ಲೈಕ್‌, ಕಾಮೆಂಟ್‌ಗಳಿಗಾಗಿ ಈ ರೀತಿಯ ರೀಲ್ಸ್‌ ಬೇಕಾ? ನಿವೇದಿತಾ ಗೌಡ ಹೊಸ ರೀಲ್ಸ್‌ ನೋಡಿ ಗರಂ ಆದ ಫಾಲೋವರ್‌ಗಳು - ವಿಡಿಯೋ-kannada television news instagram followers angry on nivedita gowda new reels bigg boss 5 former contestant rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಲೈಕ್‌, ಕಾಮೆಂಟ್‌ಗಳಿಗಾಗಿ ಈ ರೀತಿಯ ರೀಲ್ಸ್‌ ಬೇಕಾ? ನಿವೇದಿತಾ ಗೌಡ ಹೊಸ ರೀಲ್ಸ್‌ ನೋಡಿ ಗರಂ ಆದ ಫಾಲೋವರ್‌ಗಳು - ವಿಡಿಯೋ

ಲೈಕ್‌, ಕಾಮೆಂಟ್‌ಗಳಿಗಾಗಿ ಈ ರೀತಿಯ ರೀಲ್ಸ್‌ ಬೇಕಾ? ನಿವೇದಿತಾ ಗೌಡ ಹೊಸ ರೀಲ್ಸ್‌ ನೋಡಿ ಗರಂ ಆದ ಫಾಲೋವರ್‌ಗಳು - ವಿಡಿಯೋ

ಚಂದನ್‌ ಶೆಟ್ಟಿ ಮಾಜಿ ಪತ್ನಿ ನಿವೇದಿತಾ ಗೌಡ ಮೊದಲಿಗಿಂತ ಸಖತ್‌ ಹಾಟ್‌ ಆಗಿದ್ದಾರೆ. ಆದರೆ ಇತ್ತೀಚೆಗೆ ಅವರು ಮಾಡುತ್ತಿರುವ ರೀಲ್ಸ್‌ಗಳಿಗೆ ಸೋಷಿಯಲ್‌ ಮೀಡಿಯಾ ಫಾಲೋವರ್‌ಗಳು ನೆಗೆಟಿವ್‌ ಕಾಮೆಂಟ್‌ ಮಾಡುತ್ತಿದ್ದಾರೆ. ಇತ್ತೀಚೆಗೆ ಹಂಚಿಕೊಂಡಿರುವ ರೀಲ್ಸ್‌ ನೋಡಿ, ಪ್ಲೀಸ್‌ ಬಾತ್‌ರೂಮ್‌ನಲ್ಲಿ ವಿಡಿಯೋ ಮಾಡೋದು ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ.

ಲೈಕ್‌, ಕಾಮೆಂಟ್‌ಗಳಿಗಾಗಿ ಈ ರೀತಿಯ ರೀಲ್ಸ್‌ ಬೇಕಾ? ನಿವೇದಿತಾ ಗೌಡ ಹೊಸ ರೀಲ್ಸ್‌ ನೋಡಿ ಗರಂ ಆದ ಫಾಲೋವರ್‌ಗಳು
ಲೈಕ್‌, ಕಾಮೆಂಟ್‌ಗಳಿಗಾಗಿ ಈ ರೀತಿಯ ರೀಲ್ಸ್‌ ಬೇಕಾ? ನಿವೇದಿತಾ ಗೌಡ ಹೊಸ ರೀಲ್ಸ್‌ ನೋಡಿ ಗರಂ ಆದ ಫಾಲೋವರ್‌ಗಳು (PC: niveditha__gowda)

