ಮಹೇಶನನ್ನು ಹುಡುಕಿಕೊಂಡು ಬಾರ್ ಒಳಗೆ ಹೋದ ಭಾಗ್ಯಾ, ಸೊಸೆಯನ್ನು ಹಿಂಬಾಲಿಸಿದ ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ
Oct 15, 2024 09:32 AM IST
ಭಾಗ್ಯಲಕ್ಷ್ಮೀ ಧಾರಾವಾಹಿ:ಮಹೇಶನನ್ನು ಹುಡುಕಿ ಬಾರ್‌ಗೆ ಬರುವ ಭಾಗ್ಯಾ, ಅವನಿಗೆ ತಾನು ಧರಿಸಿದ್ದ ಒಡವೆಗಳನ್ನು ಕೊಟ್ಟು ತರುಣ್ ಬಗ್ಗೆ ತಿಳಿಸುವಂತೆ ಮನವಿ ಮಾಡುತ್ತಾಳೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್ 14ರ ಎಪಿಸೋಡ್‌ನಲ್ಲಿ ಸುಂದ್ರಿಯಿಂದ ಸತ್ಯ ಗೊತ್ತಾಗದ ಕಾರಣ ಭಾಗ್ಯಾ, ಮಹೇಶನನ್ನು ಹುಡುಕಿಕೊಂಡು ಬಾರ್‌ಗೆ ಹೋಗುತ್ತಾಳೆ. ಅವನಿಗೆ ಕಿವಿ ಓಲೆ, ಬಳೆ ತೆಗೆದುಕೊಟ್ಟು ನಿಜ ಹೇಳುವಂತೆ ಮನವಿ ಮಾಡುತ್ತಾಳೆ.
Bhagyalakshmi Kannada Serial: ಭಾಗ್ಯಾ ತಲೆಯಲ್ಲಿ ಅನುಮಾನದ ಹುಳು ಹೊಕ್ಕಿದೆ. ಮನೆಯವರು ನಡೆದುಕೊಳ್ಳುವ ರೀತಿಗೆ ಭಾಗ್ಯಾ ತಲೆ ತುಂಬಾ ಪ್ರಶ್ನೆಗಳು ಉದ್ಭವಿಸಿವೆ. ಅತ್ತೆ, ಪೂಜಾ ಶ್ರೇಷ್ಠಾ ಮದುವೆ ನಿಲ್ಲಿಸಿದ್ದು ಏಕೆ? ಆ ತರುಣ್ ಯಾರು? ಇದ್ದಕ್ಕಿದ್ದಂತೆ ಶ್ರೇಷ್ಠಾ ಎಲ್ಲಿ ಹೋದಳು ಎಂಬ ಯೋಚನೆಯಲ್ಲಿ ಭಾಗ್ಯಾ ಮುಳುಗಿದ್ದಾಳೆ.
ಸುಂದ್ರಿ ಬಳಿ ಮಹೇಶನ ಅಡ್ರೆಸ್ ಪಡೆದು ಹುಡುಕಲು ಹೊರಟ ಭಾಗ್ಯಾ
ಸುಂದ್ರಿ, ತಾನು ತಪ್ಪಿಸಿಕೊಳ್ಳಲು, ನನಗೆ ಏನೂ ವಿಷಯ ಗೊತ್ತಿಲ್ಲ ಆದರೆ ಮಹೇಶನಿಗೆ ಎಲ್ಲಾ ಗೊತ್ತು, ನನಗೆ ಯಾರೋ ದುಡ್ಡು ಕೊಟ್ಟು ನಾಟಕ ಮಾಡೋಕೆ ಹೇಳಿದ್ರು ಅದಕ್ಕಾಗಿ ಮಾಡಿದೆ ಎನ್ನುತ್ತಾಳೆ. ಇವತ್ತು ಏನಾದರೂ ಮಾಡಿ ಸತ್ಯ ತಿಳಿದುಕೊಳ್ಳಲೇಬೇಕು ಎಂದು ಭಾಗ್ಯಾ, ಸುಂದ್ರಿ ಬಳಿ ಅವನ ಅಡ್ರೆಸ್ ಪಡೆದು ಹುಡುಕಿಕೊಂಡು ಹೋಗುತ್ತಾಳೆ. ಬಹಳ ದಿನಗಳಿಂದ ಈ ವಿಚಾರಕ್ಕೆ ಬಹಳ ತಲೆ ಕೆಟ್ಟು ಹೋಗಿದೆ. ಇದರಿಂದ ನೆಮ್ಮದಿಯಾಗಿರಲು ಆಗುತ್ತಿಲ್ಲ. ಕಷ್ಟಪಟ್ಟು ಪಡೆದ ಕೆಲಸದ ಕಡೆಗೂ ಗಮನ ಕೊಡಲಾಗುತ್ತಿಲ್ಲ, ಇಂದು ಹೇಗಾದರೂ ನಾನು ಸತ್ಯ ತಿಳಿದುಕೊಳ್ಳಲೇಬೇಕು ಎಂದು ನಿರ್ಧರಿಸಿ ಮಹೇಶನನ್ನು ಹುಡುಕಿ ಹೋಗುತ್ತಾಳೆ. ಅಡ್ರೆಸ್ ಗೊತ್ತಾಗಿ ಮಹೇಶನ ಮನೆ ಕಡೆ ಬರುತ್ತಾಳೆ. ಅವನ ಬಳಿ ಹೋಗಬೇಕು ಎನ್ನುಷ್ಟರಲ್ಲಿ ಅವಳಿಗೆ ಅಡ್ಡಲಾಗಿ ವಾಹನವೊಂದು ಬಂದು ನಿಲ್ಲುತ್ತದೆ. ಆ ವಾಹನ ಅಲ್ಲಿಂದ ಮುಂದೆ ಹೋಗಿ ಭಾಗ್ಯಾ ಮಹೇಶನ ಬಳಿ ಹೋಗಬೇಕು ಎನ್ನುವಷ್ಟರಲ್ಲಿ ಆತ ಅಲ್ಲಿಂದ ಮರೆಯಾಗುತ್ತಾನೆ.
