logo
ಕನ್ನಡ ಸುದ್ದಿ  /  ಮನರಂಜನೆ  /  ಮದುವೆ ನಿಂತ್ರೂ ದುರಹಂಕಾರ ನಿಂತಿಲ್ಲ, ಮತ್ತೆ ಭಾಗ್ಯಾ ಮುಂದೆ ಚಾಲೆಂಜ್‌ ಮಾಡಿದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ

ಮದುವೆ ನಿಂತ್ರೂ ದುರಹಂಕಾರ ನಿಂತಿಲ್ಲ, ಮತ್ತೆ ಭಾಗ್ಯಾ ಮುಂದೆ ಚಾಲೆಂಜ್‌ ಮಾಡಿದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ

Rakshitha Sowmya HT Kannada

Sep 24, 2024 08:33 AM IST

google News

ಮದುವೆ ನಿಂತ್ರೂ ದುರಹಂಕಾರ ನಿಂತಿಲ್ಲ, ಮತ್ತೆ ಭಾಗ್ಯಾ ಮುಂದೆ ಚಾಲೆಂಜ್‌ ಮಾಡಿದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ

  • ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಕನ್ನಡ ಧಾರಾವಾಹಿ ಸೆ.23ರ ಎಪಿಸೋಡ್‌ನಲ್ಲಿ ಕುಸುಮಾ, ಪೂಜಾ ತಾಂಡವ್‌ನನ್ನು ಮದುವೆ ಮನೆಯಿಂದ ಕರೆದೊಯ್ಯುತ್ತಾರೆ. ಮದುವೆ ನಿಂತರೂ ದುರಹಂಕಾರ ನಿಲ್ಲದ ಶ್ರೇಷ್ಠಾ, ನಾನು ಆಸೆ ಪಟ್ಟಿದ್ದನ್ನು ಪಡೆದೇ ತೀರುತ್ತೇನೆ ಎಂದು ಭಾಗ್ಯಾ ಮುಂದೆ ಮತ್ತೆ ಸವಾಲು ಹಾಕುತ್ತಾಳೆ. 

ಮದುವೆ ನಿಂತ್ರೂ ದುರಹಂಕಾರ ನಿಂತಿಲ್ಲ, ಮತ್ತೆ ಭಾಗ್ಯಾ ಮುಂದೆ ಚಾಲೆಂಜ್‌ ಮಾಡಿದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ
ಮದುವೆ ನಿಂತ್ರೂ ದುರಹಂಕಾರ ನಿಂತಿಲ್ಲ, ಮತ್ತೆ ಭಾಗ್ಯಾ ಮುಂದೆ ಚಾಲೆಂಜ್‌ ಮಾಡಿದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio Cinema)

Bhagyalakshmi Serial: ಶ್ರೇಷ್ಠಾಗೆ ತಾಂಡವ್‌ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಪೂಜಾ ಹಾಗೂ ಕುಸುಮಾ ಬಂದು ಮದುವೆ ನಿಲ್ಲಿಸುತ್ತಾರೆ. ಈತ ತರುಣ್‌ ಅಲ್ಲ, ತಾಂಡವ್‌, ಭಾಗ್ಯಾ ಗಂಡ ಎಂದು ತಿಳಿದು ಶ್ರೇಷ್ಠಾ ಅಪ್ಪ ಅಮ್ಮ ಕೂಡಾ ಗಾಬರಿ ಆಗುತ್ತಾರೆ. ಭಾಗ್ಯಾಳಂತ ಹೆಂಡತಿ ಇದ್ದರೂ ನಮ್ಮ ಮಗಳನ್ನು ಮದುವೆ ಆಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ.

