logo
ಕನ್ನಡ ಸುದ್ದಿ  /  ಮನರಂಜನೆ  /  Bigg Boss Kannada: 3ನೇ ದಿನದ ಆಟದಲ್ಲಿ ನಾಲಾಯಕ್‌ ಪಟ್ಟ ಪಡೆದ ಇಶಾನಿ; ಕ್ಯಾಪ್ಟನ್‌ ಆಗಿ ಗೆದ್ದು ಬೀಗಿದ ಸ್ನೇಹಿತ್‌ ಗೌಡ

Bigg Boss Kannada: 3ನೇ ದಿನದ ಆಟದಲ್ಲಿ ನಾಲಾಯಕ್‌ ಪಟ್ಟ ಪಡೆದ ಇಶಾನಿ; ಕ್ಯಾಪ್ಟನ್‌ ಆಗಿ ಗೆದ್ದು ಬೀಗಿದ ಸ್ನೇಹಿತ್‌ ಗೌಡ

HT Kannada Desk HT Kannada

Oct 12, 2023 07:01 AM IST

google News

ಬಿಗ್‌ ಬಾಸ್‌ ಸೀಸನ್‌ 10ರ ಮೊದಲ ಕ್ಯಾಪ್ಟನ್‌ ಆಗಿ ಆಯ್ಕೆ ಆದ ಸ್ನೇಹಿತ್‌ ಗೌಡ

  • Bigg Boss Kannada 10: ಮೊದಲ ವಾರದ ಕ್ಯಾಪ್ಟನ್‌ ಆಯ್ಕೆಯಲ್ಲಿ ಮೂವರು ಸ್ಪರ್ಧಿಗಳು ಟಾಪ್‌ 3 ಸ್ಥಾನದಲ್ಲಿದ್ದರು. ಆದರೆ ಸ್ನೇಹಿತ್‌ ಗೌಡ, ಬಿಗ್‌ ಬಾಸ್‌ ನೀಡಿದ ಎರಡೂ ಸ್ಪರ್ಧೆಗಳಲ್ಲಿ ಗೆದ್ದು ಮೊದಲ ಕ್ಯಾಪ್ಟನ್‌ ಆಗಿ ಆಯ್ಕೆ ಆದರು. 

ಬಿಗ್‌ ಬಾಸ್‌ ಸೀಸನ್‌ 10ರ ಮೊದಲ ಕ್ಯಾಪ್ಟನ್‌ ಆಗಿ ಆಯ್ಕೆ ಆದ ಸ್ನೇಹಿತ್‌ ಗೌಡ
ಬಿಗ್‌ ಬಾಸ್‌ ಸೀಸನ್‌ 10ರ ಮೊದಲ ಕ್ಯಾಪ್ಟನ್‌ ಆಗಿ ಆಯ್ಕೆ ಆದ ಸ್ನೇಹಿತ್‌ ಗೌಡ (PC: JioCinema)

Bigg Boss Kannada 10: ಬಿಗ್‌ ಬಾಸ್‌ ಸೀಸನ್‌ 10 ಆರಂಭವಾಗಿ ಮೂರು ದಿನಗಳು ಕಳೆದಿದೆ. ಸುದೀಪ್‌ ಅಭಿನಯದ 'ಧಮ್‌' ಚಿತ್ರದ ಸವಾಲಿಗೂ ಗವಾಲಿಗೂ ಹಾಡಿನ ಮೂಲಕ 3ನೇ ದಿನ ಆರಂಭವಾಯ್ತು. ಸ್ಪರ್ಧಿಗಳು ಎಂದಿನಂತೆ ಬೆಳಗಿನ ಹಾಡಿಗೆ ಕುಣಿದು ಖುಷಿ ಪಟ್ಟರು. ತಿಂಡಿ ತಿಂದು ಹರಟುತ್ತಿದ್ದಂತೆ ಬಿಗ್‌ ಬಾಸ್‌, ಈ ವಾರದ ಕ್ಯಾಪ್ಟನ್‌ ಆಯ್ಕೆ ಟಾಸ್ಕ್‌ ನೀಡಿದರು.

