ತೆಲಂಗಾಣದಲ್ಲೂ ದೇವರ ಸಿನಿಮಾ ಟಿಕೆಟ್ ದರ ಹೆಚ್ಚಳಕ್ಕೆ ಸಿಎಂ ರೇವಂತ್ ರೆಡ್ಡಿ ಅಸ್ತು; 1000 ಆದ್ರೂ ಸಿನಿಮಾ ನೋಡ್ತೀವಿ ಎಂದ ಫ್ಯಾನ್ಸ್
ಆಂಧ್ರ ಪ್ರದೇಶ ನಂತರ ತೆಲಂಗಾಣದಲ್ಲೂ ಜ್ಯೂ.ಎನ್‌ಟಿಆರ್ ಅಭಿನಯದ ದೇವರ ಸಿನಿಮಾ ಟಿಕೆಟ್ ದರವನ್ನು ಹೆಚ್ಚಿಸಲಾಗಿದೆ. ಆದರೆ ಆಂಧ್ರ ಪ್ರದೇಶಕ್ಕೆ ಹೋಲಿಸಿದರೆ ತೆಲಂಗಾಣದಲ್ಲಿ ಟಿಕೆಟ್ ದರ ಕಡಿಮೆ ಇದೆ. ಸಿನಿಮಾ ಬಿಡುಗಡೆಗೆ ಇನ್ನು 2 ದಿನಗಳಷ್ಟೇ ಬಾಕಿ ಇದೆ. ಮೊದಲ ದಿನ 6 ಶೋ ಹಾಗೂ ಮುಂದಿನ 9 ದಿನಗಳು 5 ಶೋಗಳಿಗೆ ಅನುಮತಿ ನೀಡಲಾಗಿದೆ.
ಜ್ಯೂ ಎನ್‌ಟಿಆರ್ ದೇವರ ಸಿನಿಮಾ ಬಿಡುಗಡೆ ಸಮೀಪಿಸುತ್ತಿದ್ದಂತೆ ಸಿನಿಪ್ರೇಮಿಗಳಲ್ಲಿ ಉತ್ಸಾಹ ಹೆಚ್ಚಾಗುತ್ತಿದೆ. ಸಿನಿಮಾ ಬಗ್ಗೆ ದಿನೇ ದಿನೇ ನಿರೀಕ್ಷೆ ಹೆಚ್ಚಾಗುತ್ತಿದೆ. ಸಿನಿಮಾ ಇದೇ ಶುಕ್ರವಾರ ಅಂದರೆ ಸೆಪ್ಟೆಂಬರ್ 27 ರಂದು ಬಿಡುಗಡೆಯಾಗಲಿದೆ. ಕೆಲವು ದಿನಗಳ ಹಿಂದಷ್ಟೇ ಆಂಧ್ರದಲ್ಲಿ ಟಿಕೆಟ್ ದರ ಹೆಚ್ಚಳಕ್ಕೆ ಸಿಎಂ ಚಂದ್ರಬಾಬು ನಾಯ್ಡು ಅಸ್ತು ಎಂದಿದ್ದರು. ಇದೀಗ ತೆಲಂಗಾಣ ಸರ್ಕಾರ ಕೂಡಾ ಚಿತ್ರದ ಟಿಕೆಟ್ ದರವನ್ನು ಹೆಚ್ಚಿಸಲು ಅನುಮತಿ ನೀಡಿದೆ. ಹೆಚ್ಚುವರಿ ಶೋಗೂ ಓಕೆ ಹೇಳಿದೆ.
ಎಲ್ಲೆಲ್ಲಿ ಟಿಕೆಟ್ ದರ ಎಷ್ಟೆಷ್ಟು?
ತೆಲಂಗಾಣ ಸರ್ಕಾರವು ದೇವರ ಸಿನಿಮಾ ಟಿಕೆಟ್ ದರವನ್ನು ಹೆಚ್ಚಿಸಲು ಅನುಮತಿ ನೀಡಿ ಅಧಿಸೂಚನೆ ಹೊರಡಿಸಿದೆ. ಮೊದಲ ದಿನ ಅಂದರೆ ಸೆಪ್ಟೆಂಬರ್ 27ರಂದು ದೇವರ ಚಿತ್ರಮಂದಿರದ ದರವನ್ನು ಪ್ರತಿ ಟಿಕೆಟ್‌ಗೆ 100 ರೂಪಾಯಿ ಹೆಚ್ಚಳ ಮಾಡಲು ಸರ್ಕಾರ ಓಕೆ ಹೇಳಿದೆ. ಆ ಬಳಿಕ ಮಲ್ಟಿಪ್ಲೆಕ್ಸ್ ಥಿಯೇಟರ್‌ಗಳಲ್ಲಿ ಪ್ರತಿ ಟಿಕೆಟ್ ದರವನ್ನು 50 ರೂ ಹೆಚ್ಚೂ ಮಾಡಲಾಗಿದೆ. ತೆಲಂಗಾಣದಾದ್ಯಂತ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿ ಸುಮಾರು 9 ದಿನಗಳವರೆಗೂ 25 ರೂ. ಹೆಚ್ಚಿಸಲು ತೆಲಂಗಾಣ ಸರ್ಕಾರ ಓಕೆ ಎಂದಿದೆ.