ಪೂಜಾಳನ್ನು ಕೊಲೆ ಮಾಡಲು ಯತ್ನಿಸಿದ ಶ್ರೇಷ್ಠಾ

ಅಮ್ಮನನ್ನು ನೋಡಿ ಹೆದರುವ ತಾಂಡವ್‌, ಅವಳ ಪ್ರಶ್ನೆಗೆ ಉತ್ತರಿಸಲಾಗದೆ ತಬ್ಬಿಬ್ಬಾಗುತ್ತಾನೆ. ನಿನಗೆ ಮತ್ತೊಂದು ಮದುವೆ ಬೇಕಾ ಎಂದು ಕುಸುಮಾ ಕೇಳುತ್ತಾಳೆ. ತಾಂಡವ್‌ ಬೇಡ ಎಂದು ತಲೆ ಆಡಿಸುತ್ತಾನೆ. ಮನೆಗೆ ನಡಿ ಎಂದು ತಾಂಡವ್‌ ಕತ್ತು ಹಿಡಿದು ಕುಸುಮಾ ಎಳೆದೊಯ್ಯುತ್ತಾಳೆ. ರೆಸಾರ್ಟ್‌ ಸಿಬ್ಬಂದಿ ಕುಸುಮಾಳನ್ನು ತಡೆಯುವ ಪ್ರಯತ್ನ ಮಾಡುತ್ತಾರೆ. ಅಲ್ಲೇ ಇದ್ದ ಎಳನೀರು ಕೊಚ್ಚುವ ಮೊಚ್ಚು ಹಿಡಿಯುವ ಕುಸುಮಾ, ಯಾರಾದರೂ ಮುಂದೆ ಬಂದರೆ ಸಾಯಿಸಿಬಿಡ್ತೀನಿ ಎಂದು ಹೆದರಿಸುತ್ತಾಳೆ. ಇದನ್ನು ನೋಡಿದ ಶ್ರೇಷ್ಠಾ, ದೀಪದ ಕಂಬದಿಂದ ಪೂಜಾಗೆ ಚುಚ್ಚುಲು ಪ್ರಯತ್ನಿಸುತ್ತಾಳೆ. ಆದರೆ ಶ್ರೇಷ್ಠಾ ತಾಯಿ ಯಶೋಧಾ ಅದನ್ನು ತಡೆಯುತ್ತಾಳೆ.

ಇಷ್ಟು ದಿನ ನಾವು ಸುಮ್ಮನೆ ಇದ್ದದ್ದು ಹೆಚ್ಚು, ನಿನ್ನ ಹುಚ್ಚಾಟ ಸಾಕು ನಿಲ್ಲಿಸು ಎನ್ನುತ್ತಾಳೆ. ಇದು ನನ್ನ ತಾಂಡವ್‌ ಮಧ್ಯದ ವಿಚಾರ, ನೀವು ಅಡ್ಡ ಬರಬೇಡಿ ಎಂದು ಶ್ರೇಷ್ಠಾ, ಹೇಳಿದಾಗ ಯಶೋಧಾ ಆಕೆಯ ಕೆನ್ನೆಗೆ ಬಾರಿಸುತ್ತಾಳೆ. ಕುಸುಮಾ ಆವೇಶಕ್ಕೆ ಹೆದರಿ ಎಲ್ಲರೂ ಹಿಂದೆ ಸರಿಯುತ್ತಾರೆ. ತಾಂಡವ್‌ ಜೊತೆ ಪೂಜಾ ಹಾಗೂ ಕುಸುಮಾ ಮದುವೆ ಮನೆಯಿಂದ ಹೊರ ಹೋಗುತ್ತಾರೆ. ಪದೇ ಪದೆ ಮದುವೆ ನಿಲ್ಲುತ್ತಿರುವುದಕ್ಕೆ ಶ್ರೇಷ್ಠಾ ಕೋಪಗೊಳ್ಳುತ್ತಾಳೆ. ಕೈಗೆ ಸಿಕ್ಕ ವಸ್ತುಗಳನ್ನು ಎಸೆಯುತ್ತಾಳೆ. ಆಕೆಯ ಹುಚ್ಚುತನ ಕಂಡು ಮದುವೆ ಮನೆಯಲ್ಲಿದ್ದವರೆಲ್ಲಾ ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ.