ಇಶಾನಿಗೆ ನಾಲಾಯಕ್‌ ಪಟ್ಟ

ಮನೆಯಲ್ಲಿ 6 ಮಂದಿ ಅಸಮರ್ಥರಿದ್ದು ಉಳಿದ 11 ಮಂದಿ ಸಮರ್ಥರಿದ್ದಾರೆ. ಆದರೆ ಅಸಮರ್ಥರಿಗೆ ಕ್ಯಾಪ್ಟನ್‌ ಆಗುವ ಅವಕಾಶವಿಲ್ಲ. ಹಾಗೇ ಈ ವಾರ ನಾಮಿನೇಟ್‌ ಆಗಿರುವ ಶ್ಯಾಮ್‌, ಮೈಕೆಲ್‌, ಸಿರಿ ಹಾಗೂ ನೀತುಗೆ ಕೂಡಾ ಕ್ಯಾಪ್ಟನ್‌ ಆಗಲು ಸಾಧ್ಯವಿಲ್ಲ. ಬಿಗ್‌ ಬಾಸ್‌ ಈ ಬಾರಿ ಅಸಮರ್ಥರಿಗೆ ವಿಶೇಷ ಅಧಿಕಾರವೊಂದನ್ನು ನೀಡಿದ್ದರು. ಸಮರ್ಥರ ಪೈಕಿ ಯಾರಾದರೂ ಒಬ್ಬರನ್ನು ಅಸಮರ್ಥರು ನಾಲಾಯಕ್‌ ಎಂದು ಆಯ್ಕೆ ಮಾಡುವ ಅಧಿಕಾರಿ ನೀಡಲಾಯ್ತು. ಅಂಥವರನ್ನು ಕ್ಯಾಪ್ಟನ್‌ ರೇಸ್‌ನಿಂದ ಹೊರಗೆ ಇಡುವುದು ಬಿಗ್‌ ಬಾಸ್‌ ಉದ್ದೇಶವಾಗಿತ್ತು. ನಾಲಾಯಕ್‌ ಪಟ್ಟಕ್ಕೆ ವರ್ತೂರು ಸಂತೋಷ್‌ ಇಶಾನಿ ಹೆಸರು, ತನಿಷಾ ನಮ್ರತಾ ಹೆಸರು ಹೇಳಿದರು. ಪ್ರತಾಪ್‌ ಸ್ನೇಹಿತ್‌ಗೆ, ಸಂಗೀತಾ ಶೃಂಗೇರಿ ವಿನಯ್‌ಗೆ, ರಕ್ಷಕ್‌ ಇಶಾನಿಗೆ, ಕಾರ್ತಿಕ್‌ ತುಕಾಲಿ ಸಂತೋಷ್‌ಗೆ ನಾಲಾಯಕ್‌ ಪಟ್ಟ ನೀಡಿದರು.