ಮಹೇಶನನ್ನು ಭೇಟಿಯಾಗಲು ಭಾಗ್ಯಾ ಬಾರ್‌ಗೆ ಎಂಟ್ರಿ
ಮಹೇಶ ಎಲ್ಲಿ ಹೋದನೆಂದು ತಿಳಿಯಲು ಅಂಗಡಿಯೊಂದರ ಬಳಿ ಬಂದು ಆತನ ಬಗ್ಗೆ ವಿಚಾರಿಸುತ್ತಾಳೆ. ಅಂಗಡಿಯಾತ ಮಹೇಶ ಬಾರ್‌ಗೆ ಹೋಗಿರುವುದಾಗಿ ಮಾಹಿತಿ ನೀಡುತ್ತಾರೆ. ಹಾಗೇ ಭಾಗ್ಯಾ ಬಗ್ಗೆ ಮಾಧ್ಯಮಗಳಲ್ಲಿ ಬಂದಿದ್ದನ್ನು ನೆನಪಿಸಿಕೊಂಡು ಆಕೆಯನ್ನು ಹೊಗಳುತ್ತಾನೆ. ಅಲ್ಲಿಂದ ಭಾಗ್ಯಾ ಮಹೇಶನನ್ನು ಹುಡುಕಿ ಬಾರ್‌ಗೆ ಹೋಗುತ್ತಾಳೆ. ಭಾಗ್ಯಾ ತನ್ನನ್ನು ಹುಡುಕಿಕೊಂಡು ಇಲ್ಲಿಗೆ ಬಂದಿದ್ದನ್ನು ನೋಡಿ ಮಹೇಶ ಶಾಕ್ ಆಗುತ್ತಾನೆ. ಇಷ್ಟು ದಿನ ಭಾಗ್ಯಾಳನ್ನು ಏಕವಚನದಲ್ಲಿ ಮಾತನಾಡಿಸುತ್ತಿದ್ದ ಮಹೇಶ, ಈಗ ಅಕ್ಕ ಎಂದು ಕರೆಯುತ್ತಾನೆ. ಅದನ್ನು ಕಂಡು ಭಾಗ್ಯಾಗೆ ಕೂಡಾ ಆಶ್ಚರ್ಯವಾಗುತ್ತದೆ. ನಿಮ್ಮಂಥವರು ಇಲ್ಲಿಗೆ ಬರಬಾರದು, ಇಲ್ಲಿಂದ ಹೋಗಿ ಎಂದು ಮಹೇಶ ಭಾಗ್ಯಾಗೆ ಹೇಳುತ್ತಾನೆ.
ಭಾಗ್ಯಾಳನ್ನು ಹುಡುಕಿ ಬಂದ ಕುಸುಮಾ, ಪೂಜಾ
ಭಾಗ್ಯಾ, ತಾನು ಧರಿಸಿದ್ದ ಕಿವಿಯೋಲೆ, ಬಳೆಗಳನ್ನು ಬಿಚ್ಚಿ ಮಹೇಶನ ಮುಂದೆ ಇಟ್ಟು, ನೀವು ದುಡ್ಡಿಗಾಗಿ ಏನು ಬೇಕಾದರೂ ಮಾಡುತ್ತೀರಿ ಎಂದು ನನಗೆ ಗೊತ್ತು. ಆದರೆ ನಾನು ಹಣ ತಂದಿಲ್ಲ, ಅದಕ್ಕೆ ಇದನ್ನು ಇಟ್ಟುಕೊಂಡು ನನಗೆ ಸತ್ಯ ಹೇಳಿ ಆ ತರುಣ್ ಯಾರು? ಅವನ ಅಪ್ಪ ಅಮ್ಮನಾಗಿ ನಟಿಸಲು ನೀವು ಏಕೆ ಒಪ್ಪಿಕೊಂಡಿದ್ದು ಎನ್ನುತ್ತಾಳೆ. ಮಹೇಶ ಏನೋ ಹೇಳಬೇಕು ಎನ್ನುವಷ್ಟರಲ್ಲಿ ಕುಸುಮಾ ಹಾಗೂ ಪೂಜಾ ಅಲ್ಲಿಗೆ ಬರುತ್ತಾರೆ. ಸುತ್ತಮುತ್ತಲಿನ ವಾತಾವರಣ ನೋಡಿ ಕುಸುಮಾ ಗಾಬರಿ ಆಗುತ್ತಾಳೆ. ಅವಳನ್ನು ಅಲ್ಲಿಂದ ಕರೆದೊಯ್ಯುತ್ತಾಳೆ.
ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್