ಬಿಗ್‌ಬಾಸ್ ಕನ್ನಡ 11: ಇಲ್ಲಿಂದ ಹೋಗ್ತಿದ್ದಂಗೆ ನನ್ನ ಮದುವೆ; ಸರಸ್ವತಿ, ಪವಿತ್ರ ಇಬ್ರಲ್ಲಿ ಹನುಮಂತು ಮನಸ್ಸು ಕದ್ದ ಹುಡುಗಿ ಯಾರು?
Nov 05, 2024 07:42 AM IST
ನಿಮ್ಮ ಮದುವೆ ಯಾವಾಗ, ಹುಡುಗಿ ಯಾರು ಎಂದು ಗೌತಮಿ ಜಾಧವ್ ಕೇಳುವ ಪ್ರಶ್ನೆಗೆ ಹಾಡಿನ ಮೂಲಕ ಉತ್ತರ ಕೊಟ್ಟ ಹನುಮಂತು
Bigg Boss Kannada 11: ನಿಮ್ಮ ಮದುವೆ ಯಾವಾಗ, ಹುಡುಗಿ ಹೆಸರು ಏನು ಎಂದು ಗೌತಮಿ ಜಾಧವ್ ಕೇಳು ಪ್ರಶ್ನೆಗೆ ಸರಿಗಮಪ ಖ್ಯಾತಿಯ ಗಾಯಕ ಹನುಮಂತು ಹಾಡಿನ ಮೂಲಕ ಉತ್ತರಿಸುತ್ತಾರೆ. ಬಿಗ್‌ಬಾಸ್‌ನಿಂದ ಹೊರ ಹೋಗುತ್ತಿದ್ದಂತೆ ಮದುವೆ ಆಗ್ತೀನಿ ಎನ್ನುತ್ತಾರೆ.
ಬಿಗ್‌ಬಾಸ್ ಕನ್ನಡ 11: ಒಂದೊಂದೇ ಸ್ಪರ್ಧಿಗಳು ಮನೆಯಿಂದ ಹೊರ ಹೋಗುತ್ತಿದ್ದಾರೆ. ಮನೆಯಲ್ಲಿ ವಿವಿಧ ಟಾಸ್ಕ್ ಶುರುವಾಗಿದೆ. ಮುಂದಿನ ವಾರ ಡೇಂಜರಸ್ ಜೋನ್‌ನಲ್ಲಿ ಉಳಿಯದೆ, ಎಲಿಮಿನೇಟ್ ಆಗದೆ ಸೇಫ್ ಆಗಿ ಉಳಿಯಲು ಪ್ರಯತ್ನಿಸುತ್ತಿದ್ದಾರೆ. ಬಿಗ್‌ಬಾಸ್ ನೀಡಿದ ಟಾಸ್ಕ್‌ನಲ್ಲಿ ಗೆಲ್ಲಲ್ಲು ಶತ ಪ್ರಯತ್ನ ಮಾಡುತ್ತಿದ್ದಾರೆ.
ನಿಮ್ಮ ಮದುವೆ ಯಾವಾಗ ಎಂದು ಹನುಮಂತುವಿಗೆ ಪ್ರಶ್ನಿಸಿದ ಗೌತಮಿ
ಕಳೆದ ವಾರ ಮಾನಸಾ ಮನೆಯಿಂದ ಹೊರ ಹೋಗಿದ್ದಾರೆ. ಬಿಗ್‌ಬಾಸ್ ನೀಡಿದ ವಿಶೇಷ ಅಧಿಕಾರವನ್ನು ಬಳಸಿಕೊಂಡು ಮಾನಸಾ ಬಿಗ್‌ಬಾಸ್ ಮುಂದಿನ ಆದೇಶದವರೆಗೂ ಜೈಲಿನಲ್ಲಿ ಇರಲು ಮಂಜು ಹೆಸರನ್ನು ಸೂಚಿಸಿದ್ದಾರೆ. ಸ್ಪರ್ಧಿಗಳು ಟಾಸ್ಕ್ ಹೊರತುಪಡಿಸಿ ತಮ್ಮ ಖುಷಿ, ಬೇಸರವನ್ನು ಸಹ ಸ್ಪರ್ಧಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ತಮ್ಮ ವೈಯಕ್ತಿಕ ವಿಚಾರವನ್ನೂ ಹಂಚಿಕೊಳ್ಳುತ್ತಾ ಬಂದಿದ್ದಾರೆ. ಸರಿಗಮಪ ಖ್ಯಾತಿಯ ಹನುಮಂತು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ದೊಡ್ಮನೆಗೆ ಬಂದಿದ್ದು ಆತ ಕೂಡಾ ಇತರ ಸ್ಪರ್ಧಿಗಳೊಂದಿಗೆ ಬೆರೆಯುತ್ತಿದ್ದಾರೆ. ಕಳೆದ ವಾರ ಕಿಚ್ಚ ಸುದೀಪ್ ಕೂಡಾ ಹನುಮಂತುವನ್ನು ಹೊಗಳಿದ್ದರು. ಸೋಮವಾರದ ಸಂಚಿಕೆಯಲ್ಲಿ ಹನುಮಂತು ತಾವು ಪ್ರೀತಿ ಮಾಡುತ್ತಿರುವ ಹುಡುಗಿ ಹಾಗೂ ತಮ್ಮ ಮದುವೆ ವಿಚಾರವನ್ನು ಹೇಳಿಕೊಂಡಿದ್ದಾರೆ.