ಕೆಲವು ದಿನಗಳ ಹಿಂದಷ್ಟೇ ಬಿಗ್‌ ಬಾಸ್‌ ಜೋಡಿ ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಚೇದನ ಪಡೆದಿದ್ದಾರೆ. ನಿವೇದಿತಾ ಈಗ ಅಮ್ಮನ ಮನೆಯಲ್ಲಿದ್ದಾರೆ. ಮದುವೆಗೂ ಮುನ್ನ ರೀಲ್ಸ್‌ನಿಂದಲೇ ಹೆಚ್ಚು ಫೇಮಸ್‌ ಆಗಿದ್ದು ನಿವೇದಿತಾ ಮದುವೆ ನಂತರ ಪತಿ ಜೊತೆ ವಿಡಿಯೋ ಮಾಡಿ ಅದನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು. ಡಿವೋರ್ಸ್‌ ಆದ ನಂತರ ಮತ್ತೆ ನಿವೇದಿತಾ ಮೊದಲಿನಂತೆ ರೀಲ್ಸ್‌ ಕಡೆ ಹೆಚ್ಚು ಗಮನ ನೀಡುತ್ತಿದ್ದಾರೆ.

ರೀಲ್ಸ್‌ಗೆ ನೆಗೆಟಿವ್‌ ಕಾಮೆಂಟ್‌ಗಳು

ನಿವೇದಿತಾ ಗೌಡ ಮೊದಲಿಗಿಂತ ಸಖತ್‌ ಹಾಟ್‌ ಕಾಣುತ್ತಿದ್ದಾರೆ. ಅದು ಅವರ ರೀಲ್ಸ್‌ನಲ್ಲಿ ಗೊತ್ತಾಗುತ್ತಿದೆ. ಇತ್ತೀಚೆಗೆ ಇನ್ನಷ್ಟು ತುಂಡು ಬಟ್ಟೆ ಧರಿಸಿ ರೀಲ್ಸ್‌ ಮಾಡುತ್ತಿದ್ದಾರೆ. ಆದರೆ ಇದು ಫಾಲೋವರ್‌ಗಳ ಕೆಂಗಣ್ಣಿಗೆ ಗುರಿ ಆಗಿದೆ. ಡಿವೋರ್ಸ್‌ ನಂತರವಂತೂ ನಿವೇದಿತಾ ಪ್ರತಿದಿನ ಟ್ರೋಲ್‌ ಆಗುತ್ತಲೇ ಇದ್ದಾರೆ. ಸೋಮವಾರ ಅವರು ಹಂಚಿಕೊಂಡಿರುವ ಮತ್ತೊಂದು ವಿಡಿಯೋಗೆ ನೆಗೆಟಿವ್‌ ಕಾಮೆಂಟ್‌ಗಳ ಸುರಿಮಳೆಯೇ ಆಗಿದೆ. ನಿವೇದಿತಾ, ಸೀಕ್ವಿನ್‌ ಜೀನ್ಸ್‌ ಧರಿಸಿ ಪಿಂಕ್‌ ಬಣ್ಣದ ಸ್ಲೀವ್‌ಲೆಸ್‌ ಕ್ರಾಪ್‌ ಟಾಪ್‌ ಧರಿಸಿದ್ದಾರೆ. ಸೊಂಟಕ್ಕೆ ಬಿಳಿ ದಾರ ಕಟ್ಟಿದ್ದಾರೆ. ಫ್ರೀ ಹೇರ್‌ ಬಿಟ್ಟು ಕಿವಿಗೆ ಒಂದು ಹೂ ಇಟ್ಟು ಬಾತ್‌ ರೂಮ್‌ನಲ್ಲಿ ರೀಲ್ಸ್‌ ಮಾಡಿ ಅದನ್ನು ಹಂಚಿಕೊಂಡಿದ್ದಾರೆ.

