಾದರೂ ಮಾಡಿ ಅ ದುಡ್ಡನ್ನು ಪಡೆಯಲೇಬೇಕು ಎಂದು ಸ್ಕೆಚ್ ಹಾಕುತ್ತಾನೆ. ಇದೇ ಯೋಚನೆಯಿಂದ ಸಂತೋಷ್ ಮನೆಗೆ ವಾಪಸಾಗುತ್ತಾನೆ.
ಹೆಂಡತಿಗಾಗಿ ಜಯಂತ್ ಪ್ರೀತಿಯಿಂದ ತಂದುಕೊಟ್ಟ ಮೊಲ ನಾಪತ್ತೆ
ಇತ್ತ ಜಯಂತ್, ಹೆಂಡತಿ ಜಾಹ್ನವಿಗೆ ಮೊಲ ಗಿಫ್ಟ್ ನೀಡುತ್ತಾನೆ. ಅದು ಸಿಕ್ಕಾಗಿನಿಂದ ಜಾನು, ಮೊಲದ ಜೊತೆಯಲ್ಲೇ ಹೆಚ್ಚು ಸಮಯ ಕಳೆಯುತ್ತಾಳೆ. ಜಯಂತ್‌ಗೆ ಊಟ ಬಡಿಸಲೂ ಬರುವುದಿಲ್ಲ, ಗಂಡನೊಂದಿಗೆ ಸಮಯ ಕಳೆಯುವುದನ್ನೂ ನಿಲ್ಲಿಸುತ್ತಾಳೆ. ಇದರಿಂದ ಜಯಂತ್‌ಗೆ ಹಿಂಸೆ ಆಗುತ್ತದೆ. ಮೊಲ ಬೇಕು, ನಾನು ಬೇಡ್ವಾ ಎಂದುಕೊಳ್ಳುತ್ತಾನೆ. ಸ್ವಲ್ಪ ಸಮಯದ ನಂತರ ಜಯಂತ್ ಆಫೀಸ್ ಕೆಲಸದಲ್ಲಿ ಮುಳುಗುತ್ತಾನೆ. ಜಾಹ್ನವಿ ಮೊಲದ ಗೂಡಿನ ಬಳಿ ಹೋದಾಗ ಅಲ್ಲಿ ಅದು ಇರುವುದಿಲ್ಲ. ಇದಕ್ಕೆ ಗಾಬರಿಯಾಗುವ ಜಾಹ್ನವಿ ಎಲ್ಲಾ ಕಡೆ ಹುಡುಕುತ್ತಾಳೆ. ಗಂಡನ ಬಳಿ ಬಂದು ಮೊಲ ಕಾಣ್ತಿಲ್ಲ, ನೀವು ನೋಡಿದ್ರಾ ಎನ್ನುತ್ತಾಳೆ. ಆದರೆ ಜಯಂತ್ ತನಗೂ ಇದಕ್ಕೂ ಸಂಬಂಧ ಇಲ್ಲದಂತೆ ಸುಮ್ಮನೆ ಇರುತ್ತಾನೆ. ಅಷ್ಟರಲ್ಲಿ ಕುಕ್ಕರ್ ಸೀಟಿ ಕೂಗುತ್ತದೆ?
ಮೊಲವನ್ನು ಜಯಂತ್ ಕುಕ್ಕರ್‌ಗೆ ಹಾಕಿಬಿಟ್ನಾ? ಬ್ಯಾಂಕ್‌ನಲ್ಲಿರುವ ಅಪ್ಪನ ಹಣ ಪಡೆಯೋಕೆ ಸಂತೋಷ್ ಏನು ಪ್ಲ್ಯಾನ್ ಮಾಡ್ತಾನೆ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.
ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು
ಸಿದ್ದೇಗೌಡ್ರು- ಧನಂಜಯ
ಭಾವನಾ- ದಿಶಾ ಮದನ್
ಲಕ್ಷ್ಮೀ- ನಟಿ ಶ್ವೇತಾ
ಶ್ರೀನಿವಾಸ್ - ಅಶೋಕ್ ಜೆಂಬೆ
ಹರೀಶ್ - ಅಜಯ್ ರಾಜ್
ಸಿಂಚನ - ರೂಪಶ್ರೀ
ಜಾಹ್ನವಿ - ಚಂದನ ಆನಂತಕೃಷ್ಣ
ಜಯಂತ್ - ದೀಪಕ್ ಸುಬ್ರಮಣ್ಯ
ಸಂತೋಷ್ - ಮಧು ಹೆಗಡೆ
ವೀಣಾ - ಲಕ್ಷ್ಮೀ ಹೆಗಡೆ