ಹುಡುಗಿಗಾಗಿ ಹಾಡು ಹೇಳುವಂತೆ ಒತ್ತಾಯ
ಬೆಳಗ್ಗ ಏಳುತ್ತಿದ್ದಂತೆ ಹನುಮಂತನನ್ನು ಮಾತನಾಡಿಸಲು ಕ್ಯಾಪ್ಟನ್ ರೂಮ್ ಬಳಿ ಬರುವ ಗೌತಮಿ, ಯಾವಾಗ ಮದುವೆ ಎಂದು ಕೇಳುತ್ತಾರೆ. ಇಲ್ಲಿಂದ ಹೋಗುತ್ತಿದ್ದಂತೆ ಮದುವೆ ಆಗುವೆ ಎಂದು ಹನುಮಂತು ಹೇಳುತ್ತಾರೆ. ಹುಡುಗಿ ಇದ್ದಾರಾ ಏನು ಹೆಸರು ಎಂದು ಕೇಳುತ್ತಾರೆ. ಅಷ್ಟರಲ್ಲಿ ಅಲ್ಲಿಗೆ ಧನರಾಜ್ ಬರುತ್ತಾರೆ. ನನ್ನ ಹುಡುಗಿ ಹೆಸರು ಸರಸ್ವತಿ ಅಲ್ಲವೇ ಎನ್ನುತ್ತಾರೆ. ಹೌದಾ ಎಂದು ಗೌತಮಿ ಕೇಳಿದಾಗ ಇಲ್ಲ ಎನ್ನುತ್ತಾರೆ. ನೀವು ನಿಮ್ಮ ಹುಡುಗಿಗಾಗಿ ಒಂದು ಹಾಡು ಹೇಳಿ ಇಲ್ಲಿಂದ ಹೊರ ಬರಬೇಕು ಇಲ್ಲವಾದರೆ ನಾನು ಹೊರಗೆ ಬರುವುದಿಲ್ಲ ಎಂದು ರೂಮ್ ಬಾಗಿಲ ಬಳಿ ನಿಲ್ಲುತ್ತಾರೆ.
ಸರಸ್ವತಿ, ಪವಿತ್ರಾ ಇಬ್ಬರಲ್ಲಿ ಹನುಮಂತು ಗೆಳತಿ ಯಾರು?
ಹೊರ ಬಂದ ಹನುಮಂತು, ನಿಜ ಹೆಳತೀನಿ ಗೆಳತಿ, ಕಿವಿ ಕೊಟ್ಟ ಕೇಳ ಗೆಳತಿ, ಪವಿತ್ರಾ ನಮ್ಮ ಪ್ರೀತಿ ನಿನ್ನ ನೆನಪು ನನ್ನ ಕಾಡತೈತಿ, ಬೇಗ ಬಾ ನನ್ನ ಸಂಗಾತಿ, ಕಣ್ಣಿನೊಳಗೆ ಶುರುವಾದ ಪ್ರೀತಿ, ಮನಸಿನೊಳಗೆ ಮನೆ ಮಾಡೈತಿ, ಎರಡು ದೇಹ ಒಂದೇ ಜೀವ, ಪ್ರೇಮವಾಗಿ ಬೆರೆತೈತಿ, ನನ್ನ ಹೃದಯ ರಾಜ್ಯಗೊಳಗೇ ಮಹಾರಾಣಿ ನೀನೆ ಗೆಳತಿ ಎಂದು ಹಾಡುತ್ತಾರೆ. ಇದರ ಅರ್ಥ ಏನು ಗೊತ್ತಾಯ್ತಾ ಎಂದು ಕೇಳುತ್ತಾರೆ. ಗೌತಮಿ ಅದನ್ನು ವಿವರಿಸಿ ಹೇಳುತ್ತಾರೆ. ಈಕೆ ಬಹಳ ಜಾಣೆ ಎಂದು ಹನುಮಂತು ಹೇಳುತ್ತಾರೆ. ಆದರೆ ಹನುಮಂತು ಹೇಳಿದ ಸರಸ್ವತಿ, ಪವಿತ್ರಾ ಈ ಎರಡರಲ್ಲಿ ಅವರು ಇಷ್ಟಪಟ್ಟಿರುವ ಹುಡುಗಿ ಯಾರು ಅನ್ನೋದು ವೀಕ್ಷಕರ ಪ್ರಶ್ನೆಯಾಗಿದೆ.