ಬಾತ್‌ ರೂಮ್‌ ವಿಡಿಯೋ ಮಾಡೋದು ನಿಲ್ಸಿ ಎಂದ ಫಾಲೋವರ್‌ಗಳು

ಒಬ್ಬರೋ ಇಬ್ಬರೋ ನಿವೇದಿತಾ ಗೌಡ ರೀಲ್ಸ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕಾಮೆಂಟ್‌ ಮಾಡಿದರೆ, ಕಾಮೆಂಟ್‌ ಬಾಕ್ಸ್‌ ತುಂಬಾ ನೆಗೆಟಿವ್‌ ಸಾಲುಗಳೇ ತುಂಬಿವೆ. ದಯವಿಟ್ಟು ರೀಲ್ಸ್‌ ಮಾಡುವಾಗ ಮೈ ತುಂಬಾ ಬಟ್ಟೆ ಧರಿಸಿ, ದಯವಿಟ್ಟು ಬಾತ್‌ ರೂಮ್‌ನಲ್ಲಿ ರೀಲ್ಸ್‌ ಮಾಡೋದನ್ನು ನಿಲ್ಲಿಸಿ, ಲೈಕ್‌, ಕಾಮೆಂಟ್‌ಗೋಸ್ಕರ ಈ ರೀತಿ ಲೀಲ್ಸ್‌ ಮಾಡೋದು ಅವಶ್ಯಕತೆ ಇದೆಯಾ? ಎತ್ತ ಹುಡುಕಿದರೂ ಒಂದೊಳ್ಳೆ ಕಾಮೆಂಟ್‌ ಸಿಗ್ತಿಲ್ಲ ಎಂದೆಲ್ಲಾ ಜನರು ಕಾಮೆಂಟ್‌ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ನಿವೇದಿತಾ ಈ ರೀತಿಯ ಕಾಮೆಂಟ್‌ಗಳನ್ನು ಎದುರಿಸಿದರೂ ಆಕೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಹೊಸ ಹೊಸ ರೀಲ್ಸ್‌ ಮಾಡಿ ಹಂಚಿಕೊಳ್ಳುತ್ತಲೇ ಇದ್ದಾರೆ.

2020 ರಲ್ಲಿ ಚಂದನ್‌ ಶೆಟ್ಟಿ ಕೈ ಹಿಡಿದಿದ್ದ ನಿವೇದಿತಾ ಗೌಡ

ನಿವೇದಿತಾ ಗೌಡ ಮೂಲತ: ಮೈಸೂರಿನವರು. ರೀಲ್ಸ್‌ ಮೂಲಕವೇ ಫೇಮಸ್‌ ಆದ ಈ ಬ್ಯೂಟಿ ಬಿಗ್‌ ಬಾಸ್‌ ಸೀಸನ್‌ 5 ರಲ್ಲಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟರು. ಆರಂಭದಲ್ಲಿ ನಿವೇದಿತಾ, ಕನ್ನಡ ಮಾತನಾಡುವ ಶೈಲಿಗೆ ಟ್ರೋಲ್‌ ಆಗಿದ್ದರು. ಬಿಗ್‌ ಬಾಸ್‌ ಮನೆಯಲ್ಲಿ ಚಂದನ್‌ ಶೆಟ್ಟಿ ಜೊತೆ ಬಹಳ ಆತ್ಮೀಯವಾಗಿದ್ದರು. ಶೋನಿಂದ ಹೊರ ಬಂದ ನಂತರವೂಈ ಜೋಡಿ ಜೊತೆಯಾಗಿ ಸುತ್ತಾಡುತ್ತಿದ್ದರು. 2029 ಯುವ ದಸರಾ ವೇದಿಕೆಯಲ್ಲಿ ಚಂದನ್‌ ಶೆಟ್ಟಿ, ನಿವೇದಿತಾಗೆ ಪ್ರಪೋಸ್‌ ಮಾಡಿದ್ದರು. ಅದೇ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದ ಜೋಡಿ 2020 ಫೆಬ್ರವರಿಯಲ್ಲಿ ಹಸೆಮಣಿ ಏರಿದ್ದರು. 4 ವರ್ಷಗಳ ದಾಂಪತ್ಯ ಜೀವನಕ್ಕೆ ಚಂದನ್‌ ನಿವೇದಿತಾ ಇತ್ತೀಚೆಗೆ ಗುಡ್‌ ಬೈ ಹೇಳಿದ್ದಾರೆ. ಮುದ್ದು ರಾಕ್ಷಸಿ ಎಂಬ ಚಿತ್ರದಲ್ಲಿ ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ಜೊತೆಯಾಗಿ ನಟಿಸುತ್ತಿದ್ದಾರೆ.

mysore-dasara_Entry_Point