ಮದುವೆ ಮನೆಗೆ ಬಂದ ಭಾಗ್ಯಾ, ಧರ್ಮರಾಜ್

ಕುಸುಮಾ, ಪೂಜಾ ಹೊರ ಹೋಗುತ್ತಿದ್ದಂತೆ ಧರ್ಮರಾಜ್‌ ಹಾಗೂ ಭಾಗ್ಯಾ ಮದುವೆ ಮನೆಗೆ ಬರುತ್ತಾರೆ. ಅಲ್ಲಿ ಸಿಕ್ಕ ವ್ಯಕ್ತಿಗೆ ಮದುವೆ ಮುಗಿಯಿತಾ ಎಂದು ಭಾಗ್ಯಾ ಕೇಳುತ್ತಾಳೆ. ಇಲ್ಲ ಹುಡುಗನ ಕಡೆಯವರು ಬಂದು ಮದುವೆ ನಿಲ್ಲಿಸಿದರು ಎಂದು ಆತ ಹೇಳುತ್ತಾನೆ. ಮಂಟಪದಲ್ಲಿ ಶ್ರೇಷ್ಠಾ ಅವತಾರ ನೋಡಿ ಭಾಗ್ಯಾ ಶಾಕ್‌ ಆಗುತ್ತಾಳೆ. ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ವಸ್ತುಗಳು, ಮದುವೆ ಮನೆ ಒಳಗೆ ಟ್ರ್ಯಾಕ್ಟರ್‌ ಎಲ್ಲವನ್ನೂ ನೋಡಿದ ಭಾಗ್ಯಾ, ಇದೇನು ಶ್ರೇಷ್ಠಾ? ಮದುವೆ ನಿಂತು ಹೋಯ್ತಾ? ಅದೇನೋ ಮದುವೆ ಮುಗಿದ ನಂತರ ನನಗೆ ಸರ್‌ಪ್ರೈಸ್‌ ಕೊಡ್ತೀನಿ ಅಂತ ಹೇಳಿದ್ದೆ ಇದೇನಾ ಅದು ಎಂದು ಕೇಳುತ್ತಾಳೆ. ಕೋಪದಿಂದ ಭಾಗ್ಯಾಗೆ ಹೊಡೆಯಲು ಬಂದ ಶ್ರೇಷ್ಠಾಳನ್ನು ಧರ್ಮರಾಜ್‌ ತಡೆಯುತ್ತಾನೆ.

ನಿನ್ನ ಅತ್ತೆ ಕುಸುಮಾ, ತಂಗಿ ಪೂಜಾ ಇಬ್ಬರೂ ಈ ಮದುವೆ ನಿಲ್ಲಿಸಿದ್ದಾರೆ. ಈಗ ಮದುವೆ ನಿಂತಿರಬಹುದು, ಆದರೆ ನಾನು ಒಮ್ಮೆ ಆಸೆ ಪಟ್ಟದ್ದನ್ನು ಪಡೆದೇ ತೀರುತ್ತೇನೆ. ನಿನ್ನ ಅತ್ತೆ , ತಂಗಿಗೆ ಒಂದು ಗತಿ ಕಾಣಿಸಿ ಖಂಡಿತ ಮದುವೆ ಆಗುತ್ತೇನೆ ಎಂದು ಶ್ರೇಷ್ಠಾ ಭಾಗ್ಯಾ ಮುಂದೆ ಮತ್ತೆ ಸವಾಲು ಹಾಕುತ್ತಾಳೆ. ಹುಡುಗನ ಕಡೆಯವರು ಮದುವೆ ನಿಲ್ಲಿಸಿದರು ಎಂದು ಆ ವ್ಯಕ್ತಿ ಹೇಳಿದರು, ಇವಳು ನೋಡಿದರೆ ಅತ್ತೆ, ಪೂಜಾ ಮದುವೆ ನಿಲ್ಲಿಸಿದ್ದು ಎಂದು ಹೇಳುತ್ತಿದ್ದಾಳಲ್ಲಾ ಎಂದು ಭಾಗ್ಯಾ ಗಾಬರಿಯಾಗುತ್ತಾಳೆ. ನನಗೆ ಗೊತ್ತಿಲ್ಲದೆ ಇಲ್ಲಿ ಏನೋ ನಡೆಯುತ್ತಿದೆ ಎಂಬ ಅನುಮಾನ ಭಾಗ್ಯಾಗೆ ಕಾಡುತ್ತದೆ.

ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