ಸಿನಿಮಾ ತೆರೆ ಕಂಡ ಮೊದಲ ದಿನದಿಂದ ಸುಮಾರು 9 ದಿನಗಳವರೆಗೂ ಪ್ರತಿದಿನ ಬೆಳಗ್ಗೆ 4 ಗಂಟೆಗೆ ಮೊದಲ ಶೋ ಆರಂಭವಾಗಲಿದೆ. ತೆಲಂಗಾಣದಾದ್ಯಂತ 6 ಶೋಗಳನ್ನು ಪ್ರದರ್ಶಿಸಲು ಸರ್ಕಾರ ಒಪ್ಪಿಗೆ ನೀಡಿದೆ. ಎರಡನೇ ದಿನದಿಂದ ಹತ್ತನೇ ದಿನದವರೆಗೆ ಪ್ರತಿದಿನ ಐದು ಶೋಗಳಿಗೆ ಓಕೆ ಹೇಳಲಾಗಿದೆ. ಮೊದಲ ದಿನ ಮಧ್ಯರಾತ್ರಿ 1 ಗಂಟೆ ಪ್ರದರ್ಶನಕ್ಕೆ ತೆಲಂಗಾಣ ಸರ್ಕಾರ 29 ಚಿತ್ರಮಂದಿರಗಳಿಗೆ ಮಾತ್ರ ಅನುಮತಿ ನೀಡಿದೆ. ತೆಲಂಗಾಣದಲ್ಲೂ ದೇವರ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಲಿದೆ.
ಯಾವ ಥಿಯೇಟರ್‌ನಲ್ಲಿ ಪ್ರದರ್ಶನ ಕಾಣಲಿದೆ ದೇವರ?
ಹೈದರಾಬಾದ್ RTC ಕ್ರಾಸ್‌ರೋಡ್ಸ್ - ಸುದರ್ಶನ್ 35mm, ದೇವಿ 70mm, ಸಂಧ್ಯಾ 35mm, ಸಂಧ್ಯಾ 70mm ಥಿಯೇಟರ್‌ಗಳು
ಕುಕ್ಕಟಪಲ್ಲಿ - ವಿಶ್ವನಾಥ್, ಮಲ್ಲಿಕಾರ್ಜುನ, ಭ್ರಮರಾಂಬ, ಅರ್ಜುನ್ ಥಿಯೇಟರ್ಸ್
ಕುಕ್ಕಟಪಲ್ಲಿ - ಪಿವಿಆರ್ ನೆಕ್ಸಸ್ ಮಾಲ್
ಎರ್ರಗಡ್ಡ - ಗೋಕುಲ್ ಥಿಯೇಟರ್ಸ್
ಮುಸಾಪೇಟ - ಶ್ರೀ ರಾಮುಲು
ಅತ್ತಾಪುರ - ಎಸ್ ವಿಸಿ ಈಶ್ವರ್
ಆರ್‌ಸಿ ಪುರಂ - SVC ಸಂಗೀತ
ಮಲಕಾಜ್‌ಗಿರಿ - ಶ್ರೀಸಾಯಿರಾಮ್
ದಿಲ್‌ಸುಕ್‌ನಗರ್ - ಕೋನಾರ್ಕ್
ಕರ್ಮಾನ್‌ಘಾಟ್ - ಎಸ್‌ವಿಸಿ ಶ್ರೀಲಕ್ಷ್ಮಿ
ಮಾದಾಪುರ - ಬಿಆರ್ ಹೈಟೆಕ್
ಗಚ್ಚಿಬೌಲಿ - AMB ಚಿತ್ರಮಂದಿರಗಳು
ಅಮೀರ್ ಪೇಟ್ - AAA ಸಿನಿಮಾಸ್
ಎನ್‌ಟಿಆರ್ ಗಾರ್ಡನ್ಸ್ - ಪ್ರಸಾದ್ ಮಲ್ಟಿಪ್ಲೆಕ್ಸ್
ನಲ್ಲಗಡ್ಡ - ಅಪರ್ಣಾ ರಂಗಮಂದಿರ
ಖಮ್ಮಂ - ಶ್ರೀತಿರುಮಲ, ವಿನೋದ, ಸಾಯಿರಾಂ, ಶ್ರೀನಿವಾಸ, ಕೆಪಿಎಸ್ ಆದಿತ್ಯ
ಮಿರ್ಯಾಲಗುಡ - ವಿಟ್ರೋಸ್ ಸಿನೆಪ್ಲೆಕ್ಸ್
ಮಹೆಬೂಬ್ ನಗರ - AVD ತಿರುಮಲ ಕಾಂಪ್ಲೆಕ್ಸ್
ಗದ್ವಾಲ್ - SVC ಮಲ್ಟಿಪ್ಲೆಕ್ಸ್
ಸೆ.27ರಂದು ಹೆಚ್ಚಿನ ಪೈಪೋಟಿ ಇಲ್ಲದ ಕಾರಣ ಈ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಎರಡನೇ ದಿನದಿಂದ ಹತ್ತನೇ ದಿನದವರೆಗೆ 5 ಪ್ರದರ್ಶನಗಳು ನಡೆಯಲಿವೆ.