ಚೂಯಿಂಗ್‌ ಗಮ್‌ ಅಂಟಿಸುವ ಟಾಸ್ಕ್‌

ಅಸಮರ್ಥರ ಆಯ್ಕೆಯಂತೆ 2 ನಾಲಾಯಕ್‌ ಓಟು ಪಡೆದ ಇಶಾನಿ ಕೂಡಾ ಕ್ಯಾಪ್ಟನ್‌ ಸ್ಪರ್ಧೆಯಿಂದ ಹೊರಗೆ ಉಳಿದರು. ಇನ್ನು ಉಳಿದ 6 ಮಂದಿ ಸಮರ್ಥರ ಪೈಕಿ ಒಬ್ಬರನ್ನು ಕ್ಯಾಪ್ಟನ್‌ ಆಗಿ ಆಯ್ಕೆ ಮಾಡಲು ಬಿಗ್‌ ಬಾಸ್‌, ಟಾಸ್ಕ್‌ವೊಂದನ್ನು ನೀಡಿದರು. ಹಲಗೆಯ ಮೇಲೆ ನಡೆದುಹೋಗಿ ಚೂಯಿಂಗ್‌ ಗಮ್‌ ಅಂಟಿಸಬೇಕು. ಯಾರು ಎಷ್ಟು ಚೂಯಿಂಗ್‌ ಗಮ್‌ ಅಂಟಿಸುವರೋ ಅವರೇ ವಿನ್‌ ಆಗುತ್ತಾರೆ. ಅದರಂತೆ ಸ್ನೇಹಿತ್‌ 50 ಚೂಯಿಂಗ್‌ ಗಮ್‌ ಅಂಟಿಸಿ ಮೊದಲ ಸ್ಥಾನ ಗಳಿಸಿದರು.

2 ಟಾಸ್ಕ್‌ನಲ್ಲಿ ಗೆದ್ದು ಕ್ಯಾಪ್ಟನ್‌ ಆಗಿ ಆಯ್ಕೆಯಾದ ಸ್ನೇಹಿತ್‌ ಗೌಡ

ಚೂಯಿಂಗ್‌ ಗಮ್‌ ಅಂಟಿಸುವ ಆಟದಲ್ಲಿ ಮೊದಲ ಮೂರು ಸ್ಥಾನ ಗಳಿಸಿದ ಸ್ನೇಹಿತ್‌, ತುಕಾಲಿ ಸಂತೋಷ್‌ ಹಾಗೂ ನಮ್ರತಾಗೆ ಬಿಗ್‌ ಬಾಸ್‌ ಮತ್ತೊಂದು ಟಾಸ್ಕ್‌ ನೀಡಿದರು. ಗಡಿಯಾಗರದ ಆಕೃತಿಯ ಮರದ ಹಲಗೆಯಲ್ಲಿ ಕೊಟ್ಟಿರುವ ಹಿಡಿಗಳನ್ನು ಹಿಡಿದು ನಿಲ್ಲುವ ಟಾಸ್ಕ್‌ ಅದಾಗಿತ್ತು. ಸ್ವಲ್ಪ ಅತ್ತ ಇತ್ತ ಅಲುಗಾಡಿದರೂ ಸ್ಪರ್ಧಿಗಳು ಕೆಳಗೆ ಬೀಳಬೇಕಿತ್ತು. ಬಹಳ ಸಮಯ ನಿಂತ ನಂತರ ಸಂತೋಷ್‌ ಬ್ಯಾಲೆನ್ಸ್‌ ಮಾಡಲಾಗದೆ ಮೊದಲು ಕೈ ಬಿಟ್ಟರು. ನಂತರ ನಮ್ರತಾ ಬಿಟ್ಟರು. ಕೊನೆಯವರೆಗೂ ನಿಂತಿದ್ದ ಸ್ನೇಹಿತ್‌ ಮನೆಯ ಮೊದಲ ಕ್ಯಾಪ್ಟನ್‌ ಆಗಿ ಆಯ್ಕೆ ಆದರು.

ಬಿಗ್‌ ಬಾಸ್‌ ಕುರಿತಾದ ಹೆಚ್ಚಿನ ಸುದ್ದಿಗಳಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

JioCinema ದಲ್ಲಿ ದಿನದ 24 ಗಂಟೆಯೂ ಬಿಗ್‌ ಬಾಸ್‌ ಲೈವ್‌ ನೋಡಲು ಲಭ್ಯವಿದೆ.

Colors Kannada ದಲ್ಲಿ ಪ್ರತಿದಿನ ರಾತ್ರಿ 9.30 ರಿಂದ 11 ಗಂಟೆವರೆಗೂ ಬಿಗ್‌ ಬಾಸ್‌ ಪ್ರಸಾರವಾಗಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