ಆಂಧ್ರ ಪ್ರದೇಶಕ್ಕೆ ಹೋಲಿಸಿದರೆ ತೆಲಂಗಾಣದಲ್ಲಿ ಟಿಕೆಟ್ ದರ ಕಡಿಮೆ
ಆಂಧ್ರಪ್ರದೇಶದಲ್ಲಿ ಇತ್ತೀಚೆಗಷ್ಟೇ ದೇವರ ಟಿಕೆಟ್ ಹೆಚ್ಚಳಕ್ಕೆ ಅನುಮತಿ ನೀಡಲಾಗಿತ್ತು. ಇದಕ್ಕಾಗಿ ನಟ ಜ್ಯೂನಿಯರ್ ಎನ್‌ಟಿಆರ್, ಆಂಧ್ರ ಸಿಎಂಗೆ ಧನ್ಯವಾದ ಅರ್ಪಿಸಿದ್ದರು. ಎಪಿಯ ಮಲ್ಟಿಪ್ಲೆಕ್ಸ್ ಥಿಯೇಟರ್‌ಗಳಲ್ಲಿ ಪ್ರತಿ ಟಿಕೆಟ್‌ಗೆ 135 ರೂ. ಹೆಚ್ಚಿಸಲು ಸರ್ಕಾರ ಓಕೆ ಹೇಳಿದೆ. ಸಿಂಗಲ್ ಸ್ಕ್ರೀನ್ ಬಾಲ್ಕನಿ ಟಿಕೆಟ್ ಮೇಲೆ 110 ರೂ. ಮತ್ತು ಲೋವರ್ ಕ್ಲಾಸ್ ಟಿಕೆಟ್ ಮೇಲೆ 60 ರೂ. ಹೆಚ್ಚಳ ಮಾಡಲು ಅವಕಾಶ ನೀಡಿದೆ. ಈ ಬೆಲೆ ಏರಿಕೆ ಎರಡು ವಾರಗಳವರೆಗೆ ಅನ್ವಯವಾಗಲಿದೆ. ಮೊದಲ ದಿನ ಆರು ಶೋ ಹಾಗೂ ಎರಡನೇ ದಿನದಿಂದ ಹತ್ತನೇ ದಿನದವರೆಗೆ ಐದು ಶೋಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆಂಧ್ರಗೆ ಹೋಲಿಸಿದರೆ ತೆಲಂಗಾಣದಲ್ಲಿ ಟಿಕೆಟ್ ಬೆಲೆ ಕಡಿಮೆ ಇದೆ.
ದೇವರ ಚಿತ್ರದಲ್ಲಿ ಎನ್‌ಟಿಆರ್‌ಗೆ ನಾಯಕಿಯಾಗಿ ಜಾಹ್ನವಿ ಕಪೂರ್ ನಟಿಸಿದ್ದಾರೆ. ಸೈಫ್ ಅಲಿ ಖಾನ್, ಶೈನ್ ಟಾಮ್ ಚಾಕೊ, ಶ್ರೀಕಾಂತ್ ಮತ್ತು ಪ್ರಕಾಶ್ ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಎನ್‌ಟಿಆರ್ ಆರ್ಟ್ಸ್ ಮತ್ತು ಯುವಸುಧಾ ಆರ್ಟ್ಸ್ ನಿರ್ಮಾಣದ ